Rahul Gandhi London trip:ಲಂಡನ್‌ಗೆ ಹಾರಿದ ರಾಹುಲ್ ಗಾಂಧಿ; ಹಾಲಿಡೆ ಟ್ರಿಪ್ ಎಂದ ಬಿಜೆಪಿ!

By Suvarna NewsFirst Published Nov 4, 2021, 8:11 PM IST
Highlights
  • ಶೃಂಗಸಭೆ ಸೇರಿ ಸತತ ಸಮಾವೇಶ ಮುಗಿಸಿ ತವರಿಗೆ ಆಗಮಿಸಿದ ಮೋದಿ
  • ಮಹತ್ವದ ನಿರ್ಧಾರದ ಬಳಿಕ ಯೋಧರೊಂದಿಗೆ ಮೋದಿ ದೀಪಾವಳಿ
  • ಲಂಡನ್‌ಗೆ ತೆರಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
  • ಮತ್ತೊಂದು ಹಾಲಿಡೇ ಟ್ರಿಪ್‌ನಲ್ಲಿ ರಾಹುಲ್ ಗಾಂಧಿ

ನವದೆಹಲಿ(ನ.04):  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandh( ಮತ್ತೊಂದು ಹಾಲಿಡೆ(Holiday) ಟ್ರಿಪ್‌ನಲ್ಲಿದ್ದಾರಾ? ಇದೀಗ ಬಿಜೆಪಿ(JP) ಈ ಪ್ರಶ್ನೆ ಕೇಳಿದೆ. ಕಾರಣ ಇಂದು ಬೆಳಗ್ಗೆ ರಾಹುಲ್ ಗಾಂಧಿ ಲಂಡನ್‌ಗೆ (London)ತೆರಳಿದ್ದಾರೆ. ಸದ್ದಿಲ್ಲದೆ ರಾಹುಲ್ ಗಾಂಧಿ ದೋಹಾ ಮೂಲಕ ಲಂಡನ್‍‌ಗೆ ಹಾರಿದ್ದಾರೆ. ರಾಹುಲ್ ಪ್ರವಾಸವನ್ನು ಬಿಜೆಪಿ ಪ್ರಶ್ನಿಸಿದೆ.

ನಮ್ಮ ಸೈನಿಕರು ಭಾರತ ಮಾತೆಯ ರಕ್ಷಾ ಕವಚ : ಯೋಧರೊಂದಿಗೆ ಮೋದಿ ದೀಪಾವಳಿ ಸಂಭ್ರಮ!

ಶೃಂಗಸಭೆ ಸೇರಿದಂತೆ ಹಲವು ಸಮಾವೇಶದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ(Narendra Modi) ತವರಿಗೆ ಮರಳಿ ತೈಲ ದರ ಇಳಿಕೆ(Fuel Pric Cut) ಕುರಿತು ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇಷ್ಟೇ ಅಲ್ಲ ನೇರವಾಗಿ ನೌಶೆರಾಗೆ ತರಳಿ ಯೋಧರೊಂದಿಗೆ(Soldiers) ದೀಪಾವಳಿ(Deepavali) ಆಚರಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಲ್ಲಿದ್ದಾರೆ, ಲಂಡನ್‌ಗೆ ಹಾರಿರುವ ರಾಹುಲ್ ಗಾಂಧಿ ಮತ್ತೊಂದು ಹಾಲಿಡೇ ಟ್ರಿಪ್‌ನಲ್ಲಿದ್ದಾರ ಎಂದು ಬಿಜೆಪಿ ಪ್ರಶ್ನಿಸಿದೆ.

G20, COP26 ಶೃಂಗಸಭೆ ಯಶಸ್ವಿಯಾಗಿ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ, ತವರಿಗೆ ಮರಳಿ ನೇರವಾಗಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಮಹತ್ವದ ಸಭೆ ನಡೆಸಿ ಹಲವು ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಇಂದು ಮೋದಿ, ಯೋಧರೊಂದಿಗೆ ನೌಶೆರಾದಲ್ಲಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಆದರೆ ರಾಹುಲ್ ಗಾಂಧಿ ಎಲ್ಲಿದ್ದಾರೆ? ಲಂಡನ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಮತ್ತೊಂದು ಹಾಲಿಡೇ ಟ್ರಿಪ್‌ನಲ್ಲಿದ್ದಾರಾ ಎಂದು ಬಿಜೆಪಿ ಐಟಿ ಸೆಲ್ ಇನ್‌ಚಾರ್ಜ್ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.

 

PM Modi returned from a successful visit of the G20, COP26 and got straight to work, chaired important meetings and took big decisions. Today, he was at Nowshera to celebrate Deepawali with jawans.

But where is Rahul Gandhi?

