Latest Videos

ಭಾರಿ ಮಳೆಗೆ ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತ, ಓರ್ವ ಸಾವು, ಐವರು ಗಂಭೀರ!

By Chethan KumarFirst Published Jun 28, 2024, 8:59 AM IST
Highlights

ದೆಹಲಿಯಲ್ಲಿ ಸುರಿದ ಭಾರಿ ಮಳೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತಗೊಂಡ ಘಟನೆ ನಡೆದಿದೆ. ಇಂದು ಬೆಳಗ್ಗೆ 5 ಗಂಟೆಗೆ ಘಟನೆ ನಡೆದಿದ್ದು, ಓರ್ವ ಮೃತಪಟ್ಟರೆ, ಐವರು ಗಾಯಗೊಂಡಿದ್ದಾರೆ. ಹಲವು ವಾಹನಗಳು ಜಖಂ ಗೊಂಡಿದೆ.
 

ನವದೆಹಲಿ(ಜೂ.28)  ದೆಹಲಿ ಇಷ್ಟು ದಿನ ಸುಡು ಬಿಸಿಲಿನಿಂದ ಕಂಗಾಲಾಗಿತ್ತು. ನಿನ್ನೆಯಿಂದ ಸುರಿದ ಭಾರಿ ಮಳೆಗೆ ಇದೀಗ ಅವಾಂತರಗಳು ಸೃಷ್ಟಿಯಾಗಿದೆ. ಒಂದಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಇದರ ನಡುವೆ ದೆಹಲಿ ಇಂಧಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿದು ಭಾರಿ ಅವಘಡ ಸಂಭವಿಸಿದೆ. ವಿಮಾನ ನಿಲ್ದಾಣದ ಟರ್ಮಿಮಲ್ 1ರ ಮೇಲ್ಛಾವಣಿ ಕುಸಿದಿದಿದೆ. ಇದರ ಪರಿಣಾಮ ಓರ್ವ ಮೃತಪಟ್ಟರೆ, ಐವರು ಗಂಭೀರ ಗಾಯಗೊಂಡಿದ್ದಾರೆ.

ಇಂದು ಬೆಳಗ್ಗೆ 5.30ರ ಸುಮಾರಿಗೆ ಮೇಲ್ಛಾವಣಿ ಕುಸಿತ ಕಂಡಿದೆ. ಸ್ಥಳದಲ್ಲಿದ್ದ ಕಾರುಗಳು ಸೇರಿದಂತೆ ಹಲವು ವಾಹನಗಳು ಜಖಂ ಗೊಂಡಿದೆ. ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯ ಪರಿಣಾಮ, ಟರ್ಮಿನಲ್ 1 ರಿಂದ ಎಲ್ಲಾ ನಿರ್ಗಮನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜೊತೆಗೆ ಸುರಕ್ಷತಾ ಕ್ರಮವಾಗಿ ಚೆಕ್-ಇನ್ ಕೌಂಟರ್‌ಗಳನ್ನು ಮುಚ್ಚಲಾಗಿದೆ.

ಮುಂಬೈ ಏರ್‌ಪೋರ್ಟ್‌ನಲ್ಲಿ ಕೂದಲೆಳೆ ಅಂತರದಲ್ಲಿಯೇ ತಪ್ಪಿದ ವಿಮಾನ ದುರಂತ; ವಿಡಿಯೋ ನೋಡಿ
 
ಘಟನೆ ಬೆನ್ನಲ್ಲೇ ಮೂರು ಅಗ್ನಿಶಾಮಕ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಟರ್ಮಿನಲ್ ಒಂದರ ಪಿಕ್ ಹಾಗೂ ಡ್ರಾಪ್ ಸ್ಥಳದಲ್ಲಿ ಈ ಘಟನೆ ನಡದಿದೆ. ಇದರಿಂದ ಗಾಯಾಳುಗಳ ಸಂಖ್ಯೆ 6ಕ್ಕೇರಿದೆ. ಪಿಕ್ ಅಪ್ ಹಾಗೂ ಡ್ರಾಪ್ ಮಾಡಲು ಆಗಮಿಸಿ ಹಲವು ವಾಹನಗಳಿಗೆ ಹಾನಿಯಾಗಿದೆ.

ಅಗ್ನಿಶಾಮಕ ದಳ ರಕ್ಷಣಾ ಕಾರ್ಯ ಪೂರ್ಣಗೊಳಿಸಿದೆ. ಮೆಲ್ಛಾವಣಿ ಕುಸಿತದಲ್ಲಿ 6 ಮಂದಿ ಸಿಲುಕಿದ್ದರು. ಮೇಲ್ಛಾವಣಿ ಕುಸಿತದಿಂದ 6 ಮಂದಿ ಗಾಯಗೊಂಡಿದ್ದು. ಈ ಪೈಕಿ ಓರ್ವ ಗಾಯಾಳು ಮೃತಪಟ್ಟಿದ್ದಾರೆ . ಉಳಿದ ಐವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುಸಿತಗೊಂಡಿರುವ ಮೇಲ್ಛಾವಣಿ ಅಡಿಯಲ್ಲಿ ಮತ್ಯಾರು ಸಿಲುಕಿಕೊಂಡಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ.

ಘಟನೆ ಕುರಿತು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣ ಲಿಮಿಟೆಡ್ ಪ್ರತಿಕ್ರಿಯೆ ನೀಡಿದೆ. ಇಂದು ಬೆಳಗ್ಗೆಯಿಂದ ದೆಹಲಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ರಸ್ತೆಗಳು ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ನಿರೀಕ್ಷೆಗೂ ಮೀರಿದ ಮಳೆ ಕೆಲವೇ ಗಂಟೆಗಳಲ್ಲಿ ಸುರಿದಿದೆ. ಇದರ ಪರಿಣಾಮ ಕುಸಿತ ಕಂಡಿದೆ. 5 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಅಗ್ನಿಶಾಮಕ ಸೇರಿದಂತೆ ರಕ್ಷಣಾ ತಂಡಗಳು ಸ್ಥಳದಲ್ಲಿದೆ. ಈ ಘಟನೆಯಿಂದ ದೆಹಲಿ ಟರ್ಮಿನಲ್ ಒಂದರಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ ಎಂದು   DIAL ಹೇಳಿದೆ.

ಕೆಲ ಪ್ರಯಾಣಿಕರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಇದೀಗ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದರೆ. ಒಂದೆಡೆ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆ ಎತ್ತಿದ್ದಾರೆ. ಮತ್ತೊಂದೆಡೆ ಪ್ರಯಾಣ ವಿಳಂಬದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. 


 

click me!