ಕರ್ತವ್ಯಪಥದಲ್ಲಿ ಉದಯಿಸುತ್ತಿರುವ ನವಭಾರತ

By Kannadaprabha News  |  First Published Sep 17, 2022, 9:41 AM IST

ಪ್ರಧಾನಿ ನರೇಂದ್ರ ಮೋದಿ ನವ ಭಾರತವನ್ನು ಯುವ ಭಾರತದಿಂದ ನಿರ್ಮಿಸಲು ಬೇಕಾದ ಪರಿಸರವನ್ನು ನಿರ್ಮಿಸುತ್ತಿದ್ದಾರೆ. ನವಭಾರತದ ತಂತ್ರಜ್ಞಾನದ ವಲಯಕ್ಕೆ ಇನ್ನಷ್ಟುವೇಗ ನೀಡಲು ಸ್ಟಾರ್ಚ್‌ಅಪ್‌ ವಲಯಗಳು ಹಾಗೂ ನಾವೀನ್ಯತಾ ಉದ್ಯಮಗಳು ಕಾರಣೀಭೂತವಾಗಿವೆ.


- ರಾಜೀವ್‌ ಚಂದ್ರಶೇಖರ್

ಕೇಂದ್ರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್‌ ಹಾಗೂ ಐಟಿ ಸಚಿವ

Tap to resize

Latest Videos

undefined

ಭಾರತದಲ್ಲಿ ಕಳೆದ ಮೂರು ವಾರಗಳಲ್ಲಿ ನಡೆದಿರುವ ಮಹತ್ತರ ಬೆಳವಣಿಗೆ ಪ್ರಪಂಚದ ಗಮನವನ್ನು ಸೆಳೆದಿದೆ. ನವಭಾರತದ ಭರವಸೆಯನ್ನು ಖಚಿತಪಡಿಸಿದೆ. ಭಾರತದ ಮೊಟ್ಟಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿಕ್ರಾಂತ್‌ ನೌಕಾಪಡೆಗೆ ಸೇರ್ಪಡೆಯಾಯಿತು. ನಾನು ಆ ಸಮಾರಂಭದಲ್ಲಿ ಭಾಗಿಯಾಗಿದ್ದೆ. ಆ ಸಮಾರಂಭ ದಲ್ಲಿ ನನಗಾದ ಸಂತಸ, ನನ್ನ ದೇಶದ ಮೇಲಾದ ಹೆಮ್ಮೆಯ ಕ್ಷಣಗಳನ್ನು ಹಂಚಿಕೊಳ್ಳಲು ಪದಗಳು ಸಾಲುವುದಿಲ್ಲ. ವಿಮಾನ ವಾಹಕ ನೌಕೆಗಳನ್ನು ನಿರ್ಮಿಸುವ ಹಾಗೂ ವಿನ್ಯಾಸಗೊಳಿಸುವ ಪ್ರಪಂಚದ ಕೆಲವೇ ರಾಷ್ಟ್ರಗಳಾದ ಚೀನಾ, ಅಮೆರಿಕ, ಫ್ರಾನ್ಸ್‌, ಬ್ರಿಟನ್‌, ರಷ್ಯಾ ದೇಶಗಳ ಸಾಲಿಗೆ ನಾವು ಸೇರಿದ್ದೇವೆ ಎಂಬ ವಿಷಯ ತಿಳಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ.

