Operation Sindoor ದಾಳಿಯ ಮೊದಲ ಫೋಟೋ ರಿಲೀಸ್; ಚಿಕಿತ್ಸೆ ಪಡೆಯುತ್ತಿರೋ ಉಗ್ರ

Published : May 07, 2025, 07:16 AM ISTUpdated : May 07, 2025, 09:30 AM IST
Operation Sindoor ದಾಳಿಯ ಮೊದಲ ಫೋಟೋ ರಿಲೀಸ್; ಚಿಕಿತ್ಸೆ ಪಡೆಯುತ್ತಿರೋ ಉಗ್ರ

ಸಾರಾಂಶ

ಈ ಚಿತ್ರದಲ್ಲಿ ವಾಯುದಾಳಿಯ ನಂತರ ಗಾಯಗೊಂಡ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ಕಾಣಬಹುದು.

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರ ತೆಗೆದುಕೊಂಡಿದೆ. ವಾಯುದಾಳಿ ನಡೆಸುವ ಮೂಲಕ ಪಾಕಿಸ್ತಾನದಲ್ಲಿರುವ 9 ಭಯೋತ್ಪಾದಕ ನೆಲೆಗಳನ್ನು ನಾಶಪಡಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಭಾರತ ವಾಯುದಾಳಿ ನಡೆಸಿದ ಮೊದಲ ಚಿತ್ರ ಇದೀಗ ಹೊರ ಬಂದಿದೆ. ಈ ಚಿತ್ರದಲ್ಲಿ ವಾಯುದಾಳಿಯ ನಂತರ ಗಾಯಗೊಂಡ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ಕಾಣಬಹುದು.

2025 ಏಪ್ರಿಲ್ 22ರಂದು  ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದ ಉಗ್ರರು 26 ಜನರನ್ನು ಕೊಂದಿದ್ದರು. ಈ ದಾಳಿಗೆ ಪ್ರತೀಕಾರ ಆಗಲೇಬೇಕೆಂದು ಭಾರತೀಯರು ಆಗ್ರಹಿಸಿತ್ತು. ಭಾರತದ ಮಹಿಳೆಯರ ಕುಂಕುಮ ಕಿತ್ತುಕೊಂಡಿದ್ದ ಪಾಕ್‌ಗೆ  'ಆಪರೇಷನ್ ಸಿಂಧೂರ್' ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ. 
ಭಯೋತ್ಪಾದಕರ ದಾಳಿಯ ಗುರಿಗಳು: 

  1. ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಬಹವಾಲ್ಪುರ್, ಜೆಇಎಂನ ಪ್ರಧಾನ ಕಚೇರಿಯಾಗಿತ್ತು.
  2. ಸಾಂಬಾ ಎದುರಿನ ಗಡಿಯಿಂದ 30 ಕಿ.ಮೀ ದೂರದಲ್ಲಿರುವ ಮುರಿಡ್ಕೆ. ಎಲ್ಇಟಿ ಶಿಬಿರ.
  3. ಪೂಂಚ್-ರಾಜೌರಿ ಗಡಿ ನಿಯಂತ್ರಣ ರೇಖೆಯಿಂದ 35 ಕಿ.ಮೀ ದೂರದಲ್ಲಿರುವ ಗುಲ್ಪುರ್.
  4. ಎಲ್ಇಟಿ ಶಿಬಿರ ಸವಾಯಿ. ಪಿಒಜೆಕೆ ತಂಗ್ಧರ್ ವಲಯದ ಒಳಗೆ ಗಡಿ ಯಿಂದ 30 ಕಿ.ಮೀ.
  5. ಬಿಲಾಲ್ ಶಿಬಿರ, ಜೆಇಎಂ ಲಾಂಚ್‌ಪ್ಯಾಡ್.
  6. ರಾಜೌರಿ- ಎಲ್‌ಇಟಿ ಕೋಟ್ಲಿ ಶಿಬಿರ - LOC ಯಿಂದ 15 ಕಿ.ಮೀ. 
  7. ಇದು ಎಲ್‌ಇಟಿ ಬಾಂಬರ್ ಶಿಬಿರ.
  8. ಬರ್ನಾಲಾ ಶಿಬಿರ: ಎಲ್‌ಒಸಿ ಯಿಂದ 10 ಕಿ.ಮೀ. ( ರೌಜೌರಿ)
  9. ಸರ್ಜಲ್ ಶಿಬಿರ ( ಜೆಇಎಂ ಶಿಬಿರ) ಸಾಂಬಾ-ಕಥುವಾ ಪ್ರದೇಶ ಗಡಿಯಿಂದ ಸುಮಾರು 8 ಕಿ.ಮೀ. 
  10. ಸಿಯಾಲ್‌ಕೋಟ್ -   ಎಚ್‌ಎಂ ತರಬೇತಿ ಶಿಬಿರ. ಗಡಿಯಿಂದ 15 ಕಿ.ಮೀ.

