Shankaracharya Statue:ಕೇದಾರನಾಥದಲ್ಲಿನ ಶಂಕರಾಚಾರ್ಯ ಪ್ರತಿಮೆ ಕೆತ್ತಿದ್ದು ಮೈಸೂರು ಶಿಲ್ಪಿ!

By Suvarna NewsFirst Published Nov 5, 2021, 5:13 AM IST
Highlights
  • ಇಂದು ಕೇದಾರನಾಥದಲ್ಲಿ 12 ಅಡಿ ಶಂಕರಾಚಾರ‍್ಯ ಪ್ರತಿಮೆ ಅನಾವರಣ
  • ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ ಅನಾವರಣ ಮಾಡಲಿದ್ದಾರೆ
  • ಮೈಸೂರಿನ ಯೋಗಿರಾಜ ಶಿಲ್ಪಿ ಕೆತ್ತಿದ 35 ಟನ್‌ ತೂಕದ ಸುಂದರ ಪುತ್ಥಳಿ

ನವದೆಹಲಿ(ನ.05): ಉತ್ತರಾಖಂಡದ ಕೇದಾರನಾಥದಲ್ಲಿ(Kedarnath) ಪ್ರಧಾನಿ ನರೇಂದ್ರ ಮೋದಿ(Narnedra Modi) ಅವರು ನ.5ರ ಶುಕ್ರವಾರ ಉದ್ಘಾಟಿಸಲಿರುವ ಆದಿಗುರು ಶಂಕರಾಚಾರ್ಯರ(Adi Shankaracharya) ಸುಂದರ ಪುತ್ಥಳಿಯನ್ನು ಕೆತ್ತಿದ್ದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌. ಸ್ವತಃ ಪ್ರಧಾನಿ ಕಾರ್ಯಾಲಯವೇ ದೇಶದೆಲ್ಲೆಡೆ ಶಿಲ್ಪಿಗಾಗಿ ಹುಡುಕಾಡಿ, ಕೊನೆಗೆ ಮೈಸೂರಿನ(Mysuru, Karnataka) ಕಲಾವಿದನಿಂದ ಈ ಪುತ್ಥಳಿಯನ್ನು ಕೆತ್ತಿಸಿದೆ. 2013ರಲ್ಲಿ ಉತ್ತರಾಖಂಡದಲ್ಲಿ ಭಾರಿ ಪ್ರವಾಹ ಉಂಟಾಗಿ ಕೇದಾರನಾಥದಲ್ಲಿರುವ ಆದಿ ಶಂಕರಾಚಾರ್ಯರ ಸಮಾಧಿ ಕೊಚ್ಚಿಹೋಗಿತ್ತು. ನಂತರ ಅದರ ಮರುನಿರ್ಮಾಣದ ಭಾಗವಾಗಿ ಕೇಂದ್ರ ಹಾಗೂ ಉತ್ತರಾಖಂಡ ಸರ್ಕಾರಗಳು ಜಂಟಿಯಾಗಿ ಕೇದಾರೇಶ್ವರ ದೇವಾಲಯದ ಹಿಂಭಾಗದಲ್ಲಿ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಪುತ್ಥಳಿ ಸ್ಥಾಪಿಸಿವೆ.

PM Modi Kedarnath visit:ನ.5ಕ್ಕೆ ಮೋದಿ ಕೇದಾರನಾಥಕ್ಕೆ ಭೇಟಿ, ಶಂಕರಾಚಾರ್ಯ ಪುತ್ಥಳಿ ಅನಾವರಣ!

