ಸಿದ್ಧಗಂಗಾ ಮಠದಲ್ಲಿ ಮೋದಿ ಗುಡುಗು,ಆನ್‌ಲೈಟ್ ವ್ಯಾಪರಕ್ಕೆ ಜಿಯೋ ದೌಡು; ಜ.02ರ ಟಾಪ್ 10 ಸುದ್ದಿ!

Suvarna News   | Asianet News
Published : Jan 02, 2020, 05:28 PM ISTUpdated : Jan 02, 2020, 05:31 PM IST
ಸಿದ್ಧಗಂಗಾ ಮಠದಲ್ಲಿ ಮೋದಿ ಗುಡುಗು,ಆನ್‌ಲೈಟ್ ವ್ಯಾಪರಕ್ಕೆ ಜಿಯೋ ದೌಡು; ಜ.02ರ ಟಾಪ್ 10 ಸುದ್ದಿ!

ಸಾರಾಂಶ

ತುಮಕೂರಿನ ಸಿದ್ದಗಂಗಾ ಮಠದ ಆವರಣದಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ಆಗಮಿಸಿದ ಮೋದಿ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತುಮಕೂರಿನಲ್ಲಿ ಮೋದಿ ಭಾಷಣದ ಮೂಲಕ ಟೀಕೆಗೆ ತಿರುಗೇಟು ನೀಡಿದ್ದಾರೆ. ಆಲ್ರೌಂಡರ್ ಹಾರ್ಜಿಕ್ ಪಾಂಡ್ಯ ಎಂಗೇಜ್ಮೆಂಟ್‌ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೊಸ ವರ್ಷದ ಆರಂಭದಲ್ಲಿ ಅಭಿಮಾನಿಗಳಿಗೆ ಯಶ್ ದಂಪತಿ ಕುತೂಹಲಕ್ಕೆ ಉತ್ತರ ನೀಡಿದ್ದಾರೆ. 

ಪಾಕಿಸ್ತಾನ ಪ್ರಶ್ನಿಸದ ಕಾಂಗ್ರೆಸ್ ನನ್ನನ್ನು ಪ್ರಶ್ನಿಸುತ್ತದೆ: ಮೋದಿ ಗುಡುಗು!...

ಇಲ್ಲಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ,  ಶಿವಕುಮಾರ್ ಶ್ರೀಗಳ ಗದ್ದುಗೆಗೆ ಆರತಿ ಬೆಳಗವು ಮೂಲಕ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಹೊಸ ವರ್ಷದಲ್ಲಿ ನವಭಾರತದ ಕನಸು ನನಸಾಗಲಿ ಎಂದು ಹಾರೈಸಿದರು.


ಭದ್ರತೆ ರಹಸ್ಯ: 15 ನಿಮಿಷ ಮುಂಚೆ ಪ್ರಧಾನಿ ಮೋದಿ ಆಗಮನ!

ಪ್ರಧಾನಿ ನರೇಂದ್ರ ಮೋದಿ ಕಲ್ಪತರು ನಾಡಿಗೆ ಆಗಮಿಸಿದ್ದಾರೆ. ಸಿದ್ಧಗಂಗಾ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಮೋದಿ,  ನಿಗದಿತ ಸಮಯಕ್ಕಿಂತ 15 ನಿಮಿಷ ಮೊದಲೇ ಆಗಮಿಸಿರುವುದು ಹಲವರನ್ನು ಅಚ್ಚರಿಗೀಡು ಮಾಡಿದೆ. ಆದರೆ ಇದರ ಹಿಂದೆ ಒಂದು ಕಾರಣವಿದೆ.

ಗಣರಾಜ್ಯೋತ್ಸವಕ್ಕೆ ಪ.ಬಂಗಾಳ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರ: ಸಿಎಎ ವಿರೋಧಿ ನಿಲುವು ಕಾರಣವೇ?

ಗಣರಾಜ್ಯೋತ್ಸವ ಪರೇಡ್‌ಗಾಗಿ ಪ.ಬಂಗಾಳ ಸಲ್ಲಿಸಿದ್ದ ಸ್ತಬ್ಧಚಿತ್ರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.  ಕೇಂದ್ರ ರಕ್ಷಣಾ ಇಲಾಖೆಯ ಸಮಿತಿ ಪ.ಬಂಗಾಳದ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಮೋದಿ 'ಪರಮಾತ್ಮ' ನೋಡಲು ಗೋಕಾಕಿನಿಂದ ಬಂದ ರೈತ, ವೇಷಭೂಷಣವೇ ಸ್ಪೆಷಲ್!

ತುಮಕೂರಿನ ರೈತ ಸಮಾವೇಶಕ್ಕೆ ಗೋಕಾಕ್ ನಿಂದ ರೈತ ಚೆನ್ನಬಸಪ್ಪ ಬಂದಿದ್ದಾರೆ. ಮೋದಿ ಅಪ್ಪಟ ಅಭಿಮಾನಿಯಾಗಿರುವ ರೈತ ಚೆನ್ನಬಸಪ್ಪ ವಿಶೇಷ ವೇಷಭೂಷಣದಲ್ಲಿ ಮಿಂಚಿದ್ದಾರೆ.

