ಮಕ್ಕಳಿಗೆ ಮೊಬೈಲ್ ಕೊಡುತ್ತೀರಾ? ಕಾರ್ಟೂನ್ ನೋಡ್ತಿದ್ದ ಬಾಲಕನ ಕೈಯಲ್ಲಿ ಸ್ಫೋಟಿಸಿದ ಫೋನ್!

By Chethan Kumar  |  First Published Sep 1, 2024, 4:12 PM IST

ಕಾರ್ಟೂನ್ ನೋಡುತ್ತಿದ್ದ 9 ವರ್ಷದ ಬಾಲಕನ ಕೈಯಲ್ಲಿ ಮೊಬೈಲ್ ಸ್ಫೋಟಗೊಂಡಿದೆ. ಇದೀಗ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈ ಘಟನೆ ಮಕ್ಕಳ ಕೈಗೆ ಮೊಬೈಲ್ ಕೊಡುವ ಪೋಷಕರ ಆತಂಕ ಹೆಚ್ಚಿಸಿದೆ.
 


ಚಿಂದ್ವಾರ(ಸೆ.01)  ಮಕ್ಕಳು ಫೋನ್‌ಗೆ ಚಟಕ್ಕೆ ಬೀಳುವುದು ಸಾಮಾನ್ಯ. ಫೋನ್ ಇಲ್ಲದೆ ಊಟ ಮಾಡಲ್ಲ, ಏನೂ ತಿನ್ನಲ್ಲ, ಅದೆಷ್ಟೇ ಕಂಟ್ರೋಲ್ ಮಾಡಿದರೂ ಕೆಲ ಹೊತ್ತಾದರೂ ಮಕ್ಕಳು ಫೋನ್ ನೋಡದೆ ಬಿಡುವುದಿಲ್ಲ. ಆದರೆ ಮಕ್ಕಳ ಆರೋಗ್ಯದ ಮೇಲೆ ಈ ಮೊಬೈಲ್ ಫೋನ್ ಗಂಭೀರ ಪರಿಣಾಮ ಬೀರುವುದು ಮಾತ್ರವಲ್ಲ, ಮೊಬೈಲ್ ಸ್ಫೋಟಗೊಳ್ಳುವ ಅಪಾಯವೂ ಇದೆ. ಇದೀಗ ಕಾರ್ಟೂನ್ ನೋಡುತ್ತಿದ್ದ 9 ವರ್ಷದ ಬಾಲಕ ಕೈಯಲ್ಲಿ ಮೊಬೈಲ್ ಫೋನ್ ಸ್ಫೋಟಗೊಂಡ ಘಟನೆ ಮಧ್ಯ ಪ್ರದೇಶ ಚಿಂದ್ವಾರ ಜಿಲ್ಲೆಯ ಕಲ್ಕೋಟಿ ದೇವಾರಿ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಬಾಲಕ ಕೈ ಸೇರಿದಂತೆ ದೇಹದ ಕೆಲ ಭಾಗದಲ್ಲಿ ಗಾಯಗಳಾಗಿವೆ.

ಬಾಲಕ ತಂದೆ ಹರ್ದ್ಯಾಲ್ ಸಿಂಗ್ ಹಾಗೂ ತಾಯಿ ಇಬ್ಬರೂ ಹೊಲದಲ್ಲಿ ಕೆಲಸ ಮಾಡಲು ತೆರಳಿದ್ದಾರೆ. ಹರ್ದ್ಯಾಲ್ ಸಿಂಗ್ 9 ವರ್ಷದ ಪುತ್ರ ಪಕ್ಕದ ಮನೆಯವರ ಮಕ್ಕಳ ಜೊತೆ ಮನೆಯಲ್ಲೇ ಆಟವಾಡುತ್ತಿದ್ದ. ಆದರೆ ಆಟದ ಬಳಿಕ ಮೊಬೈಲ್ ಫೋನ್ ತೆಗೆದುಕೊಂಡು ನೋಡಲು ಆರಂಭಿಸಿದ್ದಾನೆ. ಕುರ್ಚಿಯಲ್ಲಿ ಕುಳಿತುಕೊಂಡು ಕಾರ್ಟೂನ್ ನೋಡಲು ಆರಂಭಿಸಿದ ಬಾಲಕನಿಗೆ ಎಲ್ಲವೂ ಮರೆತಿದೆ. 

