Omicron variant: ಹೊಸ ಕೋವಿಡ್ ರೂಪಾಂತರಿ ತಳಿ ಆತಂಕ, ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ!

By Suvarna News  |  First Published Nov 27, 2021, 3:38 PM IST
  • ಹೊಸ ರೂಪಾಂತರಿ ತಳಿ ವೈರಸ್ ಪತ್ತೆ ಹಿನ್ನಲೆ ಭಾರತದಲ್ಲಿ ಅಲರ್ಟ್
  • ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ
  • ಭಾರತದಲ್ಲಿ ಕೊರೋನಾ ಪರಿಸ್ಥಿತಿ, ಲಸಿಕೆ ಸೇರಿದಂತೆ ಮಹತ್ವದ ಸಭೆ

ನವದೆಹಲಿ(ನ.27): ಸೌತ್ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರಿ ಕೊರೋನಾ(Coronavirus) ತಳಿ ಓಮಿಕ್ರಾನ್(Omicron variant) ಇದೀಗ ವಿಶ್ವದ ನಿದ್ದೆಗೆಡಿಸಿದೆ. ಅತೀ  ವೇಗದಲ್ಲಿ ಹರಡವು ಸಾಮರ್ಥ್ಯ, ಲಸಿಕೆಗೂ(Vaccine) ಬಗ್ಗದ ಈ ತಳಿ ವಿಶ್ವದಲ್ಲಿ ಮತ್ತೊಂದು ಅಲೆ ಸೃಷ್ಟಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇತ್ತ ಭಾರತದಲ್ಲೂ(India) ಅಲರ್ಟ್ ಘೋಷಿಸಲಾಗಿದೆ. ಒಮಿಕ್ರಾನ್ ಆತಂಕದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅಧ್ಯಕ್ಷತೆಯಲ್ಲಿ ದೇಶದಲ್ಲಿನ ಕೊರೋನಾ ಸ್ಥಿತಿಗತಿ, ಲಸಿಕಾ ಅಭಿಯಾನ ಹಾಗೂ ಹೊಸ ತಳಿ ಕುರಿತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಮಹತ್ವದ ಸಭೆ ನಡೆಸಲಾಗಿದೆ.

ಸಭೆಯ ಆರಂಭದಲ್ಲಿ ಜಾಗತಿಕ ಮಟ್ಟದಲ್ಲಿನ ಕೊರೋನಾ ಪರಿಸ್ಥಿತಿ, ಭಾರತದಲ್ಲಿರುವ ಕೊರೋನಾ  ಸ್ಥಿತಿಗತಿಗಳ ಕುರಿತು ಆರೋಗ್ಯ  ಸಚಿವಾಲಯ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ವಿಶ್ವದಲ್ಲಿ ಹೆಚ್ಚಾಗುತ್ತಿರುವ ಕೊರೋನಾ ವೈರಸ್ ಕುರಿತು ಮಾಹಿತಿ ನೀಡಲಾಯಿತು. ಇದೇ ವೇಳೆ ಮನೆ ಮನೆಗೆ ಲಸಿಕೆ ಅಭಿಯಾನ(Vaccination Drive) ಕುರಿತು ಈವರೆಗಿನ ಪ್ರಗತಿ ಕುರಿತು ಮಾಹಿತಿ ನೀಡಲಾಯಿತು. ಲಸಿಕೆ ಅಭಿಯಾನ ವೇಗ ಹೆಚ್ಚಿಸಲು ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡಲಾಯಿತು. ಈ ವೇಳೆ ಎರಡನೇ ಡೋಸ್ ನೀಡುವಿಕೆ ವೇಗ ಕಡಿಮೆಯಾಗಿದೆ. ಹಲವರು ಮೊದಲ ಡೋಸ್ ಪಡೆದಿದ್ದಾರೆ. ಅವದಿ ಮುಗಿದರೂ ಎರಡನೇ ಡೋಸ್ ಪಡೆದಿಲ್ಲ. ಹೀಗಾಗಿ ಎರಡನೇ ಡೋಸ್ ಕುರಿತು ಹೆಚ್ಚಿನ ಗಮನ ಹರಿಸುವಂತೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲು ಮೋದಿ ನಿರ್ದೇಶನ ನೀಡಿದ್ದಾರೆ.

Tap to resize

Latest Videos

COVID 19 New variant: ಸೌತ್ ಆಫ್ರಿಕಾದಲ್ಲಿ ಹೊಸ ತಳಿ ಪತ್ತೆ, ರಾಜ್ಯಗಳಿಗೆ ಕೇಂದ್ರದ ಹೈ ಅಲರ್ಟ್! 

