ಒಡಿಶಾ ದುರಂತ 100% ಒಳಸಂಚು: ಮಾಜಿ ರೈಲ್ವೆ ಸಚಿವ ತ್ರಿವೇ​ದಿ

Published : Jun 06, 2023, 07:15 AM IST
ಒಡಿಶಾ ದುರಂತ 100% ಒಳಸಂಚು: ಮಾಜಿ ರೈಲ್ವೆ ಸಚಿವ ತ್ರಿವೇ​ದಿ

ಸಾರಾಂಶ

‘ಒಡಿಶಾದ ಬಾಲಸೋರ್‌ನಲ್ಲಿ ನಡೆದ ತ್ರಿವಳಿ ರೈಲು ದುರಂತ 100ಕ್ಕೆ 100ರಷ್ಟುಒಳಸಂಚಿನಿಂದ ಕೂಡಿದೆ. ಇದನ್ನು ವ್ಯಾಪಕವಾದ ಯೋಜನೆ ಮತ್ತು ಲೆಕ್ಕಾಚಾರದೊಂದಿಗೆ ಮಾಡಲಾಗಿದೆ’ ಎಂದು ಮಾಜಿ ರೈಲ್ವೆ ಸಚಿವ ದಿನೇಶ್‌ ತ್ರಿವೇದಿ ಶಂಕಿ​ಸಿದ್ದಾರೆ.

ನವದೆಹಲಿ: ‘ಒಡಿಶಾದ ಬಾಲಸೋರ್‌ನಲ್ಲಿ ನಡೆದ ತ್ರಿವಳಿ ರೈಲು ದುರಂತ 100ಕ್ಕೆ 100ರಷ್ಟುಒಳಸಂಚಿನಿಂದ ಕೂಡಿದೆ. ಇದನ್ನು ವ್ಯಾಪಕವಾದ ಯೋಜನೆ ಮತ್ತು ಲೆಕ್ಕಾಚಾರದೊಂದಿಗೆ ಮಾಡಲಾಗಿದೆ’ ಎಂದು ಮಾಜಿ ರೈಲ್ವೆ ಸಚಿವ ದಿನೇಶ್‌ ತ್ರಿವೇದಿ ಶಂಕಿ​ಸಿದ್ದಾರೆ.

ದುರ್ಘಟನೆಯ ಬಳಿಕ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅವರು, ‘ಮೇಲ್ನೋಟಕ್ಕೆ ಈ ಘಟನೆಯಲ್ಲಿ ಒಳಸಂಚು ನಡೆದಿದೆ ಎಂಬುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇಂಟರ್‌ಲಾಕ್‌ (InterLock) ವ್ಯವಸ್ಥೆಯ ಬಗ್ಗೆ ನನಗಿರುವ ಅರಿವಿನಂತೆ ಹೇಳುವುದಾದರೆ, ಕೋರಮಂಡಲ್‌ ಎಕ್ಸ್‌ಪ್ರೆಸ್‌ (Koramandal express) ಮೇನ್‌ಲೈನ್‌ನಿಂದ ಲೂಪ್‌ಲೈನ್‌ಗೆ ಹೋಗುವಂತೆ ಕುತಂತ್ರ ಮಾಡಿರುವುದು ಕಂಡುಬರುತ್ತದೆ. ತದನಂತರ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಈ ಘಟನೆಯಲ್ಲಿ ಸಂಚು ನಡೆದಿರುವುದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಇದು ಕೇವಲ ಅಪಘಾತ ಮಾತ್ರವಲ್ಲ ಎಂದರು.

ರೈಲು ದುರಂತ ಸ್ಥಳದಲ್ಲಿ 3 ರಾತ್ರಿ, 2 ಹಗ​ಲು ಬಿಡುವಿಲ್ಲದೆ ಕಳೆದ ರೈಲ್ವೆ ಸಚಿವ ವೈಷ್ಣವ್‌

ಸಿಗ್ನಲ್‌ ಗ್ರೀನ್‌ (Green signal) ಇರುವಾಗ ಇಂಟರ್‌ಲಾಕ್‌ ವ್ಯವಸ್ಥೆ ಈ ರೀತಿ ವರ್ತಿಸುವುದಕ್ಕೆ ಸಾಧ್ಯವಿಲ್ಲ. ರೈಲ್ವೆ ವ್ಯವಸ್ಥೆಯಲ್ಲಿ ಬಹಳಷ್ಟು ಕಾಕತಾಳೀಯಗಳು ಒಂದೇ ಸಮಯಕ್ಕೆ ನಡೆಯಲು ಸಾಧ್ಯವಿಲ್ಲ. ಒಂದು ವೇಳೆ ಇಂಟರ್‌ಲಾಕ್‌ ಸಿಸ್ಟಂ ಕೆಲಸ ಮಾಡದಿದ್ದರೆ ‘ಫೇಲ್‌ ಸೇಫ್‌’ ಸಿಸ್ಟಂ ಕೆಲಸ ಮಾಡುತ್ತದೆ. ತಕ್ಷಣವೇ ಸಿಗ್ನಲ್‌ ಲೈಟ್‌ಗಳು ಕೆಂಪು ಬಣ್ಣವನ್ನು ತೋರಿಸುತ್ತವೆ  ಎಂದ​ರು.

