ನವದೆಹಲಿ(ಡಿ.01): ಓಮಿಕ್ರಾನ್ ರೂಪಾಂತರಿ(Omicron variant) ತಳಿ ವೈರಸ್ ಆತಂಕ ಹೆಚ್ಚಾಗುತ್ತಿದೆ. ಸೌತ್ ಆಫ್ರಿಕಾದಲ್ಲಿ ಪತ್ತೆಯಾದ ಈ ವೈರಸ್ 11ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಡಿಸೆಂಬರ್ 1 ರಿಂದ ಹೊಸ ಮಾರ್ಗಸೂಚಿ(Guidelines) ಪ್ರಕಟಿಸಿದೆ. ಇದರ ಅನುಸಾರ ದೇಶದ ಎಲ್ಲಾ ವಿಮಾನ ನಿಲ್ದಾಣದಲ್ಲಿ(Airport) ವಿದೇಶದಿಂದ ಆಗಮಿಸಿದವರ ಪರೀಕ್ಷೆ ಹಾಗೂ ನಿಗಾ ಇಡಲಾಗಿದೆ. ಮೊದಲ ದಿನ 6 ಮಂದಿ ವಿದೇಶಿ ಪ್ರಯಾಣಿಕರಲ್ಲಿ ಕೊರೋನಾ(Coronavirus) ಪತ್ತೆಯಾಗಿದೆ. ಈ 6 ಮಂದಿ ಮಾದರಿಯನ್ನು ಓಮಿಕ್ರಾನ್ ಪರೀಕ್ಷೆಗೆ ರವಾನಿಸಲಾಗಿದೆ.
ಹೈ ರಿಸ್ಕ್ ದೇಶಗಳಿಂದ ಭಾರತಕ್ಕೆ ಆಗಮಿಸುವ ವಿದೇಶಿ ಪ್ರಯಾಣಿಕರ(passengers) ಮೇಲೆ ಹೆಚ್ಚಿನ ನಿಗಾ ಇಡಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಯಲ್ಲಿ ಹೇಳಿದೆ. ಇದರ ಪ್ರಕಾರ ದೇಶದ ಎಲ್ಲಾ ವಿಮಾನ ನಿಲ್ದಾಣದಲ್ಲಿ ಆರ್‌ಟಿ ಪಿಸಿಆರ್ ಪರೀಕ್ಷೆ(RT PCR test) ಮಾಡಲಾಗುತ್ತದೆ. ಹೀಗೆ ಮೊದಲ ದಿನ ಮಧ್ಯರಾತ್ರಿ 12 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ವಿದೇಶದಿಂದ ಭಾರತಕ್ಕೆ 3,476ಕರು ಆಗಮಿಸಿದ್ದಾರೆ. ಇದರಲ್ಲಿ 6 ಮಂದಿಯಲ್ಲಿ ಕೊರೋನಾ ಪಾಸಿಟೀವ್ ದೃಢಪಟ್ಟಿದೆ. ಇದು ಭಾರತದ ಆತಂಕ ಹೆಚ್ಚಿಸಿದೆ. ಇವರಲ್ಲಿ ಪತ್ತೆಯಾಗಿರುವ ವೈರಸ್ ಓಮಿಕ್ರಾನ್ ಆಗಿದೆಯೇ ಅನ್ನೋದು ಇನ್ನು ದೃಢಪಟ್ಟಿಲ್ಲ. ಹೀಗಾಗಿ ಓಮಿಕ್ರಾನ್ ಪರೀಕ್ಷೆಗೆ ಮಾದರಿಗಳನ್ನು ರವಾನಿಸಲಾಗಿದೆ.
Omicron Variant Threat: ಫ್ರಂಟ್‌ಲೈನ್ ವಾರಿಯರ್ಸ್‌ಗೆ ಬೂಸ್ಟರ್ ಡೋಸ್, ಸುಧಾಕರ್ ಮಾತು
undefined
ಹೈ ರಿಸ್ಕ್ ದೇಶಗಳಿಂದ ಭಾರತಕ್ಕೆ(India) 11 ವಿಮಾನಗಳು ಆಗಮಿಸಿದೆ. ಇದರಲ್ಲಿ 6 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ಓಮಿಕ್ರಾನ್ ಇವರ ಮಾದರಿಯನ್ನು ಜೆನೋಮಿಕ್ ಸೀಕ್ವೆನ್ಸ್ ಪರೀಕ್ಷೆಗಾಗಿ(genomic sequencing) INSACOG ಲ್ಯಾಬ್‌ಗೆ ಕಳುಹಿಸಲಾಗಿದೆ. ಇದೀಗ ಈ ವರದಿಗಾಗಿ ಕೇಂದ್ರ ಸರ್ಕರವೂ ಕಾಯುತ್ತಿದೆ. ಇದರ ಬೆನ್ನಲ್ಲೇ ದೇಶದಲ್ಲಿ ಆತಂಕದ ವಾತಾರವಣ ನಿರ್ಮಾಣವಾಗುತ್ತಿದೆ.
