ಬಾಡಿಗೆ ಮನೆ ಮಾಲೀಕರೇ ಎಚ್ಚರ, ಕೊಂಚ ಯಾಮಾರಿದ್ರೂ ಜೈಲು ಖಚಿತ!

By Suvarna News  |  First Published May 17, 2020, 2:10 PM IST

ಬಾಡಿಗೆ ಮನೆ ಮಾಲೀಕರೇ ಹುಷಾರ್..!| ಒತ್ತಾಯಪೂರ್ವಕವಾಗಿ ಬಾಡಿಗೆ ಕೇಳಿದ್ರೂ ಜೈಲು ಗ್ಯಾರಂಟಿ| ಹೀಗೆ ಒತ್ತಾಯ ಮಾಡಿದ ಮನೆಯ ಮಾಲೀಕರ ಮೇಲೆ ದಾಖಲಾಗಿದೆ ಎಫ್ ಐ ಆರ್| 9 ಮಂದಿ ಮನೆಯ ಮಾಲೀಕರ ಮೇಲೆ ಎಫ್ ಐ ಆರ್ ದಾಖಲು


ನವದೆಹಲಿ(ಮೇ.17): ಲಾಕ್‌ಡೌನ್‌ನಿಂದಾಗಿ ಸದ್ಯ ನಗರದ ಪಿಜಿಗಳಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಅಲ್ಲೇ ಸಿಲುಕಿಕೊಂಡಿದ್ದಾರೆ. ಹೀಗಿರುವಾಗ ಅನೇಕ ಮಾಲಿಕರು ಪಿಜಿ ಬಾಡಿಗೆ ಹೆಚ್ಚಿಸಿದ್ದರೆ, ಇನ್ನು ಕೆಲವರು ಬಾಡಿಗೆ ನಿಡಲು ಒತ್ತಡ ಹೇರಲಾರಂಭಿಸಿದ್ದಾರೆ. ಆದರೀಗ ಇಂತಹ ವರ್ತನೆ ತೋರುವ ಮಾಲೀಕರು ಕೊಂಚ ಎಚ್ಚರದಿಂದಿರಬೇಕಾಗಿದೆ. ಇಲ್ಲವಾದಲ್ಲಿ ಜೈಲು ಸೇರೋದು ಖಚಿತ.

ಹೌದು ಇಂತಹ ವರ್ತನೆ ತೋರಿದ, ಒತ್ತಾಯ ಮಾಡಿದ 9 ಮಂದಿ ಮನೆಯ ಮಾಲೀಕರ ಮೇಲೆ ದೆಹಲಿಯ ಮುಖರ್ಜಿನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 180 ಅಡಿ ಪ್ರಕರಣ ದಾಖಲಿಸಿ ಎಫ್ ಐ ಆರ್ ದಾಖಲಾಗಿದೆ. ಇವರೆಲ್ಲರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ 2005 ಉಲ್ಲಂಘಿಸಿರುವ ಆರೋಪದ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಈ ಮನೆ ಮಾಲೀಕರು ಬಾಡಿಗೆ ಹಣ ನೀಡದ ಹಿನ್ನಲೆಯಲ್ಲಿ ಪಿಜಿಯಲ್ಲಿದ್ದ ವಿದ್ಯಾರ್ಥಿಗಳನ್ನು ಹೊರಹಾಕಿದ್ದರು. ಹೀಗಾಗಿ ದೂರು ಸ್ವೀಕರಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ

Tap to resize

Latest Videos

undefined

ಮುಖರ್ಜಿ ನಗರದ ನಾಗರೀಕರ ಸೇವಾ ಪರೀಕ್ಷೆಗಳ ಕೋಚಿಂಗ್ ಸೆಂಟರ್ ಗಳಿಗೆ ಪ್ರಖ್ಯಾತಿ ಪಡೆದಿದೆ. ದೇಶದ ವಿವಿಧ ಬಾಗಗಳಿಂದ ಬಂದ ವಿದ್ಯಾರ್ಥಿಗಳು ಇಲ್ಲಿನ ಪಿಜಿಗಳಲ್ಲಿ ಉಳಿದುಕೊಂಡು, ವ್ಯಾಸಂಗ ಮಾಡ್ತಾರೆ. ಆದರೆ ಮಾಲಿಕರು ಬಾಡಿಗೆ ನೀಡಲು ಒತ್ತಡ ಹೇರಿದ್ದರಿಂದ ಬೇಸರಗೊಂಡಿದ್ದ ವಿದ್ಯಾರ್ಥಿಗಳು ದೂರು ದಾಖಲಿಸಿದ್ದರು. 

ಕರ್ನಾಟಕದಲ್ಲೂ ಹೀಗೆ ವರ್ತಿಸುವ ಮಾಲಿಕರಿಗೆ ಸರ್ಕಾರ ಬರೀ ಮನವಿ ಮಾತ್ರ ಮಾಡುತ್ತಿದೆ. ಆದ್ರೆ ಡೆಲ್ಲಿ ಸರ್ಕಾರ ಪ್ರಕರಣಗಳು ದಾಖಲಿಸಿಯೇ ಬಿಟ್ಟಿದೆ ಎಂಬುವುದು ಉಲ್ಲೇಖನೀಯ.

click me!