
ಆಂಧ್ರ ಪ್ರದೇಶ(ಆ.01): ಮೂಕ ಪ್ರಾಣಿಗಳ ಮೇಲಿನ ದೌರ್ಜನ್ಯ, ಹಿಂಸೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಒಂದೆಡೆ ಕಾಡು ಪ್ರಾಣಿಗಳು ಹಾಗೂ ಮನುಷ್ಯರ ನಡುವಿನ ಹೋರಾಟವಾದರೆ, ಮತ್ತೊಂದೆಡೆ ಸಾಕು ಪ್ರಾಣಿಗಳ ಮೇಲೆ ನಡೆಯುತ್ತಿರುವ ಹಿಂಸೆಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ಹಾಸನದಲ್ಲಿ 30ಕ್ಕೂ ಹೆಚ್ಚು ಮಂಗಗಳನ್ನು ಕೊಲ್ಲಲಾಗಿದೆ. ಈ ಘಟನೆಗೆ ಹೈಕೋರ್ಟ್ ಚಾಟಿ ಬೀಸಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಆಂಧ್ರ ಪ್ರದೇಶದಲ್ಲಿ ಬರೋಬ್ಬರಿ 300 ಬೀದಿ ನಾಯಿಗಳನ್ನು ಕೊಲ್ಲಲಾಗಿದೆ.
ಹೈಕೋರ್ಟ್ ಚಾಟಿ, ಮಂಗಗಳ ಮಾರಣ ಹೋಮ ಸ್ಥಳಕ್ಕೆ ಅಧಿಕಾರಿಗಳ ಭೇಟಿ
ಪಶ್ಚಿಮ ಗೋದಾವರಿ ಜಿಲ್ಲೆಯ ಲಿಂಗಪಾಲೆಮ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಿಂಗಪಾಲೆಮ್ ಗ್ರಾಮದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿತ್ತು. ಗ್ರಾಮಸ್ಥರು ಹಲವು ಬಾರಿ ಪಂಚಾಯಿತಿಗೆ ದೂರು ನೀಡಿದ್ದಾರೆ. ಗ್ರಾಮಸ್ಥರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಪಂಚಾಯತ್ ಬೀದಿ ನಾಯಿಗೆ ವಿಷವುಣಿಸಿ ಕೊಂದಿದ್ದಾರೆ. ಬಳಿಕ ಹೊಂಡದಲ್ಲಿ ಹೂತು ಹಾಕಿದ್ದಾರೆ ಎಂದು ಪ್ರಾಣಿ ಹೋರಾಟಗಾರ್ತಿ ಲಲಿತಾ ಆರೋಪಿಸಿದ್ದಾರೆ.
ಬೀದಿ ನಾಯಿಗೆ ವಿಷಣವುಣಿಸಿ ಕೊಲ್ಲಲಾಗಿದೆ. ಕೆಲವು ನಾಯಿಗಳನ್ನು ಹೊಂಡದಲ್ಲಿ ಹೂತು ಹಾಕಿದ್ದರೆ, ಕೆಲ ನಾಯಿಗಳ ಕಳೆಬರವನ್ನು ಎಸೆಯಲಾಗಿದೆ. ಲಿಂಗಪಾಲೆಮ್ ಗ್ರಾಮದ ಅಂಚಿನಲ್ಲಿರುವ ಕಾಡಿಗೆ ಎಸೆಯಲಾಗಿದೆ. ಈ ಕುರಿತು ಧರ್ಮಜಿಗುಡೆಮ್ ಪೊಲೀಸ್ ಠಾಣೆಲ್ಲಿ ಲಲಿತಾ ದೂರು ನೀಡಿದ್ದಾರೆ.
ಬೆಕ್ಕಿನ ಮರಿಗಳದ್ದು ಜೀವವೇ ಅಲ್ಲವೆ? ಬೆಳಗಾವಿ ಅಜ್ಜಿಯ ಕಣ್ಣೀರ ಕತೆ
ಗ್ರಾಮ ಪಂಚಾಯತ್ ಕಾರ್ಯದರ್ಶಿ, ಅಧ್ಯಕ್ಷ ಸೇರಿದಂತೆ ಹಲವು ಸಿಬ್ಬಂದಿಗಳ ಮೇಲೆ ದೂರು ದಾಖಲಾಗಿದೆ. ಇತ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