ವಂದೇ ಭಾರತ್​ ರೈಲಿಗೆ ಹೋದ್ರೆ ಈ ತಪ್ಪು ಎಂದಿಗೂ ಮಾಡ್ಬೇಡಿ: 13 ಮಂದಿಗೆ ಬಿತ್ತು 36 ಸಾವಿರ ರೂ ದಂಡ

Published : Nov 17, 2026, 05:09 PM IST
Vande Bharat Express

ಸಾರಾಂಶ

ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಕರನ್ನು ಬೀಳ್ಕೊಡಲು ಒಳಹೋದ 13 ಮಂದಿ ಸ್ವಯಂಚಾಲಿತ ಬಾಗಿಲು ಮುಚ್ಚಿದ್ದರಿಂದ ಒಳಗೆ ಸಿಲುಕಿಕೊಂಡರು. ಈ ಅನಧಿಕೃತ ಪ್ರಯಾಣಕ್ಕಾಗಿ ಅವರಿಗೆ 36 ಸಾವಿರ ರೂ. ದಂಡ ವಿಧಿಸಲಾಗಿದೆ. ವಂದೇ ಭಾರತ್ ರೈಲಿನ ಬಾಗಿಲುಗಳು ಸ್ವಯಂಚಾಲಿತವಾಗಿರುವುದರಿಂದ ಒಮ್ಮೆ ಮುಚ್ಚಿದರೆ ನಿಗದಿತ ನಿಲ್ದಾಣಗಳಲ್ಲಿ ಮಾತ್ರ ತೆರೆಯುತ್ತವೆ.

ಕಾನ್ಪುರ: ಈಗ ಹಲವಾರು ಮಾರ್ಗಗಗಳಲ್ಲಿ ವಂದೇ ಭಾರತ್​ ರೈಲುಗಳ ಓಡಾಟ ಆರಂಭವಾಗಿದೆ. ಅತಿಶೀಘ್ರವಾಗಿ ತಲುಪಲು, ಸಾಮಾನ್ಯ ರೈಲುಗಳಿಗಿಂತಲೂ ಸಕಲ ವ್ಯವಸ್ಥೆ ಇರುವ, ಆರಾಮದಾಯಕ ಪ್ರಯಾಣಕ್ಕಾಗಿ ವಂದೇ ಭಾರತ್​ ರೈಲನ್ನು ಆಯ್ಕೆ ಮಾಡಿಕೊಳ್ಳುತ್ತಿರುವವರು ಹಲವರು. ಸಾಮಾನ್ಯ ರೈಲಿಗಿಂತ ಪ್ರಯಾಣ ವೆಚ್ಚ ದುಬಾರಿಯಾದರೂ, ಇಂದಿನ ಬಸ್​ ರೇಟ್​ ಇತ್ಯಾದಿ ನೋಡಿ, ಅದರಲ್ಲಿಯೂ ಸುರಕ್ಷಿತವಾಗಿ, ಆರಾಮದಾಯಕವಾಗಿ ಶೀಘ್ರದಲ್ಲಿ ತಲುಪಲು ಹೆಚ್ಚಿನವರು ಇದರ ಮೊರೆ ಹೋಗುತ್ತಿದ್ದಾರೆ. ಆದರೆ ಹೀಗೆ ನೀವು ವಂದೇ ಭಾರತ್​ ರೈಲಿಗೆ ಹೋಗುವುದಿದ್ದರೆ ದಯವಿಟ್ಟು ಈ ಒಂದು ತಪ್ಪು ಮಾಡಲೇಬೇಡಿ. ಈ ತಪ್ಪು ಮಾಡಿ ಒಂದೇ ಕುಟುಂಬದ 13 ಮಂದಿ, 36 ಸಾವಿರ ರೂ. ದಂಡ ಹಾಕಿಸಿಕೊಳ್ಳಬೇಕಾದ ಸ್ಥಿತಿ ಬಂದಿದೆ.

ಅಷ್ಟಕ್ಕೂ ಅದೆಂಥ ತಪ್ಪು ಎಂದರೆ ಸಾಮಾನ್ಯವಾಗಿ ರೈಲು,ಬಸ್ಸುಗಳಿಗೆ ತಮ್ಮವರನ್ನು ಹತ್ತಿಸಲು ಹೋದಾಗ, ರೈಲಿನ ಒಳಗೆ ಹೋಗುವುದು ಮಾಮೂಲು. ಅದರಲ್ಲಿಯೂ ಹಿರಿಯರು ಅಥವಾ ತುಂಬಾ ಆತ್ಮೀಯರನ್ನು ಬೀಳ್ಕೊಡುವಾಗ, ರೈಲು ಹೋಗುವವರೆಗೂ ಒಳಗೆ ಸೀಟಿನಲ್ಲಿಯೇ ಕುಳಿತು ಮಾತನಾಡಿ ಅವರನ್ನು ಕಳಿಸಲಾಗುವುದು. ಆದರೆ ವಂದೇ ಭಾರತ್​ ರೈಲಿನಲ್ಲಿ ನೀವು ಹೀಗೆ ಮಾಡಲು ಹೋದರೆ ಎಡವಟ್ಟಾಗುವುದು ಗ್ಯಾರೆಂಟಿ. ಏಕೆಂದರೆ, ಒಮ್ಮೆ ಟ್ರೈನ್​ ಒಳಗೆ ಹೋದಾಗ ಅದಕ್ಕೆ ಸ್ವಯಂಚಾಲಿತ ಬಾಗಿಲು ಇರುವುದರಿಂದ ಅದು ಮುಚ್ಚುತ್ತದೆ. ನೀವು ಮತ್ತೆ ಕೆಳಕ್ಕೆ ಇಳಿಯವುದು ಅಸಾಧ್ಯ. ಮಾಮೂಲಿ ಟ್ರೈನ್​ ರೀತಿಯ ಕೈಯಿಂದ ಅದನ್ನು ತೆಗೆಯಲು ಆಗುವುದಿಲ್ಲ. ನೀವು ಒಳಗೆ ಸಿಕ್ಕಿಕೊಳ್ಳುವಿರಿ. ಈ ಘಟನೆಯಲ್ಲಿಯೂ ಅದೇ ರೀತಿ ಆಯಿತು. ಉತ್ತರ ಪ್ರದೇಶದ ಕಾನ್ಪುರ ಸೆಂಟ್ರಲ್ ಸ್ಟೇಷನ್‌ಗೆ ಬಂದಿದ್ದ ಹನ್ನೆರಡು ಜನರು ಸ್ವಯಂಚಾಲಿತ ಗೇಟ್‌ಗಳು ಮುಚ್ಚಿದಾಗ ಒಳಗೆ ಸಿಲುಕಿಕೊಂಡರು. ಗೇಟ್‌ಗಳು ತೆರೆಯಲು ವಿಫಲವಾದಾಗ, ಅವರು ಇಳಿಯಲು ಗದ್ದಲ ಸೃಷ್ಟಿಸಿದರು. ರೈಲು ಸಿಬ್ಬಂದಿಯಿಂದ ಮಾಹಿತಿ ಪಡೆದ ನಂತರ, ರೈಲನ್ನು ಇಟಾವಾ ಜಂಕ್ಷನ್‌ನಲ್ಲಿ ನಿಲ್ಲಿಸಲಾಯಿತು ಮತ್ತು ಎಲ್ಲರನ್ನೂ ಇಳಿಸಲಾಯಿತು.

ಆದರೆ ಸುಮ್ಮನೇ ಇಳಿಸುವುದಿಲ್ಲ ಈ ರೈಲಿನಲ್ಲಿ. ಅದನ್ನು ಟಿಕೆಟ್​ ಇಲ್ಲದೇ ಅನಧಿಕೃತ ಪ್ರಯಾಣ ಎಂದು ಪರಿಗಣಿಸಲಾಗುವುದು. ನೀವು ಜಪ್ಪಯ್ಯ ಎಂದರೂ ಬಿಡುವುದಿಲ್ಲ. ನಿಮ್ಮಿಂದ ದಂಡ ವಸೂಲಿ ಮಾಡುತ್ತಾರೆ. ಅದೇ ರೀತಿ ಒಂದೇ ಕುಟುಂಬದ 13 ಮಂದಿಯಿಂದ ದಂಡ ವಸೂಲಿ ಮಾಡಿ ಬಿಡಲಾಗಿದೆ!

ಸಂಪೂರ್ಣ ಸ್ಟೋರಿ ಇಲ್ಲಿದೆ

ರೈಲು ಸಂಖ್ಯೆ 22415, ವಾರಣಾಸಿ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್, ಕಳೆದ ಭಾನುವಾರ ಬೆಳಿಗ್ಗೆ ಕಾನ್ಪುರ್ ಸೆಂಟ್ರಲ್ ಸ್ಟೇಷನ್‌ಗೆ ಬಂದಿತು. ಕಾನ್ಪುರದ ವಿವಿಧ ಭಾಗಗಳಿಂದ ಹನ್ನೆರಡು ಜನರು ತಮ್ಮ ಸಂಬಂಧಿಕರನ್ನು ಹತ್ತಿಸಲು ಸಹಾಯ ಮಾಡಲು ರೈಲಿನೊಳಗೆ ಹೋದರು. ಏತನ್ಮಧ್ಯೆ, ಗೇಟ್‌ಗಳು ಮುಚ್ಚಲ್ಪಟ್ಟವು. ವಂದೇ ಭಾರತ್ ಎಕ್ಸ್‌ಪ್ರೆಸ್ ಗೇಟ್‌ಗಳು ನಿಗದಿತ ನಿಲ್ದಾಣಗಳಲ್ಲಿ ಮಾತ್ರ ತೆರೆದಿರುತ್ತವೆ. ವಾರಣಾಸಿ ನಂತರ, ರೈಲು ಪ್ರಯಾಗ್‌ರಾಜ್ ಮತ್ತು ಕಾನ್ಪುರದಲ್ಲಿ ನಿಲ್ಲುತ್ತದೆ ಮತ್ತು ನಂತರ ನೇರವಾಗಿ ನವದೆಹಲಿಯಲ್ಲಿ ನಿಲ್ಲುತ್ತದೆ. ಒಳಗೆ ಸಿಲುಕಿಕೊಂಡವರಲ್ಲಿ ಭಯಭೀತರಾದರು. ಅವರಲ್ಲಿ ಅವರೊಂದಿಗೆ ಬಂದ ಮಹಿಳೆಯರು ಮತ್ತು ಮಕ್ಕಳು ಇದ್ದರು. ಅವರು ರೈಲು ನಿಲ್ಲಿಸಿ ಇಳಿಯಲು ಪ್ರಯತ್ನಿಸಿದರು.

ರೈಲು ಸಿಬ್ಬಂದಿ ನಿರಾಕರಿಸಿದಾಗ, ಕೆಲವರು ಗಲಾಟೆ ಮಾಡಿದರು. ಇದಾದ ನಂತರ, ಸಿಬ್ಬಂದಿ ತುಂಡ್ಲಾ ನಿಯಂತ್ರಣಕ್ಕೆ ಮಾಹಿತಿ ನೀಡಿದರು. ನಿಯಂತ್ರಣಾಧಿಕಾರಿಯ ಸೂಚನೆಯ ಮೇರೆಗೆ, ಬೆಳಿಗ್ಗೆ 10:49 ಕ್ಕೆ ರೈಲನ್ನು ಇಟಾವಾ ಜಂಕ್ಷನ್‌ನಲ್ಲಿ ನಿಲ್ಲಿಸಲಾಯಿತು. ನಿಲ್ದಾಣದ ಸೂಪರಿಂಟೆಂಡೆಂಟ್ ಪಿ.ಎಂ. ಮೀನಾ, ಆರ್‌ಪಿಎಫ್ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಮತ್ತು ಜಿಆರ್‌ಪಿ ಇನ್ಸ್‌ಪೆಕ್ಟರ್ ಯದುವೀರ್ ಸಿಂಗ್ ತಂಡದೊಂದಿಗೆ ಬಂದರು. ಎಲ್ಲಾ 12 ಜನರನ್ನು ರೈಲಿನಿಂದ ಇಳಿಸಿ ಆರ್‌ಪಿಎಫ್ ಪೋಸ್ಟ್‌ಗೆ ಕರೆದೊಯ್ಯಲಾಯಿತು. ನಿಯಂತ್ರಣಾಧಿಕಾರಿಯ ಮಾಹಿತಿಯ ಮೇರೆಗೆ ರೈಲನ್ನು ನಿಲ್ಲಿಸಿ ಜನರನ್ನು ಕೆಳಗಿಳಿಸಲಾಯಿತು ಎಂದು ಆರ್‌ಪಿಎಫ್ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಸಿಂಗ್ ಹೇಳಿದರು. ಗದ್ದಲ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳಿಲ್ಲದ ಕಾರಣ, ವಾಣಿಜ್ಯ ಇಲಾಖೆಯ ನೌಕರರು ಪ್ರತಿ ವ್ಯಕ್ತಿಗೆ 3000 ರೂ.ಗಳ ಟಿಕೆಟ್‌ಗಳನ್ನು ನೀಡಿ 36,000 ರೂ.ಗಳ ದಂಡವನ್ನು ವಿಧಿಸಿದರು. ಅಂತಹ ತಪ್ಪನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪತಿಯ ತೊಡೆಯ ಮೇಲೆ ಕುಳಿತೇ ಊಟ ಮಾಡ್ತಿದ್ದ ಸೋನಿಯಾ: ಅಪ್ಪ-ಅಮ್ಮನ ಪ್ರೀತಿ ನೆನಪಿಸಿಕೊಂಡ ರಾಹುಲ್
ನನ್ನ ಮತ ಮಾರಾಟಕ್ಕಿಲ್ಲ: ಮತಪೆಟ್ಟಿಗೆಯಲ್ಲಿ ₹1,000 ಹಣ, ಕೈಬರಹದ ಪತ್ರ ಹಾಕಿ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಿದ ಮತದಾರ!