ಅದ್ಧೂರಿಯಾಗಿ ಹೊಸ ವರ್ಷ ಆಚರಣೆ, ಬೆಳಗ್ಗೆ ಎದ್ದಾಗ 13 ಲಕ್ಷ ರೂ ಒಡವೆಯೊಂದಿಗೆ ಪತ್ನಿ ಪರಾರಿ!

Published : Jan 02, 2023, 04:52 PM ISTUpdated : Jan 02, 2023, 05:13 PM IST
ಅದ್ಧೂರಿಯಾಗಿ ಹೊಸ ವರ್ಷ ಆಚರಣೆ, ಬೆಳಗ್ಗೆ ಎದ್ದಾಗ 13 ಲಕ್ಷ ರೂ ಒಡವೆಯೊಂದಿಗೆ ಪತ್ನಿ ಪರಾರಿ!

ಸಾರಾಂಶ

ನವ ವಿವಾಹಿತ ಜೋಡಿ ಹೊಸ ವರ್ಷವನ್ನು ಕುಟುಂಬದ ಜೊತೆ ಅದ್ಧೂರಿಯಾಗಿ ಆಚರಿಸಿದೆ. ಸಂಭ್ರಮದಿಂದ ಹೊಸ ವರ್ಷ ಬರಮಾಡಿಕೊಂಡು, ಪಾರ್ಟಿ ಮುಗಿಸಿದ ಕುಟುಂಬಸ್ಥರಿಗೆ ಬೆಳಗ್ಗೆ ಎದ್ದಾಗ ಶಾಕ್ ಆಗಿದೆ. 13 ಲಕ್ಷ ರೂಪಾಯಿ ಚಿನ್ನಾಭರಣದೊಂದಿಗೆ ಪತ್ನಿ ನಾಪತ್ತೆಯಾದ ಘಟನೆ ನಡೆದಿದೆ. 

ಅಂಬಾಲ(ಜ.02): ಹೊಸ ವರ್ಷವನ್ನು ಪಾರ್ಟಿ ಮೂಲಕ ಬರಮಾಡಿಕೊಳ್ಳುವುದು ಸಾಮಾನ್ಯ. ಹೀಗೆ ಇತ್ತೀಚೆಗಷ್ಟೇ ಮದುವೆಯಾದ  ಮಗಳು ಅತ್ತೆ ಮನೆಯಿಂದ ತವರು ಮನೆಗೆ ಬಂದಿದ್ದಳು. ಈಕೆನ್ನು ಕರೆದುಕೊಂಡು ಹೋಗಲು ಡಿಸೆಂಬರ್ 30ಕ್ಕೆ ಅಳಿಯನೂ ಬಂದಿದ್ದ. ಹೀಗಾಗಿ ಕುಟುಂಬದ ಜೊತೆಯಲ್ಲಿ ನವ ವಿವಾಹಿತ ಜೋಡಿ ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಂಡಿದೆ. ಪಾರ್ಟಿ ಮೂಲಕ ಹೊಸ ವರ್ಷವನ್ನು ಆಚರಿಸಲಾಗಿತ್ತು. ರಾತ್ರಿ 2 ಗಂಟೆ ಹೊತ್ತಿಗೆ ಮನೆಗೆ ಮರಳಿದ ಇಡೀ ಕುಟುಂಬ ನಿದ್ದೆಗೆ ಜಾರಿದೆ. ಮರು ದಿನ ಬೆಳಗ್ಗೆ ಕೊಂಚ ಲೇಟಾಗಿ ಎದ್ದ ಕುಟುಂಬಕ್ಕೆ ಶಾಕ್ ಎದುರಾಗಿದೆ.  ಅಳಿಯ ಇನ್ನೂ ಎದ್ದಿಲ್ಲ. ಅಷ್ಟರಲ್ಲೇ ಮಗಳು ಕಾಣುತ್ತಿಲ್ಲ. ಮನೆ ತುಂಬಾ ಹುಡುಕಾಡಿದ್ದಾರೆ. ಎಲ್ಲೂ ಇಲ್ಲ. ಸುತ್ತ ಮುತ್ತ ನೋಡಿದ್ದಾರೆ. ಇಲ್ಲ. ಮನೆಯ ಹುಡುಕಾಟದಲ್ಲಿ ಲಾಕರ್ ಒಪನ್ ಇರುವುದು ಗಮನಕ್ಕೆ ಬಂದಿದೆ. ಸರಿಯಾಗಿ ನೋಡಿದರೆ ಮದುವೆಗೆ ಎರಡೂ ಮನೆಯವರು ನೀಡಿದ ಒಟ್ಟು 13 ಲಕ್ಷ ರೂಪಾಯಿ ಒಡವೆಯೊಂದಿಗೆ ಮಗಳು ನಾಪತ್ತೆಯಾಗಿದ್ದಾಳೆ. ಸುದ್ದಿ ತಿಳಿದ ಎಚ್ಚರಗೊಂಡ ಪತಿಗೆ ನಂಬಲಾಗದ ಸ್ಥಿತಿ ಎದುರಾಗಿದೆ. ಈ ಘಟನೆ ಹರಿಯಾಣದ ಅಂಬಾಲದಲ್ಲಿ ನಡೆದಿದೆ.

