PM Narendra Modi Birthday : ಮೋದಿ ಜನ್ಮದಿನಕ್ಕೆ ಬಿಜೆಪಿಯಿಂದ ಸೇವಾ ಪಾಕ್ಷಿಕ

By Kannadaprabha NewsFirst Published Sep 17, 2022, 9:12 AM IST
Highlights

ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಅಂಗವಾಗಿ ಬಿಜೆಪಿ ಶನಿವಾರದಿಂದ 15 ದಿನಗಳ ಸೇವಾ ಅಭಿಯಾನವನ್ನು ದೇಶಾದ್ಯಂತ ಹಮ್ಮಿಕೊಳ್ಳಲಿದೆ. ಇದರ ಅಡಿಯಲ್ಲಿ ‘ವಿವಿಧತೆಯಲ್ಲಿ ಏಕತೆ ಉತ್ಸವ’, ರಕ್ತದಾನ ಶಿಬಿರ ಹಾಗೂ ಸ್ವಚ್ಛತಾ ಅಭಿಯಾನವನ್ನು ಕೂಡಾ ಹಮ್ಮಿಕೊಳ್ಳಲಾಗುತ್ತಿದೆ.

ನವದೆಹಲಿ (ಸೆ.17)(: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆ ಅಂಗವಾಗಿ ಬಿಜೆಪಿ ಶನಿವಾರದಿಂದ 15 ದಿನಗಳ ಸೇವಾ ಅಭಿಯಾನವನ್ನು ದೇಶಾದ್ಯಂತ ಹಮ್ಮಿಕೊಳ್ಳಲಿದೆ. ಇದರ ಅಡಿಯಲ್ಲಿ ‘ವಿವಿಧತೆಯಲ್ಲಿ ಏಕತೆ ಉತ್ಸವ’, ರಕ್ತದಾನ ಶಿಬಿರ ಹಾಗೂ ಸ್ವಚ್ಛತಾ ಅಭಿಯಾನವನ್ನು ಕೂಡಾ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿವರ್ಷವೂ ಬಿಜೆಪಿ ಪ್ರಧಾನಿ ಮೋದಿಯವರ ಜನ್ಮದಿನವನ್ನು ‘ಸೇವಾ ದಿವಸ’ ಎಂದು ಆಚರಿಸುತ್ತ ಬಂದಿದೆ. ಈ ಬಾರಿ ವಿಶೇಷವಾಗಿ ಸೇವಾ ಪಾಕ್ಷಿಕ ಆಚರಿಸಲಿದ್ದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಅವರು ಸೆ. 17 ರಂದು ಶನಿವಾರ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಅ.2 ಗಾಂಧಿ ಜಯಂತಿವರೆಗೆ ಈ ಕಾರ್ಯಕ್ರಮಗಳು ಮುಂದುವರೆಯಲಿವೆ.

PM Modi Birthday: ಕರ್ನಾಟಕದಲ್ಲಿ ಇಂದಿನಿಂದ ಅ.2ರವರೆಗೆ ವಿಶೇಷ ಆರೋಗ್ಯ ಅಭಿಯಾನ

ಈ ಬಗ್ಗೆ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣ್‌ ಸಿಂಗ್‌, ‘ಬಡ ಸಮುದಾಯಗಳ ಜನರನ್ನು ಸಂಪರ್ಕಿಸಿ ಅವರ ಜೀವನ ಮಟ್ಟವನ್ನು ಸುಧಾರಿಸುವುದು ಈ ಆಭಿಯಾನದ ಪ್ರಾಥಮಿಕ ಉದ್ದೇಶವಾಗಿದೆ. ಇದರೊಂದಿಗೆ ಪಕ್ಷವು ವಿವಿಧತೆಯಲ್ಲಿ ಏಕತೆ ಉತ್ಸವವನ್ನು ಎಲ್ಲ ಜಿಲ್ಲೆಗಳಲ್ಲಿ ಆಚರಿಸಿ, ‘ಏಕ ಭಾರತ, ಶ್ರೇಷ್ಠ ಭಾರತ’ ಸಂದೇಶವನ್ನು ಸಾರಲಿದೆ. ಈ ಅಭಿಯಾನದ ಭಾಗವಾಗಿ ಬಿಜೆಪಿ ಪದಾಧಿಕಾರಿಗಳು ಬೇರೊಂದು ರಾಜ್ಯದ ಭಾಷೆ, ಸಂಸ್ಕೃತಿಯನ್ನು ಒಂದು ದಿನದ ಮಟ್ಟಿಗೆ ಅಳವಡಿಸಿಕೊಳ್ಳಲಿದ್ದಾರೆ’ ಎಂದರು.

