Modi virtually meet ಅಮೆರಿಕ ಅಧ್ಯಕ್ಷ ಬೈಡೆನ್ ಜೊತೆ ಏ.11ಕ್ಕೆ ಪ್ರಧಾನಿ ಮೋದಿ ವರ್ಚುವಲ್ ಸಭೆ!

By Suvarna News  |  First Published Apr 10, 2022, 8:20 PM IST
  • ಭಾರಿ ಮಹತ್ವ ಪಡೆದುಕೊಂಡ ಮೋದಿ ಬೈಡೆನ್ ವರ್ಚುವಲ್ ಸಭೆ
  • ರಷ್ಯಾ ತೈಲ ಆಮದು ಒಪ್ಪಂದಿಂದ ಅಸಮಾಧಾನಗೊಂಡಿರುವ ಅಮೆರಿಕ
  • ದ್ವಿಪಕ್ಷೀಯ ಸಹಕಾರ, ಏಷ್ಯಾ, ಇಂಡೋ-ಪೆಸಿಫಿಕ್  ಬೆಳವಣಿಗೆ ಕುರಿತು ಚರ್ಚೆ

ನವದೆಹಲಿ(ಏ.10): ರಷ್ಯಾ ಉಕ್ರೇನ್ ಯುದ್ಧ(Russia Ukraine War) ಹಾಗೂ ಭಾರತ ನಿಲುವು, ನಿರ್ಭಂದ ಹೇರಿದ್ದರು ರಷ್ಯಾದಿಂದ ತೈಲ(Crude Oil Import) ಆಮದು ಸೇರಿದಂತೆ ಹಲವು ಕಾರಣಗಳಿಂದ ಭಾರತದ(India) ವಿರುದ್ಧ ಅಮೆರಿಕ(America) ಮುನಿಸಿಕೊಂಡಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ನಾಳೆ(ಏ.11) ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜೊತೆ ಮಹತ್ವದ ವರ್ಚುಲ್ ಸಭೆ ನಡೆಸಲಿದ್ದಾರೆ.

ಉಭಯ ನಾಯಕರು ದ್ವಿಪಕ್ಷೀಯ ಸಹಕಾರ, ದಕ್ಷಿಣ ಏಷ್ಯಾ, ಇಂಡೋ ಪೆಸಿಫಿಕ್ ಬೆಳವಣಿಗೆ ಹಾಗೂ ಜಾಗತಿಕ ಬೆಳವಣಿಗೆಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ. ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಈ ಸಭೆ ಮುಖ್ಯವಾಗಿದೆ.

Tap to resize

Latest Videos

ಆಪರೇಷನ್‌ ಗಂಗಾ ಮೋದಿ ಛಲಕ್ಕೆ ಸಾಕ್ಷಿ: ವಿದೇಶಾಂಗ ಸಚಿವ ಎಸ್‌.ಜೈಶಂಕರ್‌

ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಜೋ ಬೈಡನ್(Joe Biden) ಮಾತುಕತೆ ಬಳಿಕ ಕೇಂದ್ರ ರಕ್ಷಿಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಾಹರಗಳ ಸಚಿವ ಡಾ. ಎಸ್ ಜೈಶಂಕರ್, ಅಮೆರಿಕ ಸಚಿವರ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಸಭೆಗಾಗಿ ಈಗಾಗಲೇ ರಾಜನಾಥ್ ಸಿಂಗ್ ಅಮೆರಿಕದ ವಾಶಿಂಗ್ಟನ್ ಡಿಸಿಗೆ ತಲುಪಿದ್ದಾರೆ. ಈ ಸಭೆಯೂ ಅಮೆರಿಕ  ಕೌಂಟರ್ಪಾರ್ಟ್ಸ್, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಕಾರ್ಯದರ್ಶಿ ನೇತೃತ್ವದಲ್ಲಿ ನಡೆಯಲಿದೆ. ರಾಜನಾಥ್ ಸಿಂಗ್ ಹಾಗೂ ಜೈಶಂಕರ್ ಸಂವಾದದಲ್ಲಿ ಭಾರತ ಹಾಗೂ ಅಮೆರಿಕ ರಕ್ಷಣಾ ಪಾಲುದಾರಿ ಕುರಿತು ಮಹತ್ವದ ಚರ್ಚೆಗಳಾಗುವ ಸಾಧ್ಯತೆಗಳಿವೆ.

ಇತ್ತೀಚೆಗಷ್ಟೇ ಅಮೆರಿಕದ ಸಲಹೆಗಾರ ದಲೀಪ್ ಸಿಂಗ್ ಭಾರತಕ್ಕೆ ಭೇಟಿ ನೀಡಿದ್ದರು. ಮಾರ್ಚ್ 31 ರಂದು ಭಾರತಕ್ಕೆ ಆಗಮಿಸಿದ ದಲೀಪ್ ಸಿಂಗ್, ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಭಾರತದ ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೇ ವೇಳೆ ಉಕ್ರೇನ್‌ ವಿರುದ್ಧ ರಷ್ಯಾ ನಡೆಸಿರುವ ಅನ್ಯಾಯದ ದಾಳಿಯ ಪರಿಣಾಮಗಳ ಕುರಿತು ಚರ್ಚೆ ನಡೆಸಿದ್ದರು. 

