Farm Laws Repeal:ಕೃಷಿ ಕಾಯ್ದೆ ರದ್ದು ಮಸೂದೆಗೆ ರಾಷ್ಟ್ರಪತಿ ಅನುಮೋದನೆ!

By Suvarna NewsFirst Published Dec 1, 2021, 8:52 PM IST
Highlights
  • ಕೃಷಿ ಕಾಯ್ದೆ ರದ್ದು ಅಧಿಕೃತ, ರಾಷ್ಟ್ರಪತಿ ಕೋವಿಂದ್ ಅಂಕಿತ
  • ಲೋಕಸಭೆ, ರಾಜ್ಯಸಭೆಯಲ್ಲಿ ಮಸೂದೆ ವಾಪಸ್ ಅಂಗೀಕಾರ ಬಳಿಕ ಅನುಮೋದನೆ
  • ನವೆಂಬರ್ 19 ರಂದು ಕಾಯ್ದೆ ವಾಪಸ್ ಪಡೆಯುವುದಾಗಿ ಘೋಷಣೆ

ನವದೆಹಲಿ(ಡಿ.01): ಪ್ರಧಾನಿ ನರೇಂದ್ರ ಮೋದಿ(Narendra Modi) ಭರವಸೆ ನೀಡಿದಂತೆ ವಿವಾದಿತ ಮೂರು ಕೃಷಿ ಕಾಯ್ದೆ(Farm Laws) ರದ್ದು ಅದಿಕೃತಗೊಂಡಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್(Ram Nath Kovind) ಕೃಷಿ ಕಾಯ್ದೆ ರದ್ದು ಮಸೂದೆಗೆ ಅನುಮೋದನೆ ನೀಡಿದ್ದಾರೆ. ಜೊತೆಗೆ ಕಾಯ್ದೆ ರದ್ದತಿ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಆದರೆ ರೈತ ಸಂಘಟೆನೆಗಳು ಹೊಸ 6 ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟನೆ ಮುಂದುವರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದಂತೆ ಚಳಿಗಾಲದ ಅಧಿವೇಶನದಲ್ಲಿ(winter session) ಮೂರು ಕೃಷಿ ಕಾಯ್ದೆ ಹಿಂಪಡೆಯುವ ಕಾನೂನು ಪ್ರಕ್ರಿಯೆ ಆರಂಭಗೊಂಡಿತ್ತು. ಮೊದಲು ಲೋಕಸಭೆ( Lok Sabha) , ಬಳಿಕ ರಾಜ್ಯಸಭೆಯಲ್ಲಿ(Rajya Sabha) ಧ್ವನಿಮತದ ಮೂಲಕ ಕೃಷಿ ಮಸೂದೆ ಹಿಂಪಡೆಯಲು ಅಂಗೀಕಾರ ನೀಡಲಾಗಿತ್ತು. ಈ ಪ್ರಕ್ರಿಯೆ ಬಳಿಕ ಇಂದು ರಾಮನಾಥ್ ಕೋವಿಂದ್ ಕೃಷಿ ಮಸೂದೆ ಹಿಂಪಡೆಯಲು ಅಂಕಿತ ಹಾಕಿದ್ದಾರೆ.

Winter Session: ಸರ್ಕಾರ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ, ಪ್ರತಿಪಕ್ಷಗಳಿಗಿರಲಿ ತಾಳ್ಮೆ ಎಂದ ಮೋದಿ

ನವೆಂಬರ್ 19 ರಂದು ಪ್ರಧಾನಿ ನರೇಂದ್ರ ಮೋದಿ ಮೂರು ಕೃಷಿ ಮಸೂದೆ ವಾಪಸ್ ಪಡೆಯುವುದಾಗಿ ಘೋಷಿಸಿದ್ದರು. ಈ ವೇಳೆ ರೈತ ಸಂಘಟನೆಗಳು ಮಾತಿನ ಬದಲು ಮಸೂದೆ ಅಧಿಕೃತವಾಗಿ ರದ್ದು ಮಾಡಿ ಎಂದು ತಿರುಗೇಟು ನೀಡಿತ್ತು. ಬಳಿಕ ಈ ಕುರಿತು ಪ್ರಕ್ರಿಯೆ ಆರಂಭಗೊಂಡ ಬೆನ್ನಲ್ಲೇ ರೈತ ಸಂಘಟನೆಗಳು ಹೊಸ 6 ಬೇಡಿಕೆ ಮುಂದಿಟ್ಟು ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿತ್ತು. ಇದೀಗ ಕೃಷಿ ಮಸೂದೆ ರದ್ದುಗೊಂಡಿದೆ. ಆದರೆ ರೈತ ಪ್ರತಿಭಟನೆ(Farmers Protest) ನಿಲ್ಲುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ.

ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ 2020, ರೈತರ ಸಬಲೀಕರಣ ಮತ್ತು ಬೆಲೆ ಭರವಸೆ, ಕೃಷಿ ಸೇವೆಗಳ ಮಸೂದೆ 2020,  ಹಾಗೂ ಅಗತ್ಯ ಸರಕುಗಳ ತಿದ್ದುಪಡಿ ಮಸೂದೆ 2020 ಸೇರಿ ಮೂರು ಮಹತ್ವದ ಕೃಷಿ ಕಾಯ್ದೆ ಇದೀಗ ರದ್ದಾಗಿದೆ. 

Farm Laws Repeal Bill 2021: ಕೃಷಿ ಕಾನೂನು ಹಿಂಪಡೆದರೂ ಪ್ರತಿಭಟನೆ ಮುಂದುವರೆಯುತ್ತೆ ಎಂದ ಟಿಕಾಯತ್!

ಈ ಮೂರು ಕಾಯ್ದೆ ಹಿಂಪೆಡಯಲು ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ 40ಕ್ಕೂ ಹೆಚ್ಚಿನ ರೈತ ಸಂಘಟನೆಗಳು ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸಿದೆ. ವಿವಾದಿತ ಕೃಷಿ ಮಸೂದೆ ಹಿಂಪಡೆಯುವ ಘೋಷಣೆ ಮಾಡುತ್ತಿದ್ದಂತೆ, ರೈತ ಸಂಘಟನಗಳು ಪ್ರತಿಭಟನೆ ಉದ್ದೇಶವನ್ನು ಕೊಂಚ ತಿರುಗಿಸಿದೆ. ಇದೀಗ 6 ಪ್ರಮುಖ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟ ನಡೆಸುವುದಾಗಿ ಘೋಷಿಸಿದೆ.

ಹರ್ಯಾಣ, ಪಂಜಾಬ್ ಭಾಗದಲ್ಲಿ ರೈತರು ಬೆಳೆ ಕಟಾವಿನ ಬಳಿಕ ಉಳಿದ ಕಳೆಗೆ ಬೆಂಕಿ ಹಚ್ಚುತ್ತಿದ್ದರು. ಇದರಿಂದ ದೆಹಲಿ ಸೇರಿದಂತೆ ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಹೀಗಾಗಿ ಕಳೆಗೆ ಬೆಂಕಿ ಹಚ್ಚಿದ ರೈತರ ಮೇಲೆ ಪ್ರಕರಣ ದಾಖಲಿಸಿತ್ತು. ರೈತರ ಮೇಲೆ ದಾಖಲಾದ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ರೈತ ಸಂಘಟನೆಗಳು ಬೇಡಿಕೆ ಇಟ್ಟಿದೆ. ಇನ್ನು ರೈತ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ 700ಕ್ಕೂ ಹೆಚ್ಚು ರೈತರಿಗೆ ಕೇಂದ್ರ ಸರ್ಕಾರ ಪರಿಹಾರ ಘೋಷಿಸಬೇಕು. ರೈತರ ಪ್ರತಿಭಟನೆ ವೇಳೆ ರೈತರ ಮೇಲೆ ದಾಖಲಾದ ಪ್ರಕರಣಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಪಡಿಸಬೇಕು.  ಉತ್ತರ ಪ್ರದೇಶದ ಲಂಖೀಪುರ ಹಿಂಸಾಚಾರಕ್ಕೆ ಕಾರಣವಾದ ಕೇಂದ್ರ ಸಚಿವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು 6 ಪ್ರಮುಖ ಬೇಡಿಕೆಗಳನ್ನು ರೈತ ಸಂಘಟನೆಗಳು ಮುಂದಿಟ್ಟಿದೆ. ಈ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದೆ. ಕಳೆದ ಒಂದು ವರ್ಷದಿಂದ ನಡೆಸಿದ ಮಸೂದೆ ವಾಪಸ್ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಇದೇ ರೀತಿ ಹೊಸ 6 ಬೇಡಿಕೆ ಈಡೇರಿಸುವವರೆಗ ಹೋರಾಟ ಮಾಡುವುದಾಗಿ ರೈತ ಸಂಘಟನೆಗಳು ಹೇಳಿದೆ.

click me!