ದೇಶದಲ್ಲೇ ಮೊದಲು, ಕೇರಳ ನಾಗರಿಕರಿಗೆ ನೇಟಿವಿಟಿ ಕಾರ್ಡ್! ವಿವಿಧ ಸೌಲಭ್ಯ ಪಡೆಯಲು ಚಾನ್ಸ್‌

Kannadaprabha News   | Kannada Prabha
Published : Feb 25, 2026, 07:50 AM IST
Kerala s Malayali people

ಸಾರಾಂಶ

ಕೇರಳ ವಿಧಾನಸಭೆಯು ರಾಜ್ಯದ ಮೂಲ ನಿವಾಸಿಗಳಿಗಾಗಿ 'ನೇಟಿವಿಟಿ ಕಾರ್ಡ್' ಮಸೂದೆಗೆ ಅನುಮೋದನೆ ನೀಡಿದ್ದು, ಇದು ದೇಶದಲ್ಲೇ ಮೊದಲ ಇಂತಹ ವ್ಯವಸ್ಥೆಯಾಗಿದೆ. ಈ ಅಧಿಕೃತ ಗುರುತಿನ ಚೀಟಿಯು ಕೇರಳಿಗರಿಗೆ ಸರ್ಕಾರದ ವಿವಿಧ ಸೇವೆಗಳು ಮತ್ತು ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ.

ತಿರುವನಂತಪುರಂ: ಕೇರಳ ಮೂಲದವರಿಗೆ ಅಧಿಕೃತ ಮಾನ್ಯತೆ ನೀಡುವ ನೇಟಿವಿಟಿ ಕಾರ್ಡ್‌ (ಮೂಲನಿವಾಸಿಗಳ ಕಾರ್ಡ್) ಮಸೂದೆಗೆ ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ. ಈ ರೀತಿ ಒಂದು ರಾಜ್ಯವು ತನ್ನ ಮೂಲನಿವಾಸಿಗಳಿಗೆ ಕಾರ್ಡ್‌ ನೀಡುತ್ತಿರುವುದು ದೇಶದಲ್ಲೇ ಮೊದಲು.

ಡಿಸೆಂಬರ್‌ನಲ್ಲಿ ಈ ಕಾರ್ಡ್‌ ಜಾರಿಗೆ ಬರುವ ಬಗ್ಗೆ ಸರ್ಕಾರ ಪ್ರಸ್ತಾಪಿಸಿತ್ತು. ಅದಾಗಿ 2 ತಿಂಗಳ ಬಳಿಕ ಇದೀಗ ಅನುಮೋದನೆ ದೊರೆತಿದೆ. ದೇಶದಲ್ಲಿ ಆಧಾರ್‌ ಹಾಗೂ ಇತರ ಕೆಲವು ಕಾರ್ಡ್‌ಗಳು ಹೇಗೆ ಜನತೆಗೆ ಲಾಭ ನೀಡುತ್ತಿವೆಯೋ, ಈ ಕಾರ್ಡ್‌ನಿಂದ ಮಲಯಾಳಿಗಳಿಗೆ ಕೇರಳ ಸರ್ಕಾರದ ಪ್ರಯೋಜನಗಳು ಲಭಿಸಲಿವೆ.

ಕಾರ್ಡ್‌ ಮಹತ್ವ

ನೇಟಿವಿಟಿ ಕಾರ್ಡ್‌ ಕೇರಳ ಸರ್ಕಾರದಿಂದ ರಾಜ್ಯದ ಮೂಲ ನಿವಾಸಿಗಳಿಗೆ ನೀಡಲಾಗುವ ಅಧಿಕೃತ ಗುರುತಿನ ಚೀಟಿ ಆಗಿರಲಿದೆ. ಇದು ಹೆಸರು, ಜನ್ಮ ದಿನಾಂಕ, ಭಾವಚಿತ್ರ ಸೇರಿದಂತೆ ವಿವಿಧ ವಿವರಗಳನ್ನು ಒಳಗೊಂಡಿರುತ್ತದೆ. ಇದರಡಿ ಸರ್ಕಾರದ ಸೇವೆಗಳನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು.

ಅರ್ಜಿ ಹಾಕೋದು ಹೇಗೆ?:

ತಹಶೀಲ್ದಾರ್‌ ಕಚೇರಿಗೆ ತಾವು ಕೇರಳದವರೇ ಎಂದು ಸಾಬೀತುಪಡಿಸುವ ದಾಖಲೆ ನೀಡಿ ಕಾರ್ಡ್‌ ಪಡೆಯಬಹುದು. ಇದನ್ನು ಪಡೆಯುವವರು ಕೇರಳದಲ್ಲಿ ಜನಿಸಿರಬೇಕು ಅಥವಾ ಅವರ ಪೂರ್ವಜರಿಗೂ ಈ ರಾಜ್ಯಕ್ಕೂ ನಂಟಿರಬೇಕು. ವಿದೇಶಿ ಪೌರತ್ವವನ್ನು ಹೊಂದಿರುವವರು ಇದನ್ನು ಪಡೆಯಲು ಅರ್ಹರಾಗಿರುವುದಿಲ್ಲ.

ಇದನ್ನೂ ಓದಿ: ಕೇರಳ ರಾಜ್ಯದ ಹೆಸರು ಬದಲಾವಣೆ : ಮರುನಾಮಕರಣ

ಒಂದು ವೇಳೆ ಅಕ್ರಮ ದಾಖಲೆ ನೀಡಿ ಕಾರ್ಡ್‌ ಪಡೆಯುವುದು ಗೊತ್ತಾದರೆ 3 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 5,000 ರು. ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ: ವಯಸ್ಸು 90 ಆದ್ರೂ ತರುಣರ ನಾಚಿಸುವಂತೆ ಬಿಂದಾಸ್ ಆಗಿ ಕಾರು ಡ್ರೈವ್ ಮಾಡ್ತಾರೆ ಈ ಅಜ್ಜಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ದೇಶದಲ್ಲೇ ಮೊದಲು, ಕೇರಳ ನಾಗರಿಕರಿಗೆ ನೇಟಿವಿಟಿ ಕಾರ್ಡ್! ವಿವಿಧ ಸೌಲಭ್ಯ ಪಡೆಯಲು ಚಾನ್ಸ್‌
ಗರ್ಭಕಂಠ ಕ್ಯಾನ್ಸರ್‌ ತಡೆಗೆ ಉಚಿತ ಲಸಿಕೆ ಅಭಿಯಾನ - ಹೆಣ್ಣು ಮಕ್ಕಳಿಗೆ ಕೇಂದ್ರದ ಕೊಡುಗೆ