ಬೆಂಗಳೂರು (ಜುಲೈ 7): ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗಿಗಳ ಕೆಲಸದ ಅವಧಿಯನ್ನು 10 ಗಂಟೆಗೆ ನಿಗದಿ ಪಡಿಸುವ ಕಾನೂನಿಗೆ ತೆಲಂಗಾಣ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯದಲ್ಲಿ ಈ ವಿಚಾರವಿನ್ನೂ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ತೆಲಂಗಾಣ ಸರ್ಕಾರ ಈ ನಿರ್ಧಾರ ರಾಜ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
11:01 PM (IST) Jul 07
PM Narendra Modi Gifts: ವಿದೇಶ ಪ್ರವಾಸದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ನಾಯಕರಿಗೆ ನೀಡಿರುವ ವಿಶೇಷ ಕಾಣಿಕೆಗಳು ಯಾವವು ಎಂದು ನೋಡೋಣ ಬನ್ನಿ.
07:47 PM (IST) Jul 07
ವಿಮಾನ ಸಿಬ್ಬಂದಿಯಿಂದ ಶ್ರದ್ಧಾ ಕಪೂರ್ ಅವರ ವೈಯಕ್ತಿಕ ವಿಡಿಯೋ ರಹಸ್ಯವಾಗಿ ಚಿತ್ರೀಕರಿಸಿದ ಘಟನೆಗೆ ರವೀನಾ ಟಂಡನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ಗೌಪ್ಯತೆಯನ್ನು ಗೌರವಿಸುವಂತೆ ಅವರು ಮನವಿ ಮಾಡಿದ್ದಾರೆ.
06:38 PM (IST) Jul 07
ಗಾಜಿಯಾಬಾದ್‌ನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪುತ್ರಿಯಾಗಿರುವ ಸೊಸೆಯೊಬ್ಬಳು ಅತ್ತೆಯ ಮೇಲೆ ಹಲ್ಲೆ ನಡೆಸಿ ಎಳೆದಾಡಿದ ಘಟನೆ ವರದಿಯಾಗಿದೆ.
05:30 PM (IST) Jul 07
ಗಂಡನ ಜೊತೆ ಜಗಳವಾಡಿ ಮನೆ ಬಿಟ್ಟು ಬಂದ ಮಹಿಳೆಯ ಮೇಲೆ ರೈಲ್ವೆ ನಿಲ್ದಾಣದಲ್ಲಿ ಮೂವರು ವ್ಯಕ್ತಿಗಳು ಅತ್ಯಾಚಾ*ರ ಎಸಗಿ, ರೈಲು ಹಳಿ ಮೇಲೆ ಬಿಟ್ಟು ಹೋಗಿದ್ದಾರೆ. ರೈಲು ಡಿಕ್ಕಿ ಹೊಡೆದು ಮಹಿಳೆಯ ಕಾಲು ತುಂಡಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
04:44 PM (IST) Jul 07
6 ವರ್ಷದ ಬಾಲಕಿಯನ್ನು 45 ವರ್ಷದ ವ್ಯಕ್ತಿಯೊಬ್ಬ ಮದುವೆಯಾಗಲು ಮುಂದಾದ ಘಟನೆ ಅಫ್ಘಾನಿಸ್ತಾನದಲ್ಲಿ ನಡೆದಿದೆ. ತಾಲಿಬಾನ್ ಪಡೆ ಈ ವಿವಾಹವನ್ನು ತಡೆದು, ಬಾಲಕಿಗೆ 9 ವರ್ಷ ತುಂಬುವವರೆಗೂ ಕಾಯುವಂತೆ ಸೂಚಿಸಿದೆ. ಬಡತನದಿಂದಾಗಿ ಕುಟುಂಬವು ಬಾಲಕಿ ಮಾರಾಟ ಮಾಡಿದ್ದು, ಈ ವ್ಯಕ್ತಿಗೆ ಇಬ್ಬರು ಪತ್ನಿಯರಿದ್ದಾರೆ.
