ಡ್ರಾಪ್ ಬೇಡ ಬೈಕೇ ಬೇಕು: ಹೆದ್ದಾರಿಯಲ್ಲಿ ಅಡ್ಡಹಾಕಿ ಬೈಕ್ ನೀಡುವಂತೆ ಪೀಡಿಸಿದ ಮಹಿಳೆ: ಆಮೇಲಾಗಿದ್ದೇನು?

Published : Jan 22, 2026, 08:44 PM IST
stranger woman asks bike in highway

ಸಾರಾಂಶ

ಹೆದ್ದಾರಿಯಲ್ಲಿ ಬೈಕ್ ಸವಾರನೊಬ್ಬನನ್ನು ಅಡ್ಡಗಟ್ಟಿದ ಮಹಿಳೆಯೊಬ್ಬಳು, ತನ್ನ ಸಹೋದರನಿಗೆ ಅಪಘಾತವಾಗಿದೆ ಎಂದು ನಂಬಿಸಿ ಬೈಕ್ ಕೇಳಿದ್ದಾಳೆ. ಆಕೆಯ ವರ್ತನೆಯಿಂದ ಅನುಮಾನಗೊಂಡ ಸವಾರ ಏನು ಮಾಡಿದ್ರು ಬೈಕ್ ನೀಡಿದ್ರಾ ಆಮೇಲೆ ಏನಾಯ್ತು ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ...

ಇತ್ತೀಚಿನ ದಿನಗಳಲ್ಲಿ ಯಾರನ್ನೂ ನಂಬುವುದಕ್ಕೆ ಸಾಧ್ಯವಿಲ್ಲ, ಅದರಲ್ಲೂ ವಾಹನದಲ್ಲಿ ಸಾಗುವಾಗ ನಡುರಸ್ತೆಯಲ್ಲಿ ಅಡ್ಡ ಹಾಕುವವರನ್ನು ಯಾವುದೇ ಕಾರಣಕ್ಕೂ ನಂಬಲಾಗದು. ಸಹಾಯ ಪಡೆದು ನಂಬಿಸಿ ನಡು ನೀರಲ್ಲಿ ಕೈ ಬಿಡುವವರೇ ಹೆಚ್ಚಾಗಿರುವುದರಿಂದ ಇಂದಿನ ಕಾಲದಲ್ಲಿ ಎಂಥವರನ್ನು ಕೂಡ ನಂಬುವುದಕ್ಕೆ ಸಾಧ್ಯವಿಲ್ಲ. ಅದರಲ್ಲೂ ಅಮಾಯಕರಂತೆ ವೇಷ ಧರಿಸುವ ಕಷ್ಟ ಇದೆ ಎಂದು ಹೇಳಿಕೊಂಡು ನಂಬಿಸಿ ಜೀವ ತೆಗೆಯುವ ಅಪರಿಚಿತರನ್ನು ಯಾವುದೇ ಕಾರಣಕ್ಕೂ ನಂಬಲು ಸಾಧ್ಯವಿಲ್ಲ, ಹೀಗಿರುವಾಗ ಇಲ್ಲೊಬ್ಬಳು ಮಹಿಳೆಯೊಬ್ಬಳು ಹೆದ್ದಾರಿಯಲ್ಲಿ ಬೈಕ್ ಸವಾರನೋರ್ವನನ್ನು ಅಡ್ಡಹಾಕಿ ಬೈಕ್ ನೀಡುವಂತೆ ಕೇಳಿದ್ದಾಳೆ. ಆದರೆ ಆ ವ್ಯಕ್ತಿ ಏನು ಮಾಡಿದ್ರು ಬೈಕ್ ನೀಡಿದ್ರಾ ಆಮೇಲೆ ಏನಾಯ್ತು ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ...

