ಅಭಿವೃದ್ಧಿ ಕಾರ್ಯವೇ ಮುಖ್ಯ, ಅಪ್ಪನ ಸ್ಮಾರಕವನ್ನೇ ಒಡೆಯುವಂತೆ ಆದೇಶ ನೀಡಿದ ಒಡಿಶಾ ಸಿಎಂ!

By Santosh NaikFirst Published May 17, 2023, 5:06 PM IST
Highlights

ಬಹುಶಃ ಸಾಮಾನ್ಯವಾಗಿ ಭಾರತದ ರಾಜಕಾರಣದಲ್ಲಿ ಇದು ಬಹಳ ಅಪರೂಪದ ಸಂಗತಿ. ಆಡಳಿತಾರೂಢ ಪಕ್ಷದ ಮುಖ್ಯಮಂತ್ರಿ ತಂದೆಯ ಸ್ಮಾರಕವನ್ನೇ ಅಭಿವೃದ್ಧಿ ಕಾರ್ಯಕ್ಕಾಗಿ ತೆಗೆದು ಹಾಕುವಂತೆ ಆದೇಶ ನೀಡಿದ್ದಾರೆ. ಆ ಮೂಲಕ ಒಡಿಶಾದ ಸಿಎಂ ನವೀನ್‌ ಪಟ್ನಾಯಕ್‌ ಇಂದು ರಾಜಕಾರಣದಲ್ಲಿಯೇ ಅಪರೂಪದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
 

ಭುವನೇಶ್ವರ (ಮೇ.17): ಸಜ್ಜನ ರಾಜಕಾರಣದಿಂದಲೆ ಜನಮಾನಸದಲ್ಲಿ ಜನಪ್ರಿಯರಾದವರು ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌. ತಂದೆ ಬಿಜು ಪಟ್ನಾಯಕ್‌ ನಿಧನದ ಬಳಿಕ ಒಡಿಶಾದಲ್ಲಿ ಬಿಜು ಜನತಾದಳವನ್ನು ಕಟ್ಟಿ ಹಲವು ವರ್ಷಗಳಿಂದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ನವೀನ್‌ ಪಟ್ನಾಯಕ್‌, ತೀರಾ ಅಪರೂಪದ ವಿದ್ಯಮಾನದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ನಡುರಸ್ತೆಯಲ್ಲಿ ತನ್ನ ತಂದೆಯ ಅಥವಾ ಕುಟುಂಬದವರ ಸಮಾಧಿ ಅಥವಾ ಸ್ಮಾರಕವಿದ್ದರೂ, ಜನರಿಗೆ ಅದರಿಂದ ಸಮಸ್ಯೆ ಆಗುತ್ತಿದ್ದರೂ ಅದನ್ನೂ ಲೆಕ್ಕಿಸದೇ ಇರುವ ರಾಜಕಾರಣ ಹಾಗೂ ಸಿನಿಮಾ ನಟರ ನಡುವೆ, ನವೀನ್‌ ಪಟ್ನಾಯಕ್‌, ಅಭಿವೃದ್ಧಿ ಕಾರ್ಯಕ್ಕಾಗಿ ತನ್ನ ತಂದೆ ಬಿಜು ಪಟ್ನಾಯಕ್‌ ಅವರ ಸ್ಮಾರಕವನ್ನುಒಡೆಯುವಂತೆ ಆದೇಶ ನೀಡಿದ್ದಾರೆ. ಒಡಿಶಾದ ಪುರಿ ನಗರದ ಕಡಲತಡಿಯಲ್ಲಿರುವ ಸ್ವರ್ಗದ್ವಾರದಲ್ಲಿ ಬಿಜು ಪಟ್ನಾಯಕ್‌ ಸ್ಮಾರಕ (ಸಮಾಧಿ) ನಿರ್ಮಾಣ ಮಾಡಲಾಗಿದೆ. ಅಭಿವೃದ್ಧಿ ಕಾರ್ಯಕ್ಕಾಗಿ ಇದನ್ನು ತೆಗೆಯುವಂತೆ ಆದೇಶ ನೀಡುವ ಮೂಲಕ ಎರಡು ದಶಕಗಳಿಂದ ಸುದ್ದಿಯಲ್ಲಿದ್ದ ವಿವಾದಕ್ಕೆ ಅಂತ್ಯ ಹಾಡುವುದರೊಂದಿಗೆ ಟೀಕಾಕಾರರ ಬಾಯಿ ಕೂಡ ಮುಚ್ಚಿಸಿದ್ದಾರೆ. ಅದರೊಂದಿಗೆ ಸ್ವರ್ಗದ್ವಾರದ ಪ್ರಮುಖ ಬದಲಾವಣೆಗೆ ಮೊದಲ ಹಂತದಲ್ಲಿ 5 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.

