
ನವದೆಹಲಿ (ಸೆ.21) ನವರಾತ್ರಿ ಹಬ್ಬಕ್ಕೆ ದೇಶದ ಪ್ರತಿಯೊಬ್ಬರಿಗೆ ಸಿಹಿ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶವನ್ನುದ್ದೇಶಿ ಮಾಡಿದ ಭಾಷಣದಲ್ಲಿ ಪ್ರಮುಖವಾಗಿ ನಾಳೆಯಿಂದ ಜಾರಿಯಾಗುವ ಜಿಎಸ್‌ಟಿ ಕುರಿತು ಮಾತನಾಡಿದ್ದಾರೆ. ನವರಾತ್ರಿ ಹಬ್ಬದ ಶುಭಾಶಯಗಳೊಂದಿಗೆ ಪ್ರಧಾನಿ ಮೋದಿ ತಮ್ಮ ಭಾಷಣ ಆರಂಭಿಸಿದ್ದರೆ. ನವರಾತ್ರಿಯೊಂದಿಗೆ ಭಾರತ ಆತ್ಮನಿರ್ಭರತೆಯೊಂದಿಗೆ ಸಾಗುವ ಮಹತ್ವದ ನಿರ್ಧಾರದೊಂದಿದೆ ಸಾಗುತ್ತಿದೆ. ನಾಳೆಯಿಂದ ಮುಂದಿನ ಪೀಳಿಗೆಯ ಜಿಎಸ್‌ಟಿ ಪರಿಷ್ಕರಣೆ ಜಾರಿಯಾಗುತ್ತಿದೆ. ನವರಾತ್ರಿಯಿಂದ ಹೊಸ ಜಿಎಸ್‌ಟಿ ನೀತಿ ಜಾರಿಯಾಗುತ್ತಿದೆ. ಹೊಸ ನೀತಿಯಿಂದ ನಿಮ್ಮ ಆರ್ಥಿಕತೆ ಸಶಕ್ತವಾಗಲಿದೆ. ವಸ್ತುಗಳನ್ನು ಖರೀದಿಸುವ ಸಾಮರ್ಥ್ಯ ಹೆಚ್ಚಾಗಲಿದೆ. ಬಡವರು, ಮಧ್ಯಮವರ್ಗ, ವ್ಯಾಪಾರಿ, ಮಹಿಳೆಯರು, ಉದ್ಯಮಗಳು ಸೇರಿದಂತೆ ಎಲ್ಲರಿಗೂ ಜಿಎಸ್‌ಟಿ ಕಡಿತ ಸಿಹಿಯನ್ನು ನೀಡಲಿದೆ ಎಂದು ಮೋದಿ ಹೇಳಿದ್ದಾರೆ.
ಈ ಪರಿಷ್ಕರಣೆ ಭಾರತದ ಬೆಳವಣಿಗೆ ವೇಗವನ್ನು ಮತ್ತಷ್ಟು ಹೆಚ್ಚಲಿದೆ. ಭಾರತದ ಆರ್ಥಿಕತೆಯನ್ನು ಬಲಿಷ್ಠಗೊಳಿಸಲಿದೆ. ಪ್ರತಿ ರಾಜ್ಯವನ್ನೂ ಸಬಲೀಕರಣ ಮಾಡಲಿದೆ. ನಮ್ಮ ದೇಶದ ಪ್ರತಿಯೊಬ್ಬರಿಗೂ ಈ ಜಿಎಸ್‌ಟಿ ಲಾಭ ಸಿಗಲಿದೆ. ಪ್ರತಿಯೊಬ್ಬರು ಹಲವು ತೆರಿಗೆ ನೀಡುತ್ತಾ ಹೈರಾಣಾಗಿದ್ದರು. ಎಲ್ಲಾ ತೆರಿಗೆಯಿಂದ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವ್ಯಾಪಾರ ವಹಿವಾಟು ಮಾಡಲು ತೀವ್ರ ಪರದಾಡಬೇಕಾಗಿತ್ತು. ಒಂದೊಂದು ರಾಜ್ಯದಲ್ಲಿ ಒಂದೊಂದು ತೆರಿಗೆ ಇತ್ತು.
