ಸಿಗದ ಆಂಬುಲೆನ್ಸ್: ಅಸ್ವಸ್ಥ ಅಪ್ಪನನ್ನು ತಳ್ಳುಗಾಡಿಯಲ್ಲೇ ಆಸ್ಪತ್ರೆಗೆ ಕರೆದೊಯ್ದ 7 ವರ್ಷದ ಮಗ

By Anusha KbFirst Published Feb 12, 2023, 2:16 PM IST
Highlights

ಆಂಬುಲೆನ್ಸ್ ಸಿಗದ ಕಾರಣಕ್ಕೆ 7 ವರ್ಷದ ಪುಟ್ಟ ಬಾಲಕನೋರ್ವ ಅಸ್ವಸ್ಥಗೊಂಡಿರುವ ಅಪ್ಪನನ್ನು ತಳ್ಳುಗಾಡಿಯಲ್ಲಿ ಮಲಗಿಸಿ ತಳ್ಳಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. 

ಭೋಪಾಲ್‌: ಪ್ರತಿಯೊಬ್ಬ ನಾಗರಿಕರಿಗೂ ವೈದ್ಯಕೀಯ ಸೌಲಭ್ಯ ಸಿಗಬೇಕು ಎಂಬ ಕಾರಣಕ್ಕೆ ಸರ್ಕಾರ 108 ಆಂಬುಲೆನ್ಸ್ ಸೇರಿದಂತೆ ಹಲವು ಆರೋಗ್ಯ ಯೋಜನೆಗಳನ್ನು ಕಾಲ ಕಾಲಕ್ಕೆ ಜಾರಿಗೆ ತರುತ್ತಲೇ ಇದೆ. ಆದರೆ ಅದು ಸಿಗಬೇಕಾದವರಿಗೆ ಮಾತ್ರ ಸಿಗುತ್ತಿಲ್ಲ. ಆಂಬುಲೆನ್ಸ್ ಸಿಗದೇ ಶವವನ್ನು ಮಗುವಿನ ಶವವನ್ನು ಅಪ್ಪ ಹೆಂಡತಿ ಶವವನ್ನುಗಂಡ ಹೊತ್ತುಕೊಂಡೆ ಹೋದಂತಹ ಹಲವು ಘಟನೆಗಳು ನಮ್ಮ ದೇಶದಲ್ಲಿ ನಡೆಯುತ್ತಲೇ ಇವೆ. ಹಾಗೆಯೇ ಇಲ್ಲೊಂದು ಕಡೆ ಆಂಬುಲೆನ್ಸ್ ಸಿಗದ ಕಾರಣಕ್ಕೆ 7 ವರ್ಷದ ಪುಟ್ಟ ಬಾಲಕನೋರ್ವ ಅಸ್ವಸ್ಥಗೊಂಡಿರುವ ಅಪ್ಪನನ್ನು ತಳ್ಳುಗಾಡಿಯಲ್ಲಿ ಮಲಗಿಸಿ ತಳ್ಳಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. 

ಮಧ್ಯಪ್ರದೇಶದ (Madhya Pradesh) ಸಿಂಗ್ರೌಲಿ ಜಿಲ್ಲೆಯ ಬಲಿಯಾರಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಪುಟ್ಟ ಬಾಲಕ ತಳ್ಳುಗಾಡಿಯಲ್ಲಿ ಅಪ್ಪನನ್ನು ಮಲಗಿಸಿಕೊಂಡು ಅಮ್ಮನೊಂದಿಗೆ ಗಾಡಿಯನ್ನು ತಳ್ಳಿಕೊಂಡು ಆಸ್ಪತ್ರೆಗೆ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಗಂಡ ತೀವ್ರ ಅಸ್ವಸ್ಥನಾದ ಹಿನ್ನೆಲೆಯಲ್ಲಿ ಬಾಲಕನ ತಾಯಿ 108 ಆಂಬುಲೆನ್ಸ್‌ಗೆ (Ambulence) ಕರೆ ಮಾಡಿದ್ದಾಳೆ. ಆದರೆ 20 ನಿಮಿಷ ಕಾದರೂ ಆಂಬುಲೆನ್ಸ್ ಬರುವುದು ಕಾಣಿಸಿಲ್ಲ. ಇದರಿಂದ ಇನ್ನು ಕಾದರೆ ಪರಿಸ್ಥಿತಿ ಹದಗೆಟ್ಟಂತೆ ಎಂದು ಯೋಚಿಸಿದ ಪತ್ನಿ ಹಾಗೂ ಮಗ, ವ್ಯಕ್ತಿಯನ್ನು ತಳ್ಳುಗಾಡಿಯಲ್ಲಿ ಕೂರಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. 