ಏಪ್ರಿಲ್-ಮೇ ಚುನಾವಣೆಗಳಲ್ಲಿ ಒಡಿಶಾದಲ್ಲಿ ದಾಖಲೆಯ ಐದನೇ ಅವಧಿಗೆ ಅಧಿಕಾರಕ್ಕೆ ಮರಳಿದ ನವೀನ್ ಪಟ್ನಾಯಕ್ ಅವರು ಶುಕ್ರವಾರ ಸಂಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಬಿಜು ಪಟ್ನಾಯಕ್ ಸ್ಮಾರಕವನ್ನು ಒಡೆದುಹಾಕುವ  ನಿರ್ಧಾರವನ್ನು ತೆಗೆದುಕೊಂಡರು. ದಿವಂಗತ ತಂದೆಯ ಹೆಸರನ್ನೇ ಹೊಂದಿರುವ ಆಡಳಿತ ಪಕ್ಷ ಬಿಜು ಜನತಾ ದಳ (ಬಿಜೆಡಿ) ಪಕ್ಷದ ಮುಖ್ಯಮಂತ್ರಿ 74 ವರ್ಷದ ನವೀನ್‌ ಪಟ್ನಾಯಕ್‌, ಸ್ವರ್ಗದ್ವಾರದ ಅಭಿವೃದ್ಧಿಗಾಗಿ ಮೊದಲ ಹಂತದಲ್ಲಿ 5 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.

“ಸ್ವರ್ಗದ್ವಾರವು ನಂಬಿಕೆಯ ಪವಿತ್ರ ಭೂಮಿ. ಪುರಿ ಪಟ್ಟಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಅನುಗುಣವಾಗಿ ಇದನ್ನು ಅಭಿವೃದ್ಧಿಪಡಿಸಲಾಗುವುದು. ಬಿಜುಬಾಬು ಕೋಟಿಗಟ್ಟಲೆ ಒಡಿಯಾಗಳ ಹೃದಯದಲ್ಲಿ ನೆಲೆಸಿದ್ದಾರೆ. ಬಿಜುಬಾಬು ಹೆಸರಿನಲ್ಲಿ ಸ್ವರ್ಗದ್ವಾರದಲ್ಲಿ ಏನಿದೆಯೋ ಅದನ್ನು ಈಗ ಒಡಿಶಾದ ಜನರ ಸೇವೆಗೆ ಬಳಸಲಾಗುವುದು ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.

ಸ್ವರ್ಗದ ಬಾಗಿಲು ಎನ್ನುವ ಅರ್ಥವನ್ನೇ ಹೊಂದಿರುವ ಸ್ವರ್ಗದ್ವಾರ ಒಡಿಶಾದ ಅತ್ಯಂತ ಪ್ರಖ್ಯಾತ ಸ್ಮಶಾನ ಭೂಮಿಯಾಗಿದೆ.  ಪುರಿಯಲ್ಲಿ ಬಂಗಾಳ ಕೊಲ್ಲಿಯ ತೀರದಲ್ಲಿ ನೆಲೆಗೊಂಡಿರುವ ಇದು ಜಗನ್ನಾಥನ ಆರಾಧನೆಯೊಂದಿಗೆ ಅವಿಭಾಜ್ಯವಾಗಿ ಸಂಬಂಧ ಹೊಂದಿದೆ, 12 ನೇ ಶತಮಾನದ ದೇವಾಲಯವು ಈ ಸ್ಮಶಾನದ ಹತ್ತಿರದಲ್ಲಿಯೇ ಇದ್ದು ಅದರಿಂದಾಗಿಯೂ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ನಂಬಲಾಗಿದೆ. ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ, ಮರಳಿನ ಕಡಲತೀರಗಳಲ್ಲಿರುವ ಈ ಸ್ಮಶಾನವು ಹಿಂದೂಗಳ ಹೃದಯದಲ್ಲಿ ವಿಶಿಷ್ಟವಾದ ಮತ್ತು ಅತ್ಯಂತ ಗೌರವಾನ್ವಿತ ಸ್ಥಾನವನ್ನು ಪಡೆದುಕೊಂಡಿದೆ.

