ಒಡಿಶಾ ತ್ರಿವಳಿ ರೈಲು ದುರಂತ: ಕೋರಮಂಡಲ್‌ ರೈಲಿನ ಚಾಲಕರ ಆರೋಗ್ಯ ಸ್ಥಿರ

Published : Jun 06, 2023, 07:54 AM IST
ಒಡಿಶಾ ತ್ರಿವಳಿ ರೈಲು ದುರಂತ: ಕೋರಮಂಡಲ್‌ ರೈಲಿನ ಚಾಲಕರ ಆರೋಗ್ಯ ಸ್ಥಿರ

ಸಾರಾಂಶ

ಒಡಿಶಾದ ತ್ರಿವಳಿ ರೈಲು ದುರಂತದಲ್ಲಿ (Triple Train Tragedy) ತೀವ್ರವಾಗಿ ಗಾಯಗೊಂಡಿದ್ದ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲಿನ ಇಬ್ಬರು ಚಾಲಕರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ

ಭುವನೇಶ್ವರ: ಒಡಿಶಾದ ತ್ರಿವಳಿ ರೈಲು ದುರಂತದಲ್ಲಿ (Triple Train Tragedy) ತೀವ್ರವಾಗಿ ಗಾಯಗೊಂಡಿದ್ದ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲಿನ ಇಬ್ಬರು ಚಾಲಕರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಭುವನೇಶ್ವರದ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುಣನಿಧಿ ಮೊಹಂತಿ ಹಾಗೂ ಅವರ ಸಹಾಯಕ ಹಜಾರಿ ಬೆಹೆರಾ (Hajari behera)ಆರೋಗ್ಯ ಸುಧಾರಿಸುತ್ತಿದ್ದು ಗುಣನಿಧಿ (Gunanidhi) ಅವರನ್ನು ಸೋಮವಾರ ಐಸಿಯುನಿಂದ ಹೊರಗೆ ಶಿಫ್ಟ್ ಮಾಡಲಾಗಿದೆ. ಬೆಹೆರಾಗೆ ತಲೆಯ ಶಸ್ತ್ರಚಿಕಿತ್ಸೆ ಮಾಡಬೇಕಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಚಾಲಕರ ತಪ್ಪಿಲ್ಲ ಎಂದು ಈಗಾಗಲೇ ರೈಲ್ವೆ ಸಚಿವಾಲಯ ಇಬ್ಬರಿಗೂ ಕ್ಲೀನ್‌ಚಿಟ್‌ ನೀಡಿದೆ. ಬಾಲಸೋರ್‌ನಲ್ಲಿ ನಿಂತಿದ್ದ ಗೂಡ್ಸ್‌ ರೈಲಿಗೆ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಬಳಿಕ ನಡೆದ ಅಪಘಾತದಲ್ಲಿ 275 ಜನ ಪ್ರಯಾಣಿಕರು ಮೃತಪಟ್ಟಿದ್ದರು.

ಮೃತರ ಕುಟುಂಬಕ್ಕೆ ಸರ್ಕಾರಿ ನೌಕರಿ: ಮಮತಾ ಬ್ಯಾನರ್ಜಿ ಘೋಷಣೆ

ಕೋಲ್ಕತಾ: 275 ಜನ ಸಾವನ್ನಪ್ಪಿರುವ ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಮೃತಪಟ್ಟ ತಮ್ಮ ರಾಜ್ಯದ ಮೃತರ ಕುಟುಂಬದ ಓರ್ವರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ರೈಲು ದುರಂತದಲ್ಲಿ ಪೋಷಕರ ಕಳೆದುಕೊಂಡ ಮಕ್ಕಳಿಗೆ ಸೆಹ್ವಾಗ್ ನೆರವು, ಉಚಿತ ಶಿಕ್ಷಣ-ವಸತಿ!