Apparently on his way to London for another holiday! pic.twitter.com/ZquboWRpUv

— Amit Malviya (@amitmalviya)

ಬಿಜೆಪಿ ಪ್ರಶ್ನೆಗೆ ಕಾಂಗ್ರೆಸ್ ಯಾವುದೇ ಉತ್ತರ ನೀಡಿಲ್ಲ. ಇತ್ತ ರಾಹುಲ್ ಗಾಂಧಿ ಕೂಡ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ. ಇತ್ತ ಸಾಮಾಜಿಕ ಜಾಲತಾಣದಲ್ಲೂ ರಾಹುಲ್ ಗಾಂಧಿ ಎಲ್ಲಿದ್ದಾರೆ ಅನ್ನೋದು ಟ್ರೆಂಡ್ ಆಗಿದೆ.

Petrol Diesel Price Drop; ಪೆಟ್ರೋಲ್ 5, ಡೀಸೆಲ್ 10 ರು. ಅಬಕಾರಿ ಸುಂಕ ಕಡಿತ

ಪ್ರವಾಸ, ಸಭೆ, ಸಮಾರಂಭಗಳಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ತವರಿಗೆ ಮರಳಿದರೂ ವಿಶ್ರಾಂತಿ ಪಡೆದಿಲ್ಲ. ನೇರವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ತೈಲ ಬೆಲೆ ಇಳಿಕೆ ಸೇರಿದಂತೆ ಹಲವು ಮಹತ್ವದ ಸಭೆ ನಡೆಸಿದ್ದಾರೆ. ಇದರ ಬಳಿಕ ನೌಶೇರಾದಲ್ಲಿ ಯೋಧರ ಜೊತೆಗೆ ದೀಪಾವಳಿ ಆಚರಿಸಿದ್ದಾರೆ. 

ಇದೇ ವಿಚಾರವನ್ನು ಮುಂದಿಟ್ಟುಕೊಂಡು ಇದೀಗ ರಾಹುಲ್ ಗಾಂಧಿಯನ್ನು ಟೀಕಿಸಲಾಗಿದೆ . ವಿಶ್ರಾಂತಿಯಲ್ಲಿದ್ದ ರಾಹುಲ್ ಗಾಂಧಿ ಮತ್ತೊಂದು ವಿಶ್ರಾಂತಿಗಾಗಿ ಲಂಡನ್ ಪ್ರವಾಸ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ರಾಹುಲ್ ಗಾಂಧಿ ಈ ಹಿಂದೆ ಕೈಗೊಂಡ ಇಟೆಲಿ ಸೇರಿದಂತೆ ವಿದೇಶಿ ಪ್ರವಾಸವನ್ನು ಇದೇ ವೇಳೆ ಅಣಕಿಸಲಾಗಿದೆ. ಹಾಲಿಡೇ ಟ್ರಿಪ್ ಮುಗಿಯುವ ವರೆಗೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಜನರ ಕೈಗೆ ಸಿಗುವುದಿಲ್ಲ ಎಂದು ಟೀಕಿಸಿಲಾಗಿದೆ. ಇತ್ತ ಮೋದಿ ವರ್ಷದ ಅರ್ಧ ದಿನ ವಿದೇಶಿ ಪ್ರವಾಸದಲ್ಲಿರುತ್ತಾರೆ. ಹೀಗಿರುವಾಗ ರಾಹುಲ್ ಗಾಂಧಿ ವರ್ಷದಲ್ಲಿ ಒಂದು ಪ್ರವಾಸ ಕೈಗೊಳ್ಳುವುದು ತಪ್ಪಲ್ಲ.  ರಾಹುಲ್ ಗಾಂಧಿ ಪ್ರವಾಸವನ್ನು ಪ್ರಶ್ನಿಸುವುದು ಎಷ್ಟು ಸರಿ ಎಂದು ಹಲವು ಸಾಮಾಜಿಕ ಜಾಲಾತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯೋಧರೊಂದಿಗೆ ಮೋದಿ ದೀಪಾವಳಿ:
ಭಾರತೀಯರ ಯೋಧರು 1300 ಕೋಟಿ ಜನರ ಪ್ರತಿನಿಧಿಗಳು. ಭಾರತ ಮಾತೆಯ ಸುರಕ್ಷಾ ಕವಚ ನಮ್ಮ ಯೋಧರು ಎಂದು ನರೇಂದ್ರ ಮೋದಿ ನೌಶೇರಾದಲ್ಲಿ ಸೈನಿಕರ ಮುಂದಿನ ಭಾಷಣದಲ್ಲಿ ಹೇಳಿದ್ದಾರೆ. ಸೈನಿಕರಿಗೆ ಸಿಹಿ ತಿನಿಸುವ ಮೂಲಕ ಮೋದಿ ದೀಪಾವಳಿ ಹಬ್ಬ ಆಚರಿಸಿದ್ದಾರೆ.

ದೆಹಲಿಯಿಂದ ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿನ ನೌಶೆರಾ ಸೆಕ್ಟರ್‌ಗೆ ತೆರಳಿದ ಮೋದಿ, ಸೈನಿಕರ ಜೊತೆ ಸೇರಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. 
 

click me!