ಸ್ವರ್ಗದ್ವಾರದಲ್ಲಿ ದೇಹವನ್ನು ಸುಡುವ ಜನರು ನೇರವಾಗಿ ದೈವದೊಂದಿಗೆ ಬೆರೆಯುತ್ತಾರೆ ಎಂಬುದು ಒಡಿಶಾದ ಪುರಾತನ ನಂಬಿಕೆಯಾಗಿದೆ, ಈ ವಿದ್ಯಮಾನವನ್ನು 'ವೈಕುಂಠ ಪ್ರಾಪ್ತಿ" ಎಂದು ವಿವರಿಸಲಾಗಿದೆ. ಸ್ವರ್ಗದ್ವಾರದ ವಿಶಿಷ್ಟ ಭೌಗೋಳಿಕ ಸ್ಥಾನ ಕೂಡ, ಶವ ನೇರವಾಗಿ ಪಂಚಭೂತಗಳಲ್ಲಿ ಲೀನವಾಗಿ ವೈಕುಂಠ ಸೇರುತ್ತದೆ ಎನ್ನಲಾಗಿದೆ. ಅದಲ್ಲದೆ, ಸಮುದ್ರದ ದಿಕ್ಕಿನಿಂದ ಬೀಸುವ ಗಾಳಿ, ಸ್ವರ್ಗದ್ವಾರದ ಮೂಲಕ ಹಾದುಹೋಗಿ ಪುರಿಯ ಜಗನ್ನಾಥದ ಸನ್ನಿಧಿಯ ಕಡೆಗೆ ಮುಟ್ಟುತ್ತದೆ. ಅದಲ್ಲದೆ, ಜಗನ್ನಾಥನ ಸನ್ನಿಧಿಯ ಗರ್ಭಗುಡಿಯ ತುದಿಯಲ್ಲಿರುವ ಧ್ವಜಕ್ಕೆ ಮುಟ್ಟುತ್ತದೆ. ಹಾಗಾಗಿ ಇದು ಮಹತ್ವದ ಸ್ಥಾನ ಪಡೆದ ಸ್ಮಶಾನವಾಗಿದೆ. 

ತೃತೀಯ ರಂಗ ಸೇರಲ್ಲ... ಮೋದಿ ಭೇಟಿ ಬಳಿಕ ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಹೇಳಿಕೆ!

ಎರಡು ಅವಧಿಗೆ ಒಡಿಶಾದ ಮುಖ್ಯಮಂತ್ರಿಯಾಗಿದ್ದ ಬಿಜು ಪಟ್ನಾಯಕ್‌ 1997ರ ಏಪ್ರಿಲ್‌ 17 ರಂದು ನಿಧನರಾಗಿದ್ದರು. ಸ್ವರ್ಗದ್ವಾರದಲ್ಲಿಯೇ ಅವರ ಅಂತಿಮ ಸಂಸ್ಕಾರ ನಡೆಸಲಾಗಿತ್ತು. ಇದೇ ಸ್ಥಳದಲ್ಲಿ ಬಿಜು ಅವರ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಪಕ್ಷ ಕೂಡ ಪ್ರಯತ್ನಿಸಿತ್ತು. ಅದರ ಫಲವಾಗಿ 1999ರಲ್ಲಿ ಪುರಿ ಪುರಸಭೆಯು ಒಂದು ಎಕರೆ ಭೂಮಿಯಲ್ಲಿ 40 ಅಡಿ-40 ಅಡಿ ಕಾಂಕ್ರೀಟ್ ಸಮಾಧಿಯನ್ನು ನಿರ್ಮಾಣ ಮಾಡಿತ್ತು. ಒಂದು ಎಕರೆ ಜಾಗವನ್ನು ಸಮಾಧಿ ಹಾಗೂ ಸ್ಮಾರಕಕ್ಕೆ ಬಳಸಿಕೊಂಡ ಬಳಿಕ ಸ್ವರ್ಗದ್ವಾರದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸ್ಥಳ ಇದ್ದಿರಲಿಲ್ಲ. ಈ ಕುರಿತು ಜನ ಪ್ರತಿಭಟನೆಯನ್ನೂ ನಡೆಸಿದ್ದರು. ಪ್ರತಿ ವರ್ಷ ತಂದೆಯ ಜನ್ಮ ಹಾಗೂ ಪುಣ್ಯ ತಿಥಿಯಂದು ನವೀನ್‌ ಪಟ್ನಾಯಕ್‌ ಇಲ್ಲಿಗೆ ಬಂದಾಗಲೆಲ್ಲಾ, ಪ್ರತಿಭಟನೆಗಳು ನಡೆಯುತ್ತಿದ್ದವು. 1999ರಲ್ಲಿ ಈ ಕುರಿತಾಗಿ ಪಿಐಎಲ್‌ ಸಲ್ಲಿಸಲಾಗಿತ್ತು. ಕೋರ್ಟ್‌ ಕೂಡ ಈ ಸಮಾಧಿಯನ್ನು ತೆಗೆಯುವಂತೆ ಆದೇಶ ನೀಡಿತ್ತು.

Latest Videos

ಕಳಿಂಗ ವಿವಿಯಲ್ಲಿ ಶಾಲಾ ಮಕ್ಕಳಿಗೂ ಫುಟ್ಬಾಲ್‌ ಯೋಜನೆ ಜಾರಿ : ನವೀನ್‌ ಪಟ್ನಾಯಕ್‌ ಚಾಲನೆ!

click me!