'ವಂದೇ ಮಾತರಂ' ಹೇಳಿದಾಕೆಯ ಕಣ್ಣಿಗೆ ಪೆಪ್ಪರ್​ ಸ್ಪ್ರೇ ಹಾಕಿದ ಲೇಡಿ ಜಿರಳೆ: ವಿಡಿಯೋ ವೈರಲ್​

Published : Oct 11, 2026, 06:29 PM IST
CJP Protest

ಸಾರಾಂಶ

ಶಿಕ್ಷಣ ಸುಧಾರಣೆ ಮತ್ತು SIR ನೆಪದಲ್ಲಿ ಅಭಿಜೀತ್ ದೀಪ್ಕೆ ಹಾಗೂ ಧ್ರುವ್ ರಾಠೀ ಅವರ ಸಿಜೆಪಿ ಪಕ್ಷವು ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂಬ ಗಂಭೀರ ಆರೋಪವಿದೆ. ಪ್ರತಿಭಟನೆ ವೇಳೆ ವಂದೇ ಮಾತರಂ ಹಾಡಿದ ಯುವತಿಯ ಕಣ್ಣಿಗೆ ಪೆಪ್ಪರ್ ಸ್ಪ್ರೇ ಸಿಡಿಸಿರುವ ಘಟನೆ ಇವರ ಅಸಲಿ ಉದ್ದೇಶವನ್ನು ಪ್ರಶ್ನಿಸುವಂತೆ ಮಾಡಿದೆ.

ದೆಹಲಿ: ಭಾರತದ ಉದ್ಧಾರ ಮಾಡಲು, ಇಲ್ಲಿನ ಶಿಕ್ಷಣ ಸುಧಾರಣೆ ಮಾಡುವ ಸಲುವಾಗಿ ಅಮೆರಿಕದಿಂದ, ಜರ್ಮನಿಯಿಂದ ಬಂದಿರೋ ಅಭಿಜೀತ್​ ದೀಪ್ಕೆ, ಧ್ರುವ್​ ರಾಠೀ ಅವರ ಕಾಕ್ರೋಚ್​ ಜನತಾ ಪಕ್ಷ (CJP)ದ ಹಿಂದಿರುವ ಉದ್ದೇಶ ಏನು, ಹೇಳಿದ ತಕ್ಷಣ ತಮ್ಮವರನ್ನೆಲ್ಲಾ ಕರೆದುಕೊಂಡು ವಿಮಾನದ ಐಷಾರಾಮಿ ಕ್ಲಾಸ್​ನಲ್ಲಿಯೇ ಭಾರತಕ್ಕೆ ಓಡೋಡಿ ಬರಲು ಇವರಿಗೆ ಲಕ್ಷ ಲಕ್ಷ ಹಣ ಫಂಡಿಂಗ್​ ಎಲ್ಲಿಂದ ಬರುತ್ತಿದೆ ಎನ್ನುವ ಬಗ್ಗೆ ಇದಾಗಲೇ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇವರ ಎಜೆಂಡಾ ಏನು, ಶಿಕ್ಷಣ ಸುಧಾರಣೆ ಹೆಸರಲ್ಲಿ ಈಗ SIR ಹೆಸರಿನಲ್ಲಿ ಭಾರತದ ಜೆನ್​ ಜೀಗಳನ್ನು ಪ್ರಚೋದಿಸಿ, ಇಲ್ಲಿ ನೇಪಾಳನೋ, ಫ್ರಾನ್ಸ್​ ರೀತಿಯೋ ಬೆಂಕಿ ಹಚ್ಚಿಸುವ ವಿಫಲ ಪ್ರಯತ್ನ ನಡೆಯುತ್ತಲೇ ಇದೆ. ಇವರಿಗೆ ಇಲ್ಲಿ ಬೇಕಿರುವುದು ಅಮಾಯಕರ ಸಾವು. ಲಾಠಿ ಚಾರ್ಜ್​ ಮಾಡಿಯೋ, ಇನ್ನೇನೋ ಮಾಡಿ ಒಂದೆರಡು ಸಾವು ಆದ ಮೇಲೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂಡಿಸುವವರೆಗೂ ಇವರು ಇಲ್ಲಿಂದ ಹೋಗಲ್ಲ ಎನ್ನುವ ಗಂಭೀರ ಆರೋಪಗಳೂ ಇವರ ಮೇಲಿದೆ. ಇದಕ್ಕೆ ತಕ್ಕಂತೆ ದೇಶದ ಒಳಗೇ ಇದ್ದು, ಇವರಿಗೆ ಕೈಜೋಡಿಸುತ್ತಿರುವವರೂ ಇದ್ದಾರೆ.