ಇನ್ಸ್ಟಾಗ್ರಾಮ್‌ನಲ್ಲಿ rohitvlogster ಎಂಬ ಖಾತೆ ಹೊಂದಿರುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೋದ ಮೇಲೆ ಅವರು ಹೀಗೆ ಬರೆದುಕೊಂಡಿದ್ದಾರೆ. ನಾನು ಆಕೆಗೆ ಬೈಕ್ ನೀಡಬೇಕಿತ್ತೇ ಬೇಡವೇ ಎಂದು ಅವರು ವೀಡಿಯೋ ಶೇರ್ ಮಾಡಿ ವೀಕ್ಷಕರ ಅಭಿಪ್ರಾಯ ಕೇಳಿದ್ದಾರೆ. ಈ ವೈರಲ್ ಆದ ವೀಡಿಯೋದಲ್ಲಿ ಅಪರಿಚಿತ ಮಹಿಳೆಯೊಬ್ಬಳು ನಡುರಸ್ತೆಯಲ್ಲಿ ನಿಂತುಕೊಂಡು ಬೈಕ್ ಅಡ್ಡ ಹಾಕಿ ಒಮ್ಮೆ ಬೈಕ್ ಕೊಡಿ ಪ್ಲೀಸ್ 5 ನಿಮಿಷದಲ್ಲಿ ಬೈಕ್ ವಾಪಸ್ ನೀಡುತ್ತೇನೆ ಎಂದು ಕೇಳುತ್ತಾರೆ. ಇದಕ್ಕೆ ಆ ಚಾಲಕ ಯಾಕೆ ಏನಾಯ್ತು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಆಕೆ ತನ್ನ ಸೋದರನಿಗೆ ಅಪಘಾತವಾಗಿದೆ. ಆತ ಆಸ್ಪತ್ರೆಯಲ್ಲಿದ್ದಾನೆ. ನಾನು ಅವನ ಬಳಿಗೆ ಹೋಗಬೇಕು. ನಾನು ಆಟೋದಲ್ಲಿ ಬಂದೆ ಆದರೆ ಆಟೋ ಹಾಳಾಗಿದ್ದರಿಂದ ಆತ ನನ್ನನ್ನು ಅರ್ಧದಲ್ಲಿ ಬಿಟ್ಟು ಹೋದ ಎಂದು ಹೇಳಿದ್ದಾಳೆ. ಈ ವೇಳೆ ಬೈಕ್ ಸವಾರ ಸರಿ ಬೈಕ್‌ನಲ್ಲಿ ಕುಳಿತುಕೊಳ್ಳಿ ನಿಮಗೆಲ್ಲಿ ಡ್ರಾಪ್ ನೀಡಬೇಕು ಅಲ್ಲಿ ನೀಡುತ್ತೇನೆ ಎಂದು ಹೇಳುತ್ತಾರೆ. ಆದರೆ ಅದಕ್ಕೆ ಒಪ್ಪದ ಆಕೆ ಒಂದೇ ಸಮನೇ ಬೈಕ್ ನೀಡುವಂತೆ ಕೇಳುತ್ತಾಳೆ. ಅಲ್ಲದೇ ಬೈಕ್ ಸವಾರನಿಗೆ ಕಷ್ಟ ಅರ್ಥ ಆಗ್ತಿಲ್ವಾ ನಿಮಗೆ ಎಂದು ಜೋರು ಧ್ವನಿಯಲ್ಲಿ ಪ್ರಶ್ನೆ ಮಾಡುತ್ತಾಳೆ.

ಇದನ್ನೂ ಓದಿ: ಮಗು ನೋಡಿಕೊಳ್ಳಲು ಬಂದ 10 ವರ್ಷದ ಬಾಲಕಿಗೆ ಅನ್ನ ನೀಡದೇ ಉಪವಾಸ ಹಾಕಿ ಪಕ್ಕೆಲುಬು ಮುರಿಯುವಂತೆ ಹೊಡೆದ ದಂಪತಿ

