ಆಂಧ್ರಪ್ರದೇಶ ಸಚಿವ ಸಂಪುಟ ಪುನಾರಚನೆ: ಜಗನ್ ಸಂಪುಟ ಸೇರಲಿರುವ ಸಂಭಾವ್ಯರ ಪಟ್ಟಿ

By Anusha KbFirst Published Apr 10, 2022, 8:03 PM IST
Highlights
  • ಆಂಧ್ರಪ್ರದೇಶ ಸಚಿವ ಸಂಪುಟ ಪುನಾರಚನೆ
  • ಜಗನ್ ಸಂಪುಟ ಸೇರಲಿರುವ 25 ಸಚಿವರು 
  • ಎಸ್‌ಸಿ, ಎಸ್‌ಟಿ, ಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಆದ್ಯತೆ

ಹೈದರಾಬಾದ್(ಏ.10): ತನ್ನ ಸಚಿವ ಸಂಪುಟವನ್ನು ಮಧ್ಯಾವಧಿಯಲ್ಲಿ ಪುನಾರಚನೆ ಮಾಡುವುದಾಗಿ ಜೂನ್ 2019ರಲ್ಲಿ ನೀಡಿದ ಭರವಸೆಯಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಭಾನುವಾರ  ಸಂಪುಟ ಪುನರಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮುಖ್ಯಮಂತ್ರಿ ಜಗನ್ ಮೋಹನ್‌ ರೆಡ್ಡಿ ಹೊಸ ಸಚಿವ ಸಂಪುಟದಲ್ಲಿ  ಹಿರಿಯ ಮತ್ತು ಅನುಭವಿ ನಾಯಕರ ಜೊತೆಗೆ ಸಮತೋಲಿತ ಆಡಳಿತಕ್ಕಾಗಿ ತಾಜಾ ಮತ್ತು ಯುವ ಮುಖಗಳಿಗೂ ಅವಕಾಶ ನೀಡಲಾಗಿದೆ. ಹಿರಿಯ ಸಚಿವರು ತಮ್ಮ ಪರಿಣತಿ ಮತ್ತು ಅನುಭವವನ್ನು ಮೇಲೆ ತಂದರೆ, ಯುವ ನಾಯಕರು ತಮ್ಮ ನವೀನ ಆಲೋಚನೆಗಳು ಮತ್ತು ಯೋಜನೆಗಳನ್ನು ಕಾರ್ಯರೂಪಕ್ಕೆ ಇಳಿಸಲಿದ್ದಾರೆ. ಈ ಮೂಲಕ ಜನ-ಆಧಾರಿತ ಆಡಳಿತವನ್ನು ಜಗನ್‌ ಸರ್ಕಾರ  ಕೇಂದ್ರೀಕರಿಸುತ್ತಿದೆ.

ಆಂಧ್ರಪ್ರದೇಶ ಸಿಎಂ ಜಗನ್‌ ಮೋಹನ್‌ ರೆಡ್ಡಿ ಅವರ ಹೊಸ ಕ್ಯಾಬಿನೆಟ್‌ನಲ್ಲಿರುವ 25 ಸಚಿವರಲ್ಲಿ ಕನಿಷ್ಠ 17 ಮಂದಿಯನ್ನು 2024ರ ಚುನಾವಣೆಗೆ ಮುಂಚಿತವಾಗಿ ಜಾತಿ ಮತ್ತು ಪ್ರಾದೇಶಿಕ ಸಮತೋಲನವನ್ನು ಖಚಿತಪಡಿಸಿಕೊಳ್ಳಲು  ಸಂಪುಟದಲ್ಲಿ ಸೇರಿಸಲಾಗಿದೆ ಎನ್ನಲಾಗುತ್ತಿದೆ. ಈ 17 ಸಚಿವರನ್ನು  ಎಸ್‌ಸಿ, ಎಸ್‌ಟಿ, ಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯದಿಂದ ಆಯ್ಕೆ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಹಿಂದಿನ ಸಂಪುಟದಲ್ಲಿ ಈ ಸಮುದಾಯಗಳ 14 ನಾಯಕರಿದ್ದರು. ಅಧಿಕೃತ ಘೋಷಣೆಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದ್ದರೂ, ಪ್ರಮಾಣ ವಚನ ಸಮಾರಂಭವು ಏಪ್ರಿಲ್ 11, ಸೋಮವಾರದಂದು ನಡೆಯಲಿದೆ . ಹೊಸ ಅಚಿವರ ಈ ಪಟ್ಟಿಯನ್ನು ಆಂಧ್ರಪ್ರದೇಶ ರಾಜ್ಯಪಾಲ (AP Governor) ಬಿಸ್ವಭೂಷಣ ಹರಿಚಂದನ್ ( Biswa Bhushan Harichandan) ಅವರಿಗೆ ಹಸ್ತಾಂತರಿಸಲಾಗಿದೆ. ಹಿಂದಿನ ಸಂಪುಟದ ಎಲ್ಲಾ 24 ಸಚಿವರ ರಾಜೀನಾಮೆಯನ್ನು ಅವರು ಈಗಾಗಲೇ ಅಂಗೀಕರಿಸಿದ್ದಾರೆ.

