ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್‌ನಲ್ಲಿ ವಾಕ್-ಶ್ರವಣ ದೋಷವುಳ್ಳ ವಕೀಲೆಯೊಬ್ಬರು ಸಂಕೇತ ಭಾಷೆಯ (ಸಂಜ್ಞೆ ಭಾಷೆ) ಮೂಲಕ ವಾದ ಮಂಡಿಸಿದ್ದಾರೆ.
ನವದೆಹಲಿ: ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್‌ನಲ್ಲಿ ವಾಕ್-ಶ್ರವಣ ದೋಷವುಳ್ಳ ವಕೀಲೆಯೊಬ್ಬರು ಸಂಕೇತ ಭಾಷೆಯ (ಸಂಜ್ಞೆ ಭಾಷೆ) ಮೂಲಕ ವಾದ ಮಂಡಿಸಿದ್ದಾರೆ.
ಭಾರತದ ಮುಖ್ಯ ನ್ಯಾಯಾಧೀಶ (Chief Justice of India) ನ್ಯಾ। ಡಿ.ವೈ ಚಂದ್ರಚೂಡ್ (DY Chandrachud) ಅವರಿದ್ದ ಪೀಠವು ವರ್ಚುವಲ್ ಆಗಿ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವೇಳೆ ಸಾರಾ ಸನ್ನಿ (Sara Sunny) ಎಂಬ ವಾಕ್ ಶ್ರವಣ ದೋಷವುಳ್ಳ ನ್ಯಾಯವಾದಿಯು (hearing impaired lawyer) ತಮ್ಮ ವ್ಯಾಖ್ಯಾನಕಾರ ಸೌರಭ್ ರಾಯ್ ಚೌಧರಿ ಮೂಲಕ ವಾದ ಮಂಡಿಸಿದ್ದಾರೆ. ಸಾರಾ ಅವರ ಸಂಕೇತ ಭಾಷೆಯನ್ನು ಸೌರಭ್ ಅವರು ಬಾಯಿ ಮಾತಿನಲ್ಲಿ ಮೂಲಕ ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ಈ ಪ್ರಯತ್ನವನ್ನು ಅನೇಕ ಗಣ್ಯರು ಮತ್ತು ಹಿರಿಯ ವಕೀಲರು ಶ್ಲಾಘಿಸಿದ್ದಾರೆ.
ನಡೆದಿದ್ದಿಷ್ಟು:
ವಿಚಾರಣೆಯೊಂದರ ಆರಂಭದ ವೇಳೆ ವರ್ಚುವಲ್ ವಿಚಾರಣೆಯ (virtual hearing) ತಾಂತ್ರಿಕ ತಂಡವು ಸಾರಾಗೆ ಸ್ಕ್ರೀನ್ ಮೇಲೆ ಬರಲು ಅನುಮತಿ ನೀಡದೇ ಕೇವಲ ವ್ಯಾಖ್ಯಾನಕಾರ ಸೌರಭ್‌ಗೆ ಅನುಮತಿ ನೀಡಿತು. ಹೀಗಾಗಿ ಮೊದಲಿಗೆ ಸ್ಕ್ರೀನ್‌ನಲ್ಲಿ ಸೌರಭ್ ಮಾತ್ರ ಕಾಣಿಸಿಕೊಂಡು ಸಾರಾ ತೆರೆಯ ಹಿಂದೆ ಮಾಡುತ್ತಿದ್ದ ಸಂಜ್ಞೆಗಳಿಗೆ ವಿವರ ನೀಡತೊಡಗಿದರು.
ಆಗ ಮಧ್ಯಪ್ರವೇಶಿಸಿದ ನ್ಯಾ। ಚಂದ್ರಚೂಡ್, ವಕೀಲೆ ಸಾರಾ ಅವರಿಗೂ ಸ್ಕ್ರೀನ್ ಮೇಲೆ ಅವಕಾಶ ನೀಡಿ ಎಂದು ಆದೇಶಿಸಿದರು. ಆಗ ಸಾರಾ ಅವರು ಒಂದು ಸ್ಕ್ರೀನ್‌ನಲ್ಲಿ ಸಂಜ್ಞೆಗಳ ಮೂಲಕ ವಾದ ಮಂಡಿಸಿದರೆ ಅವರ ವ್ಯಾಖ್ಯಾನಕಾರ ಸೌರಭ್ ಅವರು ಸಾರಾ ಸಂಜ್ಞೆಗಳನ್ನು ಬಾಯಿ ಮಾತಿನಲ್ಲಿ ವಿವರಿಸಿದರು.
ನ್ಯಾ। ಚಂದ್ರಚೂಡ್ ಅವರು ಮೊದಲಿನಿಂದಲೂ ನ್ಯಾಯಕ್ಕೆ ಸಮಾನ ನ್ಯಾಯದಾನದ ಪ್ರತಿಪಾದಕರಾಗಿದ್ದಾರೆ. ನ್ಯಾ। ಚಂದ್ರಚೂಡರು ಇಬ್ಬರು ಅಂಗವಿಕಲ ಬಾಲಕಿಯರ ದತ್ತು ತಂದೆಯೂ ಹೌದು. ವರ್ಷಾರಂಭದಲ್ಲಿ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ತಮ್ಮ ಕಚೇರಿಗೆ ಪ್ರವಾಸಕ್ಕೆಂದು ಕರೆತಂದು ಎಲ್ಲರನ್ನೂ ಚಕಿತಗೊಳಿಸಿದ್ದರು. ನ್ಯಾಯಾಲಯವು ಹೇಗೆ ಕೆಲಸ ಮಾಡುತ್ತದೆ ಮತ್ತು ಅಲ್ಲಿ ತಮ್ಮ ಕೆಲಸವೇನು ಎಂಬುದನ್ನು ಅವರು ತಮ್ಮ ಹೆಣ್ಣುಮಕ್ಕಳಿಗೆ ವಿವರಿಸಿದ್ದರು.
ಭಾರತದ ಬಗ್ಗೆ ಹೆಮ್ಮೆ ಇದೆ: ಕೆನಡಾ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತ ಬಾಂಗ್ಲಾದೇಶ