ಇದಕ್ಕೆ ಪ್ರತಿಕ್ರಿಯಿಸಿದ ಬೈಕ್ ಸವಾರ ನಾನು ಬೈಕ್ ನೀಡಿದರೆ ನೀವು ಹೇಗೆ ನನಗೆ ವಾಪಸ್ ಕೊಡುವಿರಿ, ನಾನು ನೀವು ಬರುವಷ್ಟೊತ್ತು ನಡುರಸ್ತೆಯಲ್ಲಿ ನಿಂತಿರಬೇಕೇ? ನಿಮಗೆ ಬೇಕಾದರೆ ಡ್ರಾಪ್ ನೀಡುತ್ತೇನೆ ಬೈಕ್ ನೀಡುವುದಕ್ಕಂತೂ ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಇದಕ್ಕೆ ಆಕೆಯ ಬಳಿ ಉತ್ತರವಿಲ್ಲ, ಬದಲಾಗಿ ಆಕೆ ಒಂದೇ ಸಮನೇ ಬೈಕ್ ನೀಡುವಂತೆ ಕೇಳುತ್ತಲೇ ಇದ್ದಳು. ಅಲ್ಲದೇ ನನ್ನ ನಂಬರ್ ಬೇಕಾದರು ನೀಡುತ್ತೇನೆ ಎಂದೆಲ್ಲಾ ಆಕೆ ಡ್ರಾಮಾ ಮಾಡಿದ್ದಾಳೆ. ಆಕೆಯ ನಡೆಯಿಂದ ಇದೇನೋ ಸ್ಕ್ಯಾಮ್ ಇರಬಹುದು ಎಂದು ಭಾವಿಸಿದ ಆ ಬೈಕರ್ ಆಕೆಗೆ ಕಡೆಗೆ ಒಂದೇ ಒಂದು ಮಾತು ಹೇಳಿದ್ದಾರೆ. ಬರುವುದಿದ್ದರೆ ಬನ್ನಿ ಡ್ರಾಪ್ ನೀಡುತ್ತೇನೆ. ಆದರೆ ಬೈಕ್ ಕೊಡಲಾಗದು ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾರೆ. ಹೋಗುತ್ತಾ ಅವರು ಹೇಗೇಲ್ಲಾ ಸ್ಕ್ಯಾಮ್ ಮಾಡ್ತಾರೆ ನೋಡಿ. ನಡುರಸ್ತೆಯಲ್ಲಿ ನಿಂತುಕೊಂಡು ಅಪರಿಚಿತರ ಅಡ್ಡಹಾಕಿ ಬೈಕ್ ನೀಡುವಂತೆ ಕೇಳುತ್ತಾರೆ. ಇವರನ್ನು ಹೇಗೆ ನಂಬುವುದು ಎಂದು ಕೇಳಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ನೈತಿಕ ಪೊಲೀಸ್‌ಗಿರಿ: ಮುಸ್ಲಿಂ ಯುವತಿ ಜೊತೆಗಿದ್ದ ಹಿಂದೂ ಹುಡುಗರ ಮೇಲೆ ಹಲ್ಲೆ

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದು, ಬೈಕರ್ ಒಳ್ಳೆ ನಿರ್ಧಾರ ಮಾಡಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಒಳ್ಳೆಯ ಕೆಲಸ ಮಾಡಿದಿರಿ ಬೈಕ್ ನೀಡದೇ ಇದ್ದಿದ್ದು ಒಳ್ಳೆದಾಯ್ತು. ಆಕೆ ನಿಜವಾಗಿಯೂ ಫ್ರಾಡ್ ರೀತಿ ಕಾಣಿಸುತ್ತಿದ್ದಾಳೆ. ಬಹುಶಃ ಬೈಕ್ ಕೊಟ್ಟಿದ್ದಾರೆ ಬೈಕ್ ನಿಮಗೆ ಮತ್ತೆ ಸಿಗುತ್ತಿರಲಿಲ್ಲ, ಆಕೆ ಓಡಿಸಿಕೊಂಡು ಹೊರಟು ಹೋಗುತ್ತಿದ್ದಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಇಂತಹ ಘಟನೆ ಭಯ ಹುಟ್ಟಿಸಿದ್ದು, ವಾಹನ ಸವಾರರು ಇಂತಹವರಿಂದ ಬಹಳ ಜಾಗರೂಕರಾಗಿರಬೇಕಾಗಿದೆ. ಹೆಣ್ಣು ಮಕ್ಕಳನ್ನು ಮುಂದೆ ಬಿಟ್ಟು ಬೈಕ್ ಎಗರಿಸುವಂತಹ ಜಾಲ ಇದಾಗಿರಲೂಬಹುದು. ಈ ಬಗ್ಗೆ ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ...

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Greenland crisis: ನ್ಯಾಟೋಗೆ ಒತ್ತಡ ಸೃಷ್ಟಿಸಿದ ಗ್ರೀನ್‌ಲ್ಯಾಂಡ್
88ರ ಇಳಿವಯಸ್ಸಲ್ಲಿ ಒಬ್ಬನೇ ಮಗ ಮುರಳಿ ಕೃಷ್ಣನನ್ನು ಕಳೆದುಕೊಂಡ ಗಾನಕೋಗಿಲೆ ಎಸ್‌.ಜಾನಕಿ!