
ನವದೆಹಲಿ (ಸೆ.21) ಜಾತಿ ಗಣತಿ, ಮೀಸಲಾತಿ ವಿಚಾರಗಳು ಭಾರಿ ಕೋಲಾಹಲವನ್ನೇ ಸೃಷ್ಟಿಸುತ್ತಿದೆ. ಪ್ರತಿ ರಾಜ್ಯದಲ್ಲಿ ಮೀಸಲಾತಿ ವಿಚಾರದಲ್ಲಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಲೇ ಇರುತ್ತದೆ. ಇದಕ್ಕೆ ಕರ್ನಾಟಕ ಕೂಡ ಹೊರತಾಗಿಲ್ಲ. ದುರಂತ ಅಂದರೆ ಮೀಸಲಾತಿಯಲ್ಲಿ ಕಾಲಕ್ಕೆ ತಕ್ಕಂತೆ ಪರಿಷ್ಕರಣೆಯಾಗಲೇ ಇಲ್ಲ, ಬದಲಾಗಿ ಮೀಸಲಾತಿ ಪ್ರಮಾಣ ಏರಿಕೆ, ವಿಸ್ತರಣೆ ಮಾಡುವ ಸಂದರ್ಭಗಳೇ ಎದುರಾಗಿದೆ. ಇದೀಗ ಮೀಸಲಾತಿ ಕುರಿತು ಮಹಾರಾಷ್ಟ್ರದ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಮಹತ್ವದ ವಿಚಾರ ಮಂಡಿಸಿದ್ದಾರೆ. ಜಾತಿ ಜಾತಿಗೆ, ಸಮುದಾಯಕ್ಕೆ ಮೀಸಲಾತಿ ಕೊಡುವುದಲ್ಲ. ಒಂದು ಕುಟುಂಬಕ್ಕೆ ತಲತಲಾಂತರಗಳಿಂದ ಮೀಸಲಾತಿ ನೀಡುತ್ತಾ ಬರುವುದಲ್ಲ, ಯಾರಿಗೆ ಅಗತ್ಯವಿದೆ, ಯಾವ ಮಗುವಿಗೆ ನಿಜಕ್ಕೂ ಅವಶ್ಯಕತೆ ಇದೆ ಅನ್ನೋದು ಅರಿತು ಮೀಸಲಾತಿ ನೀಡಬೇಕು ಎಂದು ಸುಪ್ರೀಯಾ ಸುಳೆ ಹೇಳಿದ್ದಾರೆ.
ಮೀಸಲಾತಿ ಯಾರಿಗೆ ಕೊಡಬೇಕು? ನಾನು ಮೀಸಲಾತಿ ಕೇಳುವಂತಿಲ್ಲ. ಯಾಕೆಂದರೆ ನನ್ನ ಪೋಷಕರು ಶಿಕ್ಷಿತರಾಗಿದ್ದರು. ನನ್ನ ಮಕ್ಕಳು ಮೀಸಲಾತಿ ಕೇಳುವಂತಿಲ್ಲ, ಕಾರಣ ನಾನು ಶಿಕ್ಷಿತೆ, ನನ್ನ ಮಕ್ಕಳು ಉತ್ತಮ ಶಾಲೆಗೆ ಹೋಗುತ್ತಿದ್ದಾರೆ. ಇದರ ನಡುವೆ ನನಗೆ ಜಾತಿ ಇದೆ, ಮೀಸಲಾತಿಯ ಅವಕಾಶವಿದೆ ಎಂದು ಕೇಳಿದರೆ ನನಗೆ ನಾಚಿಕೆಯಾಗಬೇಕು ಎಂದು ಸುಪ್ರಿಯಾ ಸುಳೆ ಹೇಳಿದ್ದಾರೆ. ಒಂದು ವೇಳೆ ನನ್ನ ಮಗು ಮುಂಬೈನಲ್ಲಿ ಪ್ರತಿಷ್ಠಿತ ಶಾಲೆಗೆ ತೆರಳುತ್ತಿದೆ, ಅದೇ ದೂರದ ಹಳ್ಳಿಯಲ್ಲಿರುವ ಆರ್ಥಿಕವಾಗಿ ದುರ್ಬಲ ಮಗು ನನ್ನ ಮಗುವಿಗಿಂತ ಪ್ರತಿಭಾನ್ವಿತವಾಗಿದ್ದರೂ ಅಲ್ಲಿ ಮುಂಬೈ ರೀತಿಯ ಶಿಕ್ಷಣ, ವೇದಿಕೆ ಸಿಕ್ಕಿರುವುದಿಲ್ಲ. ಆ ಮಗುವಿಗೆ ಮೀಸಲಾತಿಯ ಅವಶ್ಯಕತೆ ಇದೆ. ಮೀಸಲಾತಿ ಆರ್ಥಿಕ ಶಕ್ತಿಯ ಆಧಾರದ ಮೇಲೆ ನೀಡಬೇಕು ಎಂದು ಸುಪ್ರಿಯಾ ಸುಳೆ ಎನ್‌ಡಿಟಿವಿ ಯುವ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಅಜಿತ್ ಆರೋಪಕ್ಕೆ ಸುಧಾಮೂರ್ತಿ ಹೆಸರನ್ನು ಎಳೆದು ತಂದ ಸಂಸದೆ ಸುಪ್ರಿಯಾ ಸುಳೆ
ಆರ್ಥಿಕ ಹಾಗೂ ಜಾತಿ ಆಧಾರಿತ ಮೀಸಲಾತಿಯಲ್ಲಿ ಯಾವುದು ಸರಿ ಅನ್ನೋ ಪ್ರಶ್ನೆಗೆ ಹಲವರು ಆರ್ಥಿಕ ಆಧಾರಿತ ಮೀಸಲಾತಿ ಸರಿ ಎಂದು ಉತ್ತರಿಸಿದ್ದಾರೆ. ಈ ಕುರಿತು ಎಲ್ಲಾ ವೇದಿಕೆಗಳಲ್ಲಿ ಚರ್ಚೆಯಾಗಬೇಕು. ಭಾರತೀಯ ನಾಗರೀಕರು, ದೇಶದ ಚಿಂತರು, ಯುವ ಸಮೂಹ, ಮಕ್ಕಳ ಅಭಿಪ್ರಾಯ ಸಂಗ್ರಹಿಸಬೇಕು. ಈ ಮೂಲಕ ಭಾರತದಲ್ಲಿ ಮೀಸಲಾತಿಯನ್ನು ಸಮಪರ್ಕವಾಗಿ ಅವಶ್ಯಕತೆ ಇದ್ದವರಿಗೆ ಸಿಗುವಂತೆ ಮಾಡಬೇಕು ಎಂದು ಸುಪ್ರೀಯಾ ಸುಳೆ ಹೇಳಿದ್ದಾರೆ.
ಸುಪ್ರಿಯಾ ಸುಳೆ ಹೇಳಿಕೆ ಕುರಿತು ಭಾರಿ ಚರ್ಚೆಯಾಗುತ್ತಿದೆ. ಹಲವು ಬಾರಿ ಈ ಹಿಂದೆಯೂ ಮೀಸಲಾತಿ ಕುರಿತು ಚರ್ಚೆಗಳಾಗಿವೆ. ಆದರೆ ಎಲ್ಲಾ ಪಕ್ಷಗಳು ಅಧಿಕಾರಕ್ಕೆ ಬಂದ ಬಳಿಕ ಸಮುದಾಯಗಳ ಮತ ಸೆಳೆಯಲು ಮೀಸಲಾತಿ ನೀಡುತ್ತಲೇ ಹೋಗಿದೆ. ಜಾತಿ, ಉಪಜಾತಿಗಳಿಗೆ ಮೀಸಲಾತಿ ವಿಸ್ತರಣೆ, ಮೀಸಲಾತಿ ಹೆಚ್ಚಳ ಮಾಡುತ್ತಲೇ ಹೋಗಿಗೆ. ಹಲವು ಸಮುದಾಯಗಳ ಹೋರಾಟಗಳಿಗೆ ಮಣಿದು ನಿರ್ಧಾರಗಳನ್ನು ತೆಗೆದುಕೊಂಡಿದೆ.
ಕೆಲಸ ಮಾಡೋಕೆ ಲೋಕಸಭೆಗಿಂತಾ ಬೆಸ್ಟ್ ಪ್ಲೇಸ್ ಇಲ್ಲಾ ಎಂದು 6 ಮಹಿಳೆಯರ ಜೊತೆ ಫೋಟೋ ಹಂಚಿಕೊಂಡಿದ್ದ ಶಶಿ ತರೂರ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