ಜಿನೆವಾ(ಮೇ.31): ಕೊರೋನಾ ವೈರಸ್ ಇಡೀ ವಿಶ್ವವನ್ನೇ ಭಾದಿಸುತ್ತಿದೆ. ಭಾರತ 2ನೇ ಅಲೆ ನಿಭಾಯಿಸಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಲಸಿಕೆ ಕೊರತೆ ನೀಗಿಸಲು ಇನ್ನೂ ಸಾಧ್ಯವಾಗಿಲ್ಲ. ಕೊರೋನಾ ಔಷಧ ಕೊರತೆ, ಆಕ್ಸಿಜನ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಇನ್ನೂ ಮುಗಿದಿಲ್ಲ. ಲಸಿಕೆ ಅಭಾವ ಸೃಷ್ಟಿಯಾದ ಕಾರಣ ಕೇಂದ್ರ ಸರ್ಕಾರ ವಿದೇಶಗಳಿಗೆ ಲಸಿಕೆ ರಫ್ತು ಮಾಡುವುದನ್ನು ನಿಷೇಧಿಸಿದೆ. ಪರಿಣಾಮ ಭಾರತದ ಲಸಿಕೆಯನ್ನೇ ಅವಲಂಬಿಸಿದ 91 ರಾಷ್ಟ್ರಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಸಂಸ್ಥೆ ಹೇಳಿದೆ.
ಹೊಸ ರೂಪಾಂತರಿ ಪತ್ತೆಯಾದ ದೇಶದ ಜೊತೆ ವೈರಸ್ ಹೆಸರು ಜೋಡಿಸುವುದಿಲ್ಲ; WHO ಸ್ಪಷ್ಟನೆ!
91 ರಾಷ್ಟ್ರಗಳು ಆಸ್ಟ್ರಾಜೆನಿಕಾ(ಕೋವಿಶೀಲ್ಡ್) ಲಸಿಕೆಯನ್ನು ಅವಲಂಬಿಸಿತ್ತು. ಆದರೆ ಭಾರತದಲ್ಲಿ ದಿಢೀರ್ ಕೊರೋನಾ ಹೆಚ್ಚಳದ ಕಾರಣ ವಿದೇಶಕ್ಕೆ ಲಸಿಕೆ ರಫ್ತು ಮಾಡುವುದನ್ನು ಭಾರತ ನಿಷೇಧಿಸಿದೆ. 91 ರಾಷ್ಟ್ರಗಳು ಸೀರಂ ಸಂಸ್ಥೆಯ ಕೋವಿಶೀಲ್ಡ್ ಲಸಿಕೆಯನ್ನೇ ಅವಲಂಬಿಸಿತ್ತು. ಇದೀಗ ಭಾರತದಿಂದ ಲಸಿಕೆ ಪೂರೈಕೆಯಾಗುತ್ತಿಲ್ಲ. ಪರಿಣಾಮ 91 ರಾಷ್ಟ್ರಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಮುಖ ವಿಜ್ಞಾನಿ ಡಾ.ಸೌಮ್ಯ ಸಾಮಿನಾಥನ್ ಹೇಳಿದ್ದಾರೆ.
ಲಸಿಕೆ ಅಭಾವ ಎದುರಿಸುತ್ತಿರುವ 91 ರಾಷ್ಟ್ರಗಳಲ್ಲಿ ಬಿ .1.617.2 ರೂಪಾಂತರಿ ವೈರಸ್‌ಗೆ ಗುರಿಯಾಗುತ್ತಿದೆ. ಈ ರಾಷ್ಟ್ರಗಳಿಗೆ ಲಾಕ್‌ಡೌನ್, ಮಾಸ್ಕ್, ಸಾಮಾಜಿಕ ಅಂತರದಿಂದ ಮಾತ್ರ ಕೊರೋನಾ ಗೆಲ್ಲಲು ಸಾಧ್ಯವಿಲ್ಲ. ಈ ರೂಪಾಂತರಿ ವೈರಸ್‌ಗಳು ಅತೀ ವೇಗದಲ್ಲಿ ಹರಡುತ್ತಿದೆ ಎಂದು ಸೌಮ್ಯ ಸಾಮಿನಾಥನ್ ಹೇಳಿದ್ದಾರೆ.
ಧೂಮಪಾನಿಗಳಲ್ಲಿ ಕೋವಿಡ್ ಸಾವಿನ ಪ್ರಮಾಣ ಶೇ.50 ಹೆಚ್ಚು!.
ಕಳೆದ ವರ್ಷ ಅಸ್ಟ್ರಾಜೆನೆಕಾ ಜೊತೆ ವಿಶ್ವ ಆರೋಗ್ಯ ಸಂಸ್ಥೆ ಮಾಡಿಕೊಂಡ ಒಪ್ಪಂದದ ಪ್ರಕಾರ, ಸೀರಂ ಸಂಸ್ಥೆ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ 400 ಮಿಲಿಯನ್ ಡೋಸ್ ಪೂರೈಸಲು ಒಪ್ಪಿಕೊಂಡಿತ್ತು. ಆದರೆ ಕೇಂದ್ರ ಸರ್ಕಾರ ಲಸಿಕೆ ರಫ್ತು ನಿಷೇಧಿಸಿದ ಕಾರಣ ಇದು ಸಾಧ್ಯವಾಗಿಲ್ಲ.
ಆಫ್ರಿಕನ್ ರಾಷ್ಟ್ರಗಳು ತಮ್ಮ ಜನಸಂಖ್ಯೆ ಶೇಕಡಾ 0.5ಕ್ಕಿಂತ ಕಡಿಮೆ ಲಸಿಕೆ ನೀಡಿವೆ. ಈ ದೇಶಗಳು ತಮ್ಮ ಆರೋಗ್ಯ ಕಾರ್ಯಕರ್ತರಿಗೆ ಕೊರೋನಾ ಲಸಿಕೆ ನೀಡಲು ಸಾಧ್ಯವಾಗಿಲ್ಲ ಎಂದು ಸೌಮ್ಯ ಸಾಮಿನಾಥನ್ ಹೇಳಿದ್ದಾರೆ