PM Modi Birthday: ದೇಶ ಸೇವೆಯನ್ನೇ ಕೃಷಿಯಾಗಿಸಿಕೊಂಡ ರಾಜರ್ಷಿ ನರೇಂದ್ರ ಮೋದಿ

ಈ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತ ನೌಕಾದಳದ ಹೊಸಧ್ವಜವನ್ನು ಅನಾವರಣಗೊಳಿಸಿದರು. ಛತ್ರಪತಿ ಶಿವಾಜಿ ಮಹಾರಾಜರ ರಾಜಲಾಂಛನದಿಂದ ಪ್ರೇರಿತಗೊಂಡು ಅಷ್ಟಭುಜಾಕೃತಿಯ ಲಾಂಛನ ಹೊಂದಿರುವ ಹೊಸಧ್ವಜ ನೌಕಾಪಡೆಯ ಅಧಿಕೃತ ಧ್ವಜವಾಗಿದೆ. ಇಲ್ಲಿಯವರೆಗೆ ಬಳಸುತ್ತಿದ್ದ ಧ್ವಜದಲ್ಲಿ ವಸಾಹತುಶಾಹಿ ಗತಕಾಲದ ಕೊನೆಯ ಕುರುಹಾಗಿದ್ದ ಸೇಂಟ್‌ ಜಾಜ್‌ರ್‍ ಕ್ರಾಸ್‌ ಇತ್ತು. ಧ್ವಜದಲ್ಲಿ ವಸಾಹತುಶಾಹಿ ಗುರುತನ್ನು ಹೋಗಲಾಡಿಸಲು 75 ವರ್ಷಗಳು ಬೇಕಾಯಿತು ಮತ್ತು ಒಬ್ಬ ಸಮರ್ಥ,ದಕ್ಷ ನಾಯಕನಿಂದ ಇದು ಸಾಧ್ಯವಾಯಿತು ಎಂಬುದು ಗಮನಾರ್ಹ.

ಶತಮಾನಗಳ ಕಾಲ ನಮ್ಮನ್ನು ವಸಾಹತುವನ್ನಾಗಿ ಮಾಡಿಕೊಂಡಿದ್ದ ಬ್ರಿಟನ್‌ ದೇಶವನ್ನು ಹಿಮ್ಮೆಟ್ಟಿಸಿ ಭಾರತ ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂಬ ಮಾಹಿತಿಯನ್ನು ಬ್ಲೂಮ್‌ಬಗ್‌ರ್‍ ಸಂಶೋಧನಾ ವರದಿ ದೃಢಪಡಿಸಿದ್ದು ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದೆ. ಭವ್ಯವಾದ ಹೊಸ ಸೆಂಟ್ರಲ್‌ ವಿಸ್ತಾದ ಉದ್ಘಾಟನೆ ಮಾಡುವುದರೊಂದಿಗೆ ರಾಜಪಥವನ್ನು ‘ಕರ್ತವ್ಯಪಥ’ ಎಂದು ಮರುನಾಮಕರಣ ಮಾಡಲಾಗಿದೆ. ಇಂಡಿಯಾ ಗೇಟ್‌ನಲ್ಲಿ ಗ್ರ್ಯಾಂಡ್‌ ಕ್ಯಾನೋಪಿ ಅಡಿಯಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಪ್ರತಿಮೆಯನು ್ನಲೋಕಾರ್ಪಣೆಗೊಳಿಸಲಾಗಿದೆ. ಈ ಮೂಲಕ ಭಾರತವು ತನ್ನ ವಸಾಹತುಶಾಹಿ ಮನಸ್ಥಿತಿಯನ್ನು ಸಂಪೂರ್ಣವಾಗಿ ತ್ಯಜಿಸಿ, ಸ್ವಾವಲಂಬಿ (ಆತ್ಮನಿರ್ಭರ) ನವ ಭಾರತವಾಗಿ ನಿರ್ಮಾಣಗೊಳ್ಳುತ್ತಿದೆ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದೆ.