ಮೋದಿ ಕಾರ್ಯಕ್ರಮ: ಪ್ರತಿಭಟನೆಗೆ ಬಂದ ರೈತರು ವಶಕ್ಕೆ

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು  ಬಂಧಿಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ನೆಲಮಂಗಲ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೈತರ ಸಂಘದಿಂದ ಪ್ರತಿಭಟನೆ ನಡೆಸೋ ಸಾಧ್ಯತೆ ಹಿನ್ನೆಲೆ ಮೋದಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ.

ಹಾರ್ದಿಕ್-ನತಾಶಾ ಎಂಗೇಜ್‌ಮೆಂಟ್: ಅಚ್ಚರಿ ವ್ಯಕ್ತಪಡಿಸಿದ ಕೊಹ್ಲಿ

ಟೀಂ ಇಂಡಿಯಾ ಪ್ಲೇ ಬಾಯ್ ಹಾರ್ದಿಕ್ ಪಾಂಡ್ಯ ಕೊನೆಗೂ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ವಿಚಾರ ತಿಳಿದು, ನಾಯಕ ವಿರಾಟ್ ಕೊಹ್ಲಿ ಅಚ್ಚರಿ ವ್ಯಕ್ತಪಡಿಸುತ್ತಲೇ ಶುಭ ಕೋರಿದ್ದಾರೆ. 

ಹೊಸ ವರ್ಷಕ್ಕೆ ಮಕ್ಕಳ ಫೋಟೋ ರಿವೀಲ್ ಮಾಡಿದ ರಾಕಿಂಗ್ ದಂಪತಿ!

ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್‌ ಯಶ್ ಹಾಗೂ ರಾಧಿಕಾ ಪಂಡಿತ್ 2019 ಗುಡ್‌ಬೈ ಹೇಳಿ 2020 ಅನ್ನು ಸಂಭ್ರಮದಿಂದ ಬರ ಮಾಡಿಕೊಂಡಿದ್ದಾರೆ. ಈ ವೇಳೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಕ್ಕಳೊಂದಿಗಿರುವ ಫೋಟೋ ರಿವೀಲ್ ಮಾಡಿದ್ದಾರೆ.

ಆನ್‌ಲೈನ್‌ ಮಾರಾಟ ಕ್ಷೇತ್ರಕ್ಕೆ ರಿಲಯನ್ಸ್‌ ಜಿಯೋ ಮಾರ್ಟ್‌ ಲಗ್ಗೆ!

ಅಗ್ಗದ ದರದ ಡಾಟಾ ಮತ್ತು ಉಚಿತ ಮೊಬೈಲ್‌ ಕರೆಗಳ ಮೂಲಕ ಮೊಬೈಲ್‌ ವಲಯದಲ್ಲಿ ಹೊಸ ಕ್ರಾಂತಿ ಮಾಡಿದ್ದ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ ಕಂಪನಿ ಇದೀಗ ಆನ್‌ಲೈನ್‌ ವಹಿವಾಟು ಕ್ಷೇತ್ರಕ್ಕೆ ಕಾಲಿಟ್ಟಿದೆ. ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಮಾದರಿಯಲ್ಲಿ ಆನ್‌ಲೈನ್‌ ಸೇವೆ ಒದಗಿಸುವ ಜಿಯೋ ಮಾರ್ಟ್‌ ಸೇವೆಯನ್ನು ರಿಲಯನ್ಸ್‌ ಮುಂಬೈನಲ್ಲಿ ಆರಂಭಿಸಿದೆ.

ಶಾಕ್ ನಂ3: ನಿಮಗೆ ನಿತ್ಯವೂ ಬೇಕಾದ ವಸ್ತುವಿನ ಬೆಲೆ ಏರಿದೆ!

ಹೊಸ ವರ್ಷದ ಆರಂಭಗೊಂಡ ಬೆನ್ನಲ್ಲೇ ಬೆಲೆ ಏರಿಕೆಯ ಪರ್ವವೂ ಶುರುವಾದಂತಿದೆ. ನಿನ್ನೆ(ಜ.01)ಯಷ್ಟೇ ರೆಲ್ವೇ ಟಿಕೆಟ್, ಅಡುಗೆ ಅನಿಲಗಳ ಬೆಲೆ ಏರಿರುವ ಬೆನ್ನಲ್ಲೇ, ಇಂದು ಗ್ರಾಹಕ ಸರಕುಗಳ ಬೆಲೆಗಳಲ್ಲಿ ಏರಿಕೆಯಾಗಲಿದೆ.

ಟೊಯೊಟಾ ಇನೋವಾ ಪ್ರತಿಸ್ಪರ್ಧಿ ಕಿಯಾ ಕಾರ್ನಿವಲ್ ಟೀಸರ್ ಬಿಡುಗಡೆ!

ಟೊಯೊಟಾ ಇನೋವಾ ಕ್ರೈಸ್ಟಾ ಕಾರಿನ ಪ್ರತಿಸ್ಪರ್ಧಿಯಾಗಿ ಕಿಯಾ ಕಾರ್ನಿವಲ್ ಕಾರನ್ನು ಬಿಡುಗಡೆ ಮಾಡುತ್ತಿದೆ. ಕಿಯಾ ಮೋಟಾರ್ಸ್ ನೂತನ ಕಾರು ಇದೀಗ ಇನೋವಾ ಸೇರಿದಂತೆ  MPV  ಕಾರುಗಳಿಗೆ ನಡುಕು ಹುಟ್ಟಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ
ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