
ಭುವನೇಶ್ವರ: ಕಲ್ಲಿದ್ದಲು ವ್ಯವಹಾರಕ್ಕೆ ಸಂಬಂಧಿಸಿದ ಉದ್ಯಮಿ ಬಳಿ 30 ಸಾವಿರ ರೂ. ಲಂಚ ಪಡೆದ ಆರೋಪದ ಮೇಲೆ ಓಡಿಶಾಸ ಕಟಕ್‌ನ ಗಣಿ ಉಪ ನಿರ್ದೇಶಕ ದೇಬಬ್ರತ ಮೊಹಂತಿ (Debabrata Mohanty) ಎಂಬ ಅಧಿಕಾರಿಯನ್ನ ಬಂಧಿಸಲಾಗಿತ್ತು. ಬಂಧನದ ಬಳಿಕ ಅಧಿಕಾರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಅಧಿಕಾರಿಗಳು (Odisha Vigilance officials) ದಾಳಿ ನಡೆಸಿದ್ದರು. ಮೊಹಂತಿ ವಾಸವಿದ್ದ ಒಡಿಶಾ ವಿಜಿಲೆನ್ಸ್ ಫ್ಲಾಟ್, ಭದ್ರಕ್‌ನ ಮಠಸಾಹಿಯಲ್ಲಿರುವ ಪೋಷಕರ ಮನೆ ಮತ್ತು ಕಟಕ್‌ನಲ್ಲಿರುವ ಆಫಿಸ್‌ನ ಕೋಣೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬಿಆರ್‌ಎಸ್ ಫ್ಲ್ಯಾಟ್‌ನೊಳಗೆ ಟ್ರೋಲಿ ಬ್ಯಾಗ್‌ನಲ್ಲಿದ್ದ ನಗದು ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಟ್ರೋಲಿ ಬ್ಯಾಗ್ ಮತ್ತು ತಿಜೋರಿಯಲ್ಲಿದ್ದ ಹಣದ ಎಣಿಕೆಯಾಗುತ್ತಿದೆ. ಈವರೆಗಿನ ವರದಿಗಳ ಪ್ರಕಾರ, ಹಣದ ಮೊತ್ತ 4 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಎಣಿಕೆ ಕಾರ್ಯ ಮುಂದುವರಿದಿದ್ದು, ಓಡಿಶಾದ ಇತಿಹಾಸದಲ್ಲಿಯೇ ಇದನ್ನು ಅತಿದೊಡ್ಡ ದಾಳಿ ಎಂದು ಸ್ಥಳೀಯ ಮಾಧ್ಯಮಗಳು ವ್ಯಾಖ್ಯಾನಿಸುತ್ತಿವೆ. ದೇಬಬ್ರತ ಮೊಹಂತಿ ಕಚೇರಿಯ ಡ್ರಾಯರ್‌ಗಳಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ನಗದು ಸಿಕ್ಕಿದೆ.
ಇದನ್ನೂ ಓದಿ: ತಾಂತ್ರಿಕ ದೋಷದಿಂದಾಗಿ ಅಂಡಮಾನ್ ಸಮುದ್ರದಲ್ಲಿ ಪತನಗೊಂಡ ಏಳು ಜನರಿದ್ದ ಹೆಲಿಕಾಪ್ಟರ್ ಪತನ
ಭುವನೇಶ್ವರ ನಗರದಲ್ಲಿ ದೇಬಬ್ರತ ಮೊಹಂತಿ ಅರಮನೆಯಂತಹ ಎರಡು ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಹಣದ ಜೊತೆಯಲ್ಲಿ 130 ಗ್ರಾಂಗೂ ಅಧಿಕ ಚಿನ್ನ ಸಿಕ್ಕಿದೆ. , ಕಲ್ಲಿದ್ದಲು ಡಿಪೋ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡಲು ಮತ್ತು ಸಾರಿಗೆ ಅನುಮತಿ ನೀಡಲು ಉದ್ಯಮಿಗೆ ಲಂಚ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು. ಮೊಹಂತಿಯ ಲಂಚ ಕೇಳಿದ ವಿಷಯವನ್ನು ವಿಜಿಲೆನ್ಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಮಂಗಳವಾರ ರಾತ್ರಿ ಲಂಚ ಪಡೆಯುತ್ತಿರುವಾಗಲೇ ಮೊಹಂತಿಯನ್ನು ಬಂಧಿಸಲಾಗಿತ್ತು. ಬಂಧನದ ಬಳಿಕ ಮೊಹಂತಿಗೆ ಸಂಬಂಧಿಸಿದ ಆಸ್ತಿಗಳ ಪರಿಶೀಲನೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Bharat Taxi Launch: ಚಾಲಕರಿಗೂ ಮಾಲೀಕರಾಗೋ ಅವಕಾಶ, ಅಮೂಲ್ ಮಾದರಿಯಲ್ಲಿ ಭಾರತ್ ಟ್ಯಾಕ್ಸಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