03:28 PM (IST) Jul 07
01:05 PM (IST) Jul 07
ಪಾಕಿಸ್ತಾನ ಪರ ಗೂಢಚರ್ಯೆ ಆರೋಪದಲ್ಲಿ ಬಂಧಿತಳಾಗಿರುವ ಟ್ರಾವೆಲ್ ವ್ಲಾಗರ್ ಜ್ಯೋತಿ ಮಲ್ಹೋತ್ರಾಗೆ ಕೇರಳ ಪ್ರವಾಸೋದ್ಯಮ ಇಲಾಖೆ ಆತಿಥ್ಯ ನೀಡಿದ್ದ ವಿಚಾರ ಈಗ ಬಹಿರಂಗವಾಗಿದೆ.
11:09 AM (IST) Jul 07
ಕಾಂತಾರ ಚಿತ್ರತಂಡ ಕೂಡಾ ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದು, ಸಿನಿಮಾದ ಹೊಸ ಪೋಸ್ಟರನ್ನು ರಿಲೀಸ್ ಮಾಡಿದೆ. ಜೊತೆಗೆ ಚಿತ್ರದ ಬಗ್ಗೆ ದೊಡ್ಡ ಅಪ್ಡೇಟ್ ಅನ್ನು ನೀಡಿದೆ.
10:23 AM (IST) Jul 07
07:45 AM (IST) Jul 07
ವಾಣಿಜ್ಯ ಸಂಸ್ಥೆಗಳಲ್ಲಿ ಉದ್ಯೋಗಿಗಳ ಕೆಲಸದ ಅವಧಿಯನ್ನು 10 ಗಂಟೆಗೆ ನಿಗದಿ ಪಡಿಸುವ ಕಾನೂನಿಗೆ ತೆಲಂಗಾಣ ಸರ್ಕಾರ ಅನುಮೋದನೆ ನೀಡಿದೆ.
07:45 AM (IST) Jul 07
ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ದೂರವಾಗಿದ್ದ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ‘ದ ಅಮೆರಿಕನ್ ಪಾರ್ಟಿ’ ಎಂಬ ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಘೋಷಣೆ ಮಾಡಿದ್ದಾರೆ.
07:44 AM (IST) Jul 07
ಭಾರತ-ಪಾಕ್ ಸಂಘರ್ಷದ ಬಳಿಕ ರಫೇಲ್ ಯುದ್ಧ ವಿಮಾನಗಳ ಕುರಿತು ತಪ್ಪು ಅಭಿಪ್ರಾಯ ಹರಡುವ ಕೆಲಸಕ್ಕೆ ಚೀನಾ ಕೈಹಾಕಿದೆ. ಇದಕ್ಕಾಗಿ ತನ್ನ ರಾಯಭಾರ ಕಚೇರಿಗಳನ್ನೇ ಬಳಸಿಕೊಳ್ಳುತ್ತಿದೆ.
07:44 AM (IST) Jul 07
ಸಿಖ್ಖರ ಪವಿತ್ರ ಗ್ರಂಥ ಗುರುಗ್ರಂಥ ಸಾಹಿಬ್‌ಗೆ ಅಪಚಾರವೆಸಗುವ ಘಟನೆಗಳು ಪದೇ ಪದೇ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ, ಪಂಜಾಬ್ ಸರ್ಕಾರವು ಧರ್ಮಗ್ರಂಥಗಳಿಗೆ ಹಾನಿ ಮಾಡುವ ಅಪರಾಧಿಗಳಿಗೆ ಜೀವಾವಧಿ ಅಥವಾ ಗಲ್ಲುಶಿಕ್ಷೆ ವಿಧಿಸುವ ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ.