12 ಅಡಿ ಎತ್ತರ 35 ಟನ್‌ ತೂಕ
ಶಂಕರಾಚಾರ್ಯರ ಪುತ್ಥಳಿ 12 ಅಡಿ ಎತ್ತರವಿದ್ದು, ಕುಳಿತ ಭಂಗಿಯಲ್ಲಿದೆ. 35 ಟನ್‌ ತೂಕದ ಪುತ್ಥಳಿ ಕೆತ್ತಲು ಹೆಗ್ಗಡದೇವನಕೋಟೆಯಿಂದ ತರಲಾದ 120 ಟನ್‌ನ ಕೃಷ್ಣಶಿಲೆ ಬಳಸಲಾಗಿದೆ. . ಈ ಕಲ್ಲು ಮಳೆ, ಗಾಳಿ, ಬಿಸಿಲು ಹಾಗೂ ಕಠಿಣ ಹವಾಮಾನವನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಪುತ್ಥಳಿಗೆ ಹೊಳಪು ಬರಲು ತೆಂಗಿನಕಾಯಿಯ ನೀರಿನಿಂದ ಪಾಲಿಶ್‌ ಮಾಡಲಾಗಿದೆ.

ಪ್ರಧಾನಿ ಕಚೇರಿಯಿಂದ ಆಯ್ಕೆ
ಮೈಸೂರಿನ ಯೋಗಿರಾಜ್‌ ಶಿಲ್ಪಿ ಅವರ ಕುಟುಂಬ ಐದು ತಲೆಮಾರಿನಿಂದ ಕಲ್ಲಿನ ಕೆತ್ತನೆಯಲ್ಲಿ ನೈಪುಣ್ಯ ಪಡೆದಿದೆ. ಯೋಗಿರಾಜ್‌ ಅವರು ತಮ್ಮ ಪುತ್ರ ಅರುಣ್‌ ಜೊತೆ ಸೇರಿ ಶಂಕರರ ಪುತ್ಥಳಿ ಕೆತ್ತಿದ್ದಾರೆ. ಸ್ವತಃ ಪ್ರಧಾನಿ ಸಚಿವಾಲಯದ ಅಧಿಕಾರಿಗಳೇ ದೇಶಾದ್ಯಂತ ಹುಡುಕಾಡಿ ಯೋಗಿರಾಜ್‌ ಅವರನ್ನು ಈ ಪುತ್ಥಳಿ ಕೆತ್ತಲು ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದರು. 2020ರ ಸೆಪ್ಟೆಂಬರ್‌ನಲ್ಲಿ ಕೆತ್ತನೆ ಆರಂಭಿಸಿದ ಅವರು ಇತ್ತೀಚೆಗೆ ಪೂರ್ಣಗೊಳಿಸಿದ್ದರು.

ನಮ್ಮ ಸೈನಿಕರು ಭಾರತ ಮಾತೆಯ ರಕ್ಷಾ ಕವಚ : ಯೋಧರೊಂದಿಗೆ ಮೋದಿ ದೀಪಾವಳಿ ಸಂಭ್ರಮ!

ಮೈಸೂರಿನಿಂದ ಪುತ್ಥಳಿ ಸಾಗಿದ ಹಾದಿ
ಮೈಸೂರಿನಲ್ಲಿ 9 ತಿಂಗಳ ಶ್ರಮದ ಬಳಿಕ ಪುತ್ಥಳಿಯನ್ನು ಕೆತ್ತಲಾಗಿತ್ತು. ಬಳಿಕ ಮೈಸೂರಿನಿಂದ ಚಮೋಲಿ ಏರ್‌ಬೇಸ್‌ವರೆಗೆ ರಸ್ತೆಯ ಮೂಲಕ ಸಾಗಿಸಲಾಯಿತು. ಅಲ್ಲಿಂದ ಕೇದಾರನಾಥದಲ್ಲಿರುವ ಸಮಾಧಿ ಸ್ಥಳಕ್ಕೆ ಭಾರತೀಯ ವಾಯುಪಡೆ ವಿಮಾನದ ಮೂಲಕ ಸಾಗಿಸಲಾಗಿದೆ.