ದುರಂತದಲ್ಲಿ ಕೈ ಕಾಲು ಕಳೆದುಕೊಂಡವರ ಕುಟುಂಬಸ್ಥರಿಗೂ ನೌಕರಿ, ಗಾಯಾಳುಗಳಿಗೆ ನಗದು ಪರಿಹಾರ ನೀಡುವುದಾಗಿ ಭರವಸೆ ನೀಡಿರುವ ಮಮತಾ, ಬುಧವಾರವೇ ಸಂತ್ರಸ್ತರಿಗೆ ಪರಿಹಾರದ ಚೆಕ್‌ (cheque) ಹಾಗೂ ಉದ್ಯೋಗದ ನೇಮಕಾತಿ ಪತ್ರ (Job appointment letter) ವಿತರಿಸುವುದಾಗಿ ಘೋಷಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಲು ಇಂದು ಮಮತಾ ಆಸ್ಪತ್ರೆಗಳಿಗೆ ಭೇಟಿ ನೀಡಲಿದ್ದಾರೆ.

ಈ ಬಗ್ಗೆ ಮಾತನಾಡಿದ ಮಮತಾ ಅಪಘಾತವನ್ನು ರಾಜಕೀಯಗೊಳಿಸಲು ನನಗೆ ಇಷ್ಟವಿಲ್ಲ. ಸದ್ಯ ಸಂತ್ರಸ್ತರು ಮತ್ತು ಕುಟುಂಬಸ್ಥರಿಗೆ ಎಲ್ಲ ರೀತಿಯ ಸಹಾಯ ಮಾಡಬೇಕು ಎಂದರು. ಸದ್ಯ ಒಡಿಶಾದ (Odisha) ಆಸ್ಪತ್ರೆಗಳಲ್ಲಿ ಬಂಗಾಳದ 206 ಜನ ಗಾಯಾಳು ಪ್ರಯಾಣಿಕರು ಚಿಕಿತ್ಸೆ ಪಡೆಯುತ್ತಿದ್ದು, 33 ಜನರ ಸ್ಥಿತಿ ಗಂಭೀರವಾಗಿದೆ.

ರೈಲು ದುರಂತದ ಮೃತರ ಮಕ್ಕಳ ಶಿಕ್ಷಣ ವೆಚ್ಚ ಭರಿಸುವೆ ಅದಾನಿ ಘೋಷಣೆ

ಒಡಿಶಾದ ಬಾಲಸೋರ್‌ನಲ್ಲಿ ನಡೆದ ತ್ರಿವಳಿ ರೈಲು ಅಪಘಾತದಲ್ಲಿ ಮೃತಪಟ್ಟವರ ಮಕ್ಕಳ ಸಂಪೂರ್ಣ ಶೈಕ್ಷಣಿಕ ವೆಚ್ಚ ಭರಿಸುವುದಾಗಿ ಅದಾನಿ ಸಮೂಹದ ಮಾಲೀಕ ಖ್ಯಾತ ಉದ್ಯಮಿ ಗೌತಮ್‌ ಅದಾನಿ (Gowtam Adani) ಘೋಷಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅದಾನಿ ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತ ಆತಂಕವನ್ನುಂಟು ಮಾಡಿದೆ. ಅಪಘಾತದಲ್ಲಿ ತಮ್ಮ ಪೋಷಕರನ್ನು ಕಳೆದುಕೊಂಡ ಮಕ್ಕಳ ಶೈಕ್ಷಣಿಕ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ಅದಾನಿ ಗ್ರೂಪ್‌ (Adani group) ನಿರ್ಧರಿಸಿದೆ. ಸಂತ್ರಸ್ತರಿಗೆ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮೃತರ ಕುಟುಂಬ ಮತ್ತು ಮಕ್ಕಳಿಗೆ ಉತ್ತಮ ನಾಳೆಗಳನ್ನು ನೀಡಿ ಎಂದು ಬರೆದುಕೊಂಡಿದ್ದಾರೆ.

ಗೋದ್ರಾ ದುರಂತ ಮಾಡಿಸಿದ್ದು ಯಾರು? ಒಡಿಶಾ ರೈಲು ಅಪಘಾತದಲ್ಲಿ ಸಿಎಂ ಮಮತಾ ರಾಜಕೀಯ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!