ಭಾರತೀಯ ಮದುವೆಗಳಂದ್ರೆ ಅದ್ಧೂರಿತನ. ಅಬ್ಬರ, ಸಂಭ್ರಮ.. ಯಾವುದಕ್ಕೂ ಖರ್ಚು ಮಾಡದವರು ಮದುವೆ ದಿನ ಹಿಂದೆ ಮುಂದೆ ನೋಡದೆ ಬೇಕಾದಷ್ಟು ಖರ್ಚು ಮಾಡುತ್ತಾರೆ. ಮದುವೆ ಅಂದ್ರೆ ಹೆಣ್ಮಕ್ಕಳಿಗೆ ಸೀರೆ, ಒಡವೆ ಬಗ್ಗೆ ಸಿಕ್ಕಾಪಟ್ಟೆ ಕನಸಿರುತ್ತೆ. ಆದ್ರೆ ಈ ವಧುವನ್ನು(Bride) ನೋಡಿ, ನೈಟ್ ಡ್ರೆಸ್(Night dress) ಹಾಕಿಯೇ ಸಪ್ತಪದಿ ತುಳಿಯುತ್ತೇನೆ ಎನ್ನುತ್ತಿದ್ದಾಳೆ ಈಕೆ.
ಮದುವೆಗಳೆಂದರೆ ಹೆಣ್ಣುಮಕ್ಕಳಿಗೆ ಬಟ್ಟೆ, ಸೀರೆ, ಒಡವೆ ಇದರದ್ದೇ ಚಿಂತೆ. ಮದುವೆ ಎಂದರೇನೇ ಈ ಅದ್ದೂರಿತನದ ಸಂಭ್ರಮ. ಡ್ರೀಮ್ ವೆಡ್ಡಿಂಗ್ ಡ್ರೆಸ್, ಆಭರಣಗಳು ಎಂದರೆ ಎಲ್ಲ ಹೆಣ್ಣುಮಕ್ಕಳಿಗೂ ತಮ್ಮದೇ ಆದ ವಿಶೇಷ ಕನಸುಗಳಿರುತ್ತವೆ. ಮದುವೆ ಎಂದ ಮೇಲೆ ಗ್ರ್ಯಾಂಡ್ ಲಹೆಂಗಾ, ಒಳ್ಳೆ ರೇಶ್ಮೆ ಸೀರೆ, ಕೈತುಂಬಾ ಬಳೆ, ಒಂದೊಂದು ಶಾಸ್ತ್ರಕ್ಕೂ ಒಂದೊಂದು ಬಗೆಯ ಒಡವೆಗಳು. ಹೀಗೆ ಮದುವೆ ಅಂದರೆ ಬಹಳಷ್ಟು ಸಿದ್ಧತೆ, ಸಂಭ್ರಮ ಎಲ್ಲವೂ ಇರುತ್ತದೆ. ಫೋಟೋಶೂಟ್, ಶಾಸ್ತ್ರಗಳು, ಭರ್ಜರಿ ಭೋಜನ ಇವೆಲ್ಲವೂ ಮುಗಿಯುವ ಹೊತ್ತಿಗೆ ಮದುವೆ ಜೋಡಿ ಹೈರಾಣಾಗಿರುತ್ತಾರೆ. ಆದರೂ ಮದುವೆ ಅದ್ಧೂರಿಯೇ ಬೇಕು.
ಇಲ್ಲೊಬ್ಬ ವಧು ಗ್ರ್ಯಾಂಡ್ ಆಗಿ ಮದುವೆಗೆ ರೆಡಿಯಾಗಿದ್ದಾರೆ. ಡಾರ್ಕ್ ರೆಡ್ ಲೆಹಂಗಾ, ಹೆವಿ ಜ್ಯುವೆಲ್ಲರಿ, ಹಾರವನ್ನು ಧರಿಸಿ ಸುಸ್ತಾಗಿ ಕುಳಿತ ವಧುವಿನ ವಿಡಿಯೋ ಒಂದು ನೆಟ್ಟಿಗರನ್ನು ನಗಿಸುತ್ತಿದೆ. ಹೌದು, ವಧುವಿನ ಸ್ಥಿತಿ ನೋಡಿ ವಿಡಿಯೋ ನೋಡಿ ಎಂಜಾಯ್ ಮಾಡಿದ್ದಾರೆ ನೆಟ್ಟಿಗರು. ವಧು ಸುಸ್ತಾಗಿ ತಲೆಗೆ ಕೈಕೊಟ್ಟು ಸೋಫಾ ಮೇಲೆ ಕುಳಿತಿದ್ದು, ಅವರ ರಿಯಾಕ್ಷನ್ ಮಾತ್ರ ಸಖತ್ ಫನ್ನಿಯಾಗಿತ್ತು.
