ನನ್ನ ಉದ್ದೇಶವೇ ಬೇರೆ: ಸತ್ಯ ಹೇಳಿದ್ದ CJP ಅಭಿಜೀತ್​ ದೀಪ್ಕೆ ಹಳೆ ವಿಡಿಯೋ ಲೀಕ್​- ಬಿಸಿಬಿಸಿ ಚರ್ಚೆ

Published : Oct 11, 2026, 07:32 PM IST
Abhijeet Dipke

ಸಾರಾಂಶ

ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆಯ ನಾಲ್ಕು ತಿಂಗಳ ಹಿಂದಿನ ವಿಡಿಯೋವೊಂದು ಲೀಕ್ ಆಗಿದೆ. ಇದರಲ್ಲಿ ಅವರು ಭಾರತದಲ್ಲಿ ಬಿಜೆಪಿ ಮತ್ತು RSS ಅನ್ನು ಓಡಿಸುವುದೇ ತಮ್ಮ ಏಕೈಕ ಉದ್ದೇಶ ಎಂದು ಹೇಳಿಕೊಂಡಿದ್ದಾರೆ. ಶಿಕ್ಷಣ ಮತ್ತು ಪ್ರತಿಭಟನೆಗಳ ನೆಪದಲ್ಲಿ ಯುವಜನತೆಯನ್ನು ಪ್ರಚೋದಿಸಿ ಅರಾಜಕತೆ ಸೃಷ್ಟಿಸುವ ಅವರ ಅಸಲಿ ಬಣ್ಣ ಈ ವಿಡಿಯೋದಿಂದ ಬಯಲಾಗಿದೆ.

ದೆಹಲಿ: ಭಾರತದಲ್ಲಿ ಅರಾಜಕತೆ ಸೃಷ್ಟಿಸಿ, ನೆರೆಯ ಕೆಲವು ರಾಷ್ಟ್ರಗಳಂತೆ Gen Zಗಳನ್ನು ಉತ್ತೇಜಿಸಿ, ಭಾರತದಲ್ಲಿ ಬೆಂಕಿ ಹಚ್ಚಿಸುವ ಏಕಮಾತ್ರ ಉದ್ದೇಶದಿಂದ ಕಾಕ್ರೋಚ್​ ಜನತಾ ಪಕ್ಷ (CJP) ಆರಂಭಿಸಿರುವ ಗಂಭೀರ ಆರೋಪ ಎದುರಿಸುತ್ತಿರುವ, ಸದ್ಯ ಅಮೆರಿಕದಲ್ಲಿ ನೆಲೆಸಿರುವ ಅಭಿಜೀತ್​ ದೀಪ್ಕೆಯ ನಾಲ್ಕು ತಿಂಗಳ ಹಿಂದಿನ ವಿಡಿಯೋ ಒಂದು ಇದೀಗ ಲೀಕ್​ ಆಗಿದ್ದು, ಇದು ಬಿಜೆಪಿ ನಾಯಕರು ಹಾಗೂ ಬಿಜೆಪಿ ಬೆಂಬಲಿಗರ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ. ಈ ವಿಡಿಯೋ ಬಗ್ಗೆ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದ್ದು, ಶಿಕ್ಷಣದ ಉದ್ಧಾರದ ಹೆಸರಿನಲ್ಲಿ, ಇದೀಗ SIR ನೆಪ ಇಟ್ಟುಕೊಂಡು ದೀಪ್ಕೆ, ಯುಟ್ಯೂಬರ್​ ಧ್ರುವ್​ ರಾಠಿಯಂಥವರು ಭಾರತಕ್ಕೆ ಬಂದಿರುವ ಉದ್ದೇಶ ಸ್ಪಷ್ಟವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.

Arfa Khanum Sherwani ಯುಟ್ಯೂಬ್​ ಚಾನೆಲ್​ಗೆ ನಾಲ್ಕು ತಿಂಗಳ ಹಿಂದಷ್ಟೇ ಅಭಿಜೀತ್​ ದೀಪ್ಕೆ ಸಂದರ್ಶನ ನೀಡಿದ್ದರು. ಆಗಿನ್ನೂ ಕಾಕ್ರೋಚ್​ ಜನತಾ ಪಕ್ಷದ ಉಗಮ ಆಗಿತ್ತು ಬಿಟ್ಟರೆ, ಅದರ ಬಗ್ಗೆ ಅಷ್ಟೊಂದು ಪ್ರಚಾರವೂ ಇರಲಿಲ್ಲ. ಅವರಿನ್ನೂ ಪ್ರತಿಭಟನೆಯನ್ನೂ ಆರಂಭಿಸಿರಲಿಲ್ಲ. ಆಗ ಪತ್ರಕರ್ತೆ ಅವರ ಉದ್ದೇಶದ ಬಗ್ಗೆ ಕೇಳಿದಾಗ, ದೀಪ್ಕೆ ಹೇಳಿದ ಮಾತೀಗ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತಿದೆ. ಭಾರತದ ಉದ್ಧಾರ ತಮ್ಮ ಉದ್ದೇಶವಲ್ಲ, ಬದಲಿಗೆ ಬಿಜೆಪಿ ಮತ್ತು RSS ವಿರುದ್ಧ ತಮ್ಮ ಸಮರ ಎನ್ನುವ ಅರ್ಥದಲ್ಲಿ ಅವರು ಮಾತನಾಡಿರುವುದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

ನನ್ನ ಏಕೈಕ ಉದ್ದೇಶವೆಂದರೆ...

ಇದರಲ್ಲಿ ದೀಪ್ಕೆ ಅವರು, ನನ್ನ ಏಕೈಕ ಉದ್ದೇಶ ಭಾರತದಲ್ಲಿ ಬಿಜೆಪಿ ಮತ್ತು RSS ಇರಬಾರದು ಎನ್ನುವುದು. ನಾನು AAP ಬೆಂಬಲಿಗ. ಬಿಜೆಪಿಯನ್ನು ಈ ದೇಶದಿಂದ ಓಡಿಸುವುದೇ ನನ್ನ ಗುರಿ ಎಂದುಮಾತನಾಡಿದ್ದಾರೆ. ಬೇರೆ ಬೇರೆ ವಿಧದಲ್ಲಿ ಕಳೆದ 15 ವರ್ಷಗಳಿಂದ ಇದೇ ಕೆಲಸವನ್ನು ನಾನು ಮಾಡುತ್ತಾ ಬಂದಿದ್ದೇನೆ. ಆದರೆ ಅದು ಅಷ್ಟು ಸಕ್ಸಸ್​ ಆಗಿರಲಿಲ್ಲ. ಆದರೆ ಈಗ ಮಜಾಮಜಾಕ್​ ಮೇ ಅರ್ಥಾತ್​ ತಮಾಷೆಯಾಗಿ ಹುಟ್ಟಿದ ಕಾಕ್ರೋಚ್​ ಜನತಾ ಪಕ್ಷ (CJP) ಇದನ್ನು ಪೂರೈಸಲು ನನಗೆ ಅವಕಾಶ ನೀಡಿದೆ. ಇದನ್ನು ಬಳಸಿಕೊಂಡು ನಾನು ಬಿಜೆಪಿಯನ್ನು ಓಡಿಸುತ್ತೇನೆ. ಇದೇ ನನ್ನ ಎಜೆಂಡಾ ಆಗಿದೆ ಎಂದು ಹೇಳಿದ್ದಾರೆ.

ನನ್ನ ಇತಿಹಾಸ ನೋಡಿ

ನೀವು ಬೇಕಿದ್ರೆ ನನ್ನ 15 ವರ್ಷಗಳ ಯುಟ್ಯೂಬ್​ ಓಪನ್​ ಬೇಕಿದ್ರೆ ಮಾಡಿ ನೋಡಿ. ಬಿಜೆಪಿ ಮತ್ತು ಆರ್​ಎಸ್​ಎಸ್​ ಅನ್ನು ಬೈಯದ ಒಂದೇಒಂದು ವಿಡಿಯೋ ಕಾಣಲು ಸಿಗುವುದಿಲ್ಲ. ಕಾಂಗ್ರೆಸ್​ ಪರವಾಗಿ ಇರುವವನ ನಾನು. ನನ್ನ ಇತಿಹಾಸ ನೋಡಿದರೆ ನಿಮಗೇ ತಿಳಿಯುತ್ತದೆ. 15 ವರ್ಷಗಳಿಂದಲೂ ಇದನ್ನೇ ಮಾಡಿಕೊಂಡು ಬಂದಿದ್ದೇನೆ. ಮುಂದೆನೂ ಇದನ್ನೇ ಮಾಡುತ್ತೇನೆ ಎಂದು ಸ್ಪಷ್ಟವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ ದೀಪ್ಕೆ.

ಇದಾದ ಬಳಿಕ ನೀಟ್​ ಪರೀಕ್ಷೆ ಸೋರಿಕೆಯ ನೆಪದಲ್ಲಿ ನಡೆದ ಮಾರಾಮಾರಿ, ಹಿಂಸಾಚಾರ ಇದೀಗ SIR ನೆಪದಲ್ಲಿ ಮಾಡುತ್ತಿರುವ ಪ್ರತಿಭಟನೆ ಎಲ್ಲವೂ ಕಣ್ಣಮುಂದೆ ಇದೆ. ಬಹುಶಃ ಮುಂದೊಂದು ದಿನ ಹೀಗೆಲ್ಲಾ ಮಾಡಬಹುದು ಎಂದು ತಿಳಿದಿದ್ದರೆ ತಮ್ಮ ವಿಚಾರಧಾರೆಯನ್ನು, ತಮ್ಮ ಹೃದಯದ ಮಾತುಗಳನ್ನು ದೀಪ್ಕೆ ಅಂದು ಹೇಳುತ್ತಲೇ ಇರಲಿಲ್ಲ. ಆದರೆ ಈಗ ಎಲ್ಲವೂ ಸ್ಪಷ್ಟವಾಗಿದೆ ಎಂದು ಕಮೆಂಟ್​ಗಳಲ್ಲಿ ಸಿಕ್ಕಾಪಟ್ಟೆ ಜನ ಹೇಳುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಸ್ತೆ ಹಾಕಲು ಬಳಸುವ ಕಪ್ಪು ಡಾಂಬರು ಹೇಗೆ ತಯಾರಾಗುತ್ತೆ ಗೊತ್ತಾ? ದಿನ ಬಳಕೆ ವಿಜ್ಞಾನ ನೀವೂ ತಿಳಿಯಿರಿ!
ಕೇಂದ್ರದಿಂದಲೇ ಮಹಿಳೆಯರ ಉತ್ಪನ್ನ ಖರೀದಿ: ಮಾರಾಟ ಮಾಡುವುದು ಹೇಗೆ? ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