ಪರಿವರ್ತನಾ ಯುಗ

ಪ್ರಧಾನಿ ನರೇಂದ್ರ ಮೋದಿಯವರ 8 ವರ್ಷದ ಆಡಳಿತಾವಧಿಯಲ್ಲಿ ದೇಶದಲ್ಲಿ ಆದ ಪರಿವರ್ತನೆಯು ಅಗಾಧವಾಗಿದೆ. ಕೋವಿಡ್‌ ಸಾಂಕ್ರಾಮಿಕದ ನಡುವೆಯೂ ಭಾರತ ಇದನ್ನು ಸಾಧಿಸಿದೆ. ಈ ಶತಮಾನದ ಅತಿ ದೊಡ್ಡ ಕಪ್ಪುಚುಕ್ಕೆಯೆಂದರೆ ಒಂದು ಉಕ್ರೇನ್‌ನಲ್ಲಿ ನಡೆದ ಯುದ್ಧ ಹಾಗೂ ಎರಡನೆಯದು ಭಾರತದ ಸ್ವಹಿತಾಸಕ್ತಿ, ಸ್ವಾರ್ಥದ ಕುಟುಂಬ ರಾಜಕಾರಣ. ತಮ್ಮ ಸ್ವಾರ್ಥ ಸಾಧನೆಗಾಗಿ ಸರ್ಕಾರದ ಯೋಜನೆಗಳನ್ನು ವಿನಾಕಾರಣ ದೂಷಿಸುತ್ತ, ಎಲ್ಲ ಯೋಜನೆಗಳಿಗೂ ಅಡ್ಡಿಪಡಿಸುತ್ತಾ, ತಮ್ಮ ಕುಟುಂಬವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಕೆಟ್ಟಪ್ರಯತ್ನ.

ಆದರೆ ನಮ್ಮೆಲ್ಲರ ಅದೃಷ್ಟವೆಂಬಂತೆ ಭಾರತದ ಅಮೃತಕಾಲದ ಈ ಸಂದರ್ಭದಲ್ಲಿ ದಿನಕ್ಕೆ 20 ತಾಸು ಕೆಲಸಮಾಡುವ ಹಾಗೂ ಸರ್ವರಿಗೂ ಒಳಿತನ್ನು ಬಯಸುವ (ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌) ನಾಯಕ ನಮ್ಮ ದೇಶವನ್ನು ಮುನ್ನಡೆಸುತ್ತಿದ್ದಾರೆ. ಭಾರತ ಎಂದರೆ ದುರ್ಬಲ ಪ್ರಜಾಪ್ರಭುತ್ವ ಎಂಬ ಚಹರೆ ಈಗ ಸಂಪೂರ್ಣ ಬದಲಾಗಿದೆ. ಭಾರತ ಎಂದರೆ ಸದೃಢ, ಸಶಕ್ತ, ಸಮರ್ಥ, ಜಾಗತಿಕ ಮಟ್ಟದಲ್ಲಿ ಗೌರವವನ್ನು ಸೆಳೆದುಕೊಳ್ಳುತ್ತಿರುವ ಪ್ರಜಾಪ್ರಭುತ್ವ ದೇಶ ಎಂಬ ಹಿರಿಮೆಯನ್ನು ಗಳಿಸಿಕೊಂಡಿದೆ. ಇಂದು ನಾವು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಆರ್ಥಿಕ ಪ್ರಗತಿ ಹೊಂದುತ್ತಿರುವ ರಾಷ್ಟ್ರವಾಗಿ ಹೊರಹೊಮ್ಮಿದ್ದೇವೆ. ನಾವು ಈ ಸಾಲಿನಲ್ಲಿ 83 ಬಿಲಿಯನ್‌ ಡಾಲರ್‌ ಎಫ್‌.ಡಿ.ಐ. ಒಳಹರಿವು ಪಡೆದಿದ್ದೇವೆ. ಈ ಮಹತ್ತರವಾದ ಸಾಧನೆಗಳನ್ನು ನಾವು ಜಗತ್ತು ಕೋವಿಡ್‌ ಮಹಾಮಾರಿಯಿಂದ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ಸಾಧಿಸಿದ್ದೇವೆ ಎಂಬುದು ಇಲ್ಲಿ ಗಮನಾರ್ಹವಾದ ಸಂಗತಿಯಾಗಿದೆ.