ವರದಕ್ಷಿಣೆ ಹಣದಲ್ಲಿ ಹಾಸ್ಟೆಲ್ ನಿರ್ಮಿಸಿ ಎಂದ ಮಗಳು, ಖಾಲಿ ಚೆಕ್ ಕೊಟ್ಟ ಅಪ್ಪ
ಈ ವಧು ಫೆರಾಸ್ ತೆಗೆದುಕೊಳ್ಳಬೇಕಾದ ಸಮಯದಲ್ಲಿ ತುಂಬಾ ದಣಿದಿದ್ದರು. ಸುಂದರಿಯಾಗಿ ಅಲಂಕರಿಸಿಕೊಂಡಿದ್ದ ವಧು ಇಲ್ಲಿ ನೈಟ್‌ಸೂಟ್‌ನಲ್ಲಿ ಒಂಬತ್ತು ಸುತ್ತುಗಳನ್ನು ತೆಗೆದುಕೊಳ್ಳಬೇಕೆಂದು ಬಯಸಿದ್ದಾರೆ. ಆನ್‌ಲೈನ್‌ನಲ್ಲಿ ವೀಡಿಯೊ ವೈರಲ್ ಆಗಿದೆ. ಇದರಲ್ಲಿ ದೇಸಿ ವಧು ಫೆರಾಸ್ ಶಾಸ್ತ್ರಕ್ಕಾಗಿ ಕಾಯುತ್ತಿರುವಾಗ ತನ್ನ ನೈಟ್‌ಸೂಟ್ ಕೊಡಿ ಎಂದು ಕೇಳುತ್ತಿರುವುದನ್ನು ಕಾಣಬಹುದು. ಕ್ಲಿಪ್ ನೋಡಿದ ನೆಟ್ಟಿಗರು ನಕ್ಕು ಎಂಜಾಯ್ ಮಾಡಿದ್ದಾರೆ. ಮತ್ತಷ್ಟು ಜನರನ್ನು ನಗಿಸಲು ವಿಡಿಯೋವನ್ನು ಶೇರ್ ಮಾಡಿ ವೈರಲ್ ಮಾಡಿದ್ದಾರೆ. Instagram ಬಳಕೆದಾರ ಹರ್ಷಿತಾ ಸೇಥಿ ಅವರು ಹಂಚಿಕೊಂಡಿರುವ ವೀಡಿಯೊದಲ್ಲಿ ವಧು ಪಾರುಲ್ ಸೇಥಿ ಅವರು 'ಫೆರಾಸ್' ಪ್ರಾರಂಭವಾಗಲು ಕಾಯುತ್ತಿದ್ದಾರೆ. ಹರ್ಷಿತಾ ಮದುವೆಯಲ್ಲಿ ಪ್ರಮುಖ ಶಾಸ್ತ್ರದ ಕ್ಷಣದ ಮೊದಲು ಪಾರುಲ್ ಏನು ಯೋಚಿಸುತ್ತಿದ್ಎಂದಾಳೆ ಎಂದು ಕೇಳುತ್ತಾಳೆ. ಅಣಕು ಅಳುವ ಸ್ವರದಲ್ಲಿ ಉತ್ತರಿಸುತ್ತಾ, ವಧು ಆ ಕ್ಷಣದಲ್ಲಿ ತನ್ನ ರಾತ್ರಿಯ ಸೂಟ್ ಅಗತ್ಯವಿದೆ ಎಂದು ಉತ್ತರಿಸುತ್ತಾಳೆ. ಇದು ವಧು ಎಷ್ಟು ಸುಸ್ತಾಗಿದ್ದಾಳೆ ಎಂಬುದನ್ನು ತಿಳಿಸುವುದು ಮಾತ್ರವಲ್ಲದೆ ಹೆಣ್ಮಕ್ಕಳಿಗೆ ನೈಟ್ ಸೂಟ್ ಎಷ್ಟು ಕಂಫರ್ಟೆಬಲ್ ಎನ್ನುವುದನ್ನೂ ತೋರಿಸುತ್ತದೆ.