Latest Videos

Cabinet Reshuffle ಆಂಧ್ರ ಪ್ರದೇಶದ ಎಲ್ಲಾ ಸಚಿವರು ರಾಜೀನಾಮೆ, ಸಿಎಂಗೆ ಪತ್ರ ರವಾನೆ

2019 ರಲ್ಲಿ, ಜಗನ್‌ ಮೊದಲ ಬಾರಿಗೆ ತಮ್ಮ ಸಂಪುಟವನ್ನು ರಚಿಸಿದಾಗ, ಅವರ 25 ಸಚಿವರಲ್ಲಿ 56 ಪ್ರತಿಶತದಷ್ಟು ಸಚಿವರು ಪರಿಶಿಷ್ಟ ಜಾತಿ ಮತ್ತು ಪಂಗಡಗಳು, ಇತರ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ವಲಯದಿಂದ ಬಂದಿದ್ದರು. ಈ ಬಾರಿ ಅವರ ಪ್ರಾತಿನಿಧ್ಯವನ್ನು ಶೇ.68ಕ್ಕೆ ಹೆಚ್ಚಿಸಲಾಗಿದೆ.

ಆಂಧ್ರಪ್ರದೇಶದ 25 ಸಂಪುಟ ಸಚಿವರ ಸಂಭಾವ್ಯ ಪಟ್ಟಿ ಇಲ್ಲಿದೆ:

ಧರ್ಮಣ ಪ್ರಸಾದ ರಾವ್ (Dharmana Prasada Rao) , ಸಿದಿರಿ ಅಪ್ಪಲರಾಜು (Sidiri Appalaraju), ಬೋತ್ಸಾ ಸತ್ಯನಾರಾಯಣ (Botsa Satyanarayana) , ಪಿ.ರಾಜಣ್ಣ ದೊರ (P. Rajanna Dora), ಗುಡಿವಾಡ ಅಮರನಾಥ್ (Gudivada Amarnath), ಬುಡ್ಡಿ ಮುತ್ಯಾಲ ನಾಯ್ಡು (Buddi Muthyala Naidu), ದಾಡಿಶೆಟ್ಟಿ ರಾಜಾ (Dadishetti Raja), ಪಿನಿಪೆ ವಿಶ್ವರೂಪಂ (Pinipe Vishwaroopam ) ಮತ್ತು ಚೆಲುಬೋಯಿನ ವೇಣುಗೋಪಾಲಕೃಷ್ಣ(Cheluboina Venugopalakrishna).

Bheemala Nayak ನಟ ಪವನ್ ಕಲ್ಯಾಣ್ ಸಿನಿಮಾಗೆ ಆಂಧ್ರ ಸಿಎಂ ತೊಂದರೆ?

ತಾನೇಟಿ ವನಿತಾ (Taneti Vanitha) , ಕರುಮುರಿ ನಾಗೇಶ್ವರರಾವ್ (Karumuri Nageswararao), ಕಿಟ್ಟು ಸತ್ಯನಾರಾಯಣ (Kittu Satyanarayana), ಜೋಗಿ ರಮೇಶ್ (Jogi Ramesh), ಅಂಬಟಿ ರಾಂಬಾಬು (Ambati Rambabu), ಮೆರಗ ನಾಗಾರ್ಜುನ (Meraga Nagarjuna), ವಿಡದಾಳ ರಜಿನಿ (Vidadala Rajini), ಕಾಕಣಿ ಗೋವರ್ಧನರೆಡ್ಡಿ (Kakani Govardhanreddy), ಅಮ್ಜದ್ ಬಾಷಾ (Amjad Basha), ಬುಗ್ಗನ ರಾಜೇಂದ್ರನಾಥ್ (Buggana Rajendranath), ಗುಮ್ಮನೂರು ಜಯರಾಂ, ಪೆದ್ದಿರೆಡ್ಡಿ ರಾಮಚಂದ್ರರೆಡ್ಡಿ, ನಾರಾಯಣಸ್ವಾಮಿ, ರೋಜಾ ಕೆ.ಸೆಲ್ವಮಣಿ (Roja K. Selvamani), ಸುರೇಶ್ ಎ (A Suresh) ಜಗನ್‌ ಸಚಿವ ಸಂಪುಟದ ನೂತನ ಸಚಿವರು ಎಂದು ತಿಳಿದು ಬಂದಿದೆ.
 

click me!