ಕೊರೋನಾ ಪತ್ತೆಯಾದ 6 ಪ್ರಯಾಣಿಕರಲ್ಲಿ ನಾಲ್ವರು ದೆಹಲಿಗೆ ಆಗಮಿಸಿದವರಾಗಿದ್ದಾರೆ. ನೆದರ್ಲೆಂಡ್ ಹಾಗೂ ಯುಕೆಯಿಂದ ದೆಹಲಿಗೆ ಆಗಮಿಸಿದ 4 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ನಾಲ್ವರನ್ನು LNJP ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇಂದ್ರ ಸರ್ಕಾರ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಇಸ್ರೇಲ್ ದೇಶಗಳನ್ನು ಹೈ ರಿಸ್ಕ್ ದೇಶಗಳು ಎಂದು ಗುರುತಿಸಿದೆ. ಇಲ್ಲಿಂದ ಆಗಮಿಸುವ ವಿದೇಶಿ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಎರಡು ಡೋಸ್. ಆರ್‌ಟಿ ಪಿಸಿಆರ್ ಪರೀಕ್ಷೆ ವರದಿ ಹಿಡಿದು ಆಗಮಿಸಿದರೂ ವಿಮಾನ ನಿಲ್ದಾಣದಲ್ಲಿ ಮತ್ತೆ ಪರೀಕ್ಷೆ ಮಾಡಿಸಬೇಕಿದೆ. ವರದಿ ನೆಗಟೀವ್ ಬಂದ ಬಳಿಕ ಪ್ರಯಾಣಿಕರನ್ನು ಕ್ವಾರಂಟೈನ್‌ನಿಂದ ಬಿಡುಗಡೆಗೊಳಿಸಲಾಗುವುದು.
Corona Alert: ಈ ಚ್ಯೂಯಿಂಗಮ್‌ನಿಂದ ಕೊರೋನಾ ಹರಡೋ ಸ್ಪೀಡ್‌ಗೆ ಬ್ರೇಕ್
ಹೈ ರಿಸ್ಕ್ ಹೊರತು ಪಡಿಸಿದ ದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರನ್ನು ರ್ಯಾಂಡಮ್ ಟೆಸ್ಟ್‌ಗೆ ಒಳಪಡಿಸಲಾಗುತ್ತದೆ. ಭಾನುವಾರ ವಿದೇಶದಿಂದ ಉತ್ತರ ಪ್ರದೇಶಕ್ಕೆ ಆಗಮಿಸಿದ ಮೂವರು ವಿದೇಶಿ ಪ್ರಯಾಣಿಕರಲ್ಲಿ ಕೊರೋನಾ ವೈರಸ್ ದೃಢಪಟ್ಟಿತ್ತು. ಆದರೆ ಸೋಮವಾರ ಅಧಿಕಾರಿಗಳಿಗೆ ಹೇಳದೆ ಪಲಾಯನ ಮಾಡಿದ್ದಾರೆ. ಯೂರೋಪ್‌ನಿಂದ ಉತ್ತರ ಪ್ರದೇಶದ ವೃಂದಾವನ ಆಶ್ರಮಕ್ಕೆ ಆಗಮಿಸಿದ್ದ ವಿದೇಶಿಗರ ಪೈಕಿ ಮೂವರಲ್ಲಿ ಕೊರೋನಾ ಪತ್ತೆಯಾಗಿತ್ತು. ಇವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿದವೇ ಈ ಮೂವರ ಪಲಾಯನ ಮಾಡಿದ್ದಾರೆ. ಇದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಭಾರತ ಸೇರಿದಂತೆ 50ಕ್ಕೂ ಹೆಚ್ಚು ದೇಶಗಳು ಓಮಿಕ್ರಾನ್ ಆತಂಕದಿಂದ ಕಠಿಣ ನಿಯಮ ಜಾರಿಗೊಳಿಸಿದೆ. ವಿದೇಶಿ ಪ್ರಯಾಣಿಕರ ಪರೀಕ್ಷೆ ಮಾಡಲಾಗುತ್ತಿದೆ. ಇದರ ನಡುವೆ ವಿಶ್ವ ಆರೋಗ್ಯಸಂಸ್ಥೆ ವಿದೇಶಿ ಪ್ರಯಾಣ ಮುಂದೂಡುವಂತೆ ಮನವಿ ಮಾಡಿದೆ. ಇಷ್ಟೇ ಅಲ್ಲ ಎಲ್ಲಾ ದೇಶಗಳು ಓಮಿಕ್ರಾನ್ ಕುರಿತು ಎಚ್ಚರಿಕೆ ವಹಿಸಬೇಕು ಎಂದಿದೆ.