ONGC Gas Leak: ಆಂಧ್ರಪ್ರದೇಶದಲ್ಲಿ ಭಾರೀ ದುರಂತ!ಒಎನ್‌ಜಿಸಿ ಗ್ಯಾಸ್ ಲೀಕ್; ಜನರ ಸ್ಥಳಾಂತರಕ್ಕೆ ಸಿಎಂ ಆದೇಶ

Ravi Janekal   | ANI
Published : Nov 17, 2026, 02:24 PM ISTUpdated : Nov 17, 2026, 02:39 PM IST
ONGC Gas Leak in Andhrapradesh

ಸಾರಾಂಶ

Massive gas leak at ONGC in Andhra pradesh ಆಂಧ್ರಪ್ರದೇಶದ ಕೊನಸೀಮಾ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಒಎನ್‌ಜಿಸಿ ಗ್ಯಾಸ್ ಸೋರಿಕೆಯಾಗಿದೆ. ಅನಾಹುತ ತಪ್ಪಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಆದೇಶಿಸಲಾಗಿದೆ.

ಆಂಧ್ರಪ್ರದೇಶ (ನ.17): ಭಾರೀ ಪ್ರಮಾಣದಲ್ಲಿ ONGC ಗ್ಯಾಸ್ ಲೀಕ್ ಆಗಿ ಅನಾಹುತ ಸೃಷ್ಟಿಸಿದ ಘಟನೆ ಆಂಧ್ರಪ್ರದೇಶದ ಬಿ.ಆರ್. ಅಂಬೇಡ್ಕರ್ ಕೊನಸೀಮಾ ಜಿಲ್ಲೆಯಲ್ಲಿ ರಾಜೋಳು ಕ್ಷೇತ್ರದ ಮಂಗೋಡಿಕುದುರು ಮಂಡಲದ ಗೆಡ್ಡೆದ-ನಗರಂ ಗ್ರಾಮಗಳ ಬಳಿಯ ತಡಿವರಿಮೆರಕ ಗ್ರಾಮದಲ್ಲಿ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮಗಳ ಜನರ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆದೇಶಿಸಿದ್ದಾರೆ.

ಒಎನ್‌ಜಿಸಿ ಗ್ಯಾಸ್ ಸೋರಿಕೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಅನಿಲ ಸೋರಿಕೆಯಾದ ಬಗ್ಗೆ ಮಾಹಿತಿ ತಿಳಿಯುತ್ತಿದ್ದ ಎಚ್ಚೆತ್ತ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ ವಿಷಾನಿಲದಿಂದ ಅನಾಹುತ ತಪ್ಪಿಸಲು ಸೋರಿಕೆಯಾದ ಸ್ಥಳದ ಸುತ್ತಮುತ್ತಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆಯೂ ಸಮರೋಪಾದಿಯಲ್ಲಿ ನಡೆದಿದೆ.

ಒಎನ್‌ಜಿಸಿ ಅನಿಲ ಸೋರಿಕೆ ದುರಂತ: ಗ್ರಾಮಗಳಿಗೆ ಎಚ್ಚರಿಕೆ:

ಅನಿಲ ಸೋರಿಕೆಯಾಗಿರುವ ವ್ಯಾಪ್ತಿಯಲ್ಲಿ ಬರುವ ಸುತ್ತಮುತ್ತಲ ಗ್ರಾಮಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ. ಸಿಎಂ ಚಂದ್ರಬಾಬು ನಾಯ್ಡು ಆದೇಶಿಸಿರುವ ಹಿನ್ನೆಲೆ ಅಧಿಕಾರಿಗಳೇ ಮುಂದಾಗಿ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಮುಂದುವರಿದಿದೆ.. ಅನಿಲ ಪೀಡಿತ ಪ್ರದೇಶದ ಸುತ್ತಮುತ್ತಲ ಪ್ರದೇಶಗಳಲ್ಲಿ ಯಾವುದೇ ವಿದ್ಯುತ್ ದೀಪಗಳು, ಮನೆಯಲ್ಲಿನ ಲ್ಯಾಂಪ್ ಅಥವಾ ದೀಪಗಳು, ಅದಕ್ಕೆ ಸಂಬಂಧಿಸಿದ ಉಪಕರಣಗಳು ಬಳಸದಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ನಡುವೆ ONGC ಅಧಿಕಾರಿಗಳು ಸ್ಥಳದಲ್ಲಿ ಅನಿಲ ಸೋರಿಕೆಯನ್ನು ನಿಯಂತ್ರಣಕ್ಕೆ ತರಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಂಡಿದ್ದಾರೆ.

ONGC ಅನಿಲ ಸೋರಿಕೆಗೆ ಕಾರಣವೇನು?

ONGC ನಿಂದ ಸುಮಾರು ಒಂದು ಕಿಮೀ ವ್ಯಾಪ್ತಿಯವರೆಗೂ ಗ್ಯಾಸ್ ಹರಡಿರುವ ಹಿನ್ನೆಲೆ ಸುತ್ತಮುತ್ತಲಿನ ಹಳ್ಳಿಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಅಗ್ನಿ ಅವಘಡಗಳು ಸಂಭವಿಸಿಲ್ಲ. ಅನಿಲ ಬಾವಿಯ ಬಾವಿ ಸುರಕ್ಷಿತವಾಗಿ ಮುಚ್ಚಿದೆ. ಬಾವಿಯಿಂದ ಅನಿಲ ಸೋರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸಿಮೆಂಟಿಂಗ್ ತಂಡವು ಈಗಾಗಲೇ ಸ್ಥಳಕ್ಕೆ ತಲುಪಿದೆ ಎಂದು ಒಎನ್‌ಜಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಸುತ್ತಲಿನ ವಾತಾವರಣದಲ್ಲಿ ಗ್ಯಾಸ್ ಹರಡುವುದನ್ನು ತಡೆಯಲು ಕಾರ್ಯಾಚರಣೆಗೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಪದೇಪದೆ ಗ್ಯಾಸ್ ಸೋರಿಕೆಯಂತಹ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ಸಿಎಂ ಚಂದ್ರಬಾಬು ನಾಯ್ಡು ಒಎನ್‌ಜಿಸಿ ಅಧಿಕಾರಿಗಳಿಗೆ ಸಂಪರ್ಕಿಸುವಂತೆ ಸೂಚನೆ ನೀಡಿದ್ದಾರೆ. ಇಂದು ಈ ಕುರಿತು ಮಹತ್ವದ ಸಭೆಯೂ ನಡೆಯುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೂಟ್ ಬಿಟ್ಟು ಫಿಲಿಪೈನ್ಸ್ ಸಾಂಪ್ರದಾಯಿಕ ಉಡುಗೆ ತೊಟ್ಟ ಮೋದಿ; ASEAN ಔತಣಕೂಟದಲ್ಲಿ ಗಮನ ಸೆಳೆದ ಪ್ರಧಾನಿ
ಪ್ರಧಾನಿ ಮೋದಿ ಜೊತೆ ಯಾರೀ ಕನ್ನಡದ ಪುಟಾಣಿ? ಕರ್ನಾಟಕದ ಮಾಜಿ ಸಿಎಂ ಮೊಮ್ಮಗನ ಜೊತೆ ಆತ್ಮೀಯ ಕ್ಷಣ