ಹಲವು ವಸ್ತುಗಳ ಜಿಎಸ್‌ಟಿ ಶೂನ್ಯವಾಗುತ್ತಿದೆ. ಹಲವು ವಸ್ತುಗಳ ತೆರಿಗೆ ಶೇಕಡಾ 5ಕ್ಕೆ ಇಳಿಕೆಯಾಗುತ್ತಿದೆ. ಇದರಿಂದ ಪ್ರತಿಯೊಬ್ಬರಿಗೆ ಲಾಭವಾಗಲಿದೆ ಎಂದು ಮೋದಿ ಹೇಳಿದ್ದಾರೆ. 19 ನಿಮಿಷ ದೇಶದ ಜನತೆಯನ್ನುದ್ದೇಶಿ ಮೋದಿ ಭಾಷಣ ಮಾಡಿದ್ದಾರೆ. ಇದೇ ವೇಳೆ ಜಿಎಸ್‌ಟಿ ಲಾಭದ ಕುರಿತು, ಹೊಸ ಬದಲಾವಣೆ ಕುರಿತು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂಜೆ 5 ಗಂಟೆಗೆ ಜನತೆಯನ್ನುದ್ದೇಶಿ ಮಾತನಾಡಲಿದ್ದಾರೆ ಎಂದು ಪ್ರದಾನಿ ಕಾರ್ಯಾಲಯ ಟ್ವೀಟ್ ಮೂಲಕ ಖಚಿತಪಡಿಸಿತ್ತು. ಇದರ ಬೆನ್ನಲ್ಲೇ ಕುತೂಹಲ ಹೆಚ್ಚಾಗಿತ್ತು. ಪ್ರಧಾನಿ ಮೋದಿ ಯಾವ ವಿಚಾರದ ಕುರಿತು ಭಾಷಣ ಮಾಡಲಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಮೂಲಕ ಚರ್ಚೆಯಾಗಿತ್ತು. ಹಲವರು ಮೋದಿ ಭಾಷಣ ವಿಚಾರ ಊಹಿಸಿದ್ದರು. ಪ್ರಮುಖವಾಗಿ ನವರಾತ್ರಿ ಹಬ್ಬ (ಸೆ.21)ಆರಂಭಗೊಳ್ಳುತ್ತಿದೆ. ಇದೇ ವೇಳೆ ಹೊಸ ಜಿಎಸ್‌ಟಿ 2.0 ಜಾರಿಯಾಗುತ್ತಿದೆ. ಹಲವು ವಸ್ತುಗಳ ಮೇಲಿನ ಬೆಲೆ ಇಳಿಕೆಯಾಗುತ್ತಿದೆ. ಇದರ ನವರಾತ್ರಿ ಹಬ್ಬ ಹಾಗೂ ಜಿಎಸ್‌ಟಿ ಪರಿಷ್ಕರಣೆ ಕುರಿತು ಮೋದಿ ಮಾತನಾಡಲಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು.
ಪ್ರಧಾನಿ ಮೋದಿ ದೇಶವನ್ನುದ್ದೇಶಿ ಭಾಷಣ ಮಾಹಿತಿ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಪ್ರತಿಪಗಳು ವ್ಯಂಗ್ಯವಾಡಿದೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೊಸ ಹೆಚ್1ಬಿ ವೀಸಾ ಕುರಿತು ಮಾತನಾಡುತ್ತಾರಾ? ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು. ಮೋದಿ ಭಾಷಣದಲ್ಲಿ ಅಮೆರಿಕ ವಿಧಿಸಿದ ತೆರಿಗೆ ಕುರಿತು ಮಾತನಾಡುತ್ತಾರಾ? ಭಾರತ ಪಾಕಿಸ್ತಾನ ಯುದ್ಧದಲ್ಲಿ ಟ್ರಂಪ್ ಪಾತ್ರ ಸೇರಿದಂತೆ ಹಲವು ವಿಚಾರಗಳ ಕುರಿತು ಮೋದಿ ಮಾತನಾಡುತ್ತಾರಾ ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