ಇದರೊಂದಿಗೆ ಗಿಡ ನೆಡುವ ಅಭಿಯಾನ, ಉಚಿತ ಆಯೋಗ್ಯ ತಪಾಸಣೆ, ಸ್ವಚ್ಛತಾ ಅಭಿಯಾನವನ್ನು ಹಾಗೂ ಜಲ ಸಂರಕ್ಷಣೆಗಾಗಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಅ.2ರಂದು ಬಿಜೆಪಿ ಕಾರ್ಯಕರ್ತರು ಹಾಗೂ ಜನರಿಗೆ ಖಾದಿ ಬಟ್ಟೆಹಾಗೂ ಸ್ಥಳೀಯ ಉತ್ಪನ್ನಗಳನ್ನೇ ಬಳಸುವಂತೆ ಕರೆನೀಡಲಾಗುವುದು ಎಂದರು.

56 ಇಂಚ್‌ ಥಾಲಿ:

ಮೋದಿ ಜನ್ಮದಿನದ ಅಂಗವಾಗಿ ಸೆ.17ರಿಂದ ಮುಂದಿನ 10 ದಿನಗಳ ಕಾಲ ದೆಹಲಿಯ ಆರ್ಡರ್‌ 2.1 ರೆಸ್ಟೋರೆಂಟ್‌ 56 ಇಂಚಿನ ಥಾಲಿಯಲ್ಲಿ 56 ವಿವಿಧ ಪದಾರ್ಥಗಳನ್ನು ನೀಡುವುದಾಗಿ ಹೇಳಿದೆ. ವೆಜ್‌ ಥಾಲಿ ಬೆಲೆ 2600 ರು. ಹಾಗೂ ನಾನ್‌ವೆಜ್‌ ಥಾಲಿ ಬೆಲೆ 2900 ರು. ಆಗಿದೆ. ಈ ಥಾಲಿಯನ್ನು 40 ನಿಮಿಷದಲ್ಲಿ ತಿಂದು ಮುಗಿಸಿದರೆ 8.5 ಲಕ್ಷ ರು. ಬಹುಮಾನ ಘೋಷಿಸಲಾಗಿದೆ.

Narendra Modi Birthday: ಪ್ರಧಾನಿ ನರೇಂದ್ರ ಮೋದಿ ನಡೆದು ಬಂದ ಹಾದಿ, ಸಾಧನೆಯ ಮುನ್ನೋಟ

ಶಿಶುಗಳಿಗೆ ಚಿನ್ನದ ಉಂಗುರ:

ತಮಿಳುನಾಡು ಬಿಜೆಪಿ ಘಟಕವು ಮೋದಿಯವರ ಜನ್ಮದಿನದಂದು ಚೆನ್ನೈನ ಸರ್ಕಾರಿ ಆರ್‌ಎಸ್‌ಎರ್‌ಎಂ ಆಸ್ಪತ್ರೆಯಲ್ಲಿ ಹುಟ್ಟಿದ ನವಜಾತ ಶಿಶುವಿಗೆ 5000 ರು. ಬೆಲೆಬಾಳುವ 2 ಗ್ರಾಂ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ.

ಫ್ಯಾಮಿಲಿ ಇ ಕಾರ್ಡ್‌:

ದೇಶದ ಎಲ್ಲ ನಾಗರಿಕರು ನಮೋ ಆ್ಯಪ್‌ನಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಚಿತ್ರ ತೆಗೆದು ಫ್ಯಾಮಿಲಿ ಇ-ಕಾರ್ಡಿನಲ್ಲಿ ಗ್ರೀಟಿಂಗ್‌್ಸ ತಯಾರಿಸಿ ಅಥವಾ ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ನೇರವಾಗಿ ಹುಟ್ಟುಹಬ್ಬದ ಶುಭಾಷಯಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ.

click me!