07:44 AM (IST) Jul 07
ವಿಶ್ವಸಂಸ್ಥೆ ನೀತಿ ನಿರ್ಧಾರ ಕೈಗೊಳ್ಳುವ ಜಾಗತಿಕ ಸಂಸ್ಥೆಗಳಲ್ಲಿ ಗ್ಲೋಬಲ್ ಸೌತ್ ಎಂದು ಕರೆಯಲಾಗುವ ದೇಶಗಳಿಗೆ ಸ್ಥಾನ ಕಲ್ಪಿಸುವ ಕುರಿತು ಬಲವಾದ ವಾದ ಮಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ನಾವಿಲ್ಲದ ಜಾಗತಿಕ ಸಂಘಟನೆಗಳು ನೆಟ್ವರ್ಕ್ ಇಲ್ಲದ ಸಿಮ್ ಇರುವ ಮೊಬೈಲ್‌ನಂತೆ ಎಂದು ವ್ಯಂಗ್ಯ
07:43 AM (IST) Jul 07
ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ನಿವೃತ್ತಿ ಬಳಿಕವೂ 8 ತಿಂಗಳಿಂದ ತಮಗೆ ಈ ಹಿಂದೆ ನೀಡಿದ್ದ ಅಧಿಕೃತ ಸರ್ಕಾರಿ ವಾಸದಲ್ಲಿ ವಾಸವಿದ್ದು ಅವರನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್‌ನ ಆಡಳಿತ ವಿಭಾಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
07:43 AM (IST) Jul 07
ನಿಜಾಮರ ಕಾಲದಿಂದ ಹೈದರಾಬಾದ್‌ನಲ್ಲಿ ನಡೆದು ಬಂದಿರುವ ಪ್ರಸಿದ್ಧ ಮೊಹರಂ ಮೆರವಣಿಗೆಯ ಆಲಂ ಹೊರಲು ಈ ಬಾರಿ ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮೀ ಹೆಸರಿನ ಆನೆಯನ್ನು ಬಳಸಲಾಗಿದೆ.
07:43 AM (IST) Jul 07
ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೂ.14ರಂದು ತುರ್ತು ಲ್ಯಾಂಡ್ ಆಗಿರುವ ಬ್ರಿಟನ್ ನೌಕಾಪಡೆಗೆ ಸೇರಿದ ಅತ್ಯಾಧುನಿಕ ಎಫ್-35ಬಿ ಯುದ್ಧವಿಮಾನದ ಪರಿಶೀಲನೆಗೆ ಇದೀಗ ಬ್ರಿಟನ್ ಇದೀಗ ವಿಶೇಷ ತಜ್ಞರನ್ನು ಕಳುಹಿಸಿಕೊಟ್ಟಿದೆ.
07:42 AM (IST) Jul 07
ಆಕ್ಸಿಯೋಂ-4 ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ಕ್ಕೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ, ನೀರುಕರಡಿ (ವಾಯೇಜರ್ ಟಾರ್ಡಿಗ್ರೇಡ್) ಪ್ರಯೋಗ ಪೂರ್ಣಗೊಳಿಸಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಈ ಪ್ರಯೋಗವನ್ನು ಸಿದ್ಧಪಡಿಸಿತ್ತು.
07:42 AM (IST) Jul 07
ಬೆಂಗಳೂರು, ದೆಹಲಿಯಲ್ಲಿ ಹೈಪರ್‌ಲೂಪ್, ಮೆಟ್ರಿನೋ ಪಾಡ್ ಟ್ಯಾಕ್ಸಿ, ಮತ್ತು ಪಿಲ್ಲರ್ ಆಧಾರಿತ ಸಮೂಹ ಸಾರಿಗೆ ವ್ಯವಸ್ಥೆ ಹಾಗೂ 135 ಸೀಟುಗಳ ವಿದ್ಯುತ್‌ಚಾಲಿತ ತ್ವರಿತ ಸಮೂಹ ಸಾರಿಗೆ ಬಸ್ ಪರಿಚಯಿಸಲು ಉದ್ದೇಶಿಸಿರುವುದಾಗಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.