Latest Videos

ನೀಟ್ ಪರೀಕ್ಷಾ ಅಕ್ರಮ : ಪ್ರತಿಭಟಿಸುತ್ತಿದ್ದಾಗಲೇ ಸಂಸತ್‌ನಲ್ಲಿ ಕುಸಿದು ಬಿದ್ದ ಕಾಂಗ್ರೆಸ್ ಸಂಸದೆ

By Anusha KbFirst Published Jun 28, 2024, 5:40 PM IST
Highlights

ನೀಟ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರಾಜ್ಯ ಸಭಾ ಸಂಸದೆ ಫುಲೊ ದೇವಿ ನೇತಮ್‌ ಸಂಸತ್‌ನೊಳಗೆ ಕುಸಿದು ಬಿದ್ದ ಘಟನೆ ನಡೆದಿದೆ. 

ನವದೆಹಲಿ: ನೀಟ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರಾಜ್ಯ ಸಭಾ ಸಂಸದೆ ಫುಲೊ ದೇವಿ ನೇತಮ್‌ ಸಂಸತ್‌ನೊಳಗೆ ಕುಸಿದು ಬಿದ್ದ ಘಟನೆ ನಡೆದಿದೆ.  ಪ್ರತಿಭಟನೆ ವೇಳೆ ತಲೆತಿರುಗಿದಂತಾಗಿ ಕುಸಿದು ಬಿದ್ದ ಅವರನ್ನು ಕೂಡಲೇ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. 

ನೀಟ್‌ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು  ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದವು ಆದರೆ ಇತ್ತ ಆಡಳಿತ ಪಕ್ಷವೂ ಮೊದಲಿಗೆ ರಾಷ್ಟ್ರಪತಿಗಳ ಭಾಷನದ ಮೇಲೆ ವಂದನಾ ನಿರ್ಣಯ ಸಲ್ಲಿಸಲು ಮುಂದಾಗಿದ್ದರಿಂದ ಸಿಟ್ಟಿಗೆದ್ದ ಪ್ರತಿಪಕ್ಷಗಳು ಗಲಾಟೆ ಮುಂದುವರೆಸಿದವು. ಹೀಗಾಗಿ ಸಂಸತ್ ಕಲಾಪವನ್ನು ಸೋಮವಾರ ಜುಲೈ 1ರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯ್ತು.

| Congress party's Rajya Sabha MP Phulo Devi Netam being taken away in an ambulance from Parliament after she felt dizzy and fell. She was protesting in the Well of of the House over NEET issue when the incident happened. She is being taken to RML hospital. pic.twitter.com/ljyXgCfuMA

— ANI (@ANI)

 

ರಾಜ್ಯಸಭಾ ಅಧ್ಯಕರ ಮೇಲೆ ಕಿಡಿಕಾರಿದ ಖರ್ಗೆ

ಇನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಮೇಲೆ ಕಿಡಿಕಾರಿದ್ದಾರೆ. ಇದು ಅವರ ಸಮಸ್ಯೆ, ನಾನು ಅವರ ಗಮನ ಸೆಳೆಯುವುದಕ್ಕಾಗಿ ಸದನಕ್ಕೆ ಹೋದೆ. ಆದರೆ ಅವರು ನಮತ್ತ ನೋಡಲೇ ಇಲ್ಲ, ನಾನು ಗಮನ ಸೆಳೆಯಲು ಸಾಕಷ್ಟು ಪ್ರಯತ್ನಿಸಿದೆ. ಆದರೆ ಅವರು ಕೇವಲ ಆಡಳಿತ ಪಕ್ಷದ ಕಡೆಯೇ ನೋಡುತ್ತಿದ್ದರು. ನಿಯಮಗಳ ಪ್ರಕಾರ ನಾನು ಯಾವಾಗ ಅವರ ಗಮನ ಸೆಳೆಯಬೇಕು. ಅವರು ನಮ್ಮತ್ತಲೂ ನೋಡಲೇಬೇಕು. ಆದರೆ ಅವರು ನಮ್ಮತ್ತ ನೋಡದೆಯೇ ನಮ್ಮನ್ನು ಅವಮಾನಿಸಿದರು. ಹೀಗಿರುವಾಗ ನಮಗೇನು ಉಳಿದಿದೆ. 

₹300 ಕೋಟಿ ಗಳಿಕೆಗೆ ಸ್ಕೆಚ್‌ ಹಾಕಿದ್ದ ನೀಟ್‌ ದಂಧೆಕೋರರು..!

ಅವರ ಗಮನ ಸೆಳೆಯುವುದಕ್ಕಾಗಿ ನಾವು ಒಂದೋ ಸೀದಾ ಒಳಗೆ ಹೋಗಬೇಕು ಅಥವಾ ಜೋರಾಗಿ ಕಿರುಚಾಡಬೇಕು. ಹೀಗಾಗಿ ಇದು ರಾಜ್ಯಸಭಾ ಅಧ್ಯಕ್ಷರ ತಪ್ಪು. ಅವರು ಈ ರೀತಿ ಮಾಡಬಾರದು ರಾಜ್ಯಸಭೆಯ ಗೌರವವನ್ನು ರಕ್ಷಿಸಬೇಕು. ನೀಟ್ ಪರೀಕ್ಷೆ ಎಂಬುದು ದೊಡ್ಡದಾದ ಹಗರಣ, ಪರೀಕ್ಷಾ ಪೇಪರ್ ಲೀಕ್ ಆಗಿದೆ. ಲಕ್ಷಕ್ಕೂ ಅಧಿಕ ಮಕ್ಕಳು ಚಿಂತೆಗೀಡಾಗಿದ್ದಾರೆ. ನಾವು ಈ ಬಗ್ಗೆ ನಿರ್ದಿಷ್ಟ ಚರ್ಚೆಗೆ ಕೇಳಿದ್ದೆವು. ನಾವು ಯಾರಿಗೂ ತೊಂದರೆ ಮಾಡುವುದಕ್ಕೆ ಅಲ್ಲ, ನಾವು ಕೇವಲ ವಿದ್ಯಾರ್ಥಿಗಳ ಸಮಸ್ಯೆಯನ್ನು ತೋರಿಸುವುದಕ್ಕೆ ಬಯಸಿದೆವು. ಆದರೆ ಅವರು ಅದಕ್ಕೆ ಅವಕಾಶವನ್ನೇ ನೀಡಲಿಲ್ಲ., ಗಮನವನ್ನು ಹರಿಸಲಿಲ್ಲ ಎಂದು ಖರ್ಗೆ ಕಿಡಿಕಾರಿದರು.

ಬಿಹಾರದಲ್ಲಿ ನೆಟ್‌ ತನಿಖೆಗೆ ತೆರಳಿದ್ದ ಸಿಬಿಐ ಟೀಂ ಮೇಲೇ ಭಾರಿ ದಾಳಿ!

click me!