ಇಲ್ಲಿ ಕಿಸ್ ಮಾಡುವಂತಿಲ್ಲ; ಜೋಡಿಗಳ ಚುಂಬನ ನೋಡಲಾರದೆ ಬೋರ್ಡ್ ಹಾಕಿದ ಹೌಸಿಂಗ್ ಸೊಸೈಟಿ!

By Suvarna NewsFirst Published Aug 1, 2021, 8:19 PM IST
Highlights
  • ಕೊರೋನಾ ಕಾರಣ ಸಂಜೆಯಾದರೆ ಕಾಲೋನಿ ಬಳಿ ಜೋಡಿಗಳ ಕಿಸ್ಸಿಂಗ್
  • ಚುಂಬನ ಕಾಟ ನೋಡಲಾರದೆ ಹೌಸಿಂಗ್ ಕಾಲೋನಿಯ ಎಚ್ಚರಿಕೆ
  • ದಾರಿಯಲ್ಲಿ ನೋ ಕ್ಸಿಂಗ್ ಜೋನ್ ಎಂದು ಬರೆದ ನಿವಾಸಿಗಳು

ಮುಂಬೈ(ಆ.01): ಇಲ್ಲಿ ಕಸ ಹಾಕುವಂತಿಲ್ಲ, ಇಲ್ಲಿ ಕಾರು ಪಾರ್ಕ್ ಮಾಡುವಂತಿಲ್ಲ, ನೋ ಸ್ಮೋಕಿಂಗ್ ಝೋನ್ ಅನ್ನೋ ಬೋರ್ಡ್‌‌ಗಳನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಿ. ಆದರೆ ಇದೀಗ ಹೊಸ ಬೋರ್ಡ್ ಬಾರಿ ಸದ್ದು ಮಾಡುತ್ತಿದೆ. ಇದು ನೋ ಕಿಸ್ಸಿಂಗ್ ಝೋನ್ ಬೋರ್ಡ್. ಇಲ್ಲಿ ಯಾರೂ ಚುಂಬಿಸುವಂತಿಲ್ಲ ಎಂದು ನಿವಾಸಿಗಳು ಬರೆದ ಬೋರ್ಡ್ ವರ್ಕೌಟ್ ಆಗಿದೆ ಅನ್ನೋದು ಮತ್ತೊಂದು ವಿಶೇಷ.

ಮುತ್ತೆಂಬ ಕಿಕ್ ಏರಿಸಿಕೊಳ್ಳುವ ಮುನ್ನ ಈ ಟಿಪ್ಸ್ ನೆನಪಿನಲ್ಲಿರಲಿ!

ಮುಂಬೈನ ಬೋರಿವಿಲಿಯಲ್ಲಿನ ಸತ್ಯಂ ಶಿವಂ ಸುಂದರಂ ಹೌಸಿಂಗ್ ಕಾಲೋನಿ ನಿವಾಸಿಗಳು ಈ ರೀತಿ ನೋ ಕಿಸ್ಸಿಂಗ್ ಝೋನ್(ಚುಂಬನ ನಿಷೇಧಿತ ಪ್ರದೇಶ) ಬೋರ್ಡ್ ಹಾಕಿ ಎಲ್ಲರ ಗಮನಸೆಳೆದಿದ್ದಾರೆ. ಜೋಡಿಗಳು ವಿಪರೀತ ಚುಂಬನಕ್ಕೆ ಫುಲ್ ಸ್ಟಾಪ್ ಹಾಕಲು  ಈ ರೀತಿಯ ಐಡಿಯಾ ಮಾಡಿದ್ದಾರೆ.

ಸತ್ಯಂ ಶಿವಂ ಸುಂದರಂ ಹೌಸಿಂಗ್ ಕಾಲೋನಿ ಬೋರಿವಿಲಿಯ ಅತ್ಯಂತ ಶಾಂತ ಹಾಗೂ ಸುಂದರ ಕಾಲೋನಿ. ಮರ ಗಿಡಗಳು ಜೊತೆಗೆ ಟ್ರಾಫಿಕ್ ಹಾಗೂ ಮುಖ್ಯರಸ್ತೆಯಲ್ಲಿ ಸಂಚರಿಸಿದೆ ಈ ಸ್ಥಳ ತಲುಪುವ ಅವಕಾಶವೂ ಇದೆ. ಕೊರೋನಾ ಕಾರಣ ಬೋರಿವಿಲಿ ಸೇರಿದಂತೆ ಸುತ್ತಮುತ್ತಲಿನ ಪಾರ್ಕ್, ವಿಹಾರ ತಾಣಗಳು ಬಂದ್ ಮಾಡಲಾಗಿದೆ. ಹೀಗಾಗಿ ಪ್ರೇಮಿಗಳು, ಜೋಡಿಗಳು ಇದೀಗ ಸತ್ಯಂ ಶಿವಂ ಸುಂದರಂ ಹೌಸಿಂಗ್ ಕಾಲೋನಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಕಿಸ್ ಮಾಡೋದ್ರಲ್ಲಿ ಅಡಗಿದೆ ಸಂಬಂಧದ ರಹಸ್ಯ.. ನೀವೂ ತಿಳಿದುಕೊಳ್ಳಿ

