ದೆಹಲಿಯಲ್ಲಿ ಯುವತಿ ಬಲಿ: ಮಗಳನ್ನು ರೇಪ್‌ ಮಾಡಿ ಕೊಲೆ ಮಾಡಲಾಗಿದೆ ಎಂದು ತಾಯಿ ಆರೋಪ

By BK AshwinFirst Published Jan 2, 2023, 4:20 PM IST
Highlights

ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮೃತ ಯುವತಿ ತಾಯಿ, ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಭಾನುವಾರ ದೆಹಲಿಯಲ್ಲಿ (Delhi) ಕಾರು (Car) ಯುವತಿಯನ್ನು ಎಳೆದೊಯ್ದು, ಆಕೆ ಮೃತಪಟ್ಟ 20 ವರ್ಷದ ಯುವತಿಯ ಮೇಲೆ ಐವರು ಆರೋಪಿಗಳು ಲೈಂಗಿಕ ದೌರ್ಜನ್ಯ (Sexual Harassment) ನಡೆಸಿದ್ದಾರೆ ಎಂಬ ಹೇಳಿಕೆಯನ್ನು ಪೊಲೀಸರು (Police) ನಿರಾಕರಿಸಿದ್ದಾರೆ. ಕಾರೊಂದು ಆಕೆಯ ಸ್ಕೂಟಿಗೆ (Scooty) ಡಿಕ್ಕಿ (Accident) ಹೊಡೆದು ಸುಲ್ತಾನ್‌ಪುರಿಯಿಂದ ಕಾಂಝಾವಾಲಾವರೆಗೆ ಸುಮಾರು 4 ಕಿಲೋಮೀಟರ್‌ವರೆಗೆ ಎಳೆದೊಯ್ದ ನಂತರ ಯುವತಿ ಮೃತಪಟ್ಟಿದ್ದಾಳೆ. ಸುಮಾರು ಒಂದು ಗಂಟೆಯ ನಂತರ, ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸ್‌ ಮಾಹಿತಿ ನೀಡಿದ್ದಾರೆ. ಘಟನೆ ನಡೆದಾಗ ಸಂತ್ರಸ್ಥೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದರು. ಈ ಘಟನೆ ಸಂಬಂಧ ಕಾರಿನೊಳಗಿದ್ದ ಐವರನ್ನು ಬಂಧಿಸಲಾಗಿದೆ ಎಂದೂ ತಿಳಿದುಬಂದಿದೆ. ಸದ್ಯ, ಆರೋಪಿಗಳನ್ನು 3 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

ಇನ್ನು, ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮೃತ ಯುವತಿ ತಾಯಿ, ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ತನ್ನ ಮಗಳು ಕೆಲಸ ಮುಗಿಸಿಕೊಂಡು ಮನೆಗೆ ಬರುವುದಾಗಿ ಹೇಳಿದ್ದಳು. ನಾನು ಅವಳಿಗಾಗಿ ಕಾಯುತ್ತಿದ್ದೆ ಎಂದು ಹೇಳಿದರು. ಅಲ್ಲದೆ, ಆಕೆಯ ಎಲ್ಲ ಬಟ್ಟೆ ಹೇಗೆ ಹೊರಗೆ ಬರುತ್ತದೆ. ಪೊಲೀಸರು ನಮಗೆ ನನ್ನ ಮಗಳ ಮೃತದೇಹವನ್ನು ಸರಿಯಾಗಿ ತೋರಿಸುತ್ತಿಲ್ಲ. ನನ್ನ ಮಗಳಿಗೆ ನ್ಯಾಯ ಬೇಕು ಎಂದೂ ತಾಯಿ ಹೇಳಿದ್ದಾರೆ. 

ಇದನ್ನು ಓದಿ: ದೆಹಲಿಯಲ್ಲಿ ಕಾರು ಎಳೆದೊಯ್ದು ಯುವತಿ ಬಲಿ: ಲೆಫ್ಟಿನೆಂಟ್‌ ಗವರ್ನರ್‌ ರಾಜೀನಾಮೆಗೆ ಆಗ್ರಹಿಸಿ ಆಪ್‌ ಪ್ರೊಟೆಸ್ಟ್‌