ಡಿಸೆಂಬರ್ 14 ರಂದು ಉತ್ತರ ಪ್ರದೇಶದ ನಯಿ ಬಸ್ತಿ ನಿವಾಸಿ ಸಚಿನ್ ಅಂಬಾಲದ ದಿನಾಸ್ ಮಂಡಿಯ ನಿವಾಸಿಯೊಬ್ಬರ ಮಗಳನ್ನು ಮದುವೆಯಾಗಿದ್ದಾರೆ. ಎರಡೂ ಕುಟುಂಬ ಒಪ್ಪಿ ಈ ಮದುವೆ ನಡೆದಿದೆ. ಡಿಸೆಂಬರ್ 14ರಂದು ಮದುವೆಯಾಗಿ ಗಂಡ ಸಚಿನ್ ಮನಗೆ ತೆರಳಿದ ಈಕೆ  ಡಿಸೆಂಬರ್ 22ರ ವರೆಗೆ ಗಂಡನ ಮನೆಯಲ್ಲೇ ಇದ್ದಳು. ನವ ದಂಪತಿಗಳು ಹಲವು ದೇವಸ್ಥಾನ, ಪತಿ ಸಚಿನ್ ಸಂಬಂಧಿಕರ ಮನೆಗೆ ತೆರಳಿ ಔತಣಕೂಟದಲ್ಲೂ ಪಾಲ್ಗೊಂಡಿದ್ದಾರೆ. ಡಿಸೆಂಬರ್ 22ರಂದು ಈಕೆ ತವರು ಮನೆಗೆ ಬಂದಿದ್ದಾಳೆ. ತಾಯಿ ಮನೆಯಲ್ಲಿದ್ದ ಪತ್ನಿಯನ್ನು ಮರಳಿ ಮನೆಗೆ ಕರೆದುಕೊಂಡು ಹೋಗಲು ಪತಿ ಸಚಿನ್ ಡಿಸೆಂಬರ್ 30 ರಂದು ಪತ್ನಿಯ ಮನೆಗೆ ಬಂದ್ದಾನೆ.

New Year Party: ಹೊಸ ವರ್ಷ ಸಂಭ್ರಮಾಚರಣೆ ವೇಳೆ ಗನ್‌ಫೈರ್‌: ಗುಂಡು ಹಾರಿಸಿದ-ತಗುಲಿದ ಇಬ್ಬರೂ ಸಾವು

ಮನೆಯಲ್ಲಿ ಮಗಳು ಹಾಗೂ ಅಳಿಯ ಇರುವುದರಿಂದ ಹೊಸ ವರ್ಷವನ್ನೂ ಅದ್ಧೂರಿಯಾಗಿ ಆಚರಿಸಲು ಪೋಷಕರು ಪ್ಲಾನ್ ಮಾಡಿದ್ದಾರೆ. ಇದಕ್ಕಾಗಿ ರೆಸ್ಟೋರೆಂಟ್ ಬುಕ್ ಮಾಡಿದ್ದಾರೆ. ಪಾರ್ಟಿ ಹಾಲ್ ಟಿಕೆಟ್ ಕಾಯ್ದಿರಿಸಿ ಕುಟುಂಬ ಸಮೇತ ಹೊಸ ವರ್ಷಾಚರಣೆ ಮಾಡಿದ್ದಾರೆ. ರಾತ್ರಿ ಪಾರ್ಟಿ ಹಾಲ್‌ನಲ್ಲಿ ಅದ್ಧೂರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಂಡ ಕುಟುಂಬ ಸಂಭ್ರಮದ ಬಳಿಕ ಸರಿಸುಮಾರು ರಾತ್ರಿ 2 ಗಂಟೆಗೆ ಮನಗೆ ಮರಳಿದ್ದಾರೆ.

ತಡವಾಗಿ ಮನೆಗೆ ಬಂದ ಇಡೀ ಕುಟುಂಬ ನಿದ್ದೆಗೆ ಜಾರಿದ್ದಾರೆ. ತಡವಾಗಿ ಮಲಗಿದ ಕಾರಣ ಎಲ್ಲರೂ ತಡವಾಗಿ ಎದ್ದಿದ್ದಾರೆ. ಪೋಷಕರು ಕೊಂಚ ಬೇಗನೆ ಎದ್ದಿದ್ದರೂ ಬೆಳಗಿನ ಉಪಹಾರದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ಕಿರಿಯ ಮಗ ಅಕ್ಕ ನಾಪತ್ತೆಯಾಗಿರುವುದನ್ನು ಗಮನಿಸಿದ್ದಾನೆ. ಪೋಷಕರಿಗೆ ವಿಷಯ ಮುಟ್ಟಿಸಿದ್ದಾನೆ. ಇಡೀ ಮನೆ, ಸುತ್ತು ಮುತ್ತ ಹಡುಕಲಾಗಿದೆ. ಹತ್ತಿರದ ದೇವಸ್ಥಾನದಲ್ಲೂ ವಿಚಾರಸಿಲಾಗಿದೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಮನೆಯಲ್ಲಿ ಮತ್ತೊಮ್ಮೆ ಹುಡುಕಾಟ ನಡೆಸುವಾಗ ಮದುವೆಗೆ ನೀಡಿದ್ದ ಸರಿಸುಮಾರು 13 ಲಕ್ಷ ರೂಪಾಯಿ ಒಡವೆಯೂ ನಾಪತ್ತೆಯಾಗಿದೆ.  ಇಷ್ಟೊತ್ತಿಗೆ ಗಂಟೆ ಮಧ್ಯಹ್ನಾ 12 ಆಗಿದೆ. ಒಡವೆ ಜೊತೆ ಮಗಳು ನಾಪತ್ತೆಯಾಗಿರುವುದಾಗಿ ಪೋಷಕರು ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಚಿಕ್ಕಬಳ್ಳಾಪುರ: ಹೊಸ ವರ್ಷದ ಪಾರ್ಟಿ, ಕಂಠ ಪೂರ್ತಿ ಮದ್ಯ ಕುಡಿಸಿ ಗೆಳೆಯನನ್ನೇ ಕೊಂದ ಸ್ನೇಹಿತರು..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