
ಮುಂಬೈ(ಅ.07): ಶಾರುಖ್ ಪುತ್ರನ(Shah Rukh Khan) ಬಂಧನದ ಬೆನ್ನಲ್ಲೇ, ಎನ್‌ಸಿಬಿ ಅಧಿಕಾರಿಗಳು(NCB Officers) ಕೇವಲ ಬಾಲಿವುಡ್(Bollywood) ಮಂದಿಯನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಮಾಧ್ಯಮಗಳಿಂದ ಸದಾ ದೂರ ಇರುವ ಎನ್‌ಸಿಬಿಯ ವಲಯ ನಿರ್ದೇಶಕ, ದಿಟ್ಟಅಧಿಕಾರಿ ಎಂದೇ ಖ್ಯಾತರಾದ ಸಮೀರ್ ವಾಂಖೇಡೆ(sameer Wankhede) ತಮ್ಮ ಇಲಾಖೆಯ ಕಾರ್ಯನಿರ್ವಹಣೆ ಕುರಿತು ಪ್ರತಿಕ್ರಿಯಿಸಿದ್ದಾರೆ.
ಕಳೆದ 10 ತಿಂಗಳಲ್ಲಿ ನಾವು ಮಾದಕ ವಸ್ತು ಕುರಿತು 105 ಕೇಸು ದಾಖಲಿಸಿದ್ದೇವೆ. ಅಂದರೆ ನಿತ್ಯ ಸರಾಸರಿ 10-15 ಕೇಸು. 310 ಜನರನ್ನು ಬಂಧಿಸಿದ್ದೇವೆ. ಕಳೆದ 2 ದಿನದಲ್ಲಿ ನಾವು 5 ಮತ್ತು 6 ಕೋಟಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದೇವೆ. ಅದರ ಬಗ್ಗೆ ಯಾರೂ ಮಾತನಾಡಿಲ್ಲ. ಬಾಲಿವುಡ್(Bollywood) ಮಂದಿಯೂ ಪ್ರತಿಕ್ರಿಯೆ ನೀಡಿಲ್ಲ. ಈ ವಿಷಯಗಳು ಯಾವುದೇ ಮಾದ್ಯಮಗಳಲ್ಲೂ ಸುದ್ದಿಯಾಗಿಲ್ಲ.
ಇನ್ನು ನಾವು ಬಂಧಿಸಿದ 310 ಜನರಲ್ಲಿ ಎಷ್ಟುಮಂದಿ ಬಾಲಿವುಡ್ ಜನರಿದ್ದಾರೆ? ದೊಡ್ಡ ಜನರ ಬಂಧನವಾಗುತ್ತಲೇ ಮಾಧ್ಯಮಗಳು ಸುದ್ದಿ ಮಾಡುತ್ತವೆ. ಇಂದು ಮಾಧ್ಯಮಗಳು ಆರ್ಯನ್ ಕುರಿತು ಸುದ್ದಿ ಪ್ರಕಟಿಸುತ್ತಲೇ ಎಲ್ಲರ ಗಮನ ನಮ್ಮತ್ತ ತಿರುಗಿದೆ. ಇದನ್ನು ನೋಡಿದರೆ ನಾವು ದೊಡ್ಡ ದೊಡ್ಡವರ ಮೇಲೆ ಮಾತ್ರ ದಾಳಿ ನಡೆಸುತ್ತೇವೆ ಎಂಬ ಅರ್ಥ ಬರುತ್ತದೆ. ವಿಷಯ ಹಾಗಿಲ್ಲದೇ ಇದ್ದರೂ, ನಾವು ಸುಮ್ಮನೆ ಟೀಕೆಗೆ ತುತ್ತಾಗುತ್ತೇವೆ.
ದಿನದಂತ್ಯಕ್ಕೆ ನಾವು ಕೇವಲ ನಮ್ಮ ಕೆಲಸ ಮಾಡಿರುತ್ತೇವೆ. ನಾನು ಕೇವಲ ಕಾನೂನು ಜಾರಿ ಮಾಡುತ್ತಿರುತ್ತೇವೆ. ಕಾನೂನು ಎಲ್ಲರಿಗೂ ಒಂದೇ. ಹಾಗಿದ್ದಾಗ ನಾವೇಕೆ ಕಾನೂನು ಪಾಲಿಸದೇ ಸುಲಭವಾಗಿ ತಪ್ಪಿಸಿಕೊಳ್ಳುವ ಸೆಲೆಬ್ರಿಟಿಗಳನ್ನು ಸುಮ್ಮನೆ ಬಿಡಬೇಕು? ಅವರು ಫೇಮಸ್ ಎಂಬ ಒಂದೇ ಕಾರಣ ಅವರಿಗೇನು ಕಾನೂನು ಮುರಿಯಲು ಹಕ್ಕು ಕಲ್ಪಿಸುತ್ತದೆಯೇ? ಯಾರಾದರೂ ಖ್ಯಾತನಾಮರು ಕಾನೂನು ಉಲ್ಲಂಘನೆ ಮಾಡಿದರೆ ನಾವು ಏನೂ ಮಾಡದೆ ಸುಮ್ಮನೆ ಕೂರಬೇಕೆ? ನಾನು ಕೇವಲ ಮಾದಕ ವಸ್ತು ಮಾರಾಟ ಮಾಡುವವರ ಮೇಲೆ ಮತ್ತು ಕೊಳಚೆ ಪ್ರದೇಶಗಳ ಮೇಲೆ ಮಾತ್ರವೇ ದಾಳಿ ನಡೆಸಬೇಕೇ? ಅದು ಹಾಗೆಲ್ಲಾ ಆಗಲು ಸಾಧ್ಯವಿಲ್ಲ.
ನನಗೆ ಖಚಿತ ಮಾಹಿತಿ ಸಿಕ್ಕಿ, ಅಲ್ಲಿ ಕಾನೂನು ಉಲ್ಲಂಘನೆ ಆಗಿದ್ದು ಖಚಿತವಾದರೆ, ನಾವು ದಾಳಿ ನಡೆಸುತ್ತೇವೆ. ಹಾಗೆ ಮಾಡದೇ ನಾವು ಶ್ರೀಮಂತರು, ಶಕ್ತಿಶಾಲಿಗಳ ಒತ್ತಡಕ್ಕೆ ಒಳಗಾಗಿ ಸುಮ್ಮನಾಗಬೇಕೆ? ಹಾಗೆ ಮಾಡಿದಲ್ಲಿ ಈ ದೇಶದ ಜನರು ಈ ಬಗ್ಗೆ ಸಂತಸ ಪಡುತ್ತಾರೆಯೇ? ಎಂದು ಸಮೀರ್ ತಮ್ಮ ಟೀಕಾಕಾರರನ್ನು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