ದೀರ್ಘಾವಧಿ ಅಭಿವೃದ್ಧಿ

ಮತದಾರರಿಗೆ ಆಮಿಷ ಒಡ್ಡುವ ಲೇವಡಿ ಸಂಸ್ಕೃತಿಯನ್ನು ಉತ್ತೇಜಿಸುವ ಕೆಲವು ನಾಯಕರಿಗಿಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಭಿನ್ನವಾಗಿದ್ದಾರೆ. ಅವರಿಗೆ ಉಚಿತ ಕೊಡುಗೆಗಳು, ತುಷ್ಟೀಕರಣದ ಬಗ್ಗೆ ಒಲವು ಇಲ್ಲ. ಅದರ ಬದಲಿಗೆ ಜನರಿಗೆ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆಯ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಬಯಸುತ್ತಾರೆ. ಸಾಲ ಮನ್ನಾದಂತಹ ಹುಸಿ ಭರವಸೆಗಳು, ಉಚಿತ ಯೋಜನೆಯ ಜನಪ್ರಿಯ ಬಜೆಟ್‌ಗಳು, ಉಚಿತ ವಿದ್ಯುತ್‌, ನೀರು ಎಂಬ ಆಮಿಷಗಳು ಫಲಾನುಭವಿಗಳಿಗೆ ತಾತ್ಕಾಲಿಕ ಸಂತೃಪ್ತಿ ನೀಡುತ್ತದೆಯೇ ಹೊರತು, ಭವಿಷ್ಯದ ದೃಷ್ಟಿಯಿಂದ ಯಾವುದೇ ದೀರ್ಘಾವಧಿ ಕೊಡುಗೆಗಳನ್ನು ನೀಡುವುದಿಲ್ಲ.

ಪ್ರಧಾನಿ ಮೋದಿಯವರ ದೂರದೃಷ್ಟಿಆಡಳಿತದ ಉಪಕ್ರಮಗಳ ಪರಿಣಾಮ ಈಗ ಎಲ್ಲೆಡೆ ಗೋಚರಿಸುತ್ತಿದೆ. ಕೋವಿಡ್‌ ನಂತರದ ಆರ್ಥಿಕ ಸಂಕಷ್ಟದಲ್ಲಿ ಜಗತ್ತೇ ಹೆಣಗಾಡುತ್ತಿರುವ ಸಂದರ್ಭದಲ್ಲಿ ಭಾರತದ ನಿರೂಪಣೆ ಸಂಪೂರ್ಣ ವಿಭಿನ್ನವಾಗಿದೆ. ಕೇವಲ ಒಂದು ದಶಕದ ಹಿಂದೆ ನಮ್ಮ ದೇಶದಲ್ಲಿದ್ದ ಇಲೆಕ್ಟ್ರಾನಿಕ್ಸ್‌ ಉತ್ಪಾದನಾ ವಲಯವನ್ನು ಗಮನಿಸಿ. ಇಂದು ಭಾರತ ವಿಶ್ವದಲ್ಲೇ ಅತಿಹೆಚ್ಚು ಮೊಬೈಲ… ಉತ್ಪಾದನೆ ಮಾಡುವ ರಾಷ್ಟ್ರವಾಗಿದೆ. ವಿಶ್ವದ ದೊಡ್ಡ ದೊಡ್ಡ ಕಂಪನಿಗಳು ಭಾರತದಲ್ಲಿ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಹೂಡಿಕೆ ಮಾಡಿವೆ. ಈ ಮೂಲಕ ವಿಶ್ವಕ್ಕೆ ಮೇಕ್‌ ಇನ್‌ ಇಂಡಿಯಾವನ್ನು ಪರಿಚಯಿಸಲು ಮುಂದಾಗಿವೆ.