Tap to resize

Latest Videos

ಲಿಥಿಯಂ ಬ್ಯಾಟರಿ ಕೊಂಡೊಯ್ಯುತ್ತಿರುವಾಗ ಲಿಫ್ಟ್‌ನಲ್ಲೇ ಸ್ಫೋಟಗೊಂಡು ಭಸ್ಮ: ಕೊನೆ ಕ್ಷಣ ವಿಡಿಯೋ!

ಕೊನೆಗೆ ಮೊಬೈಲ್ ಫೋನ್ ಬ್ಯಾಟರಿ ಡೌನ್ ನೋಟಿಫಿಕೇಶನ್ ಬಂದಾಗಲೂ ಫೋನ್ ಬಳಕೆ ನಿಲ್ಲಿಸಲಿಲ್ಲ. ಕಾರ್ಟೂನ್ ನೋಡುತ್ತಲೇ ಮೊಬೈಲ್ ಚಾರ್ಜಿಂಗ್ ಇಟ್ಟಿದ್ದಾನೆ. ಚಾರ್ಚಿಂಗ್ ಕಾರಣ ಕುರ್ಚಿಯಲ್ಲಿ ಕುಳಿತುಕೊಂಡು ಕಾರ್ಟೂನ್ ವೀಕ್ಷಿಸಲು ಆರಂಭಿಸಿದ್ದಾನೆ. ಅತೀಯಾಗಿ ಮೊಬೈಲ್ ನೋಡಿದ ಕಾರಣ ಮೊದಲೇ ಮೊಬೈಲ್ ಬಿಸಿಯಾಗಿದೆ. ಇದರ ಜೊತೆಗೆ ಚಾರ್ಜಿಂಗ್‌ನಲ್ಲಿಟ್ಟು ಮತ್ತೆ ಮೊಬೈಲ್‌ನಲ್ಲಿ ಕಾರ್ಟೂನ್ ವೀಕ್ಷಿಸಲು ಆರಂಭಿಸಿದ ಕಾರಣ ಮೊಬೈಲ್ ಏಕಾಏಕಿ ಸ್ಫೋಟಗೊಂಡಿದೆ. 

ಕೈಯಲ್ಲಿ ಹಿಡಿದಿರುವಾಗಲೇ ಮೊಬೈಲ್ ಸ್ಫೋಟಗೊಂಡ ಕಾರಣ ಕೈ ಹಾಗೂ ತೊಡೆ ಭಾಗಗಳು ಸುಟ್ಟುಹೋಗಿದೆ. ಘಟನೆ ಮಾಹಿತಿ ತಿಳಿದ ಪೋಷಕರು ಮನೆಗೆ ಧಾವಿಸಿ ಬಾಲಕನ ಪಕ್ಕದ ಕ್ಲಿನಿಕ್‌ಗೆ ದಾಖಲಿಸಿದ್ದಾರೆ. ಪರಿಶೀಲಿಸಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗೆ ಚಿಂದ್ವಾರದ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಿದ್ದಾರೆ.

ಮಾಲೀಕನಿಲ್ಲದ ವೇಳೆ ಅನ್ನ ಹಾಕಿದ ಮನೆಗೆ ಬೆಂಕಿ ಇಟ್ಟ ಸಾಕು ನಾಯಿ, ಸಿಸಿಟಿವಿಯಲ್ಲಿ ಕೃತ್ಯ ಸೆರೆ!

ಸದ್ಯ ಬಾಲಕನ ಆರೋಗ್ಯ ಸ್ಥಿರವಾಗಿದೆ. ಆದರೆ ಕೈ ಹಾಗೂ ತೊಡೆ ಭಾಗದಲ್ಲಿ ತೀವ್ರ ಸುಟ್ಟ ಗಾಯಗಳಾಗಿದೆ. ಹೀಗಾಗಿ ಗುಣಮುಖರಾಗಲು ಸುದೀರ್ಘ ದಿನಗಳ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಕೈಯಲ್ಲಿನ ಸುಟ್ಟ ಗಾಯದ ಪ್ರಮಾಣ ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದೇ ವೇಳೆ ಮೊಬೈಲ್ ಚಾರ್ಜ್ ಇಟ್ಟು ಬಳಕೆ ಮಾಡದಂತೆ ಸೂಚಿಸಿದ್ದಾರೆ.
 

click me!