ಲೆಹೆಂಗಾ ಹಿಡಿಯಲು ಸಹಕರಿಸಿದ ಪತಿ, ಇಂಥವನು ನಮಗೂ ಸಿಗಬಾರದಾ ಎಂದ ಯುವತಿಯರು
ಅಂತೂ ವಧುವಿನ ಕೂಲ್ ರೆಸ್ಪಾನ್ಸ್ ನೋಡಿದರೆ ನಗು ಬರೋದು ಖಂಡಿತ. ಮದುವೆ ದಿನ ಕೂಲ್ ಆಗಿ, ಶಾಸ್ತ್ರಗಳಿಂದ ವಧು ಸುಸ್ತಾಗಿರೋದು ಸ್ಪಷ್ಟವಾಗಿ ಕಾಣಬಹುದು.
ಇತ್ತೀಚೆಗೆ ವರ ವಧುವಿನ ಲೆಹಂಗಾ ಮೈಂಟೆನ್ ಮಾಡಲು ನೆರವಾಗಿದ್ದು ವಿಡಿಯೋ ವೈರಲ್ ಆಗಿತ್ತು. ಇಲ್ಲೊಬ್ಬ ವಧು (Bride) ಅತಿ ಭಾರದ ಲೆಹೆಂಗಾ ಧರಿಸಿ, ಸ್ಟೇಜಿಗೆ ಬರಲೇ ಒದ್ದಾಡುವುದನ್ನು ಕಂಡ ವರ(groom) ಕೂಡಲೇ ಆಕೆಯ ಸಹಾಯಕ್ಕೆ ಧಾವಿಸಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣ(Social media)ಗಳಲ್ಲಿ ವೈರಲ್ (viral) ಆಗಿತ್ತು. ವಿವಾಹ ಸಮಾರಂಭಕ್ಕಾಗಿ ಸ್ಟೇಜ್‌ಗೆ ಬರುವ ಮಧುಮಗಳು, ಭಾರದ ಲೆಹೆಂಗಾ(lehenga)ಹೊತ್ತು ನಡೆಯಲೇ ಕಷ್ಟ ಪಡುತ್ತಿರುತ್ತಾಳೆ. ಕೂಡಲೇ ಅವಳ ನೆರವಿಗೆ ಬರುವ ಮಧುಮಗ, ಲೆಹೆಂಗಾವನ್ನು ಚೂರು ಎತ್ತಿ ಹಿಡಿದು ಅವಳು ಮುಂದೆ ನಡೆಯಲು ಸಹಾಯ ಮಾಡುತ್ತಾನೆ. ಆ ಸಂದರ್ಭದಲ್ಲಿ ಅವಳ ಕೈಯನ್ನು ಕೂಡಾ ಹಿಡಿದು ನಡೆಸುತ್ತಾನೆ.
ಈಗ ಈ ವೀಡಿಯೋ ಕ್ಯೂಟೆಸ್ಟ್ ಥಿಂಗ್ ಟು ವಿಟ್ನೆಸ್ ಎಂದು ಜನಮೆಚ್ಚುಗೆ ಗಳಿಸುತ್ತದೆ. ವಿಡಿಯೋ ನೋಡಿದವರೆಲ್ಲ ಹುಡುಗ ಅಂದ್ರೆ ಹೀಗಿರಬೇಕು ಅಂಥ ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ. ಈ ವೀಡಿಯೋವನ್ನು Wedding Planning_witty Wedding ಇನ್ಸ್ಟಾಗ್ರಾಂ(Instagram) ಪೇಜ್ ಶೇರ್ ಮಾಡಿದೆ.