1971 War victory: ಇಂಡಿಯಾ ಗೇಟ್‌ನಲ್ಲಿ ಅದ್ದೂರಿ ವಿಜಯೋತ್ಸವಕ್ಕೆ ಭಾರತ ಸಿದ್ಧತೆ

By Suvarna News  |  First Published Nov 27, 2021, 3:18 PM IST

ದೆಹಲಿ(ನ.27): ಬಾಂಗ್ಲಾದೇಶ ನಿರ್ಮಾಣ ಹಾಗೂ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಜಯ ಸಾಧಿಸಿ 50ವರ್ಷಗಳು ಪೂರ್ಣಗೊಂಡ ಹಿನ್ನೆಲೆ ಇದರ ಸ್ಮರಣೆಯನ್ನು ಅದ್ದೂರಿಯಾಗಿ ಆಚರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇದರಂಗವಾಗಿ ಇಂಡಿಯಾ ಗೇಟ್‌ ಕಟ್ಟಡದ ಬಳಿ ಡಿಸೆಂಬರ್‌ 14ರಿಂದ 16ರವರೆಗೆ ದೊಡ್ಡ ಮಟ್ಟದ ಸಂಭ್ರಮಾಚರಣೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಉದ್ಘಾಟಿಸಲಿದ್ದಾರೆ. 
 


ಇಂಡಿಯಾ ಗೇಟ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇಲ್ಲಿ 1971ರ ಈ ಯುದ್ಧದಲ್ಲಿ ಪಾಕಿಸ್ಥಾನವನ್ನು ಸೋಲಿಸುವಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದ ಹಾಗೂ ಹುತಾತ್ಮರಾದ ಬಾಂಗ್ಲಾದೇಶಿ ಯೋಧರಿಗೆ ಅವರ ಸಹೋದರರು ಗೌರವ ನಮನ ಸಲ್ಲಿಸಲ್ಲಿದ್ದಾರೆ ಎಂದು ಸೇನಾ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಭಾರತೀಯ ಸೇನೆ  1971 ರ ಯುದ್ಧದ ಚಿತ್ರಣಗಳನ್ನು  ಮರು ಸೃಷ್ಟಿಸಲಿದೆ. ಇಂದಿನವರೆಗೂ ಇದೊಂದು  ಅತೀ ದೊಡ್ಡದಾದ ಸೇನಾ ಗೆಲುವು ಎಂಬುದಾಗಿ ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದ ಯುದ್ಧ ಸ್ಮಾರಕ ಲೋಕಾರ್ಪಣೆ: ಏನಿದರ ವಿಶೇಷತೆ?

Tap to resize

Latest Videos

1971 ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದ ಗೆಲುವಿನ  50ನೇ ವರ್ಷಾಚರಣೆಯನ್ನು ಭಾರತದ ಸೇನಾ ಪಡೆ ಹಾಗೂ ಬಾಂಗ್ಲಾದೇಶ ಎರಡೂ ಕೂಡ ಆಚರಿಸುತ್ತಿವೆ. ಯುದ್ಧಕ್ಕೂ ಮೊದಲು ಪಾಕಿಸ್ತಾನಿ ಸೈನ್ಯದಿಂದ ಬೆಂಗಾಲಿಗಳು(Bengalis) ಅದರಲ್ಲೂ ಮುಖ್ಯವಾಗಿ ಹಿಂದೂಗಳ ವ್ಯಾಪಕವಾದ ಹತ್ಯಾಕಾಂಡ(genocide) ನಡೆಯಿತು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಇದರ ಪರಿಣಾಮ 10ಮಿಲಿಯನ್‌ಗೂ ಅಧಿಕ ಜನ ನೆರೆಯ ದೇಶವಾದ ಭಾರತಕ್ಕೆ ವಲಸೆ ಬಂದರು. ಭಾರತ ಬಂಗಾಳದ ನಿರಾಶ್ರಿತರಿಗೆ ಆಶ್ರಯ ನೀಡಿತು. ಹಿಂದೂಗಳ ನರಮೇಧದ ಹಿನ್ನೆಲೆಯಲ್ಲಿ ಈ ಯುದ್ಧ ನಡೆಯಿತು.  1971ರ ಡಿಸೆಂಬರ್‌  4-5ರಂದು ನೌಕಾಸೇನೆಯ ಪಶ್ಚಿಮ ಕಮಾಂಡ್‌(Western Naval Command),ಟ್ರಿಡೆಂಟ್‌ ಎಂಬ ಕೋಡ್‌ನೇಮ್‌ನಿಂದ ಯಶಸ್ವಿಯಾಗಿ ಪಾಕಿಸ್ತಾನದ ಕರಾಚಿಯ ಬಂದರಿನ  ಮೇಲೆ ದಾಳಿ ನಡೆಸಿದರು. 

1971ರ ಯುದ್ಧದ ಗೆಲುವಿಗೆ 50 ವರ್ಷ; ಖಾಕಿ ಮತ್ತು ಮಿಡ್‌ನೈಟ್ ಗ್ರೇ ಬಣ್ಣಗಳಲ್ಲಿ ಜಾವಾ ಬೈಕ್‌!

ಈ ಯುದ್ಧದಲ್ಲಿ ಶತ್ರುದೇಶ ಪಾಕಿಸ್ತಾನ ಸೇನೆಯ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ(Amir Abdullah Khan Niazi) ನೇತೃತ್ವದ ಸುಮಾರು 93 ಸಾವಿರ ಸೈನಿಕರು ಯುದ್ಧದ ಕೊನೆಯಲ್ಲಿ ಭಾರತಕ್ಕೆ ಶರಣಾದರು.  ನಂತರ 1972ರ ಶಿಮ್ಲಾ ಒಪ್ಪಂದ(Shimla Agreement)ದಂತೆ ಅವರನ್ನು ಬಿಟ್ಟು ಕಳುಹಿಸಲಾಯಿತು. ಬಹುತೇಕ ಪಾಕಿಸ್ತಾನ ಸೇನೆಯ ಮೂರನೇ ಒಂದು ಭಾಗದಷ್ಟು ಸೈನಿಕರನ್ನು ಭಾರತೀಯ ಪಡೆಗಳು ತಮ್ಮ ವಶಕ್ಕೆ ಪಡೆದಿದ್ದವು. 13 ದಿನಗಳ ಕಾಲ ನಡೆದ ಈ ಯುದ್ಧ ಡಿಸೆಂಬರ್‌ 13ರ 1971ರಂದು ಆರಂಭವಾಗಿತ್ತು.  ಪೂರ್ವ ಪಾಕಿಸ್ತಾನ ಎಂದರೆ ಈಗಿನ ಬಾಂಗ್ಲಾದಲ್ಲಿ ನಡೆದ ಇಸ್ಲಾಮಾಬಾದ್‌ ವಿರುದ್ಧದ ಆಕ್ರೋಶ ಈ ಯುದ್ಧಕ್ಕೆ ಕಾರಣವಾಯಿತು. ಯುದ್ಧದ ನಂತರ ಪೂರ್ವ ಪಾಕಿಸ್ತಾನವೆನಿಸಿದ್ದ ಬಾಂಗ್ಲಾ, ಬಾಂಗ್ಲಾದೇಶವಾಗಿ ಸ್ವತಂತ್ರವಾಯಿತು. 

click me!