ಸ್ಥಿತಿ ಸಹಜ: ಬಾಲಸೋರ್‌ ಮೂಲಕ ಸಂಚರಿಸಿದ ಹೈಸ್ಪೀಡ್‌  ಪುರಿ ವಂದೇ ಭಾರತ್‌ ರೈಲು

ಬಾಲಸೋರ್‌:  ಭೀಕರ ರೈಲ್ವೆ ದುರಂತಕ್ಕೆ ಸಾಕ್ಷಿಯಾದ ಬಾಲಸೋರ್‌ ಮಾರ್ಗದಲ್ಲಿ ಸತತ ಎರಡು ದಿನಗಳ ಅವಿರತ ದುರಸ್ತಿ ಕಾರ್ಯಾಚರಣೆಯ ಬಳಿಕ ಹಳಿಯಲ್ಲಿ ಮತ್ತೆ ಮೊದಲಿನಂತೆ ರೈಲುಗಳ ಸಂಚಾರ ಆರಂಭಗೊಂಡಿದೆ. ಸೋಮವಾರ ಬೆಳಗ್ಗೆ 9.30ಕ್ಕೆ ಮೊದಲ ಹೈಸ್ಪೀಡ್‌ ರೈಲು ಪುರಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ (Puri Vande Bharat Express) ಈ ಸ್ಥಳವನ್ನು ಹಾದುಹೋಯಿತು. ಬಳಿಕ ಹೌರಾ-ಪುರಿ ಎಕ್ಸ್‌ಪ್ರೆಸ್‌ ಹಾಗೂ (Howrah Puri express) ಭುವನೇಶ್ವರ-ನವದೆಹಲಿ (Bhuvaneshwara New delhi samparka Kranti express) ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲುಗಳು ಕೂಡ ಇಲ್ಲೇ ಸಂಚರಿಸಿದವು.

ಒಡಿಶಾ ತ್ರಿವಳಿ ರೈಲು ದುರಂತ: ಆಸ್ಪತ್ರೆಯಲ್ಲಿ ಹೆಣಗಳ ರಾಶಿ: ಮಗನಿಗಾಗಿ ಅಪ್ಪನ ಶೋಧ

ಇದಕ್ಕೂ ಮುನ್ನ, ಭಾನು​ವಾರ ರಾತ್ರಿ​ಯೇ ಹಳಿಗಳ ದುರಸ್ತಿ ಕಾರ್ಯ ಪೂರ್ಣ​ಗೊಂಡ ನಂತ​ರ, ರಾತ್ರಿ 10.40ಕ್ಕೆ ಈ ಮಾರ್ಗದಲ್ಲಿ ಮೊದಲ ಗೂಡ್ಸ್‌ ರೈಲು ಕಲ್ಲಿದ್ದಲು ಹೊತ್ತು ವಿಶಾಖಪಟ್ಟಣಂನಿಂದ ರೂರ್ಕೆಲಾ ಉಕ್ಕು ಘಟಕಕ್ಕೆ ಸಂಚರಿಸಿತ್ತು. ಸ್ಥಳದಲ್ಲೇ ಬೀಡುಬಿಟ್ಟು ದುರಸ್ತಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ (Ashwin Vaishnaw) ಅಪಘಾತದ ಬಳಿಕ ಈ ಮಾರ್ಗದಲ್ಲಿ ಸಂಚರಿಸಿದ ಮೊದಲ ರೈಲಿಗೆ ಕೈಮುಗಿದು ಭಾವನಾತ್ಮಕವಾಗಿ ಬೀಳ್ಕೊಟ್ಟರು.

ಸೋಮ​ವಾರ ಪ್ರಯಾ​ಣಿಕ ರೈಲು​ಗಳ ಸಂಚಾರವೂ ಆರಂಭ​ವಾ​ಗು​ವು​ದ​ರೊಂದಿಗೆ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಸಹಜ ಸ್ಥಿತಿಗೆ ಮರಳಿದೆ.
ಸುರಕ್ಷತೆಗಾಗಿ ಎಲ್ಲಾ ರೈಲುಗಳೂ ಈ ಸ್ಥಳದಲ್ಲಿ ಕಡಿಮೆ ವೇಗದಲ್ಲಿ ಚಲಿಸುತ್ತಿವೆ. ಅಪ್‌ ಮತ್ತು ಡೌನ್‌ ಲೈನ್‌ ಎರಡರಲ್ಲೂ ಸಂಚಾರ ಪುನಾರಂಭಗೊಂಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