
ನವದೆಹಲಿ(ಆ.01): ದೇಶದಲ್ಲಿ ಲಸಿಕೆ ಕೊರತೆ ಕಾಡುತ್ತಿದೆ. ಜುಲೈ ಕಳೆದು ಆಗಸ್ಟ್ ಬಂದರೂ ಲಸಿಕೆ ಎಲ್ಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರನ್ನು ಪ್ರಶ್ನಿಸಿದ್ದರು. ಈ ಆರೋಪಕ್ಕೆ ಕೇಂದ್ರ ಆರೋಗ್ಯ ಸಚಿವರು ಖಡಕ್ ತಿರುಗೇಟು ನೀಡಿದ್ದಾರೆ. ಜುಲೈ ತಿಂಗಳಲ್ಲಿ 13 ಕೋಟಿ ಲಸಿಕೆ ವಿತರಣೆ ಮಾಡಲಾಗಿದೆ. ಲಸಿಕೆ ಪಡೆದ 13 ಕೋಟಿಯಲ್ಲಿ ನೀವೂ ಒಬ್ಬರು ಎಂದು ಕೇಂದ್ರ ಆರೋಗ್ಯ ಸಚಿವ ಮಾನ್ಸುಕ್ ಮಾಂಡವಿಯಾ ತಿರುಗೇಟು ನೀಡಿದ್ದಾರೆ.
ರಾಜ್ಯಕ್ಕೆ ಕಡಿಮೆ ಕೋವಿಡ್ ಸಾವು ತೋರಿಸಲು ಕೇಂದ್ರ ಹೇಳಿಲ್ಲ; ಆರೋಪಕ್ಕೆ ಆರೋಗ್ಯ ಸಚಿವರ ತಿರುಗೇಟು!
ಜುಲೈ ತಿಂಗಳಲ್ಲಿ ಲಸಿಕೆ ಪಡೆದವರಲ್ಲಿ ನೀವೂ(ರಾಹುಲ್ ಗಾಂಧಿ) ಒಬ್ಬರಾಗಿದ್ದೀರಿ ಎಂದು ಕೇಳಿದ್ದೇನೆ. ಜುಲೈ ತಿಂಗಳ 13 ಕೋಟಿ ಲಸಿಕೆ ಪಡೆದವರಲ್ಲಿ ನೀವು ಇದ್ದೀರಿ. ಲಸಿಕೆ ಪಡೆದ ನೀವು, ನಮ್ಮ ಸಂಶೋಧಕರನ್ನು , ವಿಜ್ಞಾನಿಗಳನ್ನು ಅಭಿನಂದಿಸಲಿಲ್ಲ. ಕನಿಷ್ಟ ಜನತೆಯಲ್ಲಿ ಲಸಿಕೆ ಹಾಕಿಸಿಕೊಳ್ಳಿ ಎಂದೂ ಮನವಿ ಮಾಡಲಿಲ್ಲ. ನಿಮಗೆ ಲಸಿಕೆಯಲ್ಲಿ ರಾಜಕೀಯ ಮುಖ್ಯವಾಯಿತೆ ಹೊರತು ಇನ್ಯಾವುದಿಲ್ಲ ಎಂದು ಮನ್ಸುಕ್ ಮಾಂಡವಿಯಾ ಹೇಳಿದ್ದಾರೆ.
ಪೋಷಕರ ಆತಂಕ ದೂರ; ಮುಂದಿನ ತಿಂಗಳಿಂದ ಮಕ್ಕಳಿಕೆ ಕೊರೋನಾ ಲಸಿಕೆ ಅಭಿಯಾನ!
ಜುಲೈ ತಿಂಗಳಲ್ಲಿ 13 ಕೋಟಿ ಲಸಿಕೆ ಹಂಚಿಕೆ ಮಾಡಲಾಗಿದೆ. ಈ ತಿಂಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಈ ಸಾಧನೆಗೆ ಕಾರಣರಾದ ನಮ್ಮ ಆರೋಗ್ಯ ಕಾರ್ಯಕರ್ತರ ಮೇಲಿನ ಹೆಮ್ಮೆ ಇಮ್ಮಡಿಯಾಗಿದೆ. ಈಗ ನಿಮಗೂ ಕೂಡ ಆರೋಗ್ಯ ಕಾರ್ಯಕರ್ತರಿಂದ ಹಾಗೂ ದೇಶದಿಂದ ಹೆಮ್ಮೆಯಾಗಿದೆ ಎಂದು ಮನ್ಸುಕ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಜುಲೈ 28 ರಂದು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ವರದಿ ಪ್ರಕಾರ, ದೇಶದಲ್ಲಿ ಇದುವರೆಗೆ 46 ಕೋಟಿ ಡೋಸ್ ನೀಡಲಾಗಿದೆ.
ಕೇಂದ್ರ ಸರ್ಕಾರ ಜೂನ್ ತಿಂಗಳಲ್ಲಿ ಲಸಿಕಾ ನೀತಿಯಲ್ಲಿ ಬದಲಾವಣೆ ತಂದಿತ್ತು. ಬಳಿಕ ಲಸಿಕೆ ನೀಡುವಿಕೆಯ ವೇಗ ಹೆಚ್ಚಿಸಲಾಯಿತು. ಆಗಸ್ಟ್ ತಿಂಗಳಿನಿಂದ ಲಸಿಕಾ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ಕೇಂದ್ರ ಹೇಳಿದೆ. ವರ್ಷದ ಅಂತ್ಯದೊಳಗೆ ದೇಶದ ಎಲ್ಲರಿಗೂ ಲಸಿಕೆ ಸಿಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