ಸ್ಟಾರ್ಚ್‌ಅಪ್‌ಗೆ ಒತ್ತು

ಎಲೆಕ್ಟ್ರಾನಿಕ್ಸ್‌ ತಯಾರಿಕಾ ವಲಯ ಬೆಳೆದಂತೆ ಸೆಮಿಕಂಡಕ್ಟರ್‌ ಚಿಪ್‌ಗಳಿಗೆ ಬಹುಬೇಡಿಕೆ ಬರುತ್ತದೆ. ಚಿಪ್‌ಗಳ ಆಮದನ್ನು ಕಡಿಮೆ ಮಾಡಲು ಹಾಗೂ ಭಾರತವನ್ನು ಜಾಗತಿಕ ಚಿಪ್‌ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಸರ್ಕಾರವು ಬಹಳಷ್ಟುಶ್ರಮಿಸುತ್ತಿದೆ. ಅಂತಾರಾಷ್ಟ್ರೀಯ ಸೆಮಿಕಂಡಕ್ಟರ್‌ ಹಾಗೂ ಡಿಸ್‌ಪ್ಲೇ ತಯಾರಕರನ್ನು ಆಕರ್ಷಿಸಲು 76 ಸಾವಿರ ಕೋಟಿ ಮೌಲ್ಯದ ಪ್ರೋತ್ಸಾಹಕ ಯೋಜನೆಯನ್ನು ಜಾರಿಗೆ ತಂದಿದೆ. ವೇದಾಂತ ಗ್ರೂಫ್ಸ್‌ ಕಂಪನಿಯು ಗುಜರಾತ್‌ ರಾಜ್ಯದಲ್ಲಿ ಸೆಮಿಕಂಡಕ್ಟರ್‌ ಉತ್ಪಾದನಾ ವಲಯವನ್ನು ಸ್ಥಾಪಿಸಲು ತೈವಾನ್‌ನ ದೈತ್ಯ ಕಂಪನಿಯಾದ ಫಾಕ್ಸ್‌ ಕಾನ್‌ನೊಂದಿಗೆ 1.5 ಲಕ್ಷ ಕೋಟಿ ಹೂಡಿಕೆಯನ್ನು ಘೋಷಿಸಿದೆ. ಇದು ಗುಜರಾತ್‌ ರಾಜ್ಯದಲ್ಲಿ ಸುಮಾರು 1 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂಪೂರ್ಣ ದೃಷ್ಟಿದೇಶದ ಯುವಜನತೆಯ ಮೇಲಿದ್ದು, ನವ ಭಾರತವನ್ನು ಯುವ ಭಾರತದಿಂದ ನಿರ್ಮಿಸಲು ಬೇಕಾದ ಪರಿಸರವನ್ನುನಿರ್ಮಿಸುತ್ತಿದ್ದಾರೆ. 75 ಸಾವಿರಕ್ಕೂ ಹೆಚ್ಚು ಸ್ಟಾರ್ಚ್‌ ಅಪ್‌ಗಳು, 100ಕ್ಕೂ ಹೆಚ್ಚು ಯೂನಿಕಾರ್ನ್‌ಗಳೊಂದಿಗೆ ಯುವ ಭಾರತಕ್ಕೆ ಉದ್ಯೋಗಾವಕಾಶಗಳನ್ನು ಏರಿಕೆ ಗತಿಯಲ್ಲಿ ಸೃಷ್ಟಿಸಲಾಗುತ್ತಿದೆ. ನವಭಾರತದ ತಂತ್ರಜ್ಞಾನದ ವಲಯಕ್ಕೆ ಇನ್ನಷ್ಟುವೇಗ ನೀಡಲು ಸ್ಟಾರ್ಚ್‌ ಅಪ್‌ ವಲಯಗಳು ಹಾಗೂ ನಾವೀನ್ಯತಾ ಉದ್ಯಮಗಳು ಕಾರಣೀಭೂತವಾಗಿವೆ.

