ನೋಟ್‌ ಬ್ಯಾನ್‌ ಉದ್ದೇಶ ಒಳ್ಳೇದು, ಆದ್ರೆ ಕಾನೂನು ಬಾಹಿರ ಎಂದ ಕರ್ನಾಟಕ ಮೂಲದ ಸುಪ್ರೀಂಕೋರ್ಟ್‌ ಜಡ್ಜ್..!

By BK AshwinFirst Published Jan 2, 2023, 5:28 PM IST
Highlights

ಐವರು ನ್ಯಾಯಮೂರ್ತಿಗಳ ಪೈಕಿ ನಾಲ್ವರು ನೋಟ್‌ ಬ್ಯಾನ್‌ ಅನ್ನು ಸ್ವಾಗತಿಸಿದ್ದು, ಆದರೆ, ಒಬ್ಬರು ನ್ಯಾಯಮೂರ್ತಿಗಳು ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪೈಕಿ ವಿರೋಧ ವ್ಯಕ್ತಪಡಿಸಿದವರು ಕರ್ನಾಟಕ ಮೂಲದ ಸುಪ್ರೀಂಕೋರ್ಟ್‌ ಜಡ್ಜ್‌ ಬಿ.ವಿ. ನಾಗರತ್ನ. 

ಸುಪ್ರೀಂಕೋರ್ಟ್‌ (Supreme Court) ಕೇಂದ್ರ ಸರ್ಕಾರದ (Central Government) ನೋಟ್‌ ಬ್ಯಾನ್‌ (Note Ban) ಕ್ರಮವನ್ನು ಎತ್ತಿ ಹಿಡಿದಿದೆ. ಐವರು ನ್ಯಾಯಮೂರ್ತಿಗಳ (Judges) ಪೈಕಿ ನಾಲ್ವರು ನೋಟ್‌ ಬ್ಯಾನ್‌ ಅನ್ನು ಸ್ವಾಗತಿಸಿದ್ದು, ಆದರೆ, ಒಬ್ಬರು ನ್ಯಾಯಮೂರ್ತಿಗಳು ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪೈಕಿ ವಿರೋಧ ವ್ಯಕ್ತಪಡಿಸಿದವರು ಕರ್ನಾಟಕ (Karnataka) ಮೂಲದ ಸುಪ್ರೀಂಕೋರ್ಟ್‌ ಜಡ್ಜ್‌ (Judge) ಬಿ.ವಿ. ನಾಗರತ್ನ (B.V. Nagarathna). ಹೌದು, ನೋಟು ಅಮಾನ್ಯೀಕರಣದ ಕುರಿತು ಸರ್ಕಾರದ ಅಧಿಸೂಚನೆಯು ಕಾನೂನುಬಾಹಿರವಾಗಿದೆ. ಹಾಗೂ, ₹ 1,000 ಮತ್ತು ₹ 500 ರೂ. ಕರೆನ್ಸಿ ನೋಟುಗಳನ್ನು ನಿಷೇಧಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಐವರು ಜಡ್ಜ್‌ಗಳ ಪೈಕಿ ಭಿನ್ನ ತೀರ್ಪು ನೀಡಿದ್ದಾರೆ.

ಸುಪ್ರೀಂಕೋರ್ಟ್ ಸಂವಿಧಾನ ಪೀಠ 4:1 ಬಹುಮತದಂತೆ ಕೇಂದ್ರ ಸರ್ಕಾರದ ನೋಟ್‌ ಬ್ಯಾನ್‌ ಕ್ರಮವನ್ನು ಎತ್ತಿಹಿಡಿದಿದೆ. ಆದರೆ, ಕರ್ನಾಟಕದ ಜಡ್ಜ್‌ ನ್ಯಾಯಮೂರ್ತಿ ಅವರು ಮಾತ್ರ ನವೆಂಬರ್ 8, 2016 ರ ಕೇಂದ್ರದ ಅಧಿಸೂಚನೆಯನ್ನು "ಕಾನೂನುಬಾಹಿರ" ಎಂದು ತಮ್ಮ ತೀರ್ಪಿನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಸೆಕ್ಷನ್ 26 ರ ಪ್ರಕಾರ, ಆರ್‌ಬಿಐನ ಕೇಂದ್ರೀಯ ಮಂಡಳಿಯು ಸ್ವತಂತ್ರವಾಗಿ ನೋಟು ಅಮಾನ್ಯೀಕರಣವನ್ನು ಶಿಫಾರಸು ಮಾಡಿರಬೇಕು ಮತ್ತು ಅದು ಸರ್ಕಾರದ ಸಲಹೆಯ ಮೂಲಕ ಮಾಡಬಾರದಿತ್ತು ಎಂಬ ಅರ್ಜಿದಾರರ ವಾದವನ್ನು ಒಪ್ಪಿಕೊಂಡಿದ್ದಾರೆ. 58 ಜನರು ಕೇಂದ್ರ ಸರ್ಕಾರದ ನೋಟ್‌ ಬ್ಯಾನ್‌ ಕ್ರಮ ವಿರೋಧಿಸಿ ಅರ್ಜಿ ಸಲ್ಲಿಸಿದ್ದರು.