370ನೇ ವಿಧಿ ರದ್ದಾದ ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿ ಕಾಶ್ಮೀರ ಭೇಟಿಗೆ ದಿನಾಂಕ ಫಿಕ್ಸ್!

 ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತ ಮೂಲಕ ಅಮೆರಿಕ ಸಲಹೆಗಾರ ದಲೀಪ್‌ ಸಿಂಗ್‌ ಮಾ.31ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಉಕ್ರೇನ್‌ ವಿರುದ್ಧ ರಷ್ಯಾ ನಡೆಸಿರುವ ಅನ್ಯಾಯದ ದಾಳಿಯ ಪರಿಣಾಮಗಳ ಕುರಿತಾಗಿ ಅವರು ಭಾರತದೊಂದಿಗೆ ಚರ್ಚಿಸಲಿದ್ದಾರೆ ಎಂದು ಶ್ವೇತಭವನ ಬುಧವಾರ ಹೇಳಿದೆ.

ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೋವ್‌ ಅವರ ಭೇಟಿಯ ದಿನವೇ ದಲೀಪ್ ಸಿಂಗ್ ಭೇಟಿ ನೀಡಿದ್ದರು.  ಉಕ್ರೇನ್‌ ಮೇಲಿನ ದಾಳಿ ಜಾಗತಿಕ ಆರ್ಥಿಕತೆಯ ಮೇಲೆ ಬೀರಿರುವ ಪರಿಣಾಮ ಮತ್ತು ಅದನ್ನು ತಗ್ಗಿಸುವ ಕುರಿತಾಗಿ ಅವರು ಸಮಾಲೋಚನೆ ನಡೆಸಲಿದ್ದಾರೆ. ಇದರೊಂದಿಗೆ ಇಂಡೋ-ಪೆಸಿಫಿಕ್‌ ವಲಯದಲ್ಲಿ ಉಭಯ ದೇಶಗಳ ನಡುವಿನ ಸಹಕಾರವನ್ನು ಹೆಚ್ಚಿಸುವ ಕುರಿತಾಗಿ ಭಾರತೀಯ ಅಧಿಕಾರಿಗಳೊಂದಿಗೆ ಅವರು ಮಾತುಕತೆ ನಡೆಸಿದ್ದರು.

ರಷ್ಯಾದಿಂದ ತೈಲ ಖರೀದಿಗೆ ಟೀಕೆ: ಭಾರತ ತಿರುಗೇಟು
ಉಕ್ರೇನ್‌ ಮೇಲೆ ಯುದ್ಧ ಸಾರಿದ್ದಕ್ಕಾಗಿ ರಷ್ಯಾ ಮೇಲೆ ಪಾಶ್ಚಾತ್ಯ ರಾಷ್ಟ್ರಗಳು ನಿರ್ಬಂಧ ಹೇರಿರುವುದರ ನಡುವೆ ರಷ್ಯಾದಿಂದ ಭಾರತದ ತೈಲ ಕಂಪನಿಗಳು ಸೋವಿ ಬೆಲೆಗೆ ತೈಲ ಖರೀದಿಸಿರುವುದನ್ನು ಭಾರತ ಸರ್ಕಾರ ಸಮರ್ಥಿಸಿಕೊಂಡಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾದ ಟೀಕೆಗೆ ಸರ್ಕಾರದ ಮೂಲಗಳು ತಿರುಗೇಟು ಕೂಡ ನೀಡಿವೆ.

‘ಭಾರತದ ಕಾನೂನುಬದ್ಧ ಇಂಧನ ವ್ಯವಹಾರವನ್ನು ಯಾರೂ ರಾಜಕೀಕರಣಗೊಳಿಸಬಾರದು. ತಮಗೆ ಬೇಕಾದ ತೈಲವನ್ನು ತಾವೇ ಉತ್ಪಾದಿಸಿಕೊಳ್ಳುವ ತೈಲಸಮೃದ್ಧ ದೇಶಗಳು ಅಥವಾ ಸ್ವತಃ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳು ಈಗ ಏಕಾಏಕಿ ಆಮದು ನಿರ್ಬಂಧದ ಪರ ವಕ್ತಾರರಂತೆ ಮಾತನಾಡುವುದು ಸಲ್ಲದು’ ಎಂದು ಭಾರತ ಸರ್ಕಾರದ ಮೂಲಗಳು ಹೇಳಿವೆ.
 

click me!