ಕೊರೋನಾ ವಿರುದ್ಧ ಭಾರತದ ಹೋರಾಟಕ್ಕೆ ಮತ್ತಷ್ಟು ಬಲ: 21.31 ಕೋಟಿ ಮಂದಿಗೆ ಲಸಿಕೆ!

By Suvarna NewsFirst Published May 31, 2021, 9:51 PM IST
Highlights
  • ಲಸಿಕಾ ಅಭಿಯಾನ ಚುರುಕುಗೊಳಿಸಿದ ಕೇಂದ್ರ ಸರ್ಕಾರ
  • 21.31 ಕೋಟಿಗೂ ಅಧಿಕ ಮಂದಿಗೆ ಲಸಿಕೆ
  • ಕೋರನಾ ಮುಕ್ತ ಭಾರತದ ಹೋರಾಟಕ್ಕೆ ಮತ್ತಷ್ಟು ವೇಗ
     

ಬೆಂಗೂಳೂರು(ಮೇ.31): ಕೊರೋನಾ 2ನೇ ಅಲೆಗೆ ತತ್ತರಿಸಿರುವ ಭಾರತ ತನ್ನ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಿದೆ. ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲಾಗಿದ್ದು ಜೂನ್ ತಿಂಗಳಿನಿಂದ ಲಸಿಕೆ ಅಭಾವ ಸೃಷ್ಟಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಇದೀಗ ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನದಡಿ ಕೇಂದ್ರ ಸರ್ಕಾರ 21.31 ಕೋಟಿಗೂ ಅಧಿಕ ಮಂದಿಗೆ ಲಸಿಕೆ ನೀಡಿದೆ.

ಲಸಿಕೆ ವಿತರಣೆ: ದ. ಭಾರತಕ್ಕೇ ಕರ್ನಾಟಕ ನಂ.1!

ಭಾರತದ ಲಸಿಕಾ ಅಭಿಯಾನದಲ್ಲಿ ಮೊದಲ ಡೋಸ್ ಪಡೆದವರ ಸಂಖ್ಯೆ 16.86 ಕೋಟಿ. ದಿಢೀರ್ 2ನೇ ಅಲೆ ಭಾರತದಲ್ಲಿ ಅವಾಂತರ ಸೃಷ್ಟಿಸಿದ ಕಾರಣ ಲಸಿಕೆ ಕೊರತೆ ಕಾಡಿದೆ. ಜೊತೆಗೆ ಕೇಂದ್ರ ಸರ್ಕಾರ ಡೋಸ್ ಅಂತರವನ್ನೂ ಹೆಚ್ಚಿಸಿದೆ. ಹೀಗಾಗಿ 2ನೇ ಡೆೋಸ್ ಪಡೆದವರ ಸಂಖ್ಯೆ 4.45 ಕೋಟಿ.

1.89 ಕೋಟಿ ಮಂದಿ 18ರಿಂದ 44 ವರ್ಷದೊಳಗಿನವರು ಲಸಿಕೆ ಪಡೆದಿದ್ದಾರೆ.  ಭಾರತದ ಅತೀ ದೊಡ್ಡ ಲಸಿಕಾ ಅಭಿಯಾನದ ಕುರಿತು ಸಂಪೂರ್ಣ ಮಾಹಿತಿಯನ್ನು ಬಿಜೆಪಿ ಕರ್ನಾಟಕ  ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

 ತೀವ್ರ ಸಂಕಷ್ಟದಲ್ಲಿ ಭಾರತದ ಲಸಿಕೆ ಅವಲಂಬಿಸಿದ 91 ರಾಷ್ಟ್ರ; ವಿಶ್ವ ಆರೋಗ್ಯ ಸಂಸ್ಥೆ!.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 10,18,075 ಲಸಿಕಾ ಡೋಸ್ ನೀಡಲಾಗಿದೆ. 16,83,135 ಕೋವಿಡ್ ಟೆಸ್ಟ್ ನಡೆಸಲಾಗಿದೆ. ಮತ್ತೊಂದು ಪ್ರಮುಖ ಅಂಶವೆಂದರೆ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2,38,022 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಕೊರೋನಾದಿಂದ ಗುಣುಖರಾದವರ ಒಟ್ಟು ಸಂಖ್ಯೆ 2.56 ಕೋಟಿ.

ಸೋಮವಾರ ಭಾರತದಲ್ಲಿ 1,52,734 ಹೊಸ ಕೊರೋನ ಪ್ರಕರಣ ದಾಖಲಾಗಿದೆ.  ಈ ಮೂಲಕ ಒಟ್ಟು ಕೊರೋನಾ ಸಂಖ್ಯೆ 2.80 ಕೋಟಿಗೆ ಏರಿಕೆಯಾಗಿದೆ.  ಸಾವಿನ ಸಂಖ್ಯೆ 3,128 ಸಂಭವಿಸಿದೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 3.29 ಲಕ್ಷಕ್ಕೆ ಏರಿಕೆಯಾಗಿದೆ.

click me!