'ಶೀಘ್ರ ಪರಿಹಾರ ಒದಗಿಸಿ, ಸಮಸ್ಯೆ ಬಗೆಹರಿಯದಿದ್ದರೆ ಇಡೀ ದೇಶದ ರೈತರಿಂದ ಪ್ರತಿಭಟನೆ!'

By Suvarna News  |  First Published Dec 6, 2020, 4:41 PM IST

ಹನ್ನೊಂದನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ| ರೈತರ ಬೆಂಬಲಕ್ಕೆ ನಿಂತ ರಾಜಕೀಯ ಪಕ್ಷಗಳು| ಶೀಘ್ರಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ ದೇಶಾದ್ಯಂತ ವ್ಯಾಪಿಸುತ್ತದೆ.


ಮಹಾರಾಷ್ಟ್ರ(ಡಿ.06): ಕೃಷಿ ಕಾನೂನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟಬನೆ ಹನ್ನೊಂದನೇ ದಿನಕ್ಕೆ ತಲುಪಿದೆ. ಅಲ್ಲದೇ ಡಿಸೆಂಬರ್ 8 ರಂದು ಭಾರತ್ ಬಂದ್ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ರೈತರ ಈ ಪ್ರತಿಭಟನೆಗೆ ಅನೇಕ ರಾಜಕೀಯ ಪಕ್ಷಗಳೂ ಬೆಂಬಲ ಸೂಚಿಸಿವೆ. ಹೀಗಿರುವಾಗಲೇ ಎನ್‌ಸಿಪಿ ನಾಯಕ ಶರದ್ ಪವಾರ್ ಕೂಡಾ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಶೀಘ್ರವೇ ಈ ಸಮಸ್ಯೆ ಬಗೆಹರಿಯದಿದ್ದರೆ ದೇಶಾದ್ಯಂತ ಇರುವ ರೈತರು ಪಂಜಾಬ್ ಹಾಗೂ ಹರ್ಯಾಣದ ರೈತರೊಂದಿಗೆ ಸೇರಿ ಪ್ರತಿಭಟನೆಗೆ ಸಾಥ್ ನೀಡಲಿದ್ದಾರೆ ಎಂದಿದ್ದಾರೆ.

"

Tap to resize

Latest Videos

undefined

'ಇಂದಿರಾ ಗಾಂಧಿಗೆ ಪಾಠ ಕಲಿಸಿದಂತೆ 2024ರಲ್ಲಿ ಮೋದಿಗೆ ಜನರು ತಕ್ಕಪಾಠ ಕಲಿಸ್ತಾರೆ'

ಈ ಬಗ್ಗೆ ಪ್ರತಿಕ್ರಿಯಿಸಿರುವ ಶರದ್ ಪವಾರ್ 'ಪಂಜಾಬ್ ಹಾಗೂ ಹರ್ಯಾಣದ ರೈತರು ಗೋಧಿ ಹಾಗೂ ಧಾನ್ಯಗಳ ಬಹುದೊಡ್ಡ ಉತ್ಪಾದಕರಾಗಿದ್ದಾರೆ. ಅವರೇ ಪ್ರತಿಭಟಿಸುತ್ತಿದ್ದಾರೆ. ಹೀಗಿರುವಾಗ ಈ ಸಮಸ್ಯೆ ಬಗೆಹರಿಯದಿದ್ದರೆ ಶೀಘ್ರದಲ್ಲೇ ದೇಶಾದ್ಯಂತ ಇರುವ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮಸೂದೆ ಪಾಸ್ ಮಾಡುವಾಗಲೂ ನಾವು ಸರ್ಕಾರದ ಬಳಿ ಈ ವಿಚಾರದಲ್ಲಿ ಅವಸರ ಮಾಡಬೇಡಿ ಎಂದು ಮನವಿ ಮಾಡಿದ್ದೆವು' ಎಂದಿದ್ದಾರೆ.

ಪ್ರತಿಭಟಿಸುತ್ತಿರುವವರು ನಿಜವಾದ ರೈತರಲ್ಲ: ಕೇಂದ್ರ ಸಚಿವರ ಹೇಳಿಕೆ!

ಬಿಲ್ ವಿಚಾರದಲ್ಲಿ ಚರ್ಚೆ ನಡೆಯುವುದು ಸಗತ್ಯವಾಗಿತ್ತು. ಆದರೆ ಹೀಗಾಗಲಿಲ್ಲ. ಆದರೀಗ ಸರ್ಕಾರಕ್ಕೆ ಈ ಅವಸರ ಈಗ ಕುತ್ತು ತಂದಿದೆ ಎಂದಿದ್ದಾರೆ ಎಂದಿದ್ದಾರೆ. ಇದಕ್ಕೂ ಮುನ್ನ ತೆಲಂಗಾಣದ ಸಿಎಂ ಹಾಗೂ ಟಿಆರ್‌ಎಸ್‌ ಚೀಫ್ ಕೆಸಿಆರ್‌ ಕೂಡಾ ರೈತರ ಪ್ರತಿಭಟನೆ ಬೆಂಬಲಿಸಿದ್ದರು ಹಾಗೂ ಈ ಬಿಲ್ ರೈತ ವಿರೋಧಿಯಾಗಿದೆ ಎಂದಿದ್ದರು. ಈ ಹೊಸ ಕಾನೂನು ರದ್ದುಗೊಳಿಸುವವರೆಗೂ ರೈತರು ಪ್ರತಿಭಟನೆ ಮುಂದುವರೆಸಬೇಕೆಂದೂ ಕೆಸಿಆರ್‌ ಹೇಳಿದ್ದರು. 

click me!