"ನನ್ನ ಸಹೋದರ ಪೊಲೀಸ್ ಠಾಣೆಗೆ ಬಂದಾಗ, ನನ್ನ ಮಗಳ ಸಾವಿನ ಬಗ್ಗೆ ತಿಳಿಸಲಾಯಿತು.  ನಮ್ಮ ಕುಟುಂಬದಲ್ಲಿ ನನ್ನ ಮಗಳು ಮಾತ್ರ ಸಂಪಾದಿಸುತ್ತಿದ್ದಳು. ಅವಳು ಸಂಪೂರ್ಣವಾಗಿ ಬಟ್ಟೆ ಧರಿಸಿದ್ದಳು, ಆದರೆ ಅವಳ ದೇಹದ ಮೇಲೆ ಒಂದು ತುಂಡು ಬಟ್ಟೆ ಇರಲಿಲ್ಲ. ಇದು ಯಾವ ರೀತಿಯ ಅಪಘಾತವಾಗಿದೆ’’ ಎಂದೂ ಮೃತ ಯುವತಿಯ ತಾಯಿ ಹೇಳಿದರು.
ಆದರೆ, ಈ ಆರೋಪಗಳನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಸೋಮವಾರ, ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಸಹ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲಾಗಿದೆಯೇ ಅಥವಾ ಅತ್ಯಾಚಾರವೆಸಗಲಾಗಿದೆಯೇ ಎಂದು ನಿರ್ಧರಿಸಲು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ದೆಹಲಿ ಪೊಲೀಸ್ ಕಮಿಷನರ್‌ಗೆ ಮನವಿ ಮಾಡಿದೆ.

ಸಿಸಿಟಿವಿ ದೃಶ್ಯಾವಳಿ ವೈರಲ್
ಈ ಭೀಕರ ಘಟನೆಯ ಅಸ್ಪಷ್ಟ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ. ದೃಶ್ಯಾವಳಿಯಲ್ಲಿ ಮಹಿಳೆಗೆ ಮಾರುತಿ ಸುಜುಕಿ ಬಲೆನೊ ಡಿಕ್ಕಿ ಹೊಡೆದಿದದು, ಆದರೆ ವಿಡಿಯೋ ಹೆಚ್ಚು ಸ್ಪಷ್ಟವಾಗಿಲ್ಲ. ಮಹಿಳೆಯ ಕಾಲು ಕಾರಿನ ಚಕ್ರವೊಂದರಲ್ಲಿ ಸಿಕ್ಕಿಹಾಕಿಕೊಂಡಾಗ ಕೆಲವು ಕಿಲೋಮೀಟರ್‌ವರೆಗೆ ಕಾರು ಎಳೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ, ಐಪಿಸಿ ಸೆಕ್ಷನ್ 304-ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಮತ್ತು 279 (ಅತಿ ವೇಗದ ಚಾಲನೆ) ಅಡಿಯಲ್ಲಿ ಐವರು ಶಂಕಿತರನ್ನು ಬಂಧಿಸಲಾಗಿದೆ. 

ಇದನ್ನೂ ಓದಿ: ಸ್ಕೂಟರ್‌ಗೆ ಡಿಕ್ಕಿ ಹೊಡೆದು, ಯುವತಿಯನ್ನು ಎಳೆದೊಯ್ದ ಕಾರು: ಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆ..!

ರಾಜಕೀಯ ಆರೋಪ - ಪ್ರತ್ಯಾರೋಪಗಳು..!
ದೆಹಲಿ ಘಟನೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ (ಎಎಪಿ) ಬಿಜೆಪಿಯನ್ನು ದೂಷಿಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪಕ್ಷವನ್ನು ದೂಷಿಸಿದೆ. ಇನ್ನು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟ್ವಿಟ್ಟರ್‌ನಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಮತ್ತು ಕಾಂಝಾವಾಲಾದಲ್ಲಿರುವ ನಮ್ಮ ಸಹೋದರಿಗೆ ಏನಾಯಿತು ಎಂಬುದು ಭಯಾನಕವಾಗಿದೆ ಎಂದು ಬರೆದಿದ್ದಾರೆ.

ಇನ್ನು, ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ ಸಕ್ಸೇನಾ ಸಹ ಈ ಘಟನೆ ಬಗ್ಗೆ ಟ್ವೀಟ್‌ ಮಾಡಿದ್ದಾರೆ. "ಇಂದು ಬೆಳಗ್ಗೆ ಕಾಂಝಾವಾಲಾ - ಸುಲ್ತಾನ್‌ಪುರಿಯಲ್ಲಿ ನಡೆದ ಅಮಾನವೀಯ ಅಪರಾಧದ ಬಗ್ಗೆ ನನ್ನ ತಲೆ ನಾಚಿಕೆಯಿಂದ ತೂಗಾಡುತ್ತಿದೆ ಮತ್ತು ದುಷ್ಕರ್ಮಿಗಳ ದೈತ್ಯಾಕಾರದ ಸಂವೇದನಾಶೀಲತೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ" ಎಂದು ಪೋಸ್ಟ್‌ ಮಾಡಿದ್ದಾರೆ. ಹಾಗೂ, ಸಂತ್ರಸ್ಥೆಯ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಬೆಂಬಲದ ಭರವಸೆ ನೀಡಿದರು. ಅಲ್ಲದೆ, ಹೆಚ್ಚು ಜವಾಬ್ದಾರಿಯುತ ಮತ್ತು ಸಂವೇದನಾಶೀಲ ಸಮಾಜಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡೋಣ" ಎಂದೂ ಅವರು ಹೇಳಿದರು.

click me!