ಭಾರತದ ದಶಕವಿದು

ವಿಶ್ವದ ಹಲವು ದಿಗ್ಗಜ ನಾಯಕರು ವಿವಿಧ ವೇದಿಕೆಗಳಲ್ಲಿ ಭಾರತದ ಶಕ್ತಿ ಹಾಗೂ ಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಭಾರತಕ್ಕೆ ಇತ್ತೀಚೆಗೆ ಭೇಟಿ ನೀಡಿದ ಇಂಟೆಲ್‌ ಸಿಇಒ ಪ್ಯಾಟ್ರಿಕ್‌ ಪಿ. ಗೆಲ್ಸಿಂಗೆರ್‌ ಅವರು ‘ಭಾರತದ ಈ ದಶಕ ಬಹಳ ಆಶಾದಾಯಕವಾಗಿದೆ’ ಎಂದು ಸಾರಿದ್ದರು. ಮೆಕೆನ್ಸಿ ಕಂಪನಿ ಸಿಇಓ ಬಾಬ್‌ ಸ್ಟೆನ್ರ್ಫಲ್ಸ್‌ ಅವರು ದೇಶಕ್ಕೆ ಭೇಟಿ ನೀಡಿದಾಗ ‘ಇದು ಭಾರತದ ದಶಕವಲ್ಲ, ಬದಲಿಗೆ ಇದು ಭಾರತದ ಶತಮಾನ’ ಎಂದು ಶ್ಲಾಘಿಸಿದ್ದರು. ದೈತ್ಯ ಮೈಕ್ರೋಸಾಫ್‌್ಟಕಂಪನಿ ಸಂಸ್ಥಾಪಕ ಬಿಲ್‌ಗ ಗೇಟ್ಸ್‌ ಅವರು ಟೀವಿ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು ಹೇಗೆ ವಿಶ್ವಾದ್ಯಂತ ಮೆಚ್ಚುಗೆ ಗಳಿಸಿದೆ ಎಂಬುದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. 2047ರ ವೇಳೆಗೆ ವಿಶ್ವದ ದುಡಿಯುವ ಜನಸಂಖ್ಯೆಯ ಐದನೇ ಒಂದು ಭಾಗ ಭಾರತದ ಮಾನವ ಸಂಪನ್ಮೂಲ ಆಗಲಿದೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರು ಭಾರತವನ್ನು ಮುನ್ನಡೆಸುತ್ತಿರುವ ಶೈಲಿಯಿಂದ ಜಗತು ್ತಭಾರತದತ್ತ ತಿರುಗಿ ನೋಡುವಂತಾಗಿದೆ ಎನ್ನಬಹುದು.

PM Modi Birthday: ಕರ್ನಾಟಕದಲ್ಲಿ ಇಂದಿನಿಂದ ಅ.2ರವರೆಗೆ ವಿಶೇಷ ಆರೋಗ್ಯ ಅಭಿಯಾನ

ನರೇಂದ್ರ ಮೋದಿ ದೇಶದಲ್ಲಿ ಸ್ಥಾಪಿಸಿರುವ ಪ್ರಗತಿಯ ಗತಿ ಕ್ಷಿಪ್ರವಾಗಿದೆ. ಮುಂಬರುವ ವರ್ಷಗಳಲ್ಲಿ 5ಜಿ ತಂತ್ರಜ್ಞಾನ, ನಂತರ 6ಜಿ ತಂತ್ರಜ್ಞಾನ, 2026ರ ವೇಳೆಗೆ ಟ್ರಿಲಿಯನ್‌ ಡಾಲರ್‌ ಡಿಜಿಟಲ… ಆರ್ಥಿಕತೆಯ ಗುರಿಯನ್ನು ಸಾಧಿಸಬೇಕಾಗಿದೆ. ಮುಂದಿನ ದಶಕವನ್ನು ‘ಇಂಡಿಯಾ ಡೆಕೇಡ್‌’ ಮಾಡಲು ಭಾರತೀಯರಿಗೆ ಗುರಿಗಳನ್ನು ನೀಡಲಾಗಿದೆ. ಮುಂದಿನ 25 ವರ್ಷಗಳ ಈ ಅಮೃತಕಾಲದಲ್ಲಿ ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌, ಸಬ್‌ ಕಾ ಪ್ರಯಾಸ್‌’ ಎಂಬ ಧ್ಯೇಯ ವಾಕ್ಯವನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಕೆಲಸವನ್ನು ಮಾಡುತ್ತ ನವಭಾರತ ನಿರ್ಮಾಣಕ್ಕೆ ಮುಂದುವರೆಸಬೇಕಾಗಿದೆ.

ಕರ್ತವ್ಯ ಪಥದಲ್ಲಿ ನವಭಾರತ ಉದಯಿಸುತ್ತಿದೆ.

click me!