ಅಯೋಧ್ಯೆ ರಾಮಮಂದಿರ ವಿನ್ಯಾಸಕ್ಕೆ 450 ಸಲಹೆ| ಮಂದಿರದ ಸುತ್ತಲೂ ಹಸಿರು ಉದ್ಯಾನ, ನಕ್ಷತ್ರ ವಾಟಿಕಾ
ಅಯೋಧ್ಯೆ(ಡಿ.06): ರಾಮಜನ್ಮಭೂಮಿಯಲ್ಲಿ ನಿರ್ಮಿಸಲಾಗುವ ರಾಮಮಂದಿರ ಹೇಗಿರಬೇಕೆಂಬ ಬಗ್ಗೆ ಸಾರ್ವಜನಿಕರಿಂದ ಇದುವರೆಗೆ 450 ಸಲಹೆಗಳು ಬಂದಿವೆ.
ಮಂದಿರ ಹೇಗಿರಬೇಕು ಎಂಬ ಬಗ್ಗೆ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ತನ್ನ ವೆಬ್‌ಸೈಟ್‌ನಲ್ಲಿ ಸಲಹೆಗಳನ್ನು ಆಹ್ವಾನಿಸಿತ್ತು. ನ.25ರ ಕೊನೆಯ ದಿನದೊಳಗೆ 450 ಸಲಹೆಗಳು ಬಂದಿವೆ. ಈ ಸಲಹೆಗಳನ್ನು ಪರಿಶೀಲಿಸಲು ಟ್ರಸ್ಟ್ ಖಜಾಂಚಿ ಗೋವಿಂದ ದೇವಗಿರಿ ಮಹಾರಾಜ್ ಅವರ ನೇತೃತ್ವದ ಸಮಿತಿ ರಚಿಸಲಾಗಿದೆ. ಇದರಲ್ಲಿ ಉತ್ತಮ ಸಲಹೆಗಳನ್ನು ಸಮಿತಿ ಆಯ್ಕೆ ಮಾಡಿಕೊಳ್ಳಲಿದೆ.
undefined
ಇದೇ ವೇಳೆ ರಾಮಮಂದಿರದ ಸುತ್ತ ಹಸಿರು ತೋಟವನ್ನು ನಿರ್ಮಿಸಲಾಗುವುದು ಹಾಗೂ ಹಸಿರಿನಿಂದ ಮಂದಿರದ ಆವರಣ ಕಂಗೊಳಿಸಲಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸ್ಥಾಪಿಸಿದ ದೇಶದ ಮೊದಲ ನವಗ್ರಹ ನಕ್ಷತ್ರ ಎನ್ನಿಸಿಕೊಂಡ ‘ನಕ್ಷತ್ರ ವಾಟಿಕಾ’ ಕೂಡ ರೂಪುಗೊಳ್ಳಲಿದೆ.
ಇಡೀ ದೇಗುಲ ಪರಿಸರ ಸ್ನೇಹಿಯಾಗಿರಲಿದೆ. ಅದನ್ನು ಪರಿಸರ ಸ್ನೇಹಿ ಮಾಡಬೇಕು ಎಂಬ ಬಗ್ಗೆ ಹಿರಿಯ ಭಾರತೀಯ ವಿಜ್ಞಾನಿಗಳ ಸಲಹೆ ಕೂಡ ಪಡೆಯಲಾಗುತ್ತದೆ. ಮಂದಿರವನ್ನು 2.7 ಎಕ