ಮಗು ಹಿಡಿದುಕೊಂಡು ಸಹಾಯಕ್ಕೆ ಅಂಗಲಾಚಿದರೂ ಯಾರೂ ಬರಲೇ ಇಲ್ಲ!

By Suvarna NewsFirst Published May 31, 2021, 11:21 PM IST
Highlights

* ಕೊರೋನಾ ಕಾಲದ ಕಣ್ಣೀರ ಕತೆಗಳು
* ಮೃತ ಮಗುವನ್ನು ಆಸ್ಪತ್ರೆ ಮುಂದೆ ಹಿಡಿದುಕೊಂಡು ತಂದೆಯ ಆಕ್ರಂದನ
* ಎಲ್ಲಿಗೆ ಬಂದಿದೆ ಕೊರೋನಾ ಕಾಲದ ಪರಿಸ್ಥಿತಿ? 

ಲಕ್ನೋ(ಮೇ 31) ಕೊರೋನಾ ಕಾಲದಲ್ಲಿ ಕಣ್ಣೀರಿನ ಕತೆಗಳು ಒಂದೊಂದಾಗ ತೆರೆದುಕೊಳ್ಳುತ್ತವೆ.  ಲಕ್ನೋದಿಂದ  40 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯಿಂದ ಬಂದಿರುವ ದೃಶ್ಯಗಳು  ಕಾಡುತ್ತವೆ.

ಪ್ರಾಣ ಕಳೆದುಕೊಂಡ ಐದು ತಿಂಗಳ ಮಗುವನ್ನುತಂದೆಯೊಬ್ಬರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಹೊರಗೆ  ಹಿಡಿದುಕೊಂಡಿದ್ದಾರೆ.   ಯಾವ ವೈದ್ಯರು ಅವರ ಸಹಾಯಕ್ಕೆ ಬರಲೇ ಇಲ್ಲ.

ತಾನು ಕರೆತರಬೇಕಿದ್ದರೆ ಮಗು ಜೀವಂತವಾಗಿತ್ತು, ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎನ್ನುವುದು ತಂದೆಯ ಆರೋಪ.  ಗಂಟೆಗಟ್ಟಲೆ ಕಾದರೂ ಯಾರು ಬರಲಿಲ್ಲ. ಮಗು ಪ್ರಾಣ ಬಿಟ್ಟಿತು ಎಂದು ತಂದೆ ಕಣ್ಣೀರು ಹಾಕುತ್ತಾರೆ.

ಆಕ್ಸಿಜನ್ ಸಿಗದೇ ಕಣ್ಣೇದುರೆ ಪತ್ನಿ ಸಾವು

ಆದರೆ ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ  ಬರಾಬಂಕಿಯ ಮುಖ್ಯ ವೈದ್ಯಾಧಿಕಾರಿ ಬಿಕೆಎಸ್ ಚೌಹಾಣ್, ಮಗುವನ್ನು ಕರೆದುಕೊಂಡು ಬರಬೇಕಿದ್ದರೆ ಸಾವನ್ನಪ್ಪಿತ್ತು.  ಡ್ಯೂಟಿಯಲ್ಲಿದ್ದ ವೈದ್ಯರು ಮಗುವನ್ನು ತಪಾಸಣೆ ಮಾಡಿ ಸಾವನ್ನಪ್ಪಿದೆ ಎಂದು ತಿಳಿಸಿದ್ದರು ಎಂಬ ಮಾಹಿತಿ ಕೊಟ್ಟಿದ್ದಾರೆ.

ಆಸ್ಪತ್ರೆಯ ಅಧೀಕ್ಷಕರೇ ಈ ವಿಚಾರ ತಿಳಿಸಿದ್ದರು.  ತುರ್ತು ಕರ್ತವ್ಯದಲ್ಲಿದ್ದ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಇಬ್ಬರೂ ಮಗುವನ್ನು ಪರೀಕ್ಷಿಸಿದ್ದಾರೆ.   ಟೆರೇಸ್‌ನಿಂದ ಮಗು ಬಿದ್ದಿದೆ  ಎಂದು ಪೋಷಕರು ಹೇಳಿದ್ದು ಪರೀಕ್ಷೆ ಮಾಡಿದಾಗಲೇ ಸಾವನ್ನಪ್ಪಿತ್ತು ಎಂದಿದ್ದಾರೆ.

ಭಾನುವಾರ ಸಂಜೆ ಬರಾಬಂಕಿಯ ಸಿರಾಲಿ ಗೌಸ್‌ಪುರದ  ಸಮುದಾಯ ಆರೋಗ್ಯ ಕೇಂದ್ರದ ಮುಂದೆ ಈ ಘಟನೆ ನಡೆದಿದೆ.   ಇದೇ ಆಸ್ಪತ್ರೆ ಸಂರ್ಕೀರ್ಣದಲ್ಲಿ  100  ಬೆಡ್ ಗಳ ಕೊರೋನಾ ಕೇಂದ್ರವೂ ಇದೆ.

ತಂದೆ ಮಗುವಿನ ಶವ ಹಿಡಿದುಕೊಂಡ ಪೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ವಿಡಿಯೋದಲ್ಲಿ ಮಗುವಿನ  ತಾಯಿಯೂ ಇದ್ದಾರೆ.

ಕೊರೋನಾ ಭಯದ ಕಾರಣ ಯಾರೂ ಮಗುವನ್ನು ಮುಟ್ಟಲು ಮುಂದಾಗಿಲ್ಲ. ಈ ರೀತಿಯ ವ್ಯವಸ್ಥೆ  ನಿರ್ಮಾಣವಾದರೆ ಸಾಮಾನ್ಯರು ಏನು ಮಾಡಬೇಕು ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಮೂರು ವಿಡಿಯೋಗಳೂ ವೈರಲ್ ಆಗಿವೆ, ಒಂದರಲ್ಲಿ ತಂದೆ ಮಗುವನ್ನು ಹಿಡಿದುಕೊಂಡು ಅಳುತ್ತಿದ್ದಾರೆ. ಇನ್ನೊಂದರಲ್ಲಿ   ತಾಯಿ ಹಿಂದೆ ನಿಂತಿರುವ ದೃರ್ಶಯ ಕೊನೆಯದಲ್ಲಿ  ತಂದೆ ಜತೆ ಪೊಲೀಸರು ಮಾತನಾಡುತ್ತಿರುವುದು ಇದೆ. ಒಟ್ಟಿನಲ್ಲಿ ಈ ಪ್ರಕರಣದ ಬಗ್ಗೆ ತನಿಖೆಯಾಗಬೇಕು ಎಂಬ ಒತ್ತಾಯ  ಕೇಳಿಬಂದಿದೆ. 

 

click me!