ದೇಶದಲ್ಲಿ ಪಾಸಿಟಿವಿಟಿ ದರ, ಚೇತರಿಕೆ ಪ್ರಮಾಣದ ಕುರಿತು ಮೋದಿ ಮಾಹಿತಿ ಪಡೆದರು. ಇದೇ ವೇಳೆ ಸೌತ್ ಆಫ್ರಿಕಾ, ಬೋಟ್ಸವನಾದಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರಿ ಕೊರೋನಾ ತಳಿ ಕುರಿತು ಮೋದಿಗೆ ಮಾಹಿತಿ ನೀಡಲಾಯಿತು. ಹೊಸ ತಳಿ ಗುಣಲಕ್ಷಣಗಳು, ಇದರಿಂದ ಭಾರತಕ್ಕಿರುವ ಅಪಾಯದ ಕುರಿತು ಮಾಹಿತಿ ಪಡೆದುಕೊಂಡರು. ಹೊಸ ತಳಿ ಮತ್ತೊಂದು ಅಲೆ ಸೃಷ್ಟಿಸುವುದನ್ನು ತಡೆಯಬೇಕು. ಇದಕ್ಕಾಗಿ ಕೊರೋನಾ ಮಾರ್ಗಸೂಚಿಗಳನ್ನು(Covid 19 guidelines) ಜನರು ಪಾಲಿಸಬೇಕು ಎಂದು ಮೋದಿ ಸೂಚಿಸಿದರು. ಅಪಾಯದಲ್ಲಿರುವ ದೇಶಗಳ ಮೇಲೆ ನಿಗಾ ಇಡಬೇಕು. ಅಂತಾರಾಷ್ಟ್ರೀಯ ಪ್ರಯಾಣಿಕರ ಪರೀಕ್ಷೆಯನ್ನು ಮೋದಿ ಒತ್ತಿ ಹೇಳಿದ್ದಾರೆ. 

ಈ ಸಭೆಯಲ್ಲಿ ದೇಶದಲ್ಲಿರುವ ಕೊರೋನಾ ಪ್ರಕರಣಗಳ ಮಾಹಿತಿಯನ್ನು ಮೋದಿ ಪಡೆದುಕೊಂಡರು. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 8,318 ಹೊಸ ಕೋವಿಡ್ ಪ್ರಕರಣ ವರದಿಯಾಗಿದೆ. 465  ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇದೀಗ ಕೊರೋನಾಗೆ ಬಲಿಯಾದವರ ಸಂಖ್ಯೆ 4,67,933 ತಲುಪಿದೆ ಎಂದು ಆರೋಗ್ಯ ಸಚಿವಾಲಯ ಮೋದಿಗೆ ಮಾಹಿತಿ ನೀಡಿತು.

Covid-19 Karnataka| ವಿದೇಶದಿಂದ ಬರುವವರಿಗೆ ಹೊಸ ಕೋವಿಡ್‌ ರೂಲ್ಸ್‌

ಉನ್ನತ ಮಟ್ಟದ ಸಭೆಯಲ್ಲಿ ದೇಶದಲ್ಲಿ ವರದಿಯಾಗುತ್ತಿರುವ ಪ್ರಕರಣ, ಜೊತೆಗೆ INSACOG ಅಡಿಯಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು, ಆರೋಗ್ಯ ಕ್ಷೇತ್ರಕ್ಕೆ ನೀಡಲಾದ ಮೂಲಭೂತ ಸೌಕರ್ಯಗಳ ಕುರಿತು ಚರ್ಚಿಸಲಾಗಿದೆ. ಇದೇ ವೇಳೆ ಅಂತಾರಾಷ್ಟ್ರೀಯ ಪ್ರಯಾಣಿಕರ ಮಾದರಿ ಸಂಗ್ರಹ, ಪರೀಕ್ಷೆ, ಅವರ ಸಂಪರ್ಕಿತರ ಟ್ರ್ಯಾಕ್ ಮಾಡಿ ಪರೀಕ್ಷೆ ಒಳಪಡಿಸುವ ಕಾರ್ಯಗಳನ್ನು ಕಟ್ಟುನಿಟ್ಟಾಗಿ ಮಾಡಬೇಕು ಎಂದು ಮೋದಿ ಸೂಚಿಸಿದರು.

ಹೊಸ ರೂಪಾಂತರಿ ತಳಿ ಕುರಿತು ಜಾಗೃತಿ ಮೂಡಿಸಬೇಕು. ಜನರು ಮುಂಜಾಗ್ರತ ವಹಿಸಬೇಕು. ಮತ್ತೊಂದು ಅನಾಹುತಕ್ಕೆ ಎಡೆ ಮಾಡಿಕೊಡಬಾರದು ಎಂದು ಮೋದಿ ಸೂಚಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಔಷಧಿಗಳ ಪೂರೈಕೆ, ಲಸಿಕೆ ಸೇರಿದಂತೆ ಎಲ್ಲವನ್ನೂ ನೋಡಿಕೊಳ್ಳಬೇಕು. ಅವರ ಜೊತೆಗೆ ಸಂವಹನ ನಡೆಸಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ.

ರಾಜ್ಯದಲ್ಲಿ ಆಕ್ಸಿಜನ್ ಘಟಕ, ವೆಂಟಿಲೇಟರ್ ಸೇರಿದಂತೆ ಇತರ ಸೌಕರ್ಯಗಳು, ಸಲಕರೆಗಳು, ಆಸ್ಪತ್ರೆ ಬೆಡ್, ವ್ಯವಸ್ಥೆ ಕುರಿತು ಕೇಂದ್ರ ಆರೋಗ್ಯ ಇಲಾಖೆ ಪರಿಶೀಲಿಸಬೇಕು. ಅಗತ್ಯ ನೆರವು ನೀಡಬೇಕು. ಯಾವುದೇ ಸವಾಲನ್ನು ಎದುರಿಸಲು ದೇಶದ ಮೂಲೆ ಮೂಲೆಯಲ್ಲಿರುವ ಆಸ್ಪತ್ರಗಳು ಶಕ್ತವಾಗಬೇಕು ಎಂದು ಮೋದಿ ಹೇಳಿದ್ದಾರೆ.
 

click me!