2020ರ ಹೊಸ ವರ್ಷವನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದೆ. ಈ ವೇಳೆ ಪ್ರಧಾನಿ ಮೋದಿ ಸಂದೇಶ ರವಾನಿಸಿದ್ದಾರೆ. ಹೊಸ ವರ್ಷದ ಸಂಭ್ರಮದಲ್ಲಿ ಕಿಚ್ಚ ಸುದೀಪ್, ರಾಕಿ ಬಾಯ್ ಯಶ್, ನ್ಯೂ ಇಯರ್ ಪಾರ್ಟಿಯಲ್ಲಿ ಸಚಿವರ ಡ್ಯಾನ್ಸ್, ಒಂದೇ ದಿನ 70 ಕೋಟಿ ಮದ್ಯ ಮಾರಾಟ ಸೇರಿದಂತೆ ಜನವರಿ 1ರ ಟಾಪ್ 10 ಸುದ್ದಿ ಇಲ್ಲಿವೆ.
ಹೊಸವರ್ಷಕ್ಕೆ ಪ್ರಧಾನಿ ಮೋದಿ ಶುಭಾಶಯ; ಮಹತ್ವದ ಸಂದೇಶ
ಹೊಸ ವರ್ಷವನ್ನು ಭಾರತ ಅದ್ದೂರಿಯಾಗಿ ಸ್ವಾಗತಿಸಿದೆ. ಇದೇ ಸಂದರ್ಭದಲ್ಲಿ, ಪ್ರಧಾನಿ ಮೋದಿ ಟ್ವಿಟರ್ ಮೂಲಕ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಇದೇ ಸಂದರ್ಭದಲ್ಲಿ, 130 ಕೋಟಿ ಭಾರತೀಯರಿಗೆ ಮಹತ್ವದ ಸಂದೇಶವನ್ನು ನೀಡಿದ್ದಾರೆ.
ನಿನ್ನೆ ಒಂದೇ ದಿನ 70 ಕೋಟಿ ಮದ್ಯ ಮಾರಾಟ!
ಹೊಸ ವರ್ಷ 2020ರ ಸ್ವಾಗತ ಹಾಗೂ ಸಂಭ್ರಮಾಚರಣೆಯಲ್ಲಿ ಯಾವ ವ್ಯಾಪಾರ, ವಹಿವಾಟು ಕಡಿಮೆಯಾಗಿದೆಯೋ ಏನೋ ಗೊತ್ತಿಲ್ಲ. ಆದರೆ, ಮದ್ಯದ ಗಮ್ಮತ್ತೇನೂ ಕಡಿಮೆಯಾಗಿಲ್ಲ. ಡಿ.31ರ ಒಂದೇ ದಿನ ಬರೋಬ್ಬರಿ .70 ಕೋಟಿಗೂ ಹೆಚ್ಚಿನ ಮದ್ಯ ಮಾರಾಟವಾಗಿದೆ ಎಂದು ಅಂದಾಜಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ನಾಯಕ ಎಂದ ಬಿಜೆಪಿ ಶಾಸಕ!
ಮಾಜಿ ಸಿಎಂ ಸಿದ್ದರಾಮಯ್ಯ ಒಳ್ಳೆಯ ಮನುಷ್ಯ, ಇಂದಿಗೂ ಅವರು ನಮ್ಮ ನಾಯಕರು. ಮುಂದೇನಾಗುತ್ತದೆಯೋ ನೋಡೋಣ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೋಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ನ್ಯೂ ಇಯರ್ ಸೆಲೆಬ್ರೆಷನ್: ಸಖತ್ ಡ್ಯಾನ್ಸ್ ಮಾಡಿದ ಸಚಿವ ಪ್ರಭು ಚವ್ಹಾಣ್
ಸಚಿವ ಪ್ರಭು ಚವ್ಹಾಣ್ ಸಖತ್ ಡ್ಯಾನ್ಸ್ ಮಾಡುವ ಮೂಲಕ ಹೊಸ ವರ್ಷವನ್ನ ಸ್ವಾಗತಿಸಿದ್ದಾರೆ. ಜಿಲ್ಲೆಯ ಔರಾದ್ ತಾಲೂಕಿನ ಘಮಸುಬಾಯಿ ತಾಂಡದ ಅವರ ನಿವಾಸದಲ್ಲಿ ತಡ ರಾತ್ರಿ ಡಿಜೆ ಸೌಂಡ್‌ಗೆ ಮೈ ಮರೆತು ನೃತ್ಯ ಮಾಡಿ ಫುಲ್ ಎಂಜಾಯ್ ಮಾಡಿದ್ದಾರೆ.
ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ ವಿರುಷ್ಕಾ ಜೋಡಿ
ಪಾರ್ಟಿ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಅನುಷ್ಕಾ ಶರ್ಮಾ ಅಭಿಮಾನಿಗಳಿಗೆ ಹೊಸವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿರುವ ವಿರಾಟ್ ಕೊಹ್ಲಿ, ತನ್ನ ಅಭಿಮಾನಿಗಳಿಗೆ ಮುಂಚಿತವಾಗಿಯೇ ವಿಡಿಯೋ ಮೂಲಕ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.
