
ನವದೆಹಲಿ(ಮೇ 17) ವಲಸೆ ಕಾರ್ಮಿಕರಿಗೆ ವ್ಯವಸ್ಥೆ ಕಲ್ಪಿಸುವ ವಿಚಾರ ಕಾಂಗ್ರೆಸ್ ವರ್ಸ್ಸ್ ಬಿಜೆಪಿಯಾಗಿ ಬದಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸರಿಯಾದ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಮೊದಲು ಸರಿಯಾಗಿ ವಲಸೆ ಕಾರ್ಮಿಕರನ್ನು ಕರೆದುಕೊಂಡು ಹೋಗಲಿ. ಮೊದಲು ನಿಮ್ಮ ಸಿಎಂಗಳಿಗೆ ಹೇಳಿ ಅಂಥ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರಿಗೆ ವ್ಯಂಗ್ಯಭರಿತ ವಿನಂತಿ ಮಾಡಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಕೊರೋಣಾ ಆರ್ಭಟ; ಬೆಳಗ್ಗೆಯೇ ಅರ್ಧಶತಕ
ರಾಜ್ಯಗಳಿಂದ ಮನವಿ ಬಂದ ಮೂರು ಗಂಟೆಗಳಲ್ಲಿ ರೈಲು ಸಿದ್ದವಿರುತ್ತದೆ. ಸಾವಿರಕ್ಕೂ ಹೆಚ್ಚು ರೈಲು ಗಳು ಸಿದ್ಧವಾಗಿವೆ. ರಸ್ತೆ ಬದಿ ಕೂತು ನಾಟಕ ಮಾಡೋದು ಅಲ್ಲ. ಇಂಥ ವೇಳೆ ಎಲ್ಲರೂ ಒಟ್ಟಿಗೆ ಹೋಗಬೇಕಿದೆ ಎಂದು ರಾಹುಲ್ ಗಾಂಧಿ ಅವರಿಗೂ ಟಾಂಗ್ ನೀಡಿದ್ದಾರೆ.
ರಾಹುಲ್ ಗಾಂಧಿ ಅತಿದೊಡ್ಡ ನಾಟಕ ಆಡುತ್ತಿದ್ದಾರೆ. ದೇಶಕ್ಕೆ ಇವರ ಅಸಲಿತನ ಗೊತ್ತು. ವಲಸೆ ಕಾರ್ಮಿಕರ ಸಮಯವನ್ನು ರಾಹುಲ್ ವ್ಯರ್ಥ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಗಳ ವಿಶೇಷ ಆರ್ಥಿಕ ಪ್ಯಾಕೇಜ್ ನ್ನು ರಾಹುಲ್ ಗಾಂಧೀ ಟೀಕೆ ಮಾಡಿದ್ದರು. ಹಸಿದ ಮಕ್ಕಳಿಗೆ ಆಹಾರ ನೀಡಬೇಕು, ಬದಲಾಗಿ ಸಾಲ ನೀಡುವುದಲ್ಲ ಎಂದು ಹೇಳಿದ್ದರು.
ಮನೆಗೆ ತೆರಳುತ್ತಿರುವ ವಲಸೆ ಕಾರ್ಮಿಕರನ್ನು ಪಾದಚಾರಿ ಮಾರ್ಗದಲ್ಲಿ ಭೇಟಿ ಮಾಡಿದ್ದ ಪೋಟೋ ಸಹ ವೈರಲ್ ಆಗಿತ್ತು. ರಾಹುಲ್ ಗಾಂಧಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದ್ದವು. ಇದಕ್ಕೆಲ್ಲ ಠಕ್ಕರ್ ಎನ್ನುವಂತೆ ನಿರ್ಮಲಾ ಮಾತನಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