ಇದನ್ನು ಓದಿ: ನೋಟು ಬ್ಯಾನ್‌ ತಪ್ಪಲ್ಲ: ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್

ಅಲ್ಲದೆ, ಆರ್‌ಬಿಐ ಸ್ವತಂತ್ರವಾಗಿ ತಲೆ ಓಡಿಸಿ ಈ ಕ್ರಮ ಕೈಗೊಂಡಿಲ್ಲ ಎಂದೂ ಅವರು ಹೇಳಿದರು. "ನನ್ನ ಅಭಿಪ್ರಾಯದಲ್ಲಿ, ನವೆಂಬರ್ 8 ರ ಅಧಿಸೂಚನೆಯ ಮೂಲಕ ನೋಟು ಅಮಾನ್ಯೀಕರಣದ ಕ್ರಮವು ಕಾನೂನುಬಾಹಿರವಾಗಿದೆ. ಆದರೆ, 2016 ರಲ್ಲಿದ್ದ ಯಥಾಸ್ಥಿತಿಯನ್ನು ಈಗ ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದೂ ಸುಪ್ರೀಂಕೋರ್ಟ್‌ ಜಡ್ಜ್‌ ಬಿ.ವಿ. ನಾಗರತ್ನ ಅವರು ಹೇಳಿದ್ದಾರೆ.

ಅಲ್ಲದೆ, ನೋಟ್‌ ಬ್ಯಾನ್‌ ಅನ್ನು ಕಾರ್ಯಗತಗೊಳಿಸಿದ ವಿಧಾನವು ಕಾನೂನಿಗೆ ಅನುಸಾರವಾಗಿಲ್ಲ. ನಾವು ಈ ಕ್ರಮದ ಒಳ್ಳೆಯ ಉದ್ದೇಶಗಳನ್ನು ಪ್ರಶ್ನಿಸುತ್ತಿಲ್ಲ, ಆದರೆ ಕಾನೂನು ದೃಷ್ಟಿಕೋನವನ್ನು ಮಾತ್ರ ಪ್ರಶ್ನಿಸುತ್ತಿದ್ದೇನೆ ಎಂದೂ ಅವರು ಹೇಳಿದರು. "ನೋಟು ಅಮಾನ್ಯೀಕರಣವು ಯಾವುದೇ ಅನುಮಾನವಿಲ್ಲದೆ ಸದುದ್ದೇಶದಿಂದ ಕೂಡಿತ್ತು. ಉತ್ತಮ ಉದ್ದೇಶವನ್ನು ಪ್ರಶ್ನಿಸಲಾಗುವುದಿಲ್ಲ. ಆದರೆ, ಈ ಕ್ರಮವನ್ನು ಸಂಪೂರ್ಣವಾಗಿ ಕಾನೂನು ವಿಶ್ಲೇಷಣೆಯ ಮೇಲೆ ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ ಮತ್ತು ನೋಟು ಅಮಾನ್ಯೀಕರಣದ ಉದ್ದೇಶದ ಮೇಲೆ ಅಲ್ಲ" ಎಂದೂ ಸುಪ್ರೀಂಕೋರ್ಟ್‌ ಜಡ್ಕ್‌ ಬಿ.ವಿ. ನಾಗರತ್ನ ಹೇಳಿದರು. 

ಇದನ್ನೂ ಓದಿ:  Note Ban: ಕೇಂದ್ರದ ನಿರ್ಧಾರ ಸರಿಯೋ ಇಲ್ವೋ..? ಜನವರಿ 2ರಂದು ಸುಪ್ರೀಂಕೋರ್ಟ್‌ ತೀರ್ಪು

ಇದು ಕಪ್ಪುಹಣ, ಭಯೋತ್ಪಾದಕರಿಗೆ ನಿಧಿ ಸಂಗ್ರಹ ಮತ್ತು ನಕಲಿ ನೋಟುಗಳಂತಹ ದುಷ್ಟಶಕ್ತಿಗಳನ್ನು ಗುರಿಯಾಗಿಸಿಕೊಂಡಿದೆ ಎಂದು ನೋಟ್‌ಬ್ಯಾನ್‌ ಉದ್ದೇಶವನ್ನು ಶ್ಲಾಘಿಸಿದ್ದಾರೆ. ಆದರೆ, ಹಿಂದಿನ ನಿದರ್ಶನಗಳಂತೆ, ನೋಟು ಅಮಾನ್ಯೀಕರಣವನ್ನು ಸಂಸತ್ತಿನ ಕಾಯ್ದೆಯ ಮೂಲಕ ತರಬಹುದಿತ್ತು ಮತ್ತು ಕಾರ್ಯಕಾರಿ ಅಧಿಸೂಚನೆಯ ಮೂಲಕ ಅಲ್ಲ ಎಂದೂ ಜಡ್ಜ್‌ ಬಿ.ವಿ. ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ.

"ಕೇಂದ್ರ ಮತ್ತು ಆರ್‌ಬಿಐ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ನಂತರ, "ಕೇಂದ್ರ ಸರ್ಕಾರವು ಬಯಸಿದಂತೆ" ಎಂದು ಆರ್‌ಬಿಐ ಹೇಳಿದೆ. ಈ ಹಿನ್ನೆಲೆ, ಆರ್‌ಬಿಐ ಸ್ವತಂತ್ರವಾಗಿ ಈ ಕ್ರಮ ತೆಗೆದುಕೊಳ್ಳಲು ಸಲಹೆ ನೀಡಿಲ್ಲ ಎಂದು ತೋರಿಸುತ್ತದೆ" ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.

ಇದನ್ನೂ ಓದಿ: ಸುಮ್ಮನೆ ಕೈ ಕಟ್ಟಿ ಕೂರಕ್ಕಾಗಲ್ಲ..! ನೋಟ್‌ ಬ್ಯಾನ್‌ ವಿಚಾರವಾಗಿ ಕೇಂದ್ರದ ವಿರುದ್ಧ ಸುಪ್ರೀಂ ಕಿಡಿ

ಆದರೆ, ಇತರೆ ನಾಲ್ವರು ಜಡ್ಜ್‌ಗಳು ಮಾತ್ರ ಇಬ್ಬರ ನಡುವೆ 6 ತಿಂಗಳ ಕಾಲ ಸಮಾಲೋಚನೆ ನಡೆದಿದೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ. 

click me!