ಸಂಜೆಯಾದರೆ ಸಾಕು, ಜೋಡಿ ಜೋಡಿ ಕಾರು ಬೈಕ್‌ನಲ್ಲಿ ಇಲ್ಲಿಗೆ ಬಂದು ಚುಂಬನದಲ್ಲಿ ನಿರತರಾಗುತ್ತಾರೆ. ಪ್ರತಿ ದಿನ ಜೋಡಿಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ದಾರಿಯಲ್ಲಿ ಕಿಸ್ಸಿಂಗ್, ರೋಮ್ಯಾನ್ಸ್ ಜೋರಾಗತೊಡಗಿತು. ಸಂಜೆಯಾದರೆ ಕಾಲೋನಿ ದಾರಿಯತ್ತ ಕಣ್ಣಾಡಿಸಿದರೆ ಅಡಲ್ಟ್ ಸಿನಿಮಾ ರೀತಿ ಗೊಚರಿಸುತ್ತಿತ್ತು ಅನ್ನೋದು ಕಾಲೋನಿ ನಿವಾಸಿಗಳ ಮಾತು.

ಹೀಗಾಗಿ ಪೊಲೀಸರಿಗೆ ದೂರು ನೀಡಿದ ನಿವಾಸಿಗಳಿಗೆ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ. ಈ ಚುಂಬನಕ್ಕೆ ಕಡಿವಾಣ ಹಾಕಲು ಪೊಲೀಸರು ಆಸಕ್ತಿ ತೋರಲಿಲ್ಲ. ಹೌಸಿಂಗ್ ಕಾಲೋನಿ ನಿವಾಸಿಗಳು ಸಭೆ ಸೇರಿ  ಜೋಡಿಗಳು ಕಿಸ್ಸಿಂಗ್ ಮಾಡುವ ಕಾಲೋನಿ ಮುಂಭಾಗದ ದಾರಿಯಲ್ಲಿ ಪೈಂಟ್ ಮೂಲಕ ನೋ ಕಿಸ್ಸಿಂಗ್ ಝೋನ್ ಎಂದು ಬರೆದಿದ್ದಾರೆ. ಇತ್ತ ಸಣ್ಣ ವಾರ್ನಿಂಗ್ ಸೈನ್ ಬೋರ್ಡ್ ಕೂಡ ಹಾಕಿದ್ದಾರೆ. ಈ ಸೈನ್ ಬೋರ್ಡ್ ಬಳಿಕ ಜೋಡಿಗಳ ಚುಂಬನ ಕಾಟ ಕೊಂಚ ಕಡಿಮೆಯಾಗಿದೆ ಎಂದು ಕಾಲೋನಿ ನಿವಾಸಿ ಕೈಲಾಶ್‌ರಾವ್ ದೇಶ್‌ಮುಖ್ ಹೇಳಿದ್ದಾರೆ.

ಬಿಗ್‌ಬಾಸ್ ವಿನ್ನರ್ ಸಿದ್ಧಾರ್ಥ್ ಹಾಟ್ ಲಿಪ್‌ಲಾಕ್ ವೈರಲ್

ನಾವು ಪ್ರೇಮಿಗಳ ವಿರುದ್ಧ ಅಲ್ಲ, ಜೋಡಿಗಳು ಕಿಸ್ ಮಾಡಲು ನಮ್ಮ ಅಭ್ಯಂತರವಿಲ್ಲ. ಆದರೆ ನಮ್ಮ ಕಾಲೋನಿಯಲ್ಲಿ ಮಕ್ಕಳು, ಯುವತಿಯರು, ಮಹಿಳೆಯರು ಇದ್ದಾರೆ. ಪ್ರತಿ ದಿನ ಈ ರೀತಿ ಚುಂಬನ ದೃಶ್ಯಗಳಿಂದ ಅವರಿಗೂ ಮುಜುಗರ ಸಂದರ್ಭಗಳು ಎದುರಾಗುತ್ತಿದೆ. ಜೊತೆಗೆ ನಮ್ಮ ಮಕ್ಕಳಿಗೆ ಇದು ಪ್ರಚೋದನೆಯಾಗಬಾರದು ಅನ್ನೋ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ದೇಶ್‌ಮುಖ್ ಹೇಳಿದ್ದಾರೆ.
 

click me!