ರಾಜಕೀಯದಿಂದ ದೂರ ಇರ್ತಿವಿ: ಸಿಡಿಎಸ್ ಬಿಪಿನ್ ರಾವತ್!

By Suvarna NewsFirst Published Jan 1, 2020, 12:31 PM IST
Highlights

'ದೇಶದ ರಾಜಕೀಯ ವಿದ್ಯಮಾನಗಳಿಂದ ದೂರ'| ನೂತನ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಭರವಸೆ| 'ಸೇನಾಪಡೆಗಳು ಸರ್ಕಾರದ ನಿರ್ದೇಶನಗಳನ್ನು ಪಾಲನೆ ಮಾಡುತ್ತವೆ'|ಸಿಡಿಎಸ್ ಕೂಡ ರಾಜಕೀಯದಿಂದ ಅಂತರ ಕಾಯ್ದುಕೊಳ್ಳಲಿದೆ ಎಂದ ರಾವತ್| ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಟೀಕಿಸಿದ್ದ ಬಿಪಿನ್ ರಾವತ್| ಬಿಪಿನ್ ರಾವತ್ ವಿರುದ್ಧ ಮುಗಿಬಿದ್ದಿದ್ದ ಪ್ರತಿಪಕ್ಷಗಳು|

ನವದೆಹಲಿ(ಜ.01): ದೇಶದ ರಾಜಕೀಯ ವಿದ್ಯಮಾನಗಳಿಂದ ದೂರ ಇದ್ದು, ದೇಶದ ರಕ್ಷಣೆ ಕುರಿತು ಸರ್ಕಾರಕ್ಕೆ ಅಗತ್ಯ ಸಲಹೆಯನ್ನಷ್ಟೇ ನೀಡುವುದಾಗಿ ನೂತನ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಸ್ಪಷ್ಟಪಡಿಸಿದ್ದಾರೆ.

ಸರ್ಕಾರದ ನಿರ್ದೇಶನಗಳನ್ನು ಪಾಲನೆ ಮಾಡುವ ಸೇನಾಪಡೆಗಳು ರಾಜಕೀಯದಿಂದ ದೂರವಿರುತ್ತವೆ. ಅದೇ ರೀತಿ ಸಿಡಿಎಸ್ ಕೂಡ ರಾಜಕೀಯದಿಂದ ಅಂತರ ಕಾಯ್ದುಕೊಳ್ಳಲಿದೆ ಎಂದು ಬಿಪಿನ್ ರಾವತ್ ಹೇಳಿದರು. 

Chief of Defence Staff(CDS) General Bipin Rawat on allegations that he is politically inclined: We stay far away from politics, very far. We have to work according to the directions of the Government in power pic.twitter.com/CYQnp3C9o6

— ANI (@ANI)

ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ರಾವತ್, ಸ್ಮಾರಕಕ್ಕೆ ಹೂಗುಚ್ಛ ಇಡುವ ಮೂಲಕ ಗೌರವ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಿಂದ ಸಶಸ್ತ್ರ ಪಡೆಗಳು ದೂರ ಇದ್ದು ಸರ್ಕಾರದ ನಿರ್ದೇಶನಗಳನ್ನು ಮಾತ್ರ ಅನುಸರಿಸುತ್ತವೆ ಎಂದು ಹೇಳಿದರು.

ರಕ್ಷಣಾ ಇಲಾಖೆ ಮೂರು ಸೇನಾಪಡೆಗಳನ್ನು ಸಂಯೋಜನೆಗೊಳ್ಳುವಂತೆ ಮಾಡಿ, ಒಂದು ತಂಡದಂತೆ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ರಾಜಕೀಯದಿದ ನಾವು ದೂರ ಇರುತ್ತೇವೆ. ಸರ್ಕಾರ ಹೇಳಿದಂತೆ, ನಿರ್ದೇಶನದಂತೆ ನಡೆಯುತ್ತೇವೆ ಎಂದು ರಾವತ್ ಸ್ಪಷ್ಟಪಡಿಸಿದರು.

Chief of Defence Staff(CDS) General Bipin Rawat: All the three services will work as a team. As per the task given to the Chief of Defence Staff we have to enhance integration and do better resource management. pic.twitter.com/QjuIxuGRHD

— ANI (@ANI)

ಮೂರು ಸೇನಾಪಡೆಗಳಿಗೆ ಹಂಚಿಕೆಯಾಗುವ ಸಂಪನ್ಮೂಲಗಳನ್ನು ಉತ್ತಮ ಹಾಗೂ ಸೂಕ್ತ ಬಳಕೆ ಮಾಡಿಕೊಳ್ಳುವತ್ತ ಗಮನಹರಿಸಲಾಗುವುದು ಎಂದು ರಾವತ್ ಭರವಸೆ ನೀಡಿದರು. 

ಬೆಂಕಿ ಹಚ್ಚುವವರು ನಾಯಕರಲ್ಲ ಎಂಬ ಸೇನಾ ಮುಖ್ಯಸ್ಥರ ಹೇಳಿಕೆಗೆ ವಿಪಕ್ಷಗಳ ಆಕ್ಷೇಪ!

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟವನ್ನು ಟೀಕಿಸಿದ್ದ ಬಿಪಿನ್ ರಾವತ್, ಕಲ್ಲು ಹೊಡೆಸುವವರು ನಾಯಕಎಉ ಎಂದು ಕರೆಸಿಕೊಳ್ಳಲು ಅಯೋಗ್ಯರು ಎಂದು ಕಿಡಿಕಾರಿದ್ದರು.

Delhi: Chief of Defence Staff(CDS) General Bipin Rawat receives guard of honour pic.twitter.com/Wakszy5eex

— ANI (@ANI)

ಬಿಪಿನ್ ರಾವತ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದ ಪ್ರತಿಪಕ್ಷಗಳು, ಸೇನಾ ಮುಖ್ಯಸ್ಥರು ತಮ್ಮ ಕಾರ್ಯವ್ಯಾಪ್ತಿ ಅರಿತು ಮಾತನಾಡಬೇಕು ಎಂದು ಹರಿಹಾಯ್ದಿದ್ದನ್ನು ಇಲ್ಲಿ ಸ್ಮರಿಸಬಹುದು.


ನಿಮಗೆ ವಾರ್ ಮಾಡುವುದು ಹೇಗೆಂದು ಹೇಳಿಕೊಟ್ಟರೆ..ರಾವತ್ ವಿರುದ್ಧ ಚಿದಂಬರಂ ವಾಗ್ದಾಳಿ!

click me!