ಪ್ರತಿಭಟಿಸುತ್ತಿರುವವರು ನಿಜವಾದ ರೈತರಲ್ಲ: ಕೇಂದ್ರ ಸಚಿವರ ಹೇಳಿಕೆ!

By Suvarna News  |  First Published Dec 6, 2020, 3:32 PM IST

ದೆಹಲಿಯಲ್ಲಿ ರೈತರ ಪ್ರತಿಭಟನೆ| ಕೃಷಿ ಕಾಯ್ದೆ ವಿರೋಧಿಸಿ ಸಿಡಿದೆದ್ದ ರೈತರು| ಪ್ರತಿಭಟಿಸುತ್ತಿರುವವರು ನಿಜವಾದ ರೈತರಲ್ಲ: ಕೇಂದ್ರ ಸಚಿವರ ಹೇಳಿಕೆ!


ನವದೆಹಲಿ(ಡಿ.06): ಕೃಷಿ ಕಾಯ್ದೆ ವಿರೋಧಿಸಿ ರೈತರು ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ಹೀಗಿರುವಾಗಲೇ ಶನಿವಾರದಂದು ರೈತರು ಹಾಗೂ ಸರ್ಕಾರದ ನಡುವೆ ನಡೆದ ಮಾತುಕತೆ ವಿಫಲಗೊಂಡಿದೆ. ಆದರೀಗ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಕೇಂದ್ರದ ಕೃಷಿ ಖಾತೆಯ ರಾಜ್ಯ ಸಚಿವ ಕೈಲಾಶ್ ಚೌಧರಿ ಈ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ್ದು ಕನಿಷ್ಟ ಬೆಂಬಲ ಬೆಲೆ ಸಮಾನವಾಗಿ ಇರಿಸಲಾಗುತ್ತದೆ ಎಂದು ತಾನು ಲಿಖಿತವಾಗಿ ಹೇಳಬಲ್ಲೆ ಎಂದಿದ್ದಾರೆ. ಅಲ್ಲದೇ  ಪ್ರತಿಭಟಿಸುತ್ತಿರೆಉವವರು ಅಸಲಿ ರೈತರಲ್ಲ ಎಂಬುವುದು ಎಂಬ ತನಗನಿಸುತ್ತದೆ ಎಂದಿದ್ದಾರೆ. 

'ಇಂದಿರಾ ಗಾಂಧಿಗೆ ಪಾಠ ಕಲಿಸಿದಂತೆ 2024ರಲ್ಲಿ ಮೋದಿಗೆ ಜನರು ತಕ್ಕಪಾಠ ಕಲಿಸ್ತಾರೆ'

Latest Videos

undefined

ಕೇಂದ್ರದ ಕೃಷಿ ರಾಜ್ಯ ಸಚಿವ ಚೌಧರಿ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡುತ್ತಾ ತಮ್ಮ ಹೊಲಗಳಲ್ಲಿ ದುಡಿಯುತ್ತಿರುವ ಅಸಲಿ ರೈತರು ಈ ಕೃಷಿ ಕಾಯ್ದೆ ಬಗ್ಗೆ ಚಿಂತಿತರಾಗಿದ್ದಾರೆಂದು ನನಗನಿಸುವುದಿಲ್ಲ. ಕೆಲ ರಾಜಕೀಯ ಪಕ್ಷಗಳು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಆದದರೆ ನಿಜವಾದ ರೈತರು ಈ ನೂತನ ಕಾನೂನನ್ನು ಸಮರ್ಥಿಸುತ್ತಿದ್ದಾರೆಂದಿದ್ದಾರೆ.

'ಶೀಘ್ರ ಪರಿಹಾರ ಒದಗಿಸಿ, ಸಮಸ್ಯೆ ಬಗೆಹರಿಯದಿದ್ದರೆ ಇಡೀ ದೇಶದ ರೈತರಿಂದ ಪ್ರತಿಭಟನೆ!'

ರಾಜಕೀಯದಲ್ಲಿ ರೈತರು ಸಿಲುಕಬೇಡಿ

ಕಾಂಗ್ರೆಸ್ ಸರ್ಕಾರ ಹಾಗೂ ಇತರ ವಿಪಕ್ಷಗಳು ರೈತರನ್ನು ಕೆರಳಿಸುತ್ತಿದ್ದಾರೆಂದು ನನಗನಿಸುತ್ತಿದೆ. ದೇಶದ ರೈತರು ಹೊಸ ಕಾನೂನು ಸಮರ್ಥಿಸುತ್ತಿದ್ದಾರೆ. ಆದರೆ ಕೆಲ ರಾಜಕೀಯ ನಾಯಕರು ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ನಮಗೆ ಮೋದಿ ಸರ್ಕಾರ ಹಾಗೂ ರೈತರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅಶಾಂತಿ ಸೃಷ್ಟಿಯಾಗುವ ಯಾವುದೇ ನಿರ್ಧಾರ ರೈತರು ತೆಗೆದುಕೊಳ್ಳುವುದಿಲ್ಲ ಎಂಬುವುದು ನನ್ನ ಭರವಸೆ ಎಂದಿದ್ದಾರೆ ಚೌಧರಿ.


 

click me!