ಭಾರತದ ದಾಳಿಯನ್ನು ದೃಢಪಡಿಸಿದ ಪಾಕಿಸ್ತಾನ ಸೇನಾ ವಕ್ತಾರ
ಪಾಕಿಸ್ತಾನಿ ಮಾಧ್ಯಮ ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ನ ವರದಿಯ ಪ್ರಕಾರ, ಮುಜಫರಾಬಾದ್, ಕೋಟ್ಲಿ ಮತ್ತು ಬಹವಾಲ್ಪುರದ ಅಹ್ಮದ್ ಪೂರ್ವ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ. ಪಾಕಿಸ್ತಾನ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಪತ್ರಿಕಾಗೋಷ್ಠಿಯಲ್ಲಿ ದಾಳಿಯನ್ನು ದೃಢಪಡಿಸಿದ್ದಾರೆ. ಭಾರತೀಯ ವಾಯುಪಡೆಯ ದಾಳಿಯ ನಂತರ ಪಾಕಿಸ್ತಾನದ ಯುದ್ಧ ವಿಮಾನಗಳು ಅಲರ್ಟ್ ಆಗಿವೆ ಎಂದು  ಅಹ್ಮದ್ ಷರೀಫ್ ಚೌಧರಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಹಿಂದು ಮಹಿಳೆಯ ಕುಂಕುಮ ಅಳಿಸಿದ್ದಕ್ಕೆ ಪ್ರತಿಯಾಗಿ Operation Sindoor ಎಂದು ಹೆಸರಿಟ್ಟ ಸೇನೆ!

ವಾಯುಸೇವೆ ಸ್ಥಗಿತ 
ವಾಯುದಾಳಿಯ ನಂತರ,  ಚಂಡೀಗಢ ಮತ್ತು ಅಮೃತಸರ ಸೇರಿದಂತೆ ಜೋಧಪುರ, ಜಮ್ಮು. ಶ್ರೀನಗರ, ಲೇಹ್,  ಭುಜ್, ಜಾಮ್‌ನಗರ ಮತ್ತು ರಾಜ್ ಕೋಟ್‌ ಗಳಲ್ಲಿ ಇಂದು ಮಧ್ಯಾಹ್ನ 12 ಗಂಟೆಯವರೆಗೆ  ವಾಯು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಶ್ರೀನಗರ ಸೇರಿದಂತೆ 11 ವಿಮಾನ  ನಿಲ್ದಾಣಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.  ಜಮ್ಮು,  ಶ್ರೀನಗರ, ಲೇಹ್, ಚಂಡೀಗಢ, ಬಿಕಾನೇರ್, ಜೋಧಪುರ, ರಾಜ್ ಕೋಟ್, ಧರ್ಮಶಾಲಾ,  ಅಮೃತಸರ, ಭುಜ್. ಜಾಮ್‌ನಗರ ವಿಮಾನ ನಿಲ್ದಾಣಗಳು ಸೇರಿವೆ. ಜಮ್ಮು,  ಶ್ರೀನಗರ, ಲೇಹ್ ಸೇರಿದಂತೆ 9 ವಿಮಾನ ನಿಲ್ದಾಣಗಳಿಗೆ ಸೇವೆಯನ್ನು ಮಧ್ಯಾಹ್ನ 12 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಏರ್‌ ಇಂಡಿಯಾ ಹೇಳಿಕೆ ಬಿಡುಗಡೆ ಮಾಡಿದೆ.

ಪಂಜಾಬ್‌ನ ಅಮೃತಸರದ ವಿಮಾನ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಈ ದಾಳಿಯ ಬೆನ್ನಲ್ಲೇ ಹಲವು ಅಂತರಾಷ್ಟ್ರೀಯ ವಿಮಾನ ಸಂಸ್ಥೆಗಳು ಪಾಕ್ ವಾಯುಮಾರ್ಗವನ್ನು ಬಳಕೆಯನ್ನು ನಿಲ್ಲಿಸಿವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು