ಬಿಲ್ ಪಾಸ್‌ಗೆ 20% ಕಮಿಷನ್ ಕೇಳ್ತಾರೆ, ತನ್ನದೇ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕನ ಗಂಭೀರ ಆರೋಪ

Published : Nov 17, 2026, 03:12 PM IST
Jadcherla MLA  Anirudh Reddy with officials (Photo/ANI)

ಸಾರಾಂಶ

ಕಾಂಗ್ರೆಸ್ ಶಾಸಕ ತನ್ನದೇ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಬಿಲ್ ಪಾಸ್ ಮಾಡಲು ಅಧಿಕಾರಿಗಳು 20 ಪರ್ಸೆಂಟ್ ಕಮಿಷನ್ ಕೇಳ್ತಾರೆ. ಪ್ರತಿಯೊಂದಕ್ಕೂ 10 ರಿಂದ 20 ಪರ್ಸೆಂಟ್ ಕಮಿಷನ್ ನೀಡಬೇಕು ಎಂದು ಆರೋಪಿಸಿದ್ದಾರೆ.

ಹೈದರಾಬಾದ್ (ನ.17) ರಸ್ತೆ ಕಾಮಗಾರಿ ಬಿಲ್, ಪಿತ್ರಾರ್ಜಿತ ಆಸ್ತಿ ವರ್ಗಾಣೆ ಸೇರಿದಂತೆ ತನ್ನ ಕ್ಷೇತ್ರದ ಯಾವುದೇ ಅಭಿವೃದ್ಧಿ ಯೋಜನೆಗಳ ಬಿಲ್ ಪಾಸ್ ಮಾಡಲು ಶೇಕಡಾ 10 ರಿಂದ 20ರಷ್ಟು ಕಮಿಷನ್ ಕೇಳುತ್ತಾರೆ. ರಾಜಕಾರಣಿಗಳಿಗಿಂತ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಸರ್ಕಾರದ ಶಾಸಕ ಅನಿರುದ್ಧ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ತನ್ನದೇ ಸರ್ಕಾರದ ವಿರುದ್ಧ ಅನಿರುದ್ಧ್ ರೆಡ್ಡಿ ಮಾಡಿರುವ ಭ್ರಷ್ಟಾಚಾರ ಆರೋಪ ತೀವ್ರ ಕೋಲಾಹಲ ಸೃಷ್ಟಿಸಿದೆ.

ಕರ್ನಾಟಕದ 40 ಪರ್ಸೆಂಟ್‌ ಆರೋಪದಿಂದ ಸರ್ಕಾರವೇ ಉರುಳಿ ಬಿದ್ದಿದೆ

ತಮ್ಮದೇ ಪಕ್ಷದ ಆಡಳಿತ ಯಂತ್ರದ ವಿರುದ್ದ ಕಾಂಗ್ರೆಸ್ ಶಾಸಕನ ಭ್ರಷ್ಟಾಚಾರ ಆರೋಪ ಇದೀಗ ಕಾಂಗ್ರೆಸ್‌ಗೆ ಇರಿಸು ಮುರಿಸು ತಂದಿದೆ. ಮೆಹಬೂಬ್‌ನಗರ ಜಿಲ್ಲೆಯ ಜಡ್ಚೆರ್ಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜನಂಪಲ್ಲಿ ಅನಿರುದ್ಧ್ ರೆಡ್ಡಿ ಮಾಡಿದ ಆರೋಪ ಇದೀಗ ಪ್ರತಿಪಕ್ಷಗಳಿಗೆ ಅಸ್ತ್ರವಾಗಿ ಪರಿಣಿಸಿದೆ. ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿತ್ತು. ಪರಿಣಾಮ ಚುನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಿತ್ತು. ಇದೀಗ ತೆಲಂಗಾಣ ಕಾಂಗ್ರೆಸ್ ಸರ್ಕಾರದ ತನ್ನದೇ ಪಕ್ಷದ ಶಾಸಕ ಭ್ರಷ್ಟಾಚಾರ ಆರೋಪ ಮಾಡಿದ್ದು, ರಾಜಕೀಯ ಸಂಚಲನ ಸೃಷ್ಟಿಸಿದೆ.

ಕಮಿಷನ್ ಇಲ್ಲದೆ ಕೆಲಸ ಆಗಲ್ಲ

ಪತ್ರಕರ್ತರ ಜೊತೆ ಮಾತನಾಡಿದ ಅನಿರುದ್ಧ್, ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ತಳಮಟ್ಟದಲ್ಲಿ ಅಧಿಕಾರಿಗಳು ಕಮಿಷನ್ ಇಲ್ಲದೆ ಯಾವುದೇ ಬಿಲ್ ಪಾಸ್ ಮಾಡುವುದಿಲ್ಲ. ಅಧಿಕಾರಿಗಳ ಭ್ರಷ್ಟರಾಗಿದ್ದಾರೆ. ಯಾವುದೇ ಫೈಲ್ ಮೂವ್ ಮಾಡಲು ಕಮಿಷನ್ ಕೇಳುತ್ತಾರೆ. ಪತ್ರಕರ್ತರು, ರಾಜಕಾರಣಿಗಳು ಭ್ರಷ್ಟರಲ್ಲ,ಆದರೆ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ನಾವು ಅಭಿವೃದ್ಧಿ ಯೋಜನೆಗಳ ಕಾಮಾಗಾರಿಗಳನ್ನು ಉತ್ತಮವಾಗಿ ಮಾಡಲು ಎಲ್ಲಾ ತಯಾರಿ ಮಾಡಿರುತ್ತೇವೆ. ಆದರೆ ತಳಮಟ್ಟದ ಅಧಿಕಾರಿಗಳು ನಾವು ಎಷ್ಟೇ ಉತ್ತಮ ಕೆಲಸ ಮಾಡಲು ಅವಕಾಶ ನೀಡುವುದಿಲ್ಲ. ಕಮಿಷನ್ ಕೊಟ್ಟು ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಆರೋಪಿಸಿದ್ದಾರೆ.

ಕ್ಷೇತ್ರದಲ್ಲಿ ನಡೆಯುವ ಪ್ರತಿ ಕೆಲಸಕ್ಕೂ ಲಂಚ ಕೊಡಬೇಕು. ಪಿತ್ರಾರ್ಜಿತ ಆಸ್ತಿ ವರ್ಗಾವಣೆಗೆ ಅಧಿಕಾರಿಯೊಬ್ಬರಿಗೆ ಮನವಿ ಮಾಡಿದ್ದೆ. ಆದರೆ ಹಲವು ಬಾರಿ ಮನವಿ ಮಾಡಿದರೂ ಕೆಲಸ ಆಗಲಿಲ್ಲ. ಕೊನೆಗೆ ಆಸ್ತಿ ವರ್ಗಾವಣೆ ಅಗತ್ಯವಿದ್ದ ವ್ಯಕ್ತಿ, ಅಧಿಕಾರಿಗಳಿಗೆ 15000 ರೂಪಾಯಿ ಲಂಚ ನೀಡಿದ ತಕ್ಷಣವೇ ಕೆಲಸ ಪೂರ್ಣಗೊಂಡಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಪ್ರತಿ ದಿನ 1 ರಿಂದ 2 ಲಕ್ಷ ರೂಪಾಯಿ ಲಂಚ ವಸೂಲಿ ನಡೆಯುತ್ತಿದೆ ಎಂದು ಶಾಸಕ ಗಂಭೀರ ಆರೋಪ ಮಾಡಿದ್ದಾರೆ.

ಸಿಮೆಂಟ್ ರಸ್ತೆ ಬಿಲ್ ಪಾಸ್ ಮಾಡಲು ಕಮಿಷನ್

ರಸ್ತೆ ಹಾಗೂ ಕಟ್ಟಡ ಕಾಮಾಗಾರಿಗಳ ಬಿಲ್ ಮಾಡಲು ಗುತ್ತಿಗೆದಾರರಿಂದ ಶೇಕಡಾ 10 ರಿಂದ 20 ರಷ್ಟು ಕಮಿಷನ್ ಕೇಳುತ್ತಾರೆ. ಅಧಿಕಾರಿಗಳು ಬೆದರಿಕೆ ಹಾಕಿ ವಸೂಲಿ ಮಾಡುತ್ತಾರೆ. ಲಂಚ ಕೊಡದಿದ್ದರೆ, ಗುತ್ತಿಗೆದಾರನ ಬಿಲ್ ಪಾಸ್ ಆಗುವುದಿಲ್ಲ. ತಿರುಗಿಸಿ ಹೇಳಿದರೆ ಕೆಲಸದಲ್ಲಿ ಲೋಪ, ದಾಖಲೆ ಸಮಸ್ಯೆಗಳ ಕಾರಣ ಹೇಳಿ ಬಿಲ್ ರಿಜೆಕ್ಟ್ ಮಾಡುತ್ತಾರೆ. ಇದರಿಂದ ಗುತ್ತಿಗೆದಾರರು ತಮ್ಮ ಕಾರ್ಮಿಕರಿಗೆ ಸಂಬಳ ನೀಡಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಈ ಸಹವಾಸ ಬೇಡ ಎಂದು ಲಂಚ ಕೊಟ್ಟು ಕೈತೊಳೆದುಕೊಳ್ಳುತ್ತಾರೆ ಎಂದು ಶಾಸಕ ಆರೋಪಿಸಿದ್ದಾರೆ.

ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳು ಈ ರೀತಿಯ ಭ್ರಷ್ಟ ಅಧಿಕಾರಿಗಳ ವಿರುದ್ಧ ವರದಿ ಮಾಡಬೇಕು. ಗುತ್ತಿಗೆದಾರರು ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಲಂಚ ಕೊಟ್ಟು ಸಾಲಗಾರರಾಗುತ್ತಿದ್ದಾರೆ. ಕಡಿಮೆ ಮೊತ್ತದಲ್ಲಿ ಕೆಲಸ ಮುಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೈಯಿಂದ ಹಣ ಹಾಕಿ ಕೆಲಸ ಮುಗಿಸಬೇಕಾದ ಅನಿವಾರ್ಯತೆಗಲು ಎದುರಾಗುತ್ತಿದೆ ಎಂದು ಶಾಸಕರು ಆರೋಪಿಸಿದ್ದಾರೆ. ಕಾಂಗ್ರೆಸ್ ಶಾಸಕನ ಆರೋಪ ಇದೀಗ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸರ್ಕಾರಕ್ಕೆ ತೀವ್ರ ಹಿನ್ನಡೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ONGC Gas Leak: ಆಂಧ್ರಪ್ರದೇಶದಲ್ಲಿ ಭಾರೀ ದುರಂತ!ಒಎನ್‌ಜಿಸಿ ಗ್ಯಾಸ್ ಲೀಕ್; ಜನರ ಸ್ಥಳಾಂತರಕ್ಕೆ ಸಿಎಂ ಆದೇಶ
ಸೂಟ್ ಬಿಟ್ಟು ಫಿಲಿಪೈನ್ಸ್ ಸಾಂಪ್ರದಾಯಿಕ ಉಡುಗೆ ತೊಟ್ಟ ಮೋದಿ; ASEAN ಔತಣಕೂಟದಲ್ಲಿ ಗಮನ ಸೆಳೆದ ಪ್ರಧಾನಿ