Latest Videos

ಡೀಸೆಲ್ ಖಾಲಿಯಾಗಿ ಮಾರ್ಗ ಮಧ್ಯೆ ನಿಂತ ಆಂಬುಲೆನ್ಸ್‌: ರಸ್ತೆ ಬದಿ ಮಗುವಿಗೆ ಜನ್ಮ ನೀಡಿದ ತಾಯಿ

ನೀಲಿ ಟೀ ಶರ್ಟ್ ಧರಿಸಿರುವ ಪುಟ್ಟ ಬಾಲಕ ತಳ್ಳುಗಾಡಿಯನ್ನು ಹಿಂದೆಯಿಂದ ತಳ್ಳಿಕೊಂಡು ಹೋಗುತ್ತಿದ್ದಾರೆ. ಆತನ ತಾಯಿ ಮುಂದಿನಿಂದ ಗಾಡಿಯನ್ನು ಹಿಡಿದುಕೊಂಡು ಹೋಗುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಈ ಕುರಿತು ತನಿಖೆ ನಡೆಸುವಂತೆ ಆದೇಶಿಸಿದೆ.  ಈ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಬರ್ಮನ್,  ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಆಂಬುಲೆನ್ಸ್ ಸಿಗದ ಕಾರಣಕ್ಕೆ ಪುಟ್ಟ ಬಾಲಕ ತಳ್ಳುಗಾಡಿಯಲ್ಲಿ ತನ್ನ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ ಎಂದು ತಿಳಿದು ಬಂದಿದೆ.  ಆಂಬುಲೆನ್ಸ್ ಸಿಗದಿರುವುದಕ್ಕೆ ಏನು ಕಾರಣ ಎಂಬ ಬಗ್ಗೆ ಪತ್ತೆ ಮಾಡಲು ಮುಖ್ಯ ವೈದ್ಯಕೀಯ ಶಸ್ತ್ರ ಚಿಕಿತ್ಸಕರು ಸೂಚಿಸಿದ್ದಾರೆ.  ವರದಿ ಬಂದ ಬಳಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಈ ರೀತಿ ಆಂಬುಲೆನ್ಸ್ ಇಲ್ಲದೇ ಬಡವರು ಸಂಕಷ್ಟಪಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಇಂತಹ ಹಲವು ಘಟನೆಗಳು ನಡೆದಿವೆ. ಕಳೆದ ವರ್ಷ ಉತ್ತರ ಪ್ರದೇಶದ ಬಾಗ್ಪತ್‌ ಜಿಲ್ಲೆಯಲ್ಲಿ  10 ವರ್ಷದ ಬಾಲಕ ತನ್ನ ಆಂಬುಲೆನ್ಸ್ ಸಿಗದೇ ತನ್ನ 2 ವರ್ಷದ ಕಿರಿಯ ಸಹೋದರನ ಶವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗುತ್ತಿರುವ  ವಿಡಿಯೋ ಕ್ಲಿಪ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಬಾಲಕ ಸಾಗರ್ ಕುಮಾರ್ ಮೃತದೇಹದೊಂದಿಗೆ ನಡೆದುಕೊಂಡು ಹೋಗುತ್ತಿದ್ದರೆ,  ಆತನ ತಂದೆ ಹತ್ತಿರದಿಂದ ಆತನನ್ನು ಹಿಂಬಾಲಿಸುತ್ತಿದ್ದರು. ಶವ ಸಾಗಿಸಲು ಆಂಬುಲೆನ್ಸ ಇಲ್ಲದ ಕಾರಣ ಇವರು ಆಸ್ಪತ್ರೆಯ ಶವಾಗಾರದಿಂದ ಮಗುವಿನ ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿತ್ತು.

ಆಂಬುಲೆನ್ಸ್‌ ಇಲ್ಲದೆ 2 ವರ್ಷದ ಮಗುವಿನ ಶವ ಹೊತ್ತೊಯ್ದ 10 ವರ್ಷದ ಸಹೋದರ

click me!