ನಿಮ್ಮ ಗಮನಕ್ಕೆ: ಸೀಜ್ ಮಾಡಿದ ಮಲ್ಯ ಆಸ್ತಿ ಏನ್ಮಾಡಬೇಕೆಂದು ಹೇಳಿದ ಕೋರ್ಟ್!
ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಜಪ್ತಿ ಮಾಡಿರುವ ಆಸ್ತಿಯನ್ನು ಹರಾಜಿಗೆ ಹಾಕುವಂತೆ ಬ್ಯಾಂಕ್‌ಗಳಿಗೆ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ದಾಖಲೆ ಬರೆದ ಡ್ರಿಂಕ್ & ಡ್ರೈವ್ ಕೇಸ್
ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಂತೂ ಪಾರ್ಟಿ ಸೆಲೆಬ್ರೇಷನ್ ಜೋರಾಗಿತ್ತು. ಪಾರ್ಟಿಯಲ್ಲಿ ಎಣ್ಣೆ ಹೊಡೆದು ವಾಹನ ಚಲಾಯಿಸಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಬ್ರಿಗೇಡ್ ರಸ್ತೆಯಲ್ಲಿ ಮಂಗಳಮುಖಿಯರ ರಂಪಾಟ, ಬಟ್ಟೆ ಬಿಚ್ಚಲು ಯತ್ನ
ಬ್ರಿಗೇಡ್ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಮಂಗಳಮುಖಿಯರು ರಂಪಾಟ ನಡೆಸಿರುವ ಘಟನೆ ನಡೆದಿದೆ. ಪ್ರತಿವರ್ಷವೂ ಸಹ ಒಂದಿಲ್ಲೊಂದು ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಇದನ್ನು ತಡೆಗಟ್ಟಲು ಈ ಬಾರಿ ಸಾಕಷ್ಟು ಪುಲ್ ಭದ್ರತೆ ಕೈಗೊಂಡಿದ್ದರು. ಆದ್ರೂ ಮಂಗಳಮುಖಿಯರು ರಂಪಾಟ ಮಾಡಿದ್ದಾರೆ.
ಹೊಸ ವರ್ಷಕ್ಕೆ ಕಿಚ್ಚ ಸುದೀಪ್ ಅದ್ಭುತ ಸಂದೇಶ ! ಏನದು ಕೇಳಿಸಿಕೊಳ್ಳಿ!
ಹೊಸ ವರ್ಷಕ್ಕೆ ಕಿಚ್ಚ ಸುದೀಪ್ ಶುಭಾಶಯಗಳನ್ನು ಕೋರಿದ್ದಾರೆ. '2020 ಗೆ ಹೆಜ್ಜೆಯಿಡುವ ಮುನ್ನ ಈ ವರ್ಷದ ನಿಮ್ಮ ಹೆಜ್ಜೆಗುರುತುಗಳತ್ತ ಒಮ್ಮೆ ಕಣ್ಣಾಯಿಸಿ ನೋಡಿ. ಈ ವರ್ಷದಲ್ಲಿ ನೀವು ಕಳೆದ ಅಮೂಲ್ಯ ಕ್ಷಣಗಳು ಮತ್ತು ಜೊತೆಯಾದ ವ್ಯಕ್ತಿಗಳು! ನೀವು ಕ್ಷಮೆ ಕೇಳಬೇಕಾದವರು ಮತ್ತು ನಿಮ್ಮಿಂದ ಕ್ಷಮೆಗೆ ಕಾದಿರುವವರು ಸೇರಿದಂತೆ ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ.
ಕೆಜಿಎಫ್ ಸಾಂಗ್‌ಗೆ ಅಭಿಮಾನಿಗಳ ಜೊತೆ ರಾಕಿಭಾಯ್ ಸ್ಟೆಪ್; ಇದು ನ್ಯೂ ಇಯರ್ ಸೆಲಬ್ರೇಶನ್ ಜೋಶ್!
ಕೆಜಿಎಫ್ ಸಿನಿಮಾ ಸೂಪರ್ ಡೂಪರ್ ಹಿಟ್ ಆದ ನಂತರ ಕೆಜಿಎಫ್ 2 ತೆರೆಗೆ ಬರಲು ಸಿದ್ಧವಾಗಿದೆ. ಕೆಜಿಎಫ್‌ಗಿಂತ ಭಾರೀ ನಿರೀಕ್ಷೆ ಮೂಡಿಸುತ್ತಿದೆ. ಸದ್ಯ ರಾಕಿಭಾಯ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ಬ್ಯುಸಿ ಶೆಡ್ಯೂಲ್ ನಡುವೆ ಸುವರ್ಣ ನ್ಯೂಸ್ ಜೊತೆ ಹೊಸ ವರ್ಷವನ್ನು ಆಚರಿಸಿಕೊಂಡಿದ್ದಾರೆ. ಕೆಜಿಎಫ್ -2 ಬಗ್ಗೆ, ಮುಂದಿನ ಸಿನಿಮಾಗಳ ಬಗ್ಗೆ, ಪರ್ಸನಲ್ ಲೈಫ್ ಬಗ್ಗೆ ಮಾತನಾಡಿದ್ದಾರೆ.