2013ರ ಪ್ರವಾಹಕ್ಕೆ ನಾಶವಾದ ಶಂಕರಾಚಾರ್ಯರ ಸಮಾಧಿ ಸ್ಥಳ!
2013ರಲ್ಲಿ ಉತ್ತರಖಂಡ ಕಂಡು ಕೇಳರಿಯದ ಪ್ರವಾಹಕ್ಕೆ ತುತ್ತಾಗಿತ್ತು. ಈ ಪ್ರವಾಹದಲ್ಲಿ ಶಂಕಾರಾಚಾರ್ಯರ ಸಮಾಧಿ ಸ್ಥಳವೂ ನಾಶವಾಗಿತ್ತು. ಈ ಸಮಾಧಿ ಸ್ಥಳದಲ್ಲಿದ್ದ ಶಂಕರಾಚಾರ್ಯರ ಪ್ರತಿಮೆ ಕೂಡ ಪ್ರವಾಹಕ್ಕೆ ನಾಶಗೊಂಡಿತು. 2013ರ ಬಳಿಕ ಪ್ರತಿ ಭಾರಿ ಉತ್ತರಖಂಡ ರಣ ಮಳೆ ಹಾಗೂ ಪ್ರವಾಹಕ್ಕೆ ತುತ್ತಾಗಿದೆ. ಹೀಗಾಗಿ ಇಲ್ಲಿ ಪ್ರವಾಹ ತಡೆಗೋಡೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದೀಗ ಶಂಕರಾಚರ್ಯರ ಸಮಾಧಿ ಸ್ಥಳವನ್ನು ಮತ್ತೆ ನಿರ್ಮಿಸಲಾಗಿದೆ. ಇನ್ನು 12 ಅಡಿ ಎತ್ತರದ ಪ್ರತಿಮೆಯನ್ನು ಕೆತ್ತನೆ ಮಾಡಿ ಸ್ಥಾಪಿಸಲಾಗಿದೆ.

 

Glimpses of the 12-foot Murti of Adi Guru Adi Shankaracharya to be inaugurated by PM Sh ji in Kedarnath tomorrow, Nov 5th.

On this occasion, pogrammes are being organized at Jyotirlingas, Jyotishpeeth & at the birthplace of the Jagadguru in Kalady, Kerala. pic.twitter.com/H71CHtX3af

— G Kishan Reddy (@kishanreddybjp)

ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಕ್ಕೆ 6.30ಕ್ಕೆ ಉತ್ತರಖಂಡಕ್ಕೆ ಆಗಮಿಸಲಿದ್ದಾರೆ. ಬಳಿಕ ನೇರವಾಗಿ ಕೇದಾರನಾಥ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಪೂಜೆ ಬಳಿಕ ಕೇದಾರನಾಥದಲ್ಲಿರುವ ಆದಿಗುರು ಶಂಕಾರಚಾರ್ಯರ ಸಾಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಶಂಕರಾರಾಚಾರ್ಯರ ಪ್ರತಿಮೆ ಅನಾವರಣ ಮಾಡಲಿದ್ದಾರೆ.  ಬಳಿಕ 180 ಕೋಟಿ ರೂಪಾಯಿ ವೆಚ್ಚದ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೋದಿ ಉದ್ಘಾಟಿಸಲಿದ್ದಾರೆ. ಇತ್ತ ಪೂರ್ಣಗೊಂಡಿರುವ ಹಲವು ಕಾಮಾಗಾರಿಗಳ ಉದ್ಘಾಟನೆಯನ್ನು ಮೋದಿ ಮಾಡಲಿದ್ದಾರೆ.

ಪ್ರವಾಸಿ ಸೌಲಭ್ಯ ಕೇಂದ್ರ, ಎರಡು ಅತಿಥಿ ಗೃಹ ಸೇರಿದಂತೆ ಕೇದಾರನಾಥದಲ್ಲಿ ಹಲವು ಮೂಲ ಸೌಕರ್ಯ ಅಭಿವೃದ್ಧಿಗಳನ್ನು ಕೈಗೊಳ್ಳಲಾಗಿದೆ. ಮೋದಿ ಆಗಮನದ ಹಿನ್ನಲೆಯಲ್ಲಿ ಕೇದಾರನಾಥ್  ಕಂಗೊಳಿಸುತ್ತಿದೆ. ಉತ್ತರ ಖಂಡ ಸರ್ಕಾರ ಮೋದಿಯನ್ನು ಬರಮಾಡಿಕೊಳ್ಳಲು ಎಲ್ಲಾ ಸಿದ್ಧತೆ ನಡೆಸಿದೆ.

click me!