ಪುರಿ ಸಮುದ್ರ ತೀರದಲ್ಲಿ ಮೂಡಿಬಂದ ಅಯೋಧ್ಯಾ ರಾಮ

By Anusha KbFirst Published Apr 10, 2022, 9:01 PM IST
Highlights
  • ಖ್ಯಾತ ಮರಳು ಕಲಾವಿದ ಸುದರ್ಶನ ಪಟ್ನಾಯಕ್ ಕೈ ಚಳಕ
  • ಪುರಿ ಸಮುದ್ರ ತೀರದಲ್ಲಿ ಮೂಡಿಬಂದ ಅಯೋಧ್ಯಾ ರಾಮ 
  • ಮರಳಿನಿಂದ ರಚನೆಯಾದ ಅಯೋಧ್ಯೆ ರಾಮ ಮಂದಿರ

ಪುರಿ(ಏ.10): ದೇಶಾದ್ಯಂತ ಜನ ಸಂಭ್ರಮ ಸಡಗರದಿಂದ ಅಯೋಧ್ಯೆ ಅಧಿಪತಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಹಬ್ಬ ರಾಮ ನವಮಿಯನ್ನು (Rama navami) ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ಹಾಗೆಯೇ ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್‌ ಪಟ್ನಾಯಕ್‌ (Sudarshan Pattnaik) ಅವರು ಒಡಿಶಾದ (Odisha) ಪುರಿ ಕಡಲ (Puri Beach) ತೀರದಲ್ಲಿ ಅಯೋಧ್ಯೆಯ ರಾಮ ದೇಗುಲದ (Ayodhya Ram Temple) ಮರಳು ಶಿಲ್ಪವನ್ನು (Sand Art) ಬಿಡಿಸಿದ್ದು ಇದು ರಾಮಪ್ರಿಯರ ಮನವನ್ನು ಸೆಳೆಯುತ್ತಿದೆ.

ಪಟ್ನಾಯಕ್ ಅವರು ರಾಮ ಮಂದಿರದ 6 ಅಡಿ ಎತ್ತರದ ಮರಳು ಶಿಲ್ಪ ಮತ್ತು ಭಗವಾನ್ ರಾಮನ ವಿಗ್ರಹವನ್ನು ಕೆತ್ತಿದ್ದಾರೆ. 'ನಾನು ಅಯೋಧ್ಯೆಯ ರಾಮಮಂದಿರದ ಕಲಾಕೃತಿಯ ಜೊತೆಗೆ ಭಗವಾನ್ ರಾಮನ ವಿಗ್ರಹವನ್ನು ಮಾಡಿದ್ದೇನೆ, ಅದರ ಎತ್ತರ 6 ಅಡಿ. ಅಯೋಧ್ಯೆಯಲ್ಲಿ ರಾಮ ಮಂದಿರವು ಶೀಘ್ರವೇ ನಿರ್ಮಾಣವಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸುದರ್ಶನ್ ಪಟ್ನಾಯಕ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಗರ್ಭಿಣಿ ಆನೆ ಕೊಂದ ಪ್ರಕರಣ; ಮರಳು ಶಿಲ್ಪದ ಮೂಲಕ ಕ್ರೂರತೆ ಖಂಡಿಸಿ ಸುದರ್ಶನ ಪಟ್ನಾಯಕ್!

ರಾಮ ಮಂದಿರ ಅಯೋಧ್ಯೆಯಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆದ ಸಮಯದಲ್ಲಿ ಸುದರ್ಶನ್‌ ಅವರು ರಾಮ ಮಂದಿರದ ಮರಳು ಶಿಲ್ಪವನ್ನು ತಯಾರಿಸಲು ಬಯಸಿದ್ದರು. ಆದರೆ ಕೋವಿಡ್ ಕಾರಣದಿಂದಾಗಿ ಆಗ ಮರಳು ಶಿಲ್ಪವನ್ನು ಬಿಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಈಗ ಒಡಿಶಾದ ಪುರಿ ಕಡಲ ತೀರದಲ್ಲಿ ರಾಮ ಮಂದಿರದ ಮರಳು ಶಿಲ್ಪವನ್ನು ಬಿಡಿಸುವಂತಾಯಿತು ಎಂದು ಹೇಳಿದರು. ವಾಸ್ತವವಾಗಿ, ನಾನು ಕಳೆದ ವರ್ಷ ಅಯೋಧ್ಯೆಗೆ ಭೇಟಿ ನೀಡಿದ್ದೆ ಮತ್ತು ಈ ಉದ್ದೇಶಕ್ಕಾಗಿ ಅಧ್ಯಯನವನ್ನು ನಡೆಸಿದೆ. ಆದರೆ, ಸಾಂಕ್ರಾಮಿಕ ರೋಗದಿಂದಾಗಿ ನಾನು ನನ್ನ ಯೋಜನೆಗಳನ್ನು ಬದಲಾಯಿಸಬೇಕಾಯಿತು ಎಂದು ಅವರು ಹೇಳಿದರು.

23000 ರುದ್ರಾಕ್ಷಿಯನ್ನು ಬಳಸಿ ಶಿವನ ಮರಳು ಶಿಲ್ಪ ರಚಿಸಿದ ಪಟ್ನಾಯಕ್

ಪಟ್ನಾಯಕ್ ತಮ್ಮ ಕಲಾಕೃತಿಯ ಫೋಟೋಗಳನ್ನು ಟ್ವೀಟ್ ಮಾಡಿದ್ದು, '#ರಾಮನವಮಿಯ ಶುಭ ಸಂದರ್ಭದಲ್ಲಿ  ಒಡಿಶಾದ ಪುರಿ ಬೀಚ್‌ನಲ್ಲಿ #ಹ್ಯಾಪಿ ರಾಮನವಮಿ ಸಂದೇಶದೊಂದಿಗೆ ನನ್ನ ಸ್ಯಾಂಡ್‌ಆರ್ಟ್ #ಜೈಶ್ರೀರಾಮ್ ಎಂದು ಅವರು ಬರೆದಿದ್ದಾರೆ. 

On the auspicious occasion of .My SandArt with message at Puri beach in Odisha. 🙏 pic.twitter.com/ZG92Ub7ZNl

— Sudarsan Pattnaik (@sudarsansand)

ಪಟ್ನಾಯಕ್ ಅವರು ಕಳೆದ ವರ್ಷ ಒಡಿಶಾದ ಪುರಿ ಕಡಲತೀರದಲ್ಲಿ ಅಯೋಧ್ಯೆಯಲ್ಲಿ ಶಂಕುಸ್ಥಾಪನೆ ಸಮಾರಂಭದ ಮುನ್ನಾದಿನದಂದು ರಾಮಮಂದಿರದ ಸುಂದರವಾದ ಮರಳು ಶಿಲ್ಪವನ್ನು ರಚಿಸಿದ್ದರು. ಅಯೋಧ್ಯೆಯ ಭೂಮಿ ಪೂಜೆಯ ಸಮಯದಲ್ಲಿ ಅಯೋಧ್ಯೆಯ ದೇವಾಲಯದ ಮರಳು ಶಿಲ್ಪವನ್ನು ರಚಿಸಲು ಅವರು ಉತ್ಸುಕರಾಗಿದ್ದರು, ಆದರೆ ಕೋವಿಡ್ ಕಾರಣದಿಂದ ಏಕಾಏಕಿ ಪುರಿ ಕಡಲತೀರದಲ್ಲಿ ಅದನ್ನು ಮಾಡಬೇಕಾಯಿತು ಎಂದು ಪಟ್ನಾಯಕ್ ಹೇಳಿದರು. 

Odisha | On the eve of Ram Navami, a sand artist created Ayodhya's Ram temple using sand, in Puri

I have made an idol of Lord Ram along with a miniature of Ayodhya's Ram temple, its height is 6 feet. I pray the temple is built soon: Sudarshan Patnaik, sand artist (09.04) pic.twitter.com/BdTJSEygke

— ANI (@ANI)

ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಪಟ್ನಾಯಕ್ ಅವರು ಪ್ರಪಂಚದಾದ್ಯಂತ 60 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮರಳು ಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ ಮತ್ತು ದೇಶಕ್ಕಾಗಿ ಹಲವಾರು ಬಹುಮಾನಗಳನ್ನು ಗೆದ್ದಿದ್ದಾರೆ.

click me!