ಸಿಜೆಪಿ ಪ್ರತಿಭಟನೆ

ಇದೀಗ SIR ಪ್ರಕ್ರಿಯೆ ಮುಂದಿಟ್ಟುಕೊಂಡು ಸಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಹಿಂದೆ ಇದೇ ನೆಪ ಇಟ್ಟುಕೊಂಡು ಪ್ರತಿಭಟನೆ ಮಾಡಿದಾಗ, ಕಲ್ಲು ತೂರಲು ಒಂದಿಷ್ಟು ಜನ ಬಂದಿದ್ದರು. ಅರಾಜಕತೆ ಸೃಷ್ಟಿಸಲು ಮತ್ತೊಂದಿಷ್ಟು ಜನ ಸೇರಿದ್ದರು. ಈ ಬಾಹ್ಯ ಶಕ್ತಿಗಳು ಎಲ್ಲಿಂದ ಬಂದಿವೆ ಎಂದು ಅರಿತೇ ಈ ಬಾರಿ ಅವರಿಗೆ ದೆಹಲಿಯ ಜಂತರ್​ಮಂತರ್​ನಲ್ಲಿ ಅವಕಾಶ ಕಲ್ಪಿಸಿರಲಿಲ್ಲ. ಇದರ ನಡುವೆಯೂ ಈ ಜಿರಳೆಗಳು ಸೃಷ್ಟಿಸಿರುವ ಅವಾಂತರಗಳ ಬಗ್ಗೆ ಶಾಕಿಂಗ್ ಎನ್ನುವಂಥ ವಿಡಿಯೋಗಳು ವೈರಲ್​ ಆಗುತ್ತಲೇ ಇವೆ.

ಇದೀಗ, ಯುಟ್ಯೂಬರ್​ ಯುವತಿಯೊಬ್ಬಳು, ಈ ಪ್ರತಿಭಟನೆಯ ಹಿಂದಿರುವ ಉದ್ದೇಶ ಏನು ಎಂದು ಪ್ರಶ್ನಿಸಿದಾಗ, ಲೇಡಿ ಜಿರಳೆಗಳು ಈಕೆಯನ್ನು ಸುತ್ತುವರೆದು ಧಮ್ಕಿ ಹಾಕಲು ಶುರು ಮಾಡಿದರು. ಅದರ ಮಧ್ಯೆಯೇ ಈ ಯುವತಿ ವಂದೇ ಮಾತರಂ ಎಂದು ಹಾಡಿದಾಗ, ಹಿಂಬದಿಯಿದ್ದ ಲೇಡಿ ಕಾಕ್ರೋಚ್​ ಪೆಪ್ಪರ್​ ಸ್ಪ್ರೇಯನ್ನು ಕಣ್ಣಿಗೆ ಸಿಡಿಸಿದ್ದಾಳೆ ಎಂದರೆ, ಪ್ರತಿಭಟನೆಗೆ ಅದನ್ನೂ ತಂದಿರುವುದು ಖಚಿತವಾಗಿದೆ. ಗಂಡಸರು ಕಲ್ಲು ತಂದರೆ, ಹೆಣ್ಣು ಜಿರಳೆಗಳು ಪೆಪ್ಪರ್​ ಸ್ಪ್ರೇ ತಂದಿರುವುದು ಇದೀಗ ಈ ಪ್ರತಿಭಟನೆಯ ಹಿಂದಿರುವ ಉದ್ದೇಶದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ವಂದೇ ಮಾತರಂ

ಭಾರತದಲ್ಲಿ ಇದ್ದುಕೊಂಡು ವಂದೇ ಮಾತರಂ ಕೇಳಲು ಆಗದ ಈ ಯುವ ಮನಸ್ಸುಗಳು ನಿಜಕ್ಕೂ ಭಾರತ ಉದ್ಧಾರ ಮಾಡಲು ಬಂದಿವ್ಯಾ? ಇವರಿಗೆ ಶಿಕ್ಷಣದ ಸುಧಾರಣೆ, ಮತದಾರರ ಪಟ್ಟಿಯಲ್ಲಿನ ಸುಧಾರಣೆ ಆಗಬೇಕೋ ಅಥವಾ ಇನ್ನೇನೋ ಎನ್ನುವ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಇದಾಗಲೇ ಬೆಂಗಳೂರಿಗೆ ಬಂದಿದ್ದ ಪ್ರತಿಭಟನಾಕಾರರನ್ನು ಮಾಧ್ಯಮಗಳು ಮಾತನಾಡಿಸಿದಾಗ ನಮಗೆ ಪ್ರತಿಭಟನೆಗೆ ಬಂದರೆ ನಿವೇಶನ ಕೊಡಿಸುತ್ತೇವೆ ಎಂದಿದ್ದರು, ಅದಕ್ಕಾಗಿ ಬಂದಿದ್ದೇವೆ ಎನ್ನುತ್ತಿದ್ದಾರೆಯೇ ವಿನಾ ತಾವ್ಯಾಕೆ ಬಂದಿದ್ದು ಎನ್ನೋದೇ ಇವರಿಗೆ ಗೊತ್ತಿರಲಿಲ್ಲ ಎಂದ ಮೇಲೆ, ಇವರ ಉದ್ದೇಶ ಏನು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಿಮ್ಮ ಬಳಿ ನಾಣ್ಯ ಇವೆಯಾ? 99% ಜನರಿಗೆ ಗೊತ್ತಿಲ್ಲದ ರೋಚಕ ಸತ್ಯ ಕೇಳಿ- ಏನಿದು ವಜ್ರ, ಏನಿದು ನಕ್ಷತ್ರ
CJP ಪ್ರತಿಭಟನೆಯಲ್ಲಿ ಹಪ್ಪಳ ಫ್ರೀ ಯಾಗಿ ನೀಡು ಎಂದ ವಿದ್ಯಾರ್ಥಿ; ಆ ಪುಟ್ಟ ವ್ಯಾಪಾರಿ ಹೇಳಿದ ಮಾತು ಈಗ